
ಸಾಮಾಜಿಕ ಜಾಲತಾಣ ಅಂದ್ರೆ ಹಾಗೇನೆ ಸ್ನೇಹಿತರೆ, ಎಲ್ಲಿ ನೋಡಿದರೂ ಯಾವಾಗ ಆದ್ರೂ ಹೆಚ್ಚು ಜನರು ಅದರಲ್ಲಿ ಸಕ್ರಿಯ ಇರುತ್ತಾರೆ. ಹೌದು ಈಗ ಕಂಪ್ಯೂಟರ್ ಕಾಲ ಎಲ್ಲಿ ನೋಡಿದರೂ ಸಣ್ಣ ಹುಡುಗರಿಂದ ಹಿಡಿದು ದೊಡ್ಡ ದೊಡ್ಡ ಅಂಕಲ್ ಆಂಟಿಯರು ಕೂಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯ ಆಗಿರುವುದು ಮಾಮಲಿ. ಈ ಮೂಲಕ ಬರುವ ಕೆಲವು ವಿಚಾರಗಳನ್ನು, ಕೆಲವು ಸುದ್ದಿಗಳನ್ನು ಸುಳ್ಳು ಸುದ್ದಿಗಳನ್ನು ನಂಬುವುದು ಸರ್ವೇ ಸಾಮಾನ್ಯ. ಸುದ್ದಿಗಳು ಹೇಗಿರಬೇಕು ಅಂದ್ರೆ ಜನರಿಗೆ ಅದರಿಂದ ಉಪಯೋಗ ಆಗುವಂತೆ ಇರಬೇಕು. ಈ ಮುಂಚೆ ಇದ್ದ ಕೆಲವು ನ್ಯೂಸ್ ಮಾಧ್ಯಮಗಳೇ ಬೇರೆ. ಈಗ ಇರುವ ನ್ಯೂಸ್ ಮಾಧ್ಯಮಳು ಬೇರೆಯೇ ಎನ್ನಬಹುದು. ಹೌದು ಈಗಿನ ನ್ಯೂಸ್ ನಲ್ಲಿ, ಏನಾದರೂ ಆಗಿರಲಿ ಇರುವಂತೆಯೇ ಹೇಳುವುದು ತುಂಬಾ ಕಡಿಮೆ.
Comments are closed.