Jobs-in-grama-panchayath

ಪಂಚಾಯತ್ ಅಧಿಕಾರಿ ಹುದ್ದೆ ನೇಮಕಾತಿಗೆ ಅಧಿಸೂಚನೆ : ಖಾಲಿ ಇರುವ 5396 ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

Free Govt Schemes/ಸರ್ಕಾರಿ ಉಚಿತ ಯೋಜನೆಗಳು

5396 ಪಂಚಾಯತ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರ ಬಿದ್ದಿದೆ. ಇದರ ಪ್ರಕಾರ ಕಿರಿಯ ಸಹಾಯಕ 3099 ಹುದ್ದೆ ಮತ್ತು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ 2297 ಹುದ್ದೆಗಳ ಆಯ್ಕೆಗಾಗಿ ಆಹ್ವಾನಿಸಲಾಗಿದೆ. ಕಳೆದ ತಿಂಗಳು 24.2.2023 ರಿಂದ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ಆಗಿದ್ದು 27.03.2023 ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕ ಆಗಿದೆ. ಕರ್ನಾಟಕದಾದ್ಯಂತ ಇರುವ ಎಲ್ಲಾ ಮಹಿಳಾ ಹಾಗೂ ಪುರುಷ ಆಸಕ್ತ ಅಭ್ಯರ್ಥಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಧಿಸೂಚನೆಯ ಪ್ರಕಾರ ಈ ಮೇಲ್ಕಂಡ ಎರಡು ಹುದ್ದೆಗಳಿಗೂ ಕೂಡ ವಯೋಮಾನವನ್ನು ಕನಿಷ್ಠ 21 ಹಾಗೂ ಗರಿಷ್ಠ 35 ಎಂದು ನಿಗದಿಪಡಿಸಲಾಗಿದೆ ಆದರೆ ಕೆಲ ವರ್ಗದವರಿಗೆ ವಯೋಮಾನ ಸಡಿಲಿಕೆ ನೀಡಲಾಗಿದೆ. ಜೂನಿಯರ್ ಅಸಿಸ್ಟೆಂಟ್ ಅಂದರೆ ಕಿರಿಯ ಸಹಾಯಕ ಮತ್ತು ಪಂಚಾಯತ್ ಎಕ್ಸಿಕ್ಯೂಟಿವ್ ಆಫೀಸರ್ ಅಂದರೆ ಪಂಚಾಯತ್ ಅಧಿಕಾರಿ ಹುದ್ದೆಗಳಿಗಾಗಿ ಈ ನೇಮಕಾತಿ ನಡೆಯುತ್ತಿದೆ.

ವೇತನ ಶ್ರೇಣಿಯು ಕಿರಿಯ ಸಹಾಯಕ ಹುದ್ದೆಗಳಿಗೆ ಆಯ್ಕೆ ಆದವರಿಗೆ 19,900 ರಿಂದ 63,200 ರೂ ವೇತನ ಮಾಸಿಕವಾಗಿ ಇರಲಿದೆ. ಪಂಚಾಯತ್ ಅಧಿಕಾರಿ ಹುದ್ದೆಗಳಿಗೆ ಆಯ್ಕೆ ಆದ ಅಭ್ಯರ್ಥಿಗಳಿಗೆ ಮಾಸಿಕವಾಗಿ ವೇತನ 21,700 ರಿಂದ 69,100 ರೂ ಇರಲಿದೆ. ಕಿರಿಯ ಸಹಾಯಕ ಹುದ್ದೆಗಳು 3099 ಮತ್ತು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗಳು 2297 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈಗಾಗಲೇ ಹೊರ ಬಿದ್ದಿರುವ ಅತಿ ಸೂಚನೆ ಪ್ರಕಾರ ಈ ಮೇಲ್ಕಂಡ ಎರಡು ಹುದ್ದೆಗಳಿಗೂ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಜನವರಿ 1, 2023 ಕ್ಕೆ 21 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 38 ವರ್ಷ ಮೀರಿರಬಾರದು. ಎಂದಿನಂತೆ OBC ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ST & ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಾನ ಸಡಿಲಿಕೆ ಇರುತ್ತದೆ. ಈ ಮೇಲ್ಕಂಡ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆಯನ್ನು ಈ ರೀತಿ ಕೇಳಲಾಗಿದೆ.

ಕಿರಿಯ ಸಹಾಯಕ ಹುದ್ದೆಗಳಿಗೆ ಕಂಪ್ಯೂಟರ್ ಕೌಶಲತೆಯೊಂದಿಗೆ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವಿಭಾಗದಲ್ಲಿ ಮೂರು ವರ್ಷಗಳ ಪದವಿ ಹೊಂದಿರಬೇಕು. ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯು ಯಾವುದೇ ವಿಷಯದಲ್ಲಿ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು, ಮಾನ್ಯತೆ ಪಡೆದ ಯಾವುದೇ ಮಂಡಳಿಯಿಂದ ದ್ವಿತೀಯ ಪಿಯುಸಿ ಪಾಸ್ ಆಗಿರುವ ಸರ್ಟಿಫಿಕೇಟ್ ಹೊಂದಿರಬೇಕು.

ವಿಶೇಷ ಸೂಚನೆ ಏನೆಂದರೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದ ಯಾವುದೇ ಪಂಚಾಯಿತಿ ನಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಅಭ್ಯರ್ಥಿಗಳು ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ, ಅಧಿಕೃತ ವೆಬ್ಸೈಟ್ಗೆ ಭೇಟಿಕೊಟ್ಟು ಅರ್ಜಿ ಸಲ್ಲಿಸಲು ಕೋರಲಾಗಿದೆ ಮತ್ತು ಅರ್ಜಿ ಸಲ್ಲಿಸಿ ಬೇಕಾಗಿರುವ ಅಗತ್ಯ ದಾಖಲೆಗಳು ಹೀಗಿವೆ.

ಸಹಿ ಮಾಡಿರುವ ಫೋಟೋ ಕೆಳಲಾಗಿದೆ ತಿಳಿ ಬಣ್ಣದ್ದು ಆಗಿರಬೇಕು ಎಂದು ಸಹ ವಿಶೇಷ ಸೂಚನೆ ನೀಡಲಾಗಿದೆ. ಶೈಕ್ಷಣಿಕ ಪ್ರಮಾಣ ಪತ್ರಗಳು 8ನೇ ತರಗತಿ 10ನೇ ತರಗತಿ ದ್ವಿತೀಯ ಪಿಯುಸಿ ಮತ್ತು ಪದವಿ ಪಾಸಾದ ಎಲ್ಲಾ ಪ್ರಮಾಣ ಪತ್ರಗಳು ಸಹ ಬೇಕಾಗುತ್ತದೆ, ನಿವಾಸ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಐಡಿ ಪುರಾವೆ ಆಗಿ ಆಧಾರ್ ಕಾರ್ಡ್ ಸಹ ಕೇಳಲಾಗಿದೆ.

ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಡಾಕ್ಯೂಮೆಂಟ್ ವೆರಿಫಿಕೇಶನ್ ನಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಉಪಯುಕ್ತ ಮಾಹಿತಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.