ias-and-ips-pass-vijayapura-sisters

ಛಲವೊಂದಿದ್ದರೆ ಏನೆಲ್ಲ ಸಾಧಿಸಬಹುದು ಅನ್ನೋದಕ್ಕೆ ಈ ಅಕ್ಕ ತಂಗಿಯೇ ಸಾಕ್ಷಿ, ಅಕ್ಕ ಐಪಿಎಸ್ ತಂಗಿ ಐಎಎಸ್

Today News / ಕನ್ನಡ ಸುದ್ದಿಗಳು

ಸಾಧಿಸುವವನಿಗೆ ಛಲ ಇದ್ರೆ ಖಂಡಿತ ಯಶಸ್ಸಿನ ದಾರಿ ಸಿಕ್ಕೇ ಸಿಗುತ್ತದೆ, ಛಲ ಒಂದಿದ್ದರೆ ಅಷ್ಟೇ ಅಲ್ಲ ಅದರೊಂದಿಗೆ ಸತತ ಪ್ರಯತ್ನ ಶ್ರಮ ಎಲ್ಲವು ಕೂಡ ಬೇಕಾಗುತ್ತದೆ. ಸಾಧನೆಯ ಹಾದಿ ಅಷ್ಟೊಂದು ಸುಲಭವಾಗಿ ಸಿಗೋದಿಲ್ಲ, ಹೆಚ್ಚಿನ ಶ್ರಮ ಪಟ್ಟರೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ಹೌದು ರೈತ ಕುಟುಂಬದಿಂದ ಬಂದ ತಂದೆ ವೃತ್ತಿಯಲ್ಲಿ BSNL ನೌಕರ ಆದ್ರೆ ತನ್ನ ಇಬ್ಬರು ಹೆಣ್ಣು ಮಕ್ಕಳು ಮಾಡಿರುವಂತ ಸಾದನೆ ಕಂಡು ನಿಜಕ್ಕೂ ಹೆಮ್ಮೆಪಡುತ್ತಿದ್ದಾರೆ, ಅಕ್ಕ ಐಪಿಎಸ್ ತಂಗಿ ಐಎಎಸ್ ಹೌದು ಈ ಸಾಧನೆ ಮಾಡಿರುವಂತ ಹೆಮ್ಮೆಯ ಕನ್ನಡತಿಯರ ಬಗ್ಗೆ ಈ ಮೂಲಕ ತಿಳಿಯೋಣ ಬನ್ನಿ.

UPSC Rank: ಎರಡನೇ ಬಾರಿಗೆ ಯುಪಿಎಸ್‍ಸಿ ಯಲ್ಲಿ ಉತ್ತಮ ರ್ಯಾಂಕ್ ಗಳಿಸಿದ ಬಸವ ನಾಡಿನ  ಸವಿತಾ ಗೋಟ್ಯಾಳ - Basavanadu

ಇವರು ಮೂಲತಃ ವಿಜಯಪುರದ ಇಂಡಿ ತಾಲ್ಲೂಕಿನ ಅಥರ್ಗಾದವರು ಸಿಪ್ಪದ್ದ ಗೋಟ್ಯಾಳ ಇವರ ಇಬ್ಬರು ಹೆಣ್ಣು ಮಕ್ಕಳು ಸಾಧನೆಯ ಹಾದಿಯನ್ನು ಮೆಟ್ಟಿದ್ದಾರೆ, ದೊಡ್ಡ ಮಗಳು ಅಶ್ವಿನಿ 2016ರಲ್ಲಿ ಐಪಿಎಸ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಸದ್ಯಕ್ಕೆ ಪಂಜಾಬ್‌ನ ಲುಧಿಯಾನಾದಲ್ಲಿ ಎಡಿಸಿಪಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಕ್ಕನ ಮಾರ್ಗ ದರ್ಶನ ಹಾಗೂ ಮನೆಯವರ ಸಹಾಯದೊಂದಿಗೆ ಸತತ ಮೂರನೇ ಪ್ರಯತ್ನದಲ್ಲಿ ಸವಿತಾ ಗೊಟ್ಯಾಳ ಯುಪಿಎಸ್‌ಸಿ ಪರೀಕ್ಷೆಯಲ್ಲಿ 626ನೇ ರಾಂಕ್ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

Savita Gotyal brings glory to Vijayapura, cracks UPSC

ಸವಿತಾ ಗೊಟ್ಯಾಳ ಅವರ ಸಾಧನೆಯ ಹಾದಿ ಹೇಗಿತ್ತು ಅನ್ನೋದನ್ನ ನೋಡುವುದಾದರೆ, ಇವರು ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಆದ್ರೆ ಮಾಡುತಿದ್ದ ಕೆಲಸ ಬಿಟ್ಟು ನಾಲ್ಕು ಜನಕ್ಕೆ ಉಪಯೋಗವಾಗುವಂಥ ಕೆಲಸ ಮಾಡಬೇಕು, ಐಎಎಸ್ ಅಧಿಕಾರಿಯಾಗಬೇಕೆಂಬ ಛಲ ಹೊಂದುತ್ತಾರೆ, ಇವರು ಪ್ರಾಥಮಿಕ ಶಿಕ್ಷಣವನ್ನ ಅಥರ್ಗಾದಲ್ಲಿ ಹಾಗೂ ಹೈಸ್ಕೂಲ್‌ ಶಿಕ್ಷಣ ವಿಜಯಪುರದ ಪಿಡಿಜೆ ಹೈಸ್ಕೂಲ್‌ನಲ್ಲಿ, ಪಿಯುಸಿ ಧಾರವಾಡದ ಜೆಎಸ್‌ಎಸ್‌ ಕಾಲೇಜಿನಲ್ಲಿ ಪೂರೈಸಿದ್ದಾರೆ.

ವಿಜಯಪುರ: UPSC ಪರೀಕ್ಷೆಯಲ್ಲಿ ಹೆಣ್ಮಕ್ಕಳ ಸಾಧನೆ, ಅಕ್ಕ ಐಪಿಎಸ್‌, ತಂಗಿ ಐಎಎಸ್‌  ಅಧಿಕಾರಿ..! | Savita Siddappa Gottyal Got 626 Rank in UPSC Exam

ಇಷ್ಟೇ ಅಲ್ಲದೆ ಬೆಂಗಳೂರಿನ ಪಿಇಎಸ್‌ಐಟಿ ಎಂಜಿನಿಯರಿಂಗ್‌ ಕಾಲೇಜ್‌ನಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಬಿಇ ಪದವಿ ಶಿಕ್ಷಣ ಪಡೆದ ಸವಿತಾ ಎರಡೂವರೆ ವರ್ಷ ಬೆಂಗಳೂರಿನ ಸೆರನರ್‌ ಹೆಲ್ತ್‌ ಕೇರ್ ನಲ್ಲಿ ಸೇವೆ ಸಲ್ಲಿಸಿ ನಂತರ ಕೆಲಸ ಬಿಟ್ಟು ಐಎಎಸ್ ಕಡೆ ಹೆಚ್ಚು ಗಮನ ಹರಿಸುತ್ತಾರೆ. ಇವರು ಮೂಲತಃ ಇಂಡಿ ತಾಲ್ಲೂಕಿನವರಾಗಿದ್ದು ವಿಜಯಪುರ ಜಿಲ್ಲೆಗೆ ಕೀರ್ತಿ ತರುವಂತ ಕೆಲಸ ಮಾಡಿದ್ದಾರೆ. ಅದೇನೇ ಇರಲಿ ಮಕ್ಕಳಲ್ಲಿ ಸಾಧಿಸುವ ಛಲ ಹಾಗೂ ಸತತ ಪ್ರಯತ್ನ ಹೆಚ್ಚಿನ ಶ್ರಮ ಇದ್ರೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಅನ್ನೋದಕ್ಕೆ ಈ ಇಬ್ಬರು ಹೆಣ್ಣುಮಕ್ಕಳೇ ಸಾಕ್ಷಿ ಹಾಗೂ ಯುವ ಪೀಳಿಗೆಗೆ ಉತ್ತಮ ಮಾದರಿಯಾಗಿದ್ದಾರೆ ಅನ್ನಬಹುದು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.