ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ (Bangalore Traffic) ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ಹೌದು ಜನಯು ಸರಿಯಾಗಿ ವಾಹನಗಳನ್ನ ಚಲಾಯಿಸಿದ ಕಾರಣ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು ಇದು ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಸದ್ಯ ಪೊಲೀಸರು ಟ್ರಾಫಿಕ್ ಸಮಸ್ಯೆ ನಿವಾರಣೆ ಮಾಡಲು ಈಗಾಗಲೇ ಹಲವು ನಿಯಮಗಳನ್ನ ಜಾರಿಗೆ ತಂದಿದ್ದಾರೆ. ಎಷ್ಟೇ ಟ್ರಾಫಿಕ್ ನಿಯಮಗಳನ್ನ (Traffic Rules) ಜಾರಿಗೆ ತಂದರೂ ಕೂಡ ಜನರು ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡುತ್ತಿದ್ದು ಈ ಕಾರಣಗಳಿಂದ ಈಗ ಹೊಸ ನಿಯಮಗಳನ್ನ ಜಾರಿಗೆ ತರಲಾಗಿದೆ.

ಬೆಂಗಳೂರಿನಲ್ಲಿ ಜಾರಿಗೆ ಬಂತು ಹೊಸ ನಿಯಮ
ಹೌದು ಬೆಂಗಳೂರಿನಲ್ಲಿ ಜನರು ಸಂಚಾರಿ ನಿಯಮಗಳನ್ನ ಸರಿಯಾಗಿ ಪಾಲನೆ ಮಾಡದೆ ಇರುವ ಕಾರಣ ಈಗ ಬೆಂಗಳೂರಿನಲ್ಲಿ ಹೊಸ ನಿಯಮಗಳನ್ನ ಜಾರಿಗೆ ತರಲು ತೀರ್ಮಾನವನ್ನ ಮಾಡಲಾಗಿದೆ ಎಂದು ಹೇಳಬಹುದು.
ಪೋಲೀಸರ ಕಣ್ಣುತಪ್ಪಿಸಿ ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡುವ ಜನರಿಗಾಗಿ ಈಗ ಟ್ರಾಫಿಕ್ ಪೊಲೀಸರು ಹೊಸ ಟೆಕ್ನಾಲಜಿಯನ್ನ ಜಾರಿಗೆ ತಂದಿದ್ದಾರೆ.
ಇನ್ನುಮುಂದೆ ಈ ಹೊಸ ನಿಯಮಗಳ ಅಡಿಯಲ್ಲಿ ಪೋಲೀಸರ ಕಣ್ಣುತಪ್ಪಿಸಿ ಟ್ರಾಫಿಕ್ ನಿಯಮಗಳನ್ನ ಪಾಲನೆ ಮಾಡದೆ ದುಪ್ಪಟ್ಟು ದಂಡವನ್ನ ಕೂಡ ಕಟ್ಟಬೇಕಾಗುತ್ತದೆ.

ಜಾರಿಗೆ ಬಂದಿದೆ ಹೊಸ ಟೆಕ್ನಾಲಜಿ
ಪೋಲೀಸರ ಕಣ್ಣುತಪ್ಪಿಸಿ ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡುವ ಜನರಿಗೆ ಪಾಠ ಕಲಿಸುವ ಸಲುವಾಗಿ ಈಗ ಬೆಂಗಳೂರಿನಲ್ಲಿ ITMS ಟೆಕ್ನಾಲಜಿ ಕ್ಯಾಮೆರಾಗಳನ್ನ (ITMS Technology Camera) ಜಾರಿಗೆ ತರಲಾಗಿದೆ. ಸುಮಾರು 20 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಹೊಸ ಟೆಕ್ನಾಲಜಿಯನ್ನು ಜಾರಿಗೆ ತರಲಾಗಿದ್ದು ಈ ಟೆಕ್ನಾಲಜಿ ಜನರ ಮೇಲೆ ಕಣ್ಣು ಇಡಲಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಈ ಕ್ಯಾಮೆರಾಗಳ ಕಣ್ಣು ತಪ್ಪಿಸಿ ಯಾರು ಕೂಡ ನಿಯಮಗಳನ್ನ ಉಲ್ಲಂಘನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಬಹುದು. ಸಿಗ್ನಲ್, ಜುಂಕ್ಷನ್ ಸೇರಿದಂತೆ ಹಲವು ರಸ್ತೆಗಳಲ್ಲಿ ಈ ಕ್ಯಾಮೆರಾ ಅಳವಡಿಕೆ ಮಾಡಲು ತೀರ್ಮಾನವನ್ನ ಮಾಡಲಾಗಿದ್ದು ಜನರು ಇನ್ನುಮುಂದೆ ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡಿದರೆ ಸಿಕ್ಕಿಬೀಳುವುದು ಖಚಿತ ಎಂದು ಹೇಳಿದರೆ ತಪ್ಪಾಗಲ್ಲ.

ಇದು ಸಂಪರ್ಕರಹಿತ ಕ್ಯಾಮೆರಾ ಆಗಿದ್ದು ಈ ಕ್ಯಾಮೆರಾ ಸಂಚಾರಿ ನಿಯಮಳನ್ನ ಉಲ್ಲಂಘನೆ ಮಾಡುವ ಜನರಿಗಾಗಿ ಜಾರಿಗೆ ತರಲಾಗಿದೆ ಎಂದು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ.
ವಾಹನ ಸವಾರನ ಪ್ರತಿ ಮೂವ್ಮೆಂಟ್ ಕೂಡ ರೆಕಾರ್ಡ್ ಮಾಡಲಾಗುತ್ತದೆ ಮತ್ತು ಈ ಕ್ಯಾಮೆರಾ ದಿನದ 24 ಘಂಟೆ ಕೂಡ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನಲ್ಲಿ ದಿನಕ್ಕೆ 30 ಸಾವಿರಕ್ಕೂ ಅಧಿಕ ಜನರಿಂದ ಟ್ರಾಫಿಕ್ ನಿಯಮಗಳ ಉಲ್ಲಂಘನೆ ಆಗುತ್ತಿದು ಈ ಕಾರಣಗಳಿಂದ ಈ ಹೊಸ ಟೆಕ್ನಾಲಜಿಯನ್ನು ಜಾರಿಗೆ ತರಲಾಗಿದೆ.