jds-election-promotion

ರೈತರನ್ನು ಮದುವೆಯಾಗುವ ಯುವತಿಯರಿಗೆ 2 ಲಕ್ಷ,ಜೆಡಿಎಸ್ ನಿಂದ ಯುವತಿಯರಿಗೆ ಆಫರ್.

Entertainment/ಮನರಂಜನೆ

JDS Election Promotion: ಕರ್ನಾಟಕ ವಿಧಾನಸಭಾ ಚುನಾವಣೆ (Assembly Election) ಹತ್ತಿರವಾಗುತ್ತಿದೆ. ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಮುಖಂಡರು ತಮ್ಮ ತಮ್ಮ ರಾಜಕೀಯ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ವಿರೋಧ ಪಕ್ಷಗಳ ಬಗ್ಗೆ ರಾಜಕೀಯ ನಾಯಕರುಗಳು ಮಾತಿನ ವಾಗ್ದಾಳಿ ನಡೆಸುತ್ತಿದ್ದಾರೆ.

ಜನರಿಗೆ ಭರವಸೆಯನ್ನು ನೀಡುತ್ತಾ ತಮ್ಮ ಪಕ್ಷದ ಮತಭೇಟೆಯಲ್ಲಿ ತೊಡಗಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ (JDS) ಪಕ್ಷ ಕೂಡ ಮತಬೇಟೆಯನ್ನು ಆರಂಭಿಸಿದೆ. ಇದೀಗ ಜೆಡಿಎಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆಯಲ್ಲಿ ಸಾಕಷ್ಟು ಯೋಜನೆಗಳನ್ನು ಜಾರೊಗೊಳಿಸುವಂತೆ ಘೋಷಿಸಿದೆ.

JDS Election Promotion
Image Source: Oneindia kannada

ಜೆಡಿಎಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ
ಹೆಚ್ ಡಿ ಕುಮಾರಸ್ವಾಮಿ (H.D Kumaraswamy) ನೇತ್ರತವಾದ ಜನತಾ ದಳ ಪಕ್ಷ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮಾಜಿ ಪ್ರಧಾನಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ, ರಾಜ್ಯಾಧ್ಯಕ್ಷ ಸಿಎಂ ಇಬ್ರಾಯಿಂ ಸೇರಿದಂತೆ ಹಲವು ಜನತಾ ದಳದ ಮುಖಂಡರು ಜೆಡಿಎಸ್ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮುಂದಿನ 5 ವರ್ಷಗಳಲ್ಲಿ ಕರ್ನಾಟಕ ಅಭಿವೃದ್ಧಿಗೆ ರೂಪಿಸಿರುವ ಅಭಿವೃದ್ಧಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

ಜೆಡಿಎಸ್ ಬಿಡುಗಡೆ ಮಾಡಿದ ವಿವಿಧ ಯೋಜನೆಗಳು

ಮಹಿಳೆಯರಿಗಾಗಿ, ರೈತರಿಗಾಗಿ, ವಿದ್ಯಾರ್ಥಿನಿಯರಿಗೆ, ಆಟೋ ಚಾಲಕರಿಗೆ ಬರ್ಜನಿ ಯೋಜನೆಗಳು ಜೆಡಿಎಸ್ ಘೋಷಿಸಿದೆ.

*ರೈತ ಯುವಕರನ್ನು ಮದುವೆಯಾಗುವ ಯುವತಿಯರಿಗೆ 2 ಲಕ್ಷ ಧನ ಸಹಾಯ.
*ರಾಜ್ಯದ ಪ್ರತಿ ಆಟೋ ಚಾಲಕರಿಗೆ ಪ್ರತಿ ತಿಂಗಳಿಗೆ 2000 ರೂ. ಗಳ ಮಾಸಾಶನ.

*ನೋಂದಾಯಿತ ಖಾಸಗಿ ಸೆಕ್ಯೂರಿಟಿ ಗಾರ್ಡ್ ಗಳಿಗೆ ಪ್ರತಿ ತಿಂಗಳು 2000 ರೂ ಸಹಾಯಧನ.
*ಇನ್ನು ರಾಜ್ಯದಲ್ಲಿರುವ 5791032 ಹಿರಿಯ ನಾಗರಿಕರಲ್ಲಿ ಬಡತನ ರೇಖೆಗಿಂತ ಕೆಳಗಿರುವ 4235609 ಹಿರಿಯ ನಾಗರಿಕರ ಮಾಸಾಶನವನ್ನು 1200 ರೂ. ನಿಂದ 5000 ರೂ. ಗಳಿಗೆ ಹೆಚ್ಚಳ.

*ಮಾತೃಶ್ರೀ ಮತ್ತು ಗರ್ಭಿಣಿಯರಿಗೆ ಅಗತ್ಯತೆ ಪೂರೈಕೆಗೆ ಆರು ತಿಂಗಳ ಕಾಲ 6 ಸಾವಿರ ಭತ್ಯೆ.
*ವಿಧವಾ ವೇತನ 900 ರೂ. ನಿಂದ 2500 ರೂ. ಗಳಿಗೆ ಹೆಚ್ಚಳ.

*ಅಂಗನವಾಡಿ ಕಾರ್ಯಕರ್ತರಿಗೆ 11000 ,ಸಹಾಯಕಿಯರಿಗೆ 6500 ರೂ. ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 7500 ರೂ. ಗೌರವ ಧನ ವಿತರಣೆ.
*ಇನ್ನು ಪ್ರತಿ ಕಾರ್ಯಕರ್ತೆಯರಿಗೆ ಮಾಸಿಕ ಹೆಚ್ಚುವರಿಯಾಗಿ 5000 ರೂ. ವೇತನ ನೀಡುವುದಾಗಿ ಜೆಡಿಎಸ್ ಘೋಷಿಸಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.