ಗೆಳೆಯರೆ, ನಾವಿಲ್ಲಿ ಹೇಳೋಕೆ ಹೊರಟಿರುವುದು ಇದ್ಯಾವುದೂ ಇಲ್ಲದ ಓರ್ವ ಬುಡಕಟ್ಟು ಜನಾಂಗದ ಹುಡುಗಿಯ ಕಥೆ.. ಸಾಧನೆ ಮಾಡೋದಿಕ್ಕೆ ಮುಖ್ಯವಾಗಿ ಏನು ಬೇಕು? ಕೆಲವರು ಇದಕ್ಕೆ ದುಡ್ಡು ಇರಬೇಕು ಅಂತ ಹೇಳಬಹುದು.. ಇನ್ನು ಕೆಲವರು ಯಾರದ್ದಾದರೂ ಬೆಂಬಲ ಬೇಕು ಕೈ ಹಿಡಿದು ನಡೆಸುವವರು ಬೇಕು ಅಂತಾ ಹೇಳಬಹುದು.. ಆದ್ರೆ ಮೂರಕಲು ಮನೆಯಲ್ಲಿ ಇದ್ದುಕೊಂಡೇ ಹಗಲು ರಾತ್ರಿ ಓದಿ ಯು ಪಿ ಎಸ್ ಸಿ ಪಾಸ್ ಮಾಡಿದ ಚಲಗಾರ್ತಿ ಶ್ರೀಧನ್ಯ ಸುರೇಶ್ ಕಥೆ.. ಹೌದು ಕೇರಳದಲ್ಲಿ ಒಂದು ಮುರಕಲು ಮನೆಯಲ್ಲಿ ಹುಟ್ಟಿ ಬೆಳೆದು ಈಗ ಇಡೀ ದೇಶವೇ ತನ್ನತ್ತ ಅಚ್ಚರಿಯಿಂದ ತಿರುಗಿ ನೋಡುವಂತೆ ಮಾಡಿದ್ದಾರೆ..
ವಯಸ್ಸು ಇನ್ನೂ 26ವರ್ಷ ಯು ಪಿ ಎಸ್ ಸಿ ಪರೀಕ್ಷೆ ಪಾಸ್ ಮಾಡಿದ ಕೇರಳದ ಮೊದಲ ಬುಡಕಟ್ಟು ಜನಾಂಗದ ಮಹಿಳೆ ಎಂಬ ಇತಿಹಾಸ ಸೃಷ್ಟಿಸಿದ್ದಾರೆ. ಎಲ್ಲರಲ್ಲೂ ಏನೋ ಒಂದು ಕಲ್ನಸು ಇರತ್ತೆ. ಆದರೆ ಆ ಕನಸಿನ ಬೆನ್ನು ಬಿದ್ದು ಕನಸು ನನಸು ಮಾಡಿಕೊಳ್ಳುವವರ ಸಂಖ್ಯೆ ಸ್ವಲ್ಪ ಕಡಿಮೆ. ಆದರೆ ಶ್ರೀ ಧನ್ಯ ಸುರೇಶ್ ಗೆ ಐ ಏ ಎಸ್ ಮಾಡಬೇಕೆಂಬ ಕನಸು ತುಂಬಾ ಇತ್ತು. ಅದಕ್ಕೆ ಕಾರಣ ಅದೊಂದು ದೃಶ್ಯ. ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಇರೋ ಸರ್ಕಾರಿ ಯೋಜನೇಯೊಂದರ ಭಾಗ ಆಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮಾನಂತ ವಾಡಿಯ ಶ್ರೀರಾಮ್ ಸಂಭಶಿವರಾವ್ ಗೆ ಧನ್ಯ ಕಣ್ಣಿಗೆ ಬಿದ್ದರು..
ಎಲ್ಲರೂ ಅವರಿಗೆ ಕಾಯುತ್ತಾ ಇದ್ದಾಗ ಅವರ ಪ್ರವೇಶ ಆಗುತ್ತಿದ್ದಂತೆ ಜನ ಅವರಿಗೆ ಗೌರವ ಕೊಡುವುದನ್ನು ನೋಡಿ ಶ್ರೀ ಧನ್ಯ ಅಚ್ಚರಿಗೊಂಡಿದ್ದರು.. ಆಗಲೇ ಆಕೆ ತಾನು ಜಿಲ್ಲಾಧಿಕಾರಿಯೆ ಆಗುವುದು ಎಂದು ನಿರ್ಧಾರ ಮಾಡಿದಳು. ಟಾರ್ಗೆಟ್ ಸೆಟ್ ಮಾಡೋದು ಕಷ್ಟ ಎನುಲ್ಲ. ಆದರೆ ಅದನ್ನ ತಲುಪುವ ಹಾದಿಯಲ್ಲಿ ಅಡೆತಡೆಗಳು ಬರತ್ತೆ ಧನ್ಯಾಗು ಹಾಗೆ ಆಗಿತ್ತು. ಸಿವಿಲ್ ಸರ್ವೀಸ್ ಪರೀಕ್ಷೆ ಎಂದಾಕ್ಷಣ ಒಳ್ಳೆಯ ಕೋಚಿಂಗ್ ಪಡೆಯಬೇಕು ದೆಹಲಿಯಲ್ಲಿ ಟ್ರೇನಿಂಗ್ ಪಡೆಯಬೇಕು ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಇರಬೇಕು. ಇವೆಲ್ಲವೂ ಮನಸಿಗೆ ಬರದ ಕುಡಿಚಿ ಅನ್ನೋ ಅತೀ ಹಿಂದುಳಿದ ಬುಡಕಟ್ಟು ಜನಾಂಗಕ್ಕೆ
ಸೇರಿದ ಶ್ರೀ ಧನ್ಯಾ ತೀರಾ ಬಡತನದ ಕುಟುಂಬದಿಂದ ಬಂದವಳು. ಹೆತ್ತವರು ನರೇಗಾ ಯೋಜನೆಯಲ್ಲಿ ದಿನಗೂಲಿ ಕೆಲಸಕ್ಕೆ ಹೋಗ್ತಾ ಇದ್ರು. ಅದರಲ್ಲೇ ದುಡ್ಡು ಸೇರಿಸಿ ಮೂವರು ಮಕ್ಕಳಿಗೂ ಶಿಕ್ಷಣ ಕೊಡಿಸಿದರು. ರಸ್ತೆಯು ಇಲ್ಲದ ಹಳ್ಳಿ ಅದು ಕಿಲೋಮೀಟರ್ ಗಳಷ್ಟು ದೂರ ಹೋಗಿ ಮಲಯಾಳಂ ಮೀಡಿಯಮ್ ನಲ್ಲಿ ಪ್ರಾಥಮಿಕ ಹಾಗೂ ಹೈಸ್ಕೂಲ್ ವಿದ್ಯಾಬ್ಯಾಸ ಮುಗಿಸಿದರು. ಆಮೇಲೆ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪದವಿ ಪಡೆದು, ಕ್ಯಾಲಿಕಟ್ ವಿವಿಯಲ್ಲಿ ಪ್ರಾಣಿ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಧನ್ಯಾ ತನ್ನ ವೃತ್ತಿ ಜೀವನ ಆರಂಭ ಮಾಡಿದ್ದು ಬುಡಕಟ್ಟು ಸಮುದಾಯ ಇಲಾಖೆಯಲ್ಲಿ ಗುಮಾಸ್ತೆಯಾಗಿ. ಆಗಲೇ ಉಪ ಜಿಲ್ಲಾಧಿಕಾರಿ ಆಗಿದ್ದ
ಶಿವರಾಂ ಸಾಂಭಶಿವ ರಾವ್ ಕಣ್ಣಿಗೆ ಬಿದ್ದಿದ್ದು ಹಾಗೂ ಐ ಏ ಎಸ್ ಅಧಿಕಾರಿ ಆಗಬೇಕು ಅನ್ನೋ ಚಲ ಹುಟ್ಟಿದ್ದು. ಧೃಢ ನಿಶ್ಚಯ ಮಾಡಿ ಕೆಲಸ ಬಿಟ್ಟು ಓದೋಕೆ ಶುರು ಮಾಡಿದ್ರು. ಮೊದಲೆರಡು ಪ್ರಯತ್ನದಲ್ಲಿ ವಿಫಲರಾಗಿ ನಂತರ ಮತ್ತೆ ಹಗಲು ರಾತ್ರಿ ಓದಿ 2018 ರಲ್ಲಿ 410ನೆ ರ್ಯಾಂಕ್ ಪಡೆದು ಪರೀಕ್ಷೆ ಪಾಸ್ ಮಾಡಿದರು. ನಂತರ ದೆಹಲಿಗೆ ಸಂದರ್ಶನಕ್ಕೆ ಹೋಗಬೇಕಾದಾಗ ಕೈಯ್ಯಲ್ಲಿ ದುಡ್ಡು ಇರದೆ ಸ್ನೇಹಿತರು, ಊರವರು ಸಹಾಯಕ್ಕೆ ಬಂದರು. ಎಲ್ಲರೂ ಸೇರಿ 40,000 ರೂಪಾಯಿ ಒಟ್ಟು ಮಾಡಿ ಕೊಟ್ಟ ಹಾಗೆ ದೆಹಲಿಯಲ್ಲಿ ಇಂಟರ್ವ್ಯೂ ನಲ್ಲೂ ಸೈ ಎನಿಸಿಕೊಂಡರು. ಸಧ್ಯ ಶ್ರೀಧನ್ಯ ಅದೇ ಕೋಯಿ ಕೊಡ್ ನಲ್ಲಿ ಕಲೆಕ್ಟರ್ ಆಗಿ ಅಧಿಕಾರ ವಹಿಸಿಕೊಳ್ಳುತ್ತಾ ಇದ್ದಾರೆ..