ips-family

ಆ ಬ್ಯಾಂಕ್ ನೌಕರ ತನ್ನ ನಾಲ್ವರು ಮಕ್ಕಳನ್ನು ಅದು ಹೇಗೆ ಓದಿಸಿದರೆಂದರೆ, ಎಲ್ಲ ಮಕ್ಕಳೂ ಈಗ IAS ಮತ್ತು IPS ಅಧಿಕಾರಿಗಳು!

Entertainment/ಮನರಂಜನೆ

UPSC ಪರೀಕ್ಷೆಯನ್ನು ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು ಎಂದೇ ಪರಿಗಣಿಸಲಾಗಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಈ ಪರೀಕ್ಷೆಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಲೇ ಇದ್ದಾರೆ. ಆದರೆ ಕೆಲವರಿಗೆ ಮಾತ್ರವೇ ಇಲ್ಲಿ ಅವಕಾಶ ಸಿಗುತ್ತದೆ. ಯಾವುದೇ ಗ್ರಾಮ ಅಥವಾ ನಗರದಿಂದ ಬಂದವರು UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಅದನ್ನೊಂದು ದೊಡ್ಡ ವಿಷಯವೆಂದೇ ಪರಿಗಣಿಸಲಾಗುತ್ತದೆ.

ಅಲ್ಲದೇ ಈ ಪರೀಕ್ಷೆಯನ್ನು ಪಾಸು ಮಾಡಿದವರನ್ನು ಅನೇಕರು ತಮ್ಮ ಸ್ಪೂರ್ತಿ ಮತ್ತು ಆದರ್ಶ ಎಂದೇ ಪರಿಗಣಿಸುತ್ತಾರೆ. ಆದರೆ ನಾವು ನಿಮಗೆ ಒಂದು ಅಚ್ಚರಿಯ ವಿಷಯವನ್ನು ಹೇಳಲು ಹೊರಟಿದ್ದೇವೆ. ಅದೇನೆಂದರೆ ಒಂದೇ ಕುಟುಂಬದ ನಾಲ್ವರು ಸಹೋದರ ಸಹೋದರಿಯರು ಇಂತಹ ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ.

ಉತ್ತರ ಪ್ರದೇಶದ ಲಾಲ್‌ಗಂಜ್ ಜಿಲ್ಲೆಯಲ್ಲಿ ಇಂತಹುದೊಂದ ಅಚ್ಚರಿಯನ್ನು ಕಾಣಬಹುದಾಗಿದೆ. ಇಲ್ಲಿ ವಾಸಿಸುವ ಕುಟುಂಬವೊಂದರಲ್ಲಿ ನಾಲ್ವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಅವರೆಲ್ಲರೂ ಐಎಎಸ್ ಮತ್ತು ಐಪಿಎಸ್ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಾಲ್ವರು ಒಡಹುಟ್ಟಿದವರಲ್ಲಿ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಇದ್ದಾರೆ.

ಮಾಜಿ ಬ್ಯಾಂಕ್ ಮ್ಯಾನೇಜರ್ ಆಗಿರುವ ತಂದೆಯ ಈ ನಾಲ್ವರು ಮಕ್ಕಳು ಅದ್ಭುತಗಳನ್ನು ಮಾಡಿ ತೋರಿಸಿದ್ದಾರೆ. ತಮ್ಮ ನಾಲ್ಕು ಜನ ಮಕ್ಕಳ ಸಾಧನೆಯನ್ನು ಗ್ರಾಮೀಣ ಬ್ಯಾಂಕ್‌ನ ಮ್ಯಾನೇಜರ್ ಆಗಿದ್ದ ಅನಿಲ್ ಪ್ರಕಾಶ್ ಮಿಶ್ರಾ ಬಹಳ ಹೆಮ್ಮೆಯಿಂದ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅನಿಲ್ ಪ್ರಕಾಶ್ ಅವರು ತಮ್ಮ ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಎಂದೂ ರಾಜಿ ಮಾಡಿಕೊಳ್ಳಲಿಲ್ಲ.

ಅವರು ಸದಾ ತಮ್ಮ ಮಕ್ಕಳು ಒಳ್ಳೆಯ ಉದ್ಯೋಗ ಪಡೆಯಬೇಕೆಂದು ಆಶಿಸುತ್ತಿದ್ದರು. ಅಪ್ಪನ ಆಶಯವನ್ನು ಅರಿತವರಂತೆ ಅವರ ನಾಲ್ವರು ಮಕ್ಕಳೂ ತಮ್ಮ ಓದಿನತ್ತ ಗಮನ ಹರಿಸಿದರು ಮತ್ತು ಶ್ರಮದಿಂದ ಅವರು ಎಂದೂ ಹಿಂದೆ ಸರಿಯಲಿಲ್ಲ. ಈ ನಾಲ್ವರು ಒಡಹುಟ್ಟಿದವರಲ್ಲಿ ಹಿರಿಯರಾದ ಯೋಗೇಶ್ ಮಿಶ್ರಾ ಅವರು ಐಎಎಸ್ ಅಧಿಕಾರಿಯಾಗಿದ್ದಾರೆ.

ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಲಾಲ್‌ಗಂಜ್‌ನಲ್ಲಿ ಪೂರ್ಣಗೊಳಿಸಿದರು ಮತ್ತು ನಂತರ ಮೋತಿಲಾಲ್ ನೆಹರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಮಾಡಿದರು. ಶಿಕ್ಷಣವನ್ನು ಮುಗಿಸಿದ ನಂತರ ಯೋಗೇಶ್ ನೋಯ್ಡಾದಲ್ಲಿ ಉದ್ಯೋಗವನ್ನು ಮಾಡುತ್ತಾ ಅದರ ಜೊತೆಯಲ್ಲಿಯೇ ನಾಗರಿಕ ಸೇವಾ ಪರೀಕ್ಷೆಗೆ ತಯಾರಿಯನ್ನು ನಡೆಸಿದ್ದರು.

2013ರಲ್ಲಿ ಅವರ ಶ್ರಮಕ್ಕೆ ತಕ್ಕ ಫಲ ದೊರೆಯಿತು ಮತ್ತು ಅವರು UPSC ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಇನ್ನು ಯೋಗೇಶ್ ಅವರ ನಂತರ ಅವರ ಸಹೋದರಿ ಕ್ಷಮಾ ಮಿಶ್ರಾ ಕೂಡಾ ತಮ್ಮ ಸಹೋದರನಂತೆಯೇ ನಾಗರಿಕ ಸೇವೆಯನ್ನು ಆರಿಸಿಕೊಂಡರು ಮತ್ತು ಅದಕ್ಕಾಗಿ ಶ್ರದ್ಧೆಯಿಂದ ತಯಾರಿ ನಡೆಸಿದರು.

ಆದರೆ ಅವರು ಮೊದಲ ಮೂರು ಪ್ರಯತ್ನಗಳಲ್ಲಿ ವಿಫಲರಾದರು. ಕ್ಷಮಾ ಅದರಿಂದ ಧೈರ್ಯ ಕಳೆದುಕೊಳ್ಳದೆ ನಾಲ್ಕನೇ ಪ್ರಯತ್ನ ಮಾಡಿ, ಅದರಲ್ಲಿ ತೇರ್ಗಡೆಯಾದರು. ಅವರೀಗ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇದಾದ ನಂತರ ಯೋಗೇಶ್ ಅವರ ಎರಡನೇ ಸಹೋದರಿ ಮಾಧುರಿ ಮಿಶ್ರಾ ಕೂಡಾ ಹಿರಿಯಣ್ಣ ಮತ್ತು ಅಕ್ಕನ ಹಾದಿಯಲ್ಲೇ ನಡೆದರು.

ಮಾಧುರಿ ಅವರು ಲಾಲ್‌ಗಂಜ್‌ನ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಅನಂತರ ಅವರು ಪ್ರಯಾಗರಾಜ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. 2014ರಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ತೇರ್ಗಡೆಯಾದ ಅವರು ಪ್ರಸ್ತುತ ಜಾರ್ಖಂಡ್ ಕೇಡರ್‌ನಲ್ಲಿ ಐಎಎಸ್ ಅಧಿಕಾರಿಯಾಗಿದ್ದಾರೆ. ನಾಲ್ವರು ಒಡಹುಟ್ಟಿದವರ ಪೈಕಿ ಎರಡನೇ ಸಹೋದರ 2015 ರಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು ಮತ್ತು ಅವರು ದೇಶದಲ್ಲೇ 44 ನೇ ರ್ಯಾಂಕ್ ಪಡೆದರು.

ಪ್ರಸ್ತುತ ಅವರು ಅವರು ಬಿಹಾರ ಕೇಡರ್‌ನಲ್ಲಿ ಅಧಿಕಾರಿಯಾಗುದ್ದಾರೆ. ತಮ್ಮ ಮಕ್ಕಳ ಇಂತಹುದೊಂದು ಸಾಧನೆಯ ಬಗ್ಗೆ ಹೆಮ್ಮೆ ಪಡುವ ಈ ನಾಲ್ವರು ಒಡಹುಟ್ಟಿದವರ ತಂದೆ ಅನಿಲ್ ಪ್ರಕಾಶ್ ಅವರು, ‘ನಾನು ಇನ್ನೇನು ಕೇಳಲಿ. ಇಂದು ನನ್ನ ಮಕ್ಕಳಿಂದಾಗಿ ನಾನು ತಲೆ ಎತ್ತಿ ನಡೆಯುತ್ತಿದ್ದೇ‌ನೆ” ಎನ್ನುತ್ತಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.