ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಲೆಜೆಂಡ್ ನಟ ಹಾಗೂ ನಟಿಯರನ್ನ ನೀವು ನೋಡಿರುತ್ತೀರಿ. ಅದರಲ್ಲಿ ಕೆಲವರು ನಮ್ಮೊಂದಿಗೆ ಇಲ್ಲದೆ ಇದ್ದರೂ ಅವರು ನಟಿಸಿದ ಸಿನಿಮಾಗಳ ಮೂಲಕ ಅವರು ಅಭಿನಯಿಸಿದ ಪಾತ್ರಗಳ ಮೂಲಕ ಶಾಶ್ವತವಾಗಿ ನಮ್ಮ ಮನಸಿನಲ್ಲಿ ನೆಲೆಸಿರುತ್ತಾರೆ. ಅಂತಹ ಒಬ್ಬ ಅತ್ಯದ್ಭುತ ಅಭಿನೇತ್ರಿ ಅಂದ್ರೆ ನಟಿ ಶ್ರೀದೇವಿ. ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಅತ್ಯುತ್ತಮ ನಟಿ ಎನಿಸಿಕೊಂಡಿರುವ ಶ್ರೀದೇವಿ ಅವರು ಸೌತ್ ಸಿನಿಮಾಗಳಲ್ಲಿಯೂ ಕೂಡ ಹೆಸರು ಮಾಡಿದ್ದಾರೆ.
ಹೌದು, ಇಂದು ಇಂತಹ ಒಳ್ಳೆಯ ನಟಿ ನಮ್ಮೊಂದಿಗಿಲ್ಲ ಶ್ರೀದೇವಿಯಂತಹ ಅಭಿನೇತ್ರಿಯನ್ನು ನಾವು ಕಳೆದುಕೊಂಡಿದ್ದೇವೆ. ಆದರೆ ಇದೀಗ ಅವರ ಮಗಳು ತಾಯಿಯಂತೆ ತಾನು ಕೂಡ ಸಿನಿಮಾರಂಗದಲ್ಲಿ ಮಿಂಚಬೇಕು ಅಂತ ಕನಸುಗಳನ್ನು ಹೊತ್ತುಕೊಂಡು ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಬ್ಯೂಟಿಫುಲ್ ಅಂಡ್ ಬೋಲ್ಡ್ ಆಗಿರುವ ನಟಿ ಜಾನ್ವಿ ಕಪೂರ್.
ಶ್ರೀದೇವಿಯ ಬಳಿಕ ಅವರ ಮಗಳು ಜಾನ್ವಿ ಕಪೂರ್ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ ಈಗಾಗಲೇ ಅವರ ಲುಕ್ ಗೆ ಲುಕ್ ಕೂಡ ಕೈ ಜೋಡಿಸಿದೆ. ಸದ್ಯ ಬಿಡುಗಡೆಯಾಗಿರುವ ಗುಡ್ ಲಕ್ ಜೆರ್ರಿ ಸಿನಿಮಾದಲ್ಲಿ ಜಾನ್ವಿ ಕಪೂರ್ ಅಭಿನಯಿಸಿದ್ದಾರೆ. ಇದರ ಪ್ರಚಾರ ಕಾರ್ಯದಲ್ಲಿಯೂ ಕೂಡ ತೊಡಗಿಕೊಂಡಿದ್ದ ಜಾನ್ವಿ ಕಪೂರ್ ಆಗಾಗ ಕೆಲವು ಸಂದರ್ಶನದಲ್ಲಿಯೂ ಕೂಡ ಭಾಗಿಯಾಗುವ ಮೂಲಕ ನೋಡೋದಕ್ಕೆ ಬೋಲ್ಡ್ ಆಗಿ ಡ್ರೆಸ್ ಮಾಡುವುದು ಮಾತ್ರವಲ್ಲದೆ ಮಾತನಾಡುವುದನ್ನು ಕೂಡ ಚೆನ್ನಾಗಿ ಕರಗತ ಮಾಡಿಕೊಂಡಿದ್ದನ್ನು ಸಾಬೀತುಪಡಿಸಿದ್ದಾರೆ.
ತನ್ನ ಪಾಲಕರ ಬಗ್ಗೆ ಹೆಚ್ಚಿನ ಗೌರವ ಹಾಗೂ ಪ್ರೀತಿಯನ್ನು ಹೊಂದಿರುವ ನಟಿ ಜಾನ್ವಿ ಕಪೂರ್, ಸಿನಿಮಾ ಹಿನ್ನೆಲೆ ಇರುವ ಕುಟುಂಬದಿಂದ ಬಂದಿರುವ ಕಾರಣಕ್ಕಾಗಿ ಮಾತ್ರವಲ್ಲ, ವಾಸ್ತವದಲ್ಲಿ ನಾನು ನಟನೆಯನ್ನು ಬಹಳ ಪ್ರೀತಿಸುತ್ತೇನೆ ನಾನು ಏನನ್ನ ಮಾಡುತ್ತೇನೋ ಅದನ್ನ ಬಹಳ ಪ್ರೀತಿಯಿಂದ ಮಾಡುತ್ತೇನೆ ಅಂತ ಜಾನ್ವಿ ಕಪೂರ್ ಸಂದರ್ಶನ ಒಂದರಲ್ಲಿ ಹೇಳಿದ್ರು. ಇನ್ನು ಗುಡ್ ಲಕ್ ಜೆರ್ರಿ ಸಿನಿಮಾಕ್ಕಾಗಿ ಬಿಹಾರದ ಉಚ್ಚಾರಣೆಯನ್ನು ಕಲಿತಿದ್ದರಂತೆ ಜಾನ್ವಿ.
ದರೋಡೆಕೋರರ ಗುಂಪಿನಲ್ಲಿ ಇರುವ ಒಬ್ಬ ಹುಡುಗಿಯ ರೋಲ್ ನಿಭಾಯಿಸಿದ ಜಾನ್ವಿ ಬಿಹಾರ, ಪಂಜಾಬ್ ಭಾಷೆಗಳಲ್ಲಿ ಕಂಫರ್ಟೆಬಲ್ ಆಗಿ ಮಾತನಾಡುವಷ್ಟು ತರಬೇತಿ ಪಡೆದಿದ್ದಾರಂತೆ. ಈ ಸಿನಿಮಾಕ್ಕೆ ಆನಂದ್ ಎಲ್ ಅವರ ನಿರ್ಮಾಣ ಹಾಗೂ ಸಿದ್ದಾರ್ಥಸೇನ್ ಗುಪ್ತ ಅವರ ನಿರ್ದೇಶನದ ಲಯವಿದೆ. ಅಂದಹಾಗೆ ಈ ಚಿತ್ರ ಓಟಿಟಿಯಲ್ಲಿ ಈಗಾಗಲೇ ಪ್ರಸಾರ ಕಂಡಿದೆ.
ಇನ್ನು ಇತರ ಸಿನಿಮಾ ತಾರೆಯರಂತೆ ಜಾನ್ವಿ ಕಪೂರ್ ಕೂಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಸಾಕಷ್ಟು ಹಾಟ್ ಫೋಟೋಗಳನ್ನ ಅಪ್ಲೋಡ್ ಮಾಡುತ್ತಾರೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ಜಾನವಿ ಕಪೂರ್ ಕೂಡ ಬಹಳ ಆಕ್ಟಿವ್ ಆಗಿರುವ ನಟಿ. ಸಾಕಷ್ಟು ಅಭಿಮಾನಿಗಳನ್ನ ಹೊಂದಿರುವ ಜಾನ್ವಿ ಕಪೂರ್ ಅವರು ಹಾಕುವ ಪೋಸ್ಟ್ ಗಳು ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಲೈಕ್ ಹಾಗೂ ಕಮೆಂಟ್ ಗಳನ್ನು ಪಡೆದುಕೊಳ್ಳುವುದು ವಿಶೇಷ.
ಇತ್ತೀಚಿಗೆ ದೇಹಕ್ಕೆ ವಿಟಮಿನ್ ಸಿ ಬೇಕು ವಿಟಮಿನ್ ಸಿ ಬೇಕು ಅಂದ್ರೆ ಆರೆಂಜ್ ಸೇವಿಸಬೇಕು, ಇದೇ ಕಾನ್ಸೆಪ್ಟ್ ಇಟ್ಟುಕೊಂಡು ಜಾನ್ವಿ ಕಪೂರ್ ಆರೆಂಜ್ ಬಣ್ಣದ ಬಟ್ಟೆಯನ್ನು ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಡೀಪ್ ನೆಕ್ ಹಾಗೂ ಶಾರ್ಟ್ ಆಗಿರುವ ಆರೆಂಜ್ ಡ್ರೆಸ್ ನಲ್ಲಿ ಜಾನ್ವಿ ಕಪೂರ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಜಾನ್ವಿ ಕಪೂರ್ ಅವರ ಈ ಫೋಟೋಗಳನ್ನು ನೋಡಿದ ಯುವಕರು ಹಾರ್ಟ್ ಬೀಟ್ ಹೆಚ್ಚಾಗುತ್ತಿದೆ ಅಂತ ಕಾಮೆಂಟ್ ಕೂಡ ಮಾಡಿದ್ದಾರೆ. ಜಾನ್ವಿ ಕಪೂರ್ ಈಗಾಗಲೇ ಬಾಲಿವುಡ್ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದು ಇನ್ನೂ ಕೆಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ.