ಸುತ್ತಾಡುತ್ತಾ ರಹಸ್ಯಮಯ ದ್ವೀಪ ತಲುಪಿದ ಯೂಟ್ಯೂಬರ್ ಗೆ ಆದಿವಾಸಿಗಳು ನೀಡಿದ ಸ್ವಾಗತ ಕಂಡು ಶಾಕ್ ಆದ ನೆಟ್ಟಿಗರು

ಬಹಳಷ್ಟು ಜನರ ಪ್ರಪಂಚದಾದ್ಯಂತ ಪ್ರಯಾಣಿಸಲು ಇಷ್ಟಪಡುತ್ತಾರೆಯೇ ಆದರೂ ಅದು ಕೆಲವರಿಗೆ ಮಾತ್ರವೇ ಸಾಧ್ಯವಾಗುತ್ತದೆ. ಇದೇ ವೇಳೆ ಇನ್ನೂ ಕೆಲವರು ಜನರು ಹಿಂದೆಂದೂ ಹೋಗದ ಸ್ಥಳಗಳಿಗೆ ಹೋಗಲು, ಅಲ್ಲಿನ ಜನರ ಜೀವನವನ್ನು ನೋಡಲು ಬಯಸುತ್ತಾರೆ. ಯೂಟ್ಯೂಬರ್ ಒಬ್ಬರು ಕೂಡಾ ಇದೇ ರೀತಿಯ ಏನನ್ನಾದರೂ ಮಾಡುವ ನಿರ್ಧಾರವನ್ನು ಮಾಡಿ ಅಂತಹ ಸ್ಥಳಗಳಿಗೆ ಹೋಗಲು ನಿರ್ಧರಿಸಿದನು.

ಆತ ಒಂದಷ್ಟು ಸುತ್ತಾಡಿ, ಅಲೆದಾಡಿ ಅಂತಹುದೊಂದು ಅಂದರೆ ತಾನು ಅಂತಹುದೊಂದು ಸ್ಥಳವನ್ನು ತಲುಪಿದರು. ಅವರು ಈ ಸ್ಥಳದ ಬಗ್ಗೆ ಈ ಹಿಂದೆ ಕೇಳಿದ್ದರಷ್ಟೇ. ಯೂಟ್ಯೂಬರ್ ಹೊರಗಿನ ಪ್ರಪಂಚದೊಂದಿಗೆ ತೀರಾ ಕಡಿಮೆ ಸಂಪರ್ಕವನ್ನು ಹೊಂದಿರುವ ದ್ವೀಪವನ್ನು ತಲುಪಿದರು.

ಆಸ್ಟ್ರೇಲಿಯನ್ ಯೂಟ್ಯೂಬರ್ ಬ್ರೋಡಿ ಮಾಸ್ ಟ್ರಾವೆಲ್ ವ್ಲಾಗರ್ ಆಗಿದ್ದು, ಅವರು ತಮ್ಮ ವೀಡಿಯೋಗಳಿಗಾಗಿ ಬಹಳ ಆಸಕ್ತಿದಾಯಕ ಮತ್ತು ರೋಚಕ ಎನಿಸುವ ಸ್ಥಳಗಳಿಗೆ ಆಗಾಗ್ಗೆ ಭೇಟಿ ನೀಡುತ್ತಾರೆ. ಅಲ್ಲದೇ ಅವರು ವಿಷಯಗಳನ್ನು ಇನ್ನೊಂದು ಲೆವೆಲ್ ಗೆ ತಗೊಂಡು ಹೋಗಬೇಕೆಂದು ಅವರು ಬಹಳಷ್ಟು ಸಲ ಬಹಳ ವಿಶಿಷ್ಟ ಎನಿಸುವ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ.

ಬ್ರಾಡಿ ಮಾಸ್ ಉತ್ತರ ವನವಾಟುಗೆ ಭೇಟಿ ನೀಡಲು ನಿರ್ಧರಿಸಿದ್ದರು. ಈ ದ್ವೀಪವನ್ನು ‘ಮರೆತುಹೋದ ದ್ವೀಪ’ ಎಂದೂ ಕರೆಯುತ್ತಾರೆ. ಯೂಟ್ಯೂಬರ್ ಬ್ರಾಡಿ ಮಾಸ್ ಅವರು ಹೀಗೆ ಹೊರ ಜಗತ್ತಿನೊಂದಿಗೆ ಸಂಪರ್ಕ ಇಲ್ಲದ ಅಜ್ಞಾತ ದ್ವೀಪಕ್ಕೆ ಕಾಲಿಟ್ಟಿದ್ದು ಮಾತ್ರವಲ್ಲದೇ ಅಲ್ಲಿನ ಮೂಲ ನಿವಾಸಿಗಳನ್ನು ಭೇಟಿಯಾಗಿದ್ದಾರೆ.

ಬ್ರಾಡಿ ಮಾಸ್ ಅವರು ಬುಡಕಟ್ಟು ಜನಾಂಗದವರೊಂದಿಗಿನ ಭೇಟಿಯ ವೀಡಿಯೋ ಕ್ಲಿಪ್ ಅನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈಗಾಗಲೇ ಈ ವೀಡಿಯೋ ಸುಮಾರು 7 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಬ್ರಾಡಿ ಮಾಸ್ ಅವರ ಸಂಪೂರ್ಣ ಪ್ರಯಾಣದ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಯೂಟ್ಯೂಬ್ ನಲ್ಲಿ ಇವರ ಈ ವೀಡಿಯೋವನ್ನು ಇದುವರೆಗೆ 3 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಯೂಟ್ಯೂಬರ್ ಅಜ್ಞಾತ ದ್ವೀಪವನ್ನು ತಲುಪಿದ ತಕ್ಷಣ, ಅನೇಕ ಜನರು ಬಿಲ್ಲು ಮತ್ತು ಬಾಣಗಳನ್ನು ಹಿಡಿದು ಅವರ ಬಳಿಗೆ ತಲುಪುತ್ತಾರೆ ಮತ್ತು ಅವರನ್ನು ತಮ್ಮ ಬುಡಕಟ್ಟು ಪ್ರದೇಶಕ್ಕೆ ಕರೆದೊಯ್ಯುವುದನ್ನು ನಾವು ವೀಡಿಯೋದಲ್ಲಿ ನೋಡಬಹುದು.

ದ್ವೀಪದ ಮೂಲ ನಿವಾಸಿಗಳು ಯೂಟ್ಯೂಬರ್ ಅನ್ನು ಬಹಳ ಭವ್ಯವಾದ ರೀತಿಯಲ್ಲಿ ಸ್ವಾಗತಿಸಿದ್ದಾರೆ. ಅವರು ತಮ್ಮ ಕ್ಯಾಮರಾದಲ್ಲಿ ಎಲ್ಲಾ ಕ್ಷಣಗಳನ್ನು ದಾಖಲಿಸಿದ್ದಾರೆ. ವೀಡಿಯೋದಲ್ಲಿ, ಯೂಟ್ಯೂಬರ್ ಬುಡಕಟ್ಟು ಜನರು ತನ್ನನ್ನು ಹೇಗೆ ಎರಡು ಕೈ ಅಗಲಿಸಿ, ಬಹಳ ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ಅವರ ಉತ್ಸವಕ್ಕೆ ಕರೆದೊಯ್ದರು ಎಂಬುದನ್ನು ತೋರಿಸಿದ್ದಾರೆ.

ಆದಿವಾಸಿಗಳು ತಮ್ಮ ಹಬ್ಬದ ಉಡುಪಿನಲ್ಲಿ ತಮ್ಮ ದೇಹವನ್ನು ಎಲೆಗಳು ಮತ್ತು ಇತರ ನೈಸರ್ಗಿಕ ಆಭರಣಗಳಿಂದ ಸುಂದರವಾಗಿ ಅಲಂಕರಿಸಿಕೊಂಡಿದ್ದರು. ಬುಡಕಟ್ಟಿನ ಮುಖ್ಯಸ್ಥರು ಅಧಿಕೃತವಾಗಿ ತನ್ನನ್ನು ಪರಿಚಯಿಸಿಕೊಂಡರು ಮತ್ತು ಇಡೀ ದೃಶ್ಯ ಬಹಳ ರಮಣೀಯವಾಗಿದೆ. ಈ ವೀಡಿಯೋ ನೋಡಿದ ಜನರು ಅಚ್ಚರಿ ಪಟ್ಟಿದ್ದಾರೆ.

ಆ ವಿಡಿಯೊ ಕೆಳಗಿದೆ ನೋಡಿ…

You might also like

Comments are closed.