ಜೊತೆಜೊತೆ

ಜೊತೆಜೊತೆಯಲಿ ರಿಯಲ್ ಸ್ಟೋರಿ‌..65 ರ ತಾತನೇ ಬೇಕು ಅಂತಾವ್ಳೆ..ಈ ಇಬ್ಬರು ನಿಜಕ್ಕೂ ಯಾರು ಗೊತ್ತಾ..ಬೆಚ್ಚಿಬಿದ್ದ ಕುಟುಂಬ..

Today News / ಕನ್ನಡ ಸುದ್ದಿಗಳು

ಜರಿವಾ ಜನರ ಎದುರು.. ನಿನ್ನ ನೆರಳಾಗಿ ನಿಲ್ಲುವೆ.. ಜಗದ ಕೊನೆ ತಿರುವವರೆಗೂ ಬೆರಳ ನಾ ಹಿಡಿದು ನಡೆಯುವೆ.. ಈ ಹಾಡಿನ ಸಾಲು ಕನ್ನಡದ ಖ್ಯಾತ ಧಾರಾವಾಹಿ ಜೊತೆಜೊತೆಯಲಿ ಧಾರಾವಾಹಿಯ ಶೀರ್ಷಿಕೆ ಗೀತೆಯದ್ದು.. ನಲವತ್ತೈದರ ಹೀರೋ ಜೊತೆ ಇಪ್ಪತ್ತರ ಹೀರೋಯಿನ್ ಪ್ರೀತಿಸಿ ಮದುವೆಯಾಗೋ ಕತೆ.. ಆದರೆ ಈ ಕತೆಯನ್ನೇ ಒಂದು ಕೈ ಮೀರಿಸುವಂತೆ ಇಲ್ಲೊಂದು ಘಟನೆ ನಡೆದಿದ್ದು ಆಕೆಯ ಹೆತ್ತವರು ಬೆಚ್ಚಿಬಿದ್ದಿದ್ದಾರೆ.. ಹೌದು ನಲವತ್ತು ಐವತ್ತಲ್ಲ ಅರವತ್ತೇಳರ ಚಿರ ಯುವಕನ ಜೊತೆ ಹತ್ತೊಂಭತ್ತರ ಹುಡುಗಿಗೆ ಪ್ರೀತಿ ಮೂಡಿ ಇದೀಗ ಅವನೇ ಬೇಕು ಅಂತ ಪಟ್ಟು ಹಿಡಿದಿದ್ದರೆ ಆತನು ಕೀಡ ಇವಳ ಪ್ರೀತಿಗೆ ಸೋತು ಮದುವೆಯಾಗಿದ್ದಾನೆ.. ಹೌದು ಪ್ರೀತಿಗೆ ಕಣ್ಣಿಲ್ಲ ಅನ್ನೋ ಮಾತು ಕೇಳಿರುತ್ತೇವೆ.. ಆದರೆ ಬಹುಶಃ ಈ ಜೋಡಿಯನ್ನು ನೋಡಿದರೆ ಕಣ್ಣು ಮಾತ್ರವಲ್ಲ ಬೇರೆ ಏನೇನೂ ಸಹ ಇಲ್ಲ ಎಂದಿನೆಸಿ ಬಿಡುವುದು ಸಹಜ..

ಹೌದು ಈ ಯುವತಿಗೆ ಹತ್ತೊಂಭತ್ತು ವರ್ಷ.. ಈಕೆಗೆ ಅದಾಗಲೇ ಮದುವೆಯೂ ಸಹ ಆಗಿದೆ.. ಆ ಅಜ್ಜನಿಗೂ ಮದುವೆಯಾಗಿ ಏಳು ಮಕ್ಕಳ ತಂದೆ.. ಆತನ ಪತ್ನಿ ಕೆಲ ವರ್ಷಗಳ ಹಿಂದಷ್ಟೇ ಇಹಲೋಕ ತ್ಯಜಿಸಿದ್ದು ಮತ್ತೊಂದು ಮದುವೆಯಾಗಲು ತಯಾರಿ ನಡೆಸುತ್ತಿದ್ದನು.. ಇತ್ತ ಯುವತಿಯ ಮನೆಯಲ್ಲಿ ತಮ್ಮ ಜಮೀನಿನ ಕುರಿತು ಗ್ರಾಮದಲ್ಲಿ ಯಾವುದೋ ವಿವಾದದಲ್ಲಿ ಸಿಲುಕಿದ್ದರು.. ಇವರಿಗೆ ಸಹಾಯ ಮಾಡಕು ಮುದುಕ ಆಗಾಗ ಯುವತಿಯ ಮನೆಗೆ ಬರುತ್ತಿದ್ದನು.. ಈ ಸಮಯದಲ್ಲಿ ಯುವತಿ ಹಾಗೂ ಮುದುಕನ ನಡುವೆ ಪರಿಚಯವಾಗಿ ನಂತರ ಅದು ಪ್ರೀತಿಗೆ ತಿರುಗಿದೆ.. ಹೌದು ಶಾಕ್ ಆಗಬೇಡಿ ಮುಂದೆ ಇನ್ನೂ ಇದೆ.. ಈ ಅಮೂಲ್ಯ ಲವ್ ಸ್ಟೋರಿ ನಂತರ ಯಾವ ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ಕೇಳಿದರೆ ನಿಜಕ್ಕೂ ಬೆಚ್ಚಿಬೀಳೋದು ಗ್ಯಾರಂಟಿ..

ಹೌದು ಗಂಡನಿಗೆ ಕೈಕೊಟ್ಟು ಮುದುಕನ ಜೊತೆ ಮದುವೆಯಾಗಲು ಈ ಯುವತಿ ತಯಾರಾದಳು.. ಅತ್ತ ಮುದುಕನು ಸಹ ಹೊಸ ಪತ್ನಿಯ ಜೊತೆ ಸಂಸಾರ ಮಾಡಲು ಸಕಲ ತಯಾರಿ ನಡೆಸಿಕೊಂಡನು.. ಈಕೆ ಮನೆ ಬಿಟ್ಟು ಬಂದ ಮುದುಕನನ್ನು ಮದುವೆಯೂ ಸಹ ಆದಳು.. ಈ ವಿಚಾರ ತಿಳಿದ ಯುವತಿ ಮನೆಯವರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.. ಆದರೆ ಅಷ್ಟಕ್ಕೆ ಮುಗಿಯಲಿಲ್ಲ.. ಯುವತಿ ಕುಟುಂಬದವರು ಮುದುಕನ ಮೇಲೆ ದೂರು ನೀಡಿದ್ದಾರೆ.. ಆದರೆ ಈ ಹೊಸದಾಗಿ ಮದುವೆಯಾದ ಜೋಡಿ ಒಂದು ಹೆಜ್ಜೆ ಮುಂದೆ ಹೋಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.. ಹೌದು ನನ್ನ ಪತ್ನಿಯ ಕುಟುಂಬದಿಂದ ನಮಗೆ ತೊಂದರೆ ಇದೆ ಎಂದು ಅಜ್ಜ ಅರ್ಜಿ ಸಲ್ಲಿಸಿ ರಕ್ಷಣೆ ನೀಡುವಂತೆ ಮನವಿ‌ ಮಾಡಿಕೊಂಡಿದ್ದಾರೆ..

ಇದನ್ನೆಲ್ಲಾ ನೋಡಿದ ನ್ಯಾಯಾಧೀಶರು ಒಂದು ಕ್ಷಣ ದಂಗಾಗಿ ಹೋಗಿದ್ದಾರೆ.. ಇವರು ಹೇಳೋದು ನಿಜನಾ ಎಂದು ಎರಡೆರೆಡು ಬಾರಿ ಪರಿಶೀಲನೆ ನಡೆಸಿದ್ದಾರೆ.. ಪೊಲೀಸರಿಗೆ ವಿಚಾರಣೆ ನಡೆಸಿ ಸತ್ಯ ಏನೆಂದು ತಿಳಿಸಿ ಎಂದಿದ್ದಾರೆ.. ಪೊಲೀಸರ ವಿಚಾರಣೆ ವೇಳೆ ಇವರಿಬ್ಬರು ಪ್ರೀತಿಸಿ ಮದುವೆಯಾದ ಸತ್ಯ ತಿಳಿದಿದೆ.. ಇದನ್ನು ತಿಳಿದ ನ್ಯಾಯಾಧೀಶರು ಆ ಯುವತಿಗೆ ಈ ಬಗ್ಗೆ ಕೇಳಿದಾಗ ನಾನು ನನ್ನ ಗಂಡನನ್ನು ಬಿಟ್ಟು ಎಲ್ಲಿಗೂ ಹೋಗೋದಿಲ್ಲ ಎಂದು ಮುದುಕನನ್ನು ಬಿಡಲು ಸುತಾರಾಮ್ ಒಪ್ಪಲಿಲ್ಲ.. ಅತ್ತ ಹೆಂಡತಿಯನ್ನು ಬಿಡಲು ಮುದುಕನೂ ಸಹ ರೆಡಿ ಇಲ್ಲ.. ಒಟ್ಟಿನಲ್ಲಿ ಈ ಕೇಸ್ ಇತ್ಯರ್ಥ ಮಾಡಲು ಕೋರ್ಟ್ ಕಾಲಾವಕಾಶ ಕೇಳಿದ್ದು ಹರಿಯಾಣದಲ್ಲಿ ‌ಈ ಘಟನೆ ನಡೆದಿದೆ..

ಇದನ್ನೂ ಓದಿ >>>  ಅಶ್ಲೀಲ ವಿಡಿಯೋದಿಂದ ಹೆಸರಾಗಿದ್ದ ಶಿಲ್ಪಾ ಗೌಡ ಆತ್ಮ ಹತ್ಯೆಗೆ ಪ್ರಯತ್ನಿ ? ಸತ್ಯ ಏನು ವಿಡಿಯೋ ನೋಡಿ ?

ಒಟ್ಟಿನಲ್ಲಿ ಯಾವ ಸಿನಿಮಾ ಕತೆಗೂ ಕಡಿಮೆಯಲ್ಲದ ಈ ತಾತ ಹಾಗೂ ಹುಡುಗಿಯ ಲವ್ ಸ್ಟೋರಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು ಮದುವೆ ವಯಸ್ಸಿಗೆ ಬಂದ ಹುಡುಗರು ಹುಡುಗಿ ಸಿಗದೇ ಪರದಾಡುತ್ತಿದ್ದು ಈ ಸುದ್ದಿ ನೋಡಿ ನಿಬ್ಬೆರಗಾಗುವಂತೆ ಮಾಡಿದೆ.. ಒಟ್ಟಿನಲ್ಲಿ ಭಗವಂತ ಯಾರ್ಯಾರ ಹಣೆಯಲ್ಲಿ ಯಾರ್ಯಾರ ಹೆಸರು ಬರೆದಿರುವನೋ ಆತನೇ ಬಲ್ಲ.. ಈತನ ಸಾಂಸಾರಿಕ ಬದುಕು ಸುಖಮಯವಾಗಿರಲಿ ಅಷ್ಟೇ..

 

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...