IPS-PSI-LOVE-STORY

ಇಬ್ಬರು ನೆಲದ ಮೇಲೆ ಅಸಯ್ಯವಾಗಿ ಮಲಗಿದ್ದರು:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮಹಿಳಾ ಪಿಎಸ್ಐ ನಡುವೆ ಸರಸ ಸಲ್ಲಾಪ,ಮನನೊಂದ ಪತಿಯಿಂದ ದೂರು…

Entertainment/ಮನರಂಜನೆ
ಕಲಬುರಗಿ: ಈ ಹಿಂದೆ ಕೌಟುಂಬಿಕ ವಿಚಾರಕ್ಕೆ ಸುದ್ದಿಯಾಗಿದ್ದ ಐಪಿಎಸ್​ ಅಧಿಕಾರಿ ಅರುಣ್​ ರಂಗರಾಜನ್​ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಮಹಿಳಾ ಎಎಸ್‌ಐ ಜತೆ ರಂಗರಾಜನ್​​ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಸಂತ್ರಸ್ತ ಎಎಸ್​ಐ ಪತಿ, ಐಪಿಎಸ್​ ಅಧಿಕಾರಿ ಮತ್ತು ಪತ್ನಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಅರುಣ್ ರಂಗರಾಜನ್ ಅವರು ಕಲಬುರಗಿ ಐಎಸ್​​ಡಿ ವಿಭಾಗದ ಎಸ್​ಪಿ ಆಗಿದ್ದಾರೆ. ಐಎಸ್​ಡಿ ವಿಭಾಗದಲ್ಲೇ ಕರ್ತವ್ಯ ನಿರ್ವಹಿಸುವ ಮಹಿಳಾ ಎಎಸ್‌ಐ ಜತೆ ರಂಗರಾಜನ್​ಗೆ ಅಕ್ರಮ ಸಂಬಂಧ ಇದೆ ಎನ್ನಲಾಗಿದೆ. ಮಹಿಳಾ ಎಎಸ್‌ಐ ಪತಿ ಹೆಡ್ ಕಾನ್​ಸ್ಟೆಬಲ್ ಕಂಟೆಪ್ಪನ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಇದರ ಬೆನ್ನಲ್ಲೇ ಇಬ್ಬರ ವಿರುದ್ಧ ಕಂಟೆಪ್ಪ ದೂರು ದಾಖಲಿಸಿದ್ದಾರೆ.
ಹೆಡ್ ಕಾನ್ಸ್​ಟೇಬಲ್ ಕಂಟೆಪ್ಪ ಕೊಟ್ಟಿರುವ ದೂರಿನ ಸಾಂರಾಂಶ ಈ ಕೆಳಕಂಡಂತಿದೆ
ನಾನು 1997ನೇ ಸಾಲಿನಲ್ಲಿ ಪೊಲೀಸ್ ಕಾನ್​ಸ್ಟೆಬಲ್ ಹುದ್ದೆಗೆ ನೇಮಕಾತಿ ಹೊಂದಿ, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ, ಮಹಿಳಾ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಜಾತಾಳನ್ನು ಪ್ರೀತಿಸಿ 2005ರಲ್ಲಿ ಮದುವೆಯಾದೆ. ನಮಗೆ ಇಬ್ಬರು ಮಕ್ಕಳಿದ್ದಾರೆ. ಸದ್ಯ ನನ್ನ ಹೆಂಡತಿ ಸುಜಾತಾ ಎಎಸ್‌ಐ ಆಗಿ ಐಎಸ್​ಡಿ ಘಟಕದಲಿ ಕರ್ತವ್ಯ ನಿರ್ವಹಿಸುತ್ತಿದ್ದಾಳೆ. ಐಎಸ್​ಡಿ ಘಟಕದಲ್ಲಿ ಎಸ್​ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅರುಣ್​ ರಂಗರಾಜನ್​ ನನ್ನ ಹೆಂಡತಿಯೊಂದಿಗೆ ಅನೈತಿಕ ಸಂಭಂದ ಹೊಂದಿರುವ ಬಗ್ಗೆ ನನಗೆ ಮಾಹಿತಿ ಗೊತ್ತಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮಹಿಳಾ ಪಿಎಸ್ಐ ನಡುವೆ ಸರಸ ಸಲ್ಲಾಪ, ಮನನೊಂದ ಪತಿಯಿಂದ ದೂರು... - Chandravalli News
ಒಂದೂವರೆ ತಿಂಗಳ ಹಿಂದೆ ನನ್ನ ಹೆಂಡತಿಯ ಮೇಲೆ ನನಗೆ ಸಂಶಯ ಬಂದು ಅವಳ ಇರುವಿಕೆಯ ಬಗ್ಗೆ ವಿಚಾರಿಸಿದೆ. ನನ್ನ ಹೆಂಡತಿ, ಐ-ವಾನ್-ಶಾಹಿ ರಸ್ತೆಯಲ್ಲಿರುವ ಅರುಣ್​ ರಂಗರಾಜನ್​ಗೆ ಸಂಭಂದಪಟ್ಟ ಪಿ.ಡಬ್ಲ್ಯು.ಡಿ ಕ್ವಾರ್ಟಸ್​ನಲ್ಲಿ ಇರುವ ಬಗ್ಗೆ ಮಾಹಿತಿ ಖಚಿತ ಪಡಿಸಿಕೊಂಡೆ. ಬಳಿಕ ಅಲ್ಲಿಗೆ ಹೋಗಿ ನೋಡಿದಾಗ ನನ್ನ ಹೆಂಡತಿ, ಅರುಣ್​​ ರಂಗರಾಜನ್​ ಜತೆ ಇದ್ದಳು. ಈ ಬಗ್ಗೆ ಪ್ರಶ್ನೆ ಮಾಡಿದಾಗ, ಇಬ್ಬರು ಸೇರಿಕೊಂಡು ನಿನ್ನಾವನೋ ಕೇಳುವವನು,
ನಮ್ಮಿಷ್ಟದಂತೆ ನಾವು ಮಾಡುತ್ತೇವೆ ಎಂದು ನನ್ನ ಮೇಲೆ ಹಲ್ಲೆ ಮಾಡಿದರು. ಇದರಿಂದ ನನಗೆ ಗಾಯಗಳಾಯಿತು. ಅಲ್ಲಿಂದ ತಪ್ಪಿಸಿಕೊಂಡು ಬಂದೆ.
ಈ ಹಿಂದೆ ಪೊಲೀಸ್​ ಇನ್ಸ್​ಪೆಕ್ಟರ್​ ಆಗಿದ್ದ ಸೋಮಲಿಂಗ ಕಿರೇದ ಅವರಿಗೆ ನನ್ನ ಬಗ್ಗೆ ಯಾರೋ ಫೋನ್ ಮುಖಾಂತರ ವಿಷಯ ತಿಳಿಸಿದ್ದು, ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ವಿಚಾರಿಸಿದರು. ನಡೆದ ಘಟನೆಯ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿದೆ. ನನ್ನ ಮೇಲಾಧಿಕಾರಿಗಳು ಹಾಗೂ ನನ್ನ ಹಿತೈಷಿಗಳು ಮಕ್ಕಳ ಜೀವನದ ಬಗ್ಗೆ ಯೋಚಿಸು ಎಂದು ಹೇಳಿದರು. ಈ ಕಾರಣಕ್ಕೆ, ಈ ಹಿಂದೆ ಏನೋ ಆಯಿತು, ಇನ್ನು ಮುಂದೆ ಸರಿಯಾಗಿ ಇರಲು ಬುದ್ಧಿವಾದ ಹೇಳಿ ಪತ್ನಿಯನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದೆ. ಆಗ ಯಾವುದೇ ಪ್ರಕರಣ ದಾಖಲಿಸಿರಲಿಲ್ಲ. ಇದಾದ ಬಳಿಕವು ಆರುಣ್​ ರಂಗರಾಜನ್, ನನ್ನ ಪತ್ನಿಯ ಮೊಬೈಲ್​ಗೆ ಬೇರೆ ನಂಬರ್​ನಿಂದ ಹಗಲು, ರಾತ್ರಿ ಎನ್ನದೆ ಯಾವಾಗ ಬೇಕು ಆವಾಗ ಕರೆ ಮಾಡಿ ಮಾತನಾಡುತ್ತಿದ್ದನು ಮತ್ತು ಅಶ್ಲೀಲ ಮೆಸೇಜ್​​ಗಳನ್ನು ಕಳುಹಿಸುತ್ತಿದ್ದನು. ನಾನು ಕೆಲವು ದಿವಸಗಳ ಹಿಂದೆ ಮಸೇಜ್​ಗಳನ್ನು ಕಂಡಾಗ, ನನ್ನ ಹೆಂಡತಿ ಎಲ್ಲ ಸಂದೇಶಗಳನ್ನು ಮತ್ತು ಕರೆ ದಾಖಲಾತಿಗಳನ್ನು ನಾಶ ಮಾಡಿದಳು. ಆವಾಗಲು ಕೂಡ ನನ್ನ ಮಕ್ಕಳ ಭವಿಷ್ಯಕ್ಕಾಗಿ ನಾನು ನನ್ನ ಹೆಂಡತಿಗೆ ಇದು ಸರಿಯಲ್ಲ, ನೀನು ಇವಾಗಲಾದರು ಸುಧಾರಿಸು ಅಂತ ಬುದ್ಧಿವಾದ ಹೇಳಿದ್ದೆ.
ಆದರೆ, ಮಾ. 07ರಂದು ಮಧ್ಯಾಹ್ನ 2.30ರ ಸುಮಾರಿಗೆ ಪೊಲೀಸ್ ಠಾಣೆಯಲಿದ್ದಾಗ, ನನಗೆ ನನ್ನ ಹೆಂಡತಿಯ ಮೇಲೆ ಬಲವಾದ ಸಂಶಯ ಬಂದು, ಮತ್ತೆ ಅವಳು ಅದೇ ತಪ್ಪು ಮಾಡುತ್ತಿರಬಹುದು ಅಂತ ಮಧ್ಯಾಹ್ನ 2.50ರ ಸುಮಾರಿಗೆ ಐವಾನ್-ಶಾಹಿ ರಸ್ತೆಯ ಪಿಡಬ್ಲ್ಯುಡಿ ಕಾರ್ಟಸ್ ಹೋಗಿ ನೋಡಿದೆ. ನನ್ನ ಹೆಂಡತಿಯ ಸ್ಕೂಟರ್​ ಕ್ವಾಟ್ರಸ್​ನ ಕಂಪೌಂಡ ಒಳಗಡೆ ಇದ್ದು, ಬಾಗಿಲಿನ ಹತ್ತಿರ ನಿಂತು ಕಿವಿ ಕೊಟ್ಟು ಕೇಳಿದಾಗ ಒಳಗಡೆ ಯಾರೋ ಮಾತನಾಡುತ್ತಿರುವಂತೆ ಕೇಳಿಸಿತು. ನನ್ನ ಹೆಂಡತಿ ಹಾಗೂ ಆರುಣ್​ ರಂಗರಾಜನ್​ ಧ್ವನಿಯನ್ನು ಗುರುತಿಸಿ ಬಳಿಕ ಹಿಂಭಾಗದ ಕಿಟಕಿಯಿಂದ ಇಣುಕಿ ನೋಡಿದೆ. ಇಬ್ಬರು ನೆಲದ ಮೇಲೆ ಅಸಯ್ಯ ರೀತಿಯಲ್ಲಿ ಮಲಗಿಕೊಂಡಿದ್ದರು. ಇದನ್ನು ಕಣ್ಣಾರೆ ಕಂಡು ನನಗೆ ಆಘಾತವಾಗಿ, ಸ್ವಲ್ಪ ಸುಧಾರಿಸಿಕೊಂಡು ಮತ್ತೆ ನೋಡಿದೆ. ಅವರಿಬ್ಬರು ತಮ್ಮ ತಮ್ಮ ಬಟ್ಟೆ ಹಾಕಿಕೊಂಡು, ಊಟ ಮಾಡಲು ಗಂಡ-ಹೆಂಡತಿಯ ತರಹ ಕುಳಿತಿದ್ದರು. ಆ ದೃಶ್ಯಾವಳಿಗಳನ್ನು ನಾನು ನನ್ನ ಮೊಬೈಲ್​ನಲ್ಲಿ ವಿಡಿಯೋ ಮಾಡಿದೆ. ಬಳಿಕ ನನ್ನ ಹೆಂಡತಿಗೆ ನೀನು ನನಗೆ ಮೋಸ ಮಾಡಿ, ಮತ್ತೊಬ್ಬನ ಜೊತೆಯಲ್ಲಿ ಮಲಗುತ್ತೀಯಲ್ಲ ಇದು ನ್ಯಾಯವೇ ಎಂದು ಪ್ರಶ್ನೆ ಮಾಡಿದೆ.
ಬೇರೆಯವರ ಹೆಂಡತಿ ಅಂತಾ ಗೊತ್ತಿದ್ದರೂ ನೀನೊಬ್ಬ ಉನ್ನತ ಅಧಿಕಾರಿಯಾಗಿ, ನಿನ್ನ ಕೈ ಕೆಳಗಿನ ಸಿಬ್ಬಂದಿಯೊಂದಿಗೆ ಸಂಭೋಗದಲ್ಲಿ ತೊಡಗುತ್ತೀಯಲ್ಲ ನಿನಗೆ ನಾಚಿಕೆಯಾಗಬೇಕು ಎಂದು ಹೇಳಿದಾದ, ನನ್ನನ್ನು ನಿಂದಿಸಿ, ನಾನ್​ ಎಸ್​ಪಿ, ನಿನ್ನಿಂದ ನನಗೆ ಏನು ಮಾಡಿಕೊಳ್ಳಲು ಆಗುವುದಿಲ್ಲ, ಹೆಚ್ಚಿಗೆ ಮಾತನಾಡಿದರೆ, ನಿನ್ನನ್ನು ಇಂದೇ ಜೈಲಿಗೆ ಕಳುಹಿಸಿತ್ತೇನೆ. ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಅಲ್ಲಿಯೇ ಬಿದ್ದ ಒಂದು ರಾಡನ್ನು ತೋರಿಸಿ ಜೀವದ ಬೆದರಿಕೆ ಹಾಕಿದರು.
ಈ ಸಂದರ್ಭದಲ್ಲಿ ನನ್ನ ಹೆಂಡತಿ ಕೂಡ ಎಸ್​ಪಿ ಜತೆ ಸೇರಿಕೊಂಡು, ನೀನು ಹೆಚ್ಚಿಗೆ ಮಾತನಾಡಬೇಡ, ಇಲ್ಲದಿದ್ದರೆ, ಎಸ್​ಪಿ ಸಾಹೇಬರು ಹೇಳಿದಂತೆ ನಿನ್ನನ್ನು ಕೊಲ್ಲಿಸಿ ಬಿಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದಳು. ಬಳಿಕ ಈ ವಿಷಯವನ್ನು ನಾನು ಮೇಲಾಧಿಕಾರಿಗಳ ಗಮನಕ್ಕೆ ತಂದಾಗ, ಪೊಲೀಸರು ಘಟನಾ ಸ್ಥಳಕ್ಕೆ ಬಂದರು. ಅಲ್ಲದೆ ಕೆಲವು ಸಾರ್ವಜನಿಕರು ಸಹ ಈ ಘಟನೆಯನ್ನು ಕಂಡಿದ್ದರು. ಇವರಿಬ್ಬರ ಅಪರಾದ ಸಾಕ್ಷಿಯು ಸಿಗದಂತೆ, ಗುಪ್ತವಾಗಿ ತಮ್ಮ ಅಪರಾಧವನ್ನು ರಕ್ಷಿಸಿಕೊಳ್ಳಲು ಸುಳ್ಳು ಮಾಹಿತಿಯನ್ನು ಕೂಡ ನೀಡಿದರು. ಅದೇ ದಿನ ಸಂಜೆ 7.15ರ ಸುಮಾರಿಗೆ ನನ್ನ ಹೆಂಡತಿ, ಅರುಣ್​ ರಂಗರಾಜನ್ ಕುಮ್ಮಕ್ಕಿನಿಂದ ನಾನು ಇಲ್ಲದ ಹೊತ್ತಿನಲ್ಲಿ, ಮನೆಯ ಒಳಗೆ ಹೋಗಿ ಅಲಮಾರಿಯಲ್ಲಿರುವ ಮೊಬೈಲ್ ಫೋನ್, ಕೆಲವು ಬಂಗಾರದ ಆಭರಣವನ್ನು ಕಳವು ಮಾಡಿಕೊಂಡು ಹೋಗಿದ್ದಾಳೆ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...