ಜಯಮಾಲಾ

ಪ್ರಭಾಕರ್ ನಂತರ ತನಗಿಂತ ಕಡಿಮೆ ವಯಸ್ಸಿನವರನ್ನು ಮದುವೆಯಾಗಿರುವ ಜಯಮಾಲಾ ರವರ ಎರಡನೇ ಪತಿ ಯಾರು ಗೊತ್ತೇ??

CINEMA/ಸಿನಿಮಾ

ನಮಸ್ಕಾರ ಸ್ನೇಹಿತರೇ ನಾವು ಪ್ರತಿಬಾರಿ ನಮ್ಮ ಕನ್ನಡ ಚಿತ್ರ ರಂಗಕ್ಕೆ ಬಂದಂತಹ ಪರಭಾಷಾ ನಟಿಯರ ಕುರಿತಂತೆ ಮಾತನಾಡುತ್ತಿರುತ್ತೇವೆ ಆದರೆ ಇಂದಿನ ವಿಷಯದಲ್ಲಿ ನಾವು ನಮ್ಮ ಕನ್ನಡದ ಮಣ್ಣಿನಲ್ಲಿ ಹುಟ್ಟಿದಂತಹ ಹೆಣ್ಣುಮಗಳು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದಂತಹ ಕಥೆಯನ್ನು ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಜಯಮಾಲಾರವರ ಕುರಿತಂತೆ.

ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸುವ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ ಜಯಮಾಲರವರು ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಾರೆ. 70 ಹಾಗೂ 80ರ ದಶಕದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿ ಮಿಂಚಿ ಮೆರೆದವರು ಜಯಮಾಲರವರು. ಇನ್ನು ಇವರು ಕನ್ನಡ ಚಿತ್ರರಂಗದ ನಟ ಸಾರ್ವಭೌಮ ಡಾ ರಾಜಕುಮಾರ್ ರವರ ಜೊತೆಗೆ ದಾರಿ ತಪ್ಪಿದ ಮಗ ತ್ರಿಮೂರ್ತಿ ಪ್ರೇಮದ ಕಾಣಿಕೆ ಶಂಕರ್ ಗುರು ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಸೂಪರ್ ಜೋಡಿ ಆಗಿದ್ದರು. ಕೇವಲ ಅಣ್ಣಾವ್ರೊಂದಿಗೆ ಮಾತ್ರವಲ್ಲದೆ ವಿಷ್ಣುವರ್ಧನ್ ಶಂಕರ್ ನಾಗ್ ಅಂಬರೀಶ್ ಟೈಗರ್ ಪ್ರಭಾಕರ್ ಶ್ರೀನಾಥ್ ಹೀಗೆ ಅಂದಿನ ಎಲ್ಲಾ ಟಾಪ್ ನಟರೊಂದಿಗೆ ನಟಿಸಿ ಮಿಂಚಿದ್ದರು.

ಇನ್ನು ಜಯಮಾಲಾರವರ ವೈವಾಹಿಕ ಜೀವನದ ಬಗ್ಗೆ ಹೇಳುತ್ತೇವೆ ಬನ್ನಿ ಸ್ನೇಹಿತರೆ.1985 ರಲ್ಲಿ ಜಯಮಾಲರವರು ಟೈಗರ್ ಪ್ರಭಾಕರ್ ರವರನ್ನು ವಿವಾಹವಾಗುತ್ತಾರೆ. ಇವರಿಬ್ಬರಿಗೆ ಸೌಂದರ್ಯ ಎಂಬ ಹೆಣ್ಣುಮಗಳು ಕೂಡ ಜನಿಸುತ್ತಾರೆ. ಇನ್ನು 1988 ರಲ್ಲಿ ಇವರಿಬ್ಬರೂ ಕೂಡ ಅಭಿಪ್ರಾಯಗಳಿಂದ ವಿವಾಹ ವಿಚ್ಛೇದನ ರಾಗುತ್ತಾರೆ. ಇನ್ನು ನಂತರ 1990 ರಲ್ಲಿ ತಮಗಿಂತ ವಯಸ್ಸಿನಲ್ಲಿ ಚಿಕ್ಕವರಾಗಿರುವ ಹೆಚ್ ಎಂ ರಾಮಚಂದ್ರರವರನ್ನು ವಿವಾಹವಾಗುತ್ತಾರೆ. ಪಂಚ ಭಾಷೆಗಳಲ್ಲಿ ಕೂಡ ನಟಿಸಿ ಗುರುತಿಸಿಕೊಂಡಿದ್ದಂತಹ ಜಯಮಾಲರವರು ಹಲವಾರು ಸಂಘ ಸಂಸ್ಥೆಗಳಲ್ಲಿ ಮುಖ್ಯಸ್ಥರಾಗಿ ಕೂಡ ಕಾಣಿಸಿ ಕೊಂಡಿದ್ದರು ಮಾತ್ರವಲ್ಲದೆ ಸಚಿವೆಯಾಗಿ ಕೂಡ ಕಾಣಿಸಿಕೊಂಡಿದ್ದರು.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಹಿಂದೆ TV ಯಲ್ಲಿ ಶ್ರೀವಲ್ಲಿ,TV ಮುಂದೆ ಮನೆಮಲ್ಲಿ ಆಂಟಿ;ಯಾರ ಡ್ಯಾನ್ಸ್ ಸಖತ್? ವಿಡಿಯೋ ನೋಡಿದ ಮೇಲೆ ಹೇಳಿ ನೀವೇ!