janhvi-kapoor

ಬಿಗಿಯಾದ ಬಟ್ಟೆ ತೊಟ್ಟು ಕ್ಯಾಮೆರಾ ಮುಂದೆ ಫೋಸ್ ಕೊಡಲು ಹೋಗಿ ಮುಜುಗರಗೊಂಡ ನಟಿ ಜಾನ್ವಿ ಕಪೂರ್! ವಿಡಿಯೋ ಸಿಕ್ಕಾಪಟ್ಟೆ ವೈರಲ್!!

Today News / ಕನ್ನಡ ಸುದ್ದಿಗಳು

ಬಾಲಿವುಡ್ ನಲ್ಲಿ ಹೊಸ ಮುಖಗಳು ಹೆಚ್ಚು ಪರಿಚಿತಗೊಳ್ಳುತ್ತಿವೆ. ಇಂದು ತೆರೆಕಾಣುವ ಬಹುತೇಕ ಸಿನಿಮಾಗಳಲ್ಲಿ ಹೊಸ ನಟಿಯರನ್ನೇ ಪರಿಚಯಿಸಲಾಗುತ್ತಿದೆ. ಅಂಥ ನಟಿಯರಲ್ಲಿ ಜಾಹ್ನವಿ ಕಪೂರ್ ಕೂಡ ಒಬ್ಬರು. ನಟಿ ಜಾಹ್ನವಿ ಕಪೂರ್ ಇತ್ತೀಚಿಗೆ ಬಾಲಿವುಡ್ ನಲ್ಲಿ ಬ್ಯುಸಿ ಆಗಿರುವ ಉದಯೋನ್ಮುಖ ನಟಿ. ಜಾಹ್ನವಿ ಕಪೂರ್ ಹೆಸರು ಕೇಳಿದ್ರೆ, ಖಂಡಿತವಾಗಿ ನೆನಪಿಗೆ ಬರೋದೇ ನಟಿ ಶ್ರೀದೇವಿ.

ಬಾಲಿವುಡ್ ನಲ್ಲಿ ಒಂದು ಕಾಲದಲ್ಲಿ ಲೆಜೆಂಡ್ ಲೇಡಿ ಸ್ಟಾರ್ ಎನಿಸಿದವರು ಶ್ರೀದೇವಿ. ಹೌದು, ಹಿಂದಿ ಮಾತ್ರವಲ್ಲ, ಸೌತ್ ಸಿನಿಮಾಗಳಲ್ಲಿಯು ನಟಿ ಶ್ರೀದೇವಿ ಮಿಂಚಿದ್ದರು. ಅತ್ಯುತ್ತಮ ಅಭಿನೇತ್ರಿ ಎನಿಸಿದ್ದ ನಟಿ ಶ್ರೀದೇವಿಯನ್ನು ಕಳೆದುಕೊಂಡ ಬಾಲಿವುಡ್ ನಿಜಕ್ಕೂ ಅನಾಥವಾಗಿದೆ. ನಟಿ ಶ್ರೀದೇವಿ ಬಾಲಿವುಡ್ ನ ಎಲ್ಲಾ ದಿಗ್ಗಜ ನಟರ ಜೊತೆಗೂ ತೆರೆಹಂಚಿಕೊಂಡಿದ್ದಾರೆ. ಶ್ರೀದೇವಿ ಹಾಗೂ ನಟ ಅಮಿತಾಬ್ ಬಚ್ಚನ್ ಅವರ ಜೋಡಿ ಬಾಲಿವುಡ್ ನ ಬೆಸ್ಟ್ ಜೋಡಿ ಎಂದೇ ಪರಿಚಿತವಾಗಿತ್ತು.

ಇನ್ನು ತಾಯಿಯಂತೆಯೆ ಅಭಿನಯದ ಹಾದಿ ಹಿಡಿದವರು, ಜಾಹ್ನವಿ ಕಪೂರ್! ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇನ್ನೂ ಸಿನಿಮಾರಂಗದಲ್ಲಿ ಬೇರು ಬಿಡುವಲ್ಲಿ ತುಸು ಹಿಂದೆ ಇದ್ದಾರೆ ಎನ್ನಬಹುದು. ಜಾಹ್ನವಿ ಅವರ ನಟನೆಯಲ್ಲಿ ಇನ್ನಷ್ಟು ಪಕ್ವತೆ ಬಾರದೇ ಇದ್ದರೆ ಸಿನಿಮಾಗಳಲ್ಲಿ ಅವಕಾಶಗಳು ಸಿಗೋದೂ ಕಷ್ಟವಾಗಬಹುದು. ಆದರೆ ಅದೇನೇ ಇರಲಿ ಸಕ್ಕತ್ ಬೋಲ್ಡ್ ಆಗಿರುವ ನಟಿ ಜಾಹ್ನವಿ ಕಪೂರ್, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದು, ಸಾಕಷ್ಟು ಹಾಟ್ ಫೋಟೋ ಶೂಟ್ ಮಾಡಿಸುತ್ತಾರೆ.

ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಫಾಲೋವರ್ಸ್ ಹೊಂದಿದ್ದಾರೆ ಜಾಹ್ನವಿ ಕಪೂರ್. ಜಾಹ್ನವಿ ಕಪೂರ್ ತಾಯಿ ಶ್ರೀದೇವಿ ಅದ್ಭುತ ನಟಿ ಆಗಿದ್ರೆ ಅವರ ತಂದೆ ಬೋನಿ ಕಪೂರ್ ಪ್ರಸಿದ್ಧ ನಿರ್ಮಾಪಕರು! ಬಹಳ ಅನ್ಯೂನ್ಯವಾಗಿದ್ದ ಇವರ ಕುಟುಂಬದಲ್ಲಿ ಶ್ರಿದೇವಿಯವರನ್ನ ಕಳೆದುಕೊಂಡಿದ್ದು ನಿಜಕ್ಕೂ ಬಿರುಗಾಳಿ ಎಬ್ಬಿಸಿತ್ತು. ಶ್ರೀದೇವಿಯವರನ್ನು ಕಳೆದುಕೊಂಡ ಚಿತ್ರರಂಗ ಅನಾಥವಾಯಿತು. ಅವರ ಅಭಿಮಾನಿಗಳು ಕಣ್ಣೀರಿಟ್ಟರು.

ಅಕಾಸ್ಮಾತ್ ಆಗಿ ನಮ್ಮನ್ನಗಲಿದ ನಟಿ ಶ್ರೀದೇವಿ ತಮ್ಮ ಅಭಿನಯದ ಮೂಲಕ ಸಾಕಷ್ಟು ನೆನಪುಗಳನ್ನು ಕೊಟ್ಟುಹೋಗಿದ್ದಾರೆ! ಶ್ರೀದೇವಿ ಅವರು ಬದುಕಿದಾಗ, ಶ್ರೀದೇವಿ, ಬೋನಿ ಕಪೂರ್ ಹಾಗೂ ಜಾಹ್ನವಿ ಮತ್ತು ಕುಷಿ ಕಪೂರ್ ಆಗಾಗ ಒಟ್ಟಾಗಿ ಇದ್ದ ಪೋಟೋಗಳು ಗೂಗಲ್ ನಲ್ಲಿ ಹರಿದಾಡುತ್ತಿತ್ತು! ಇದೀಗ ಜಾಹ್ನವಿ ಕಪೂರ್ ಆಗಾಗ ತನ್ನ ತಂದೆ ಹಾಗೂ ಸಹೋದರಿ, ಕುಶಿ ಕಪೂರ್ ಜೊತೆಗೆ ಸಾಕಷ್ಟು ಫಂಕ್ಷನ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಜಾಹ್ನವಿ ಕಪೂರ್ ಗೆ ಈಗ 25 ವರ್ಷ ವಯಸ್ಸು. ಈಗಾಗಲೇ ಸಿನಿಮಾಗಳಲ್ಲಿ ಸಾಕಷ್ಟು ಅವಕಾಶಗಳನ್ನು ಕೂಡ ಗಳಿಸಿಕೊಳ್ಳುತ್ತಿದ್ದಾರೆ. ಧಡಕ್, ಗುಡ್ ಲಕ್ ಜೆರ್ರಿ, ರೂಹಿ, ಗುಂಜನ್ ಸಕ್ಸೇನಾ, ದೋಸ್ತಾನ ಚಿತ್ರಗಳಲ್ಲಿ ಅಭಿನಯಿಸಿದ್ದು, ಜಾಹ್ನವಿ ಅವರ ಜನ ಗಣ ಮನ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದ ಭಾಹ್ನವಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಓಪನ್ ಆಗಿ ಮಾತನಾಡುವ ಇವರು ಮಾರ್ಡನ್ ಆಗಿ ಡ್ರೆಸ್ ಮಾಡುವುದು ನನ್ನ ಆಯ್ಕೆ ಎಂದಿದ್ದರು. ಅದರಂತೆ ಸಾಕಷ್ಟು ಹಾಟ್ ಡ್ರೆಸ್ ನಲ್ಲಿಆಗಾಗ ಕಾಣಿಸಿಕೊಳ್ಳುತ್ತಾರೆ. ಇನ್ನು ಪಬ್ಲಿಕ್ ನಲ್ಲಿಯೂ ಅರೆ ಬರೆ ಬಟ್ಟೆ ತೊಡುತ್ತಾರೆ ಎನ್ನುವ ಕಾರಣಕ್ಕೆ ಆಗಾಗ ಟ್ರೋಲ್ ಆಗುತ್ತಾ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಾರೆ ನಟಿ ಜಾಹ್ನವಿ. ಸದ್ಯ ಜಾಹ್ನವಿ ಕಪೂರ್ ಹಾಗೂ ಕುಷಿ ಕಪೂರ್ ಇಬ್ಬರೂ ತಂದೆ ಬೊನಿ ಕಪೂರ್ ಜೊತೆ ವೈಟ್ ಡ್ರೆಸ್ ನಲ್ಲಿ ಕ್ಯಾಮರಾಕ್ಕೆ ಫೋಸ್ ಕೊಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...