janardhana-reddy

ಒಬ್ಬ ಸಾಮಾನ್ಯ ಪೊಲೀಸ್ ಕಾನ್ಸ್‌ಟೇಬಲ್ ಮಗ 25 ಸಾವಿರ ಕೋಟಿಯ ಒಡೆಯನಾಗಿದ್ದು ಹೇಗೆ ಗೊತ್ತಾ..

Entertainment/ಮನರಂಜನೆ

ಬಳ್ಳಾರಿಯಲಿ ಜನಿಸಿದ ಜನಾರ್ಧನ್ ರೆಡ್ಡಿ ಪೊಲೀಸ್ ಕಾನ್ಸ್ಟೇಬಲ್ ಮಗ ಆಗಿದ್ದು ಮಾಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದರು. ಮೊದಲಿಗೆ ಜನಾರ್ಧನ್ ರೆಡ್ಡಿ ಅವರಿವರಿಂದ ಹಣವನ್ನು ಹೊಂದಿಸಿ ಫೈನಾನ್ಸ್ ಕಂಪನಿಯನ್ನು ಪ್ರಾರಂಭಿಸುತ್ತಾರೆ. ಅದರಲ್ಲಿ ಜನರಿಂದ ಹಣದ ಡೆಪಾಸಿಟ್ ಅನ್ನು ಮಾಡಿಸಿಕೊಂಡು ಅವರಿಗೆ ವಾಪಸ್ ಕೊಡುವಾಗ ಇಂತಿಷ್ಟು ಪರ್ಸೆಂಟೇಜ್ ಬಡ್ಡಿ ಯನ್ನು ಸೇರಿಸಿಕೊಡಲಾಗುತ್ತಿತ್ತು. ಜನರಿಂದ ಬರುತ್ತಿದ್ದ ಹಣವನ್ನು ಆರ್‌ಬಿಐ ನಲ್ಲಿ ಹೂಡಿಕೆ ಮಾಡುತ್ತಿದ್ದ ಜನಾರ್ದನ್ ರೆಡ್ಡಿ ಅದರಿಂದ ಬರುತ್ತಿದ್ದ ಬಡ್ಡಿ ಹಣವನ್ನು ಜನರಿಗೆ ನೀಡುತ್ತಿದ್ದರು. ಸಾಮಾನ್ಯ ಬ್ಯಾಂಕುಗಳಿಂದ ಹೆಚ್ಚಾಗಿ ಜನರಿಗೆ ಜನಾರ್ದನ್ ರೆಡ್ಡಿ ಬಡ್ಡಿಯನ್ನು ರಿಟರ್ನ್ಸ್ ನೀಡುತ್ತಿದ್ದರು.

ಹೀಗಾಗಿ ಕಂಪನಿ ಅತಿ ಶೀಘ್ರದಲ್ಲಿಯೇ 350 ಕೋಟಿಗೂ ಅಧಿಕ ಟರ್ನ್ ಓವರ್ ನೀಡುವಂತಹ ಲಾಭದ ಕಂಪನಿ ಯಾಗಿ ಮಾರ್ಪಟ್ಟಿತು. 90ರ ದಶಕದಲ್ಲಿ ಬಳ್ಳಾರಿಯಲಿ ಸೋನಿಯಾ ಗಾಂಧಿ ಹಾಗೂ ಸುಷ್ಮಾ ಸ್ವರಾಜ್ ನಡುವಿನ ಚುನಾವಣೆಯಲ್ಲಿ ಜನಾರ್ದನ್ ರೆಡ್ಡಿ ಹಾಗೂ ಬ್ರದರ್ಸ್ ಮತ್ತು ಶ್ರೀರಾಮುಲು ಅವರು ಸುಷ್ಮಾ ಸ್ವರಾಜ್ ಅವರನ್ನು ಗೆಲ್ಲಿಸಲೇಬೇಕು ಎನ್ನುವುದಾಗಿ ಪಣತೊಡುತ್ತಾರೆ.

Scan on Bellary baron - Telegraph India

ಕಾಂಗ್ರೆಸ್ ಪಕ್ಷದ ಕೋಟೆಯಾಗಿದ್ದ ಬಳ್ಳಾರಿಯಲ್ಲೂ ಕೂಡ ಸೋನಿಯಾ ಗಾಂಧಿ ಅವರು ಕಷ್ಟಪಟ್ಟು ಗೆಲ್ಲಬೇಕಾದ ಪರಿಸ್ಥಿತಿಯನ್ನು ರೆಡ್ಡಿ ಹಾಗೂ ಅವರ ಸಹೋದರರು ಮತ್ತು ರಾಮುಲು ಅವರು ತಂದು ಕೊಡುತ್ತಾರೆ. ಇದು ಜನಾರ್ದನ್ ರೆಡ್ಡಿ ಅವರಿಗೆ ಮತ್ತಷ್ಟು ಹೆಸರನ್ನು ತಂದುಕೊಡುತ್ತದೆ. ನಂತರ ಜನಾರ್ದನ್ ರೆಡ್ಡಿ ಅವರು ಓಬಳಾಪುರಂ ಮೈನಿಂಗ್ ಕಂಪನಿಯನ್ನು ಪ್ರಾರಂಭಿಸುತ್ತಾರೆ. ಈ ಸಂದರ್ಭದಲ್ಲಿ ಅರಣ್ಯವನ್ನು ಅತಿಕ್ರಮ ಮಾಡಿಕೊಂಡು ಮೈನಿಂಗ್ ಮಾಡಿ ಬರೋಬ್ಬರಿ 8,000 ಕೋಟಿ ರೂಪಾಯಿ ಲಾಭವನ್ನು ಮಾಡಿಕೊಳ್ಳುತ್ತಾರೆ.

ಬರ ಬರುತ್ತಾ ಸರ್ಕಾರದ ನಿಯಮಗಳನ್ನು ಮೀರಿ ಕೂಡ ಎಲ್ಲಾ ಕಡೆ ಗಣಿಗಾರಿಕೆ ಮೈನಿಂಗ್ ಅನ್ನು ಮಾಡುವುದರಿಂದಾಗಿ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಜನಾರ್ದನ್ ರೆಡ್ಡಿ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. 2008ರಲ್ಲಿ ಬಿಜೆಪಿ ದೊಡ್ಡಮಟ್ಟದ ಗೆಲುವನ್ನು ಪಡೆದು ಅಧಿಕಾರಕ್ಕೆ ಬರುವಲ್ಲಿ ಜನಾರ್ಧನ್ ರೆಡ್ಡಿ ನೇರ ನೇರಾ ಕಾರಣವಾಗಿದ್ದರು. ಆಗ ಅವರಿಗೆ ಪ್ರವಾಸೋದ್ಯಮ ಮಂತ್ರಿಯ ಖಾತೆಯನ್ನು ನೀಡಲಾಗುತ್ತದೆ.

Choice of Either/Ore In Karnataka's Ballari, 'Everyone's Hands Are Dirty'

ಆ ಸಂದರ್ಭದಲ್ಲಿ ಕೂಡ ದೊಡ್ಡ ಮಟ್ಟದ ಹಣವನ್ನು ಕೊಳ್ಳೆ ಹೊಡೆಯುತ್ತಾರೆ. ಜನಾರ್ಧನ್ ರೆಡ್ಡಿ ಅವರು ಕಟ್ಟಿಸಿದ ಸಾಮ್ರಾಜ್ಯದ ಪತನಕ್ಕೆ ಕಾರಣ ಆಗೋದು ಲೋಕಾಯುಕ್ತ ಆಗಿದ್ದ ಸಂತೋಷ್ ಹೆಗ್ಡೆ. ಒಂದು ದಿನ ಏಕಾಏಕಿಯಾಗಿ ಜನಾರ್ಧನ್ ರೆಡ್ಡಿ ಅವರ ಮನೆಗೆ ರೈಡ್ ಆಗುತ್ತದೆ. ವಿಚಾರಣೆಯ ನಂತರ 2011 ರಿಂದ 2015 ರವರೆಗೆ ಚಂಚಲಗುಡ ಜೈಲಿನಲ್ಲಿ ಜನಾರ್ಧನ್ ರೆಡ್ಡಿ ಅವರು ವಾಸ ಮಾಡಬೇಕಾಗಿ ಬರುತ್ತದೆ.

ಈ ಸಂದರ್ಭದಲ್ಲಿ ಅವರ ಕೆಲವೊಂದು ಆಸ್ತಿಯನ್ನು ಕೂಡ ಮುಟ್ಟಗೋಲು ಹಾಕಿಕೊಳ್ಳಲಾಗುತ್ತದೆ. ಇದು ಅವರ ಆಸ್ತಿಯಲ್ಲಿ ದೊಡ್ಡ ಮಟ್ಟದ ಇಳಿಕೆಯನ್ನು ಕಾಣುವಂತೆ ಮಾಡದಿದ್ದರೂ ಕೂಡ ರಾಜಕೀಯವಾಗಿ ಅವರ ಪ್ರಭಾವ ಕೊಂಚಮಟ್ಟಿಗೆ ಕುಂಠಿತಗೊಳ್ಳುವಂತೆ ಮಾಡುತ್ತದೆ.

ಒಂದು ವೇಳೆ ಆ ರೈಡ್ ನಡೆಯದೆ ಹೋಗಿದ್ದರೆ ಜನಾರ್ದನ್ ರೆಡ್ಡಿ ಅವರು ರಾಜ್ಯದ ಮುಖ್ಯಮಂತ್ರಿ ಕೂಡ ಆಗಬಹುದಿತ್ತೇನೋ. ಈಗಲೂ ಕೂಡ ಅವರಿಗೆ ಬಳ್ಳಾರಿ ಹೋಗುವುದಕ್ಕೆ ಪರಿಮೀಷನ್ ಇಲ್ಲ. ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಆಗಾಗ ಹೋಗುವುದಕ್ಕೆ ಮಾತ್ರ ಅನುಮತಿ ಇದೆ. ಇದು ಜನಾರ್ಧನ್ ರೆಡ್ಡಿಯವರ ಕಹಾನಿ ಸಂಕ್ಷಿಪ್ತ ರೂಪದಲ್ಲಿ. ಜನಾರ್ಧನ್ ರೆಡ್ಡಿ ಅವರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...