
ಇತ್ತೀಚಿನ ದಿನಗಳಲ್ಲಿ ಆಟೋಮೋಬೈಲ್ ಕ್ಷೇತ್ರದಲ್ಲಿ ಭಾರೀ ಅಪ್ಡೇಟ್ ಆಗಿರುವ ಟಾಟಾ ಮೋಟರ್ಸ್ ರವರ ಈ ಒಂದು ಗಟ್ಟಿಮುಟ್ಟಾದ ಹಾಗೂ ಅದ್ಭುತ SUV ಯನ್ನು ಜನರು ಕಣ್ಣು ಮುಚ್ಚಿ ಖರೀದಿ ಮಾಡುತ್ತಿದ್ದು, ಈ ಕಾರು ಮಹಿಂದ್ರಾ ಹಾಗೂ ಮಾರುತಿ ಸುಜುಕಿಯ SUV ಗಳಿಗೆ ಭಾರೀ ಠಕ್ಕರ್ ಕೊಡುತ್ತಿದೆ. ತಿಂಗಳಿಂದ ತಿಂಗಳಿಗೆ ಈ SUV ಯನ್ನು ಖರೀದಿ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಕಳೆದ ವರ್ಷದ ನವೆಂಬರ್ ತಿಂಗಳನ್ನೇ ತೆಗೆದುಕೊಂಡರೆ ಆ ತಿಂಗಳು, ಈ ಕಾರಿನ ಹದಿನೈದು ಸಾವಿರಕ್ಕೂ ಅಧಿಕ ಅಂದರೆ ಒಟ್ಟು 15,871 ಯೂನಿಟ್ಸ್ ಮಾರಾಟವಾಗಿದ್ದವು, ಈ ಕಾರು ದೇಶದಲ್ಲಿಯೇ ಎರಡನೇ ಅತೀ ಹೆಚ್ಚು ಮಾರಾಟವಾಗಿರುವ ಕಾರಾಗಿದೆ. ಅದುವೇ ಟಾಟಾ ಮೋಟರ್ಸ್ ನವರ ಅತ್ಯಂತ ಯಶಸ್ವಿ ಹಾಗೂ ಭಾರತದ ಅತ್ಯಂದ ಸುರಕ್ಷಿತ ಕಾರು ಟಾಟಾ ನೆಕ್ಸಾನ್!
ಮಾರಾಟದಲ್ಲಿ SUV ಸೆಗ್ಮೆಂಟ್ ಗಳಲ್ಲಿ ಮೊದಲ ಸ್ಥಾನದಲ್ಲಿ ಟಾಟಾ ನೆಕ್ಸಾನ್ ಇದ್ದರೆ, ಎರಡನೇ ಸ್ಥಾನದಲ್ಲಿ ಹ್ಯುಂಡೈ ಕ್ರೆಟಾ (Hyundai Creta) ಇದ್ದು, ಈ ಕಾರಿನ 13,321 ಯೂನಿಟ್ಸ್ ಅದೇ ನವೆಂಬರ್ ತಿಂಗಳಲ್ಲಿ ಮಾರಾಟವಾಗಿವೆ. ಇದರ ನಂತರ ಮೂರನೇ ಸ್ಥಾನದಲ್ಲಿ ಮತ್ತೊಮ್ಮೆ ಟಾಟಾ ಕಂಪನಿಯ ಮತ್ತೊಂದು SUV ಇದ್ದು, ನವೆಂಬರ್-2022 ರಲ್ಲಿ ಈ ಕಾರಿನ ಒಟ್ಟು 12,131 ಯೂನಿಟ್ಸ್ ಮಾರಾಟವಾಗಿವೆ.

ನಾಲ್ಕನೇ ಸ್ಥಾನದಲ್ಲಿ ಮಾರುತಿ ಸುಜುಕಿ ಕಂಪನಿಯ ಬ್ರಿಝಾ ಕಾರು ಇದ್ದು, ನವೆಂಬರ್ ತಿಂಗಳು ಆ ಕಾರಿನ 11,324 ಯೂನಿಟ್ಸ್ ಮಾರಾಟವಾಗಿದ್ದು, ನೆಕ್ಸಾನ್ ಬಂದ ಮೇಲೆ ಮಾರುತಿ ಸುಜುಕಿ ಬ್ರಿಝಾಗೆ ಕೊಂಚ ಬೇಡಿಕೆ ಕಡಿಮೆಯಾಗಿರುವುದು ಈ ಅಂಕಿ ಅಂಶಗಳಿಂದ ಕಂಡುಬರುತ್ತಿದೆ. ಇದರ ನಂತರ ಹ್ಯುಂಡೈ ಕ್ರೆಟಾ ಹ್ಯುಂಡೈ ಕಂಪನಿಯ ಮತ್ತೊಂದು ಕಾರು ಹ್ಯುಂಡೈ ವೇನ್ಯು (Hyundai Venue) ಇದ್ದು ಈ SUV ಯ 10,738 ಯೂನಿಟ್ಸ್ ನವೆಂಬರ್-2022 ರಲ್ಲಿ ಮಾರಾಟವಾಗಿವೆ.
ಟಾಟಾ ನೆಕ್ಸಾನ್ ಕಾರಿನ ಗಟ್ಟಿತನ ಹಾಗೂ ಅದ್ಭುತ ಫೀಚರ್ಸ್ ಜನರನ್ನು ತನ್ನತ್ತ ಸೆಳೆಯುತ್ತಿರುವುದು ಸುಳ್ಳಲ್ಲ, ಈ ಕಾರಿನ ಎಕ್ಸ್-ಶೋ ರೂಮ್ ಬೆಲೆ ಬೇಸಿಕ್ ಮಾಡೆಲ್ ಗೆ 7.60 ಲಕ್ಷ ರೂಪಾಯಿಗಳಿಂದ ಟಾಪ್ ಮಾಡೆಲ್ ಗೆ 13.95 ಲಕ್ಷ ರೂಪಾಯಿಗಳಾಗಿದೆ. ಈ ಕಾರನ್ನು ಪೆಟ್ರೋಲ್ ಹಾಗೂ ಡೀಸೆಲ್ ಎರಡು ಆಪ್ಷನ್ ಗಳಲ್ಲಿಯೂ ಸಹ ಮಾರುಕಟ್ಟೆಗೆ ತರಲಾಗಿದೆ.
ಅಂದಹಾಗೆ ಈ ಕಾರಿನಲ್ಲಿ 1.2 ಲೀಟರ್, 3 ಸಿಲಿಂಡರ್ ಟರ್ಬೋ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಪ್ಷನ್ ಇದ್ದು, ಆ ಎಂಜಿನ್ 110 ps ಪವರ್ ಹಾಗೂ 170 nm ಟಾರ್ಕ್ ಜೆನರೇಟ್ ಮಾಡುತ್ತದೆ. ಇದಲ್ಲದೇ ಈ ಕಾರಿನಲ್ಲಿ ಇನ್ನೊಂದು ಎಂಜಿನ್ ಆಪ್ಷನ್ ಇದ್ದು, ಅದು 1.5 ಲೀಟರ್ ನ 4 ಸಿಲಿಂಡರ್ ಟರ್ಬೋ ಚಾರ್ಜ್ಡ್ ಡೀಸೆಲ್ ಎಂಜಿನ್ ಆಗಿದ್ದು, ಅದು 110 ps ಪವರ್ ಹಾಗೂ 260 nm ಟಾರ್ಕ್ ಜೆನೆರೇಟ್ ಮಾಡುತ್ತದೆ.
ಈ ಮೇಲಿನ ಎರಡು ಎಂಜಿನ್ ಗಳಿಗೂ ಕಂಪನಿ 5 ಸ್ಪೀಡ್ ಮಾನ್ಯುಯಲ್ ಹಾಗೂ AMT ಗೇರ್ ಬಾಕ್ಸ್ ನ ಆಪ್ಷನ್ ನೀಡಿದೆ, ಟಾಟಾ ನೆಕ್ಸಾನ್ ಡೀಸೆಲ್ ನಲ್ಲಿ 21.5 ಕಿಲೋಮೀಟರ್ ಮತ್ತು ಪೆಟ್ರೋಲ್ ನಲ್ಲಿ 17.2 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಸುರಕ್ಷತೆಯ ದೃಷ್ಟಿಯಿಂದ ಈ ಕಾರು 5 ಸ್ಟಾರ್ ರೇಟಿಂಗ್ ಪಡೆದಿರುವುದು ಇದರ ಮಾರಾಟ ಹೆಚ್ಚಲು ಕಾರಣವಾಗಿದೆ.
ಈ ಬೆಲೆಗೆ ಇಷ್ಟು ಗಟ್ಟಿಮುಟ್ಟಾದ ಮತ್ತೊಂದು ಕಾರು ಭಾರತದಲ್ಲಿ ಇಲ್ಲವೆಂದೇ ಹೇಳಬಹುದು, ಟಾಟಾರವರ ಟಾಟಾ ಪಂಚ್ ಕೂಡ ಫೈವ್ ಸ್ಟಾರ್ ರೇಟಿಂಗ್ ಪಡೆದಿದೆಯಾದರೂ ಅದರ ಸೆಗ್ಮೆಂಟ್ ಬೇರೆ, ಅದೂ ಕೂಡ ಅದ್ಭುತವಾಗಿ ಮಾರಾಟವಾಗುತ್ತಿದೆ. ನೆಕ್ಸಾನ್ SUV ಮಾತ್ರ ಮಹೇಂದ್ರ – ಮಾರುತಿಯವರಿಗೆ ಬೆವರಿಳಿಸಿರುವುದು ಸುಳ್ಳಲ್ಲ.
Comments are closed.