News: ಈಗಿನ ಕಾಲದಲ್ಲಿ ಮಹಿಳೆಯರಿಗೆ ಸೇಫ್ಟಿ ಇಲ್ಲ. ಶಾಪಿಂಗ್ ಮಾಲ್ ಗಳ ಡ್ರೆಸ್ಸಿಂಗ್ ರೂಮ್ ಗಳಲ್ಲಿ ಕ್ಯಾಮೆರಾಗಳನ್ನು ಇಟ್ಟು, ಹೆಣ್ಣುಮಕ್ಕಳು ಬಟ್ಟೆ ಬದಲಾಯಿಸುವ ವಿಡಿಯೋಗಳನ್ನು ರೆಕಾರ್ಡ್ ಮಾಡಿ, ಅದನ್ನು ಆನ್ಲೈನ್ ವೆಬ್ಸೈಟ್ ಗಳಿಗೆ ಅಪ್ಲೋಡ್ ಮಾಡುವ ಘಟನೆಗಳು ನಡೆಯುವುದನ್ನು ನಾವು ಕೇಳಿರುತ್ತೇವೆ. ಇಂಥವರನ್ನು ಪೊಲೀಸರು ಬಂಧಿಸಿದ್ದಾರೆ (News). ಮಾಲ್ ಗಳಲ್ಲಿ ಮಾತ್ರವಲ್ಲ ಇಂಥ ಕೆಲಸಗಳು ಈಗ ಬಾಡಿಗೆಗೆ ಸಿಗುವ ಮನೆಗಳಲ್ಲಿ ರೂಮ್ ಗಳಲ್ಲಿ ನಡೆಯುತ್ತಿದೆ.

ಕೆಲವು ಮನೆಯ ಮಾಲೀಕರು ಹೆಣ್ಣುಮಕ್ಕಳಿಗೆ ಮನೆಯನ್ನು ಬಾಡಿಗೆಗೆ ಕೊಟ್ಟು, ರೂಮ್ ಗಳಲ್ಲಿ ಬಾತ್ ರೂಮ್ ಗಳಲ್ಲಿ ಕ್ಯಾಮೆರಾ ಅಳವಡಿಸುತ್ತಿದ್ದಾರೆ. ಇಂಥದ್ದೊಂದು ಘಟನೆ ಇತ್ತೀಚೆಗೆ ಹೈದರಾಬಾದ್ ನ ಯೂಸುಫ್ ಗುಡಾದ ವೆಂಕಟಗಿರಿ ಕಾಲೊನಿಯ ಮನೆಯೊಂದರಲ್ಲಿ ನಡೆದಿದ್ದು, ಸೈಯದ್ ಸಲೀಮ್ ಎನ್ನುವ ವ್ಯಕ್ತಿ ಇಂಥ ಕೆಲಸ ಮಾಡಿದ್ದಾನೆ (News). ಅಸ್ಸಾಂ ರಾಜ್ಯಕ್ಕೆ ಸೇರಿದ 20 ವರ್ಷದ ಹುಡುಗಿ ಒಬ್ಬಲ್ಜ್ ತಮ್ಮ ಸ್ನೇಹಿತರು ಜೊತೆಗೆ ಸಲೀಂ ಅವರ ಮನೆಯಲ್ಲಿ ವಾಸಿಸುತ್ತಿದ್ದರು, 2 ತಿಂಗಳ ಹಿಂದೆ ಮನೆಯನ್ನು ಬಾಡಿಗೆಗೆ ಪಡೆಯಲಾಗಿತ್ತು.
ಅವರಿಗೆ ಅನುಮಾನ ಬರದ ಹಾಗೆ ಸೀಕ್ರೆಟ್ ಕ್ಯಾಮೆರಾ ಕೂಡ ಇಟ್ಟಿದ್ದಾನೆ.. ಬಾಡಿಗೆ ಮನೆಗೆ ಸೆಪರೇಟ್ ಎಲೆಕ್ಟ್ರಿಸಿಟಿ ಮೀಟರ್ ಅಳವಡಿಸುವುದಾಗಿ ಹೇಳಿ ಒಂದು ಬಾಕ್ಸ್ ಅಳವಡಿಸಿದ್ದಾನೆ.. ಅದರಲ್ಲಿ ಸೀಕ್ರೆಟ್ ಕ್ಯಾಮೆರಾ, ಡಿಜಿಟಲ್ ವಿಡಿಯೋ ರೆಕಾರ್ಡರ್ ಇಟ್ಟು, ಅದರ ವೈರ್ ಗಳನ್ನು ತನ್ನ ಮನೆಯ ಕಂಪ್ಯೂಟರ್ ಮತ್ತು ಫೋನ್ ಗೆ ಕನೆಕ್ಟ್ ಮಾಡಿಕೊಂಡಿದ್ದಾನೆ (News). ಹುಡುಗಿಯರು ಮನೆಗೆ ಬಂದಾಗ ಹಿಡನ್ ಕ್ಯಾಮೆರಾ ಮೂಲಕ ಅವರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ನೋಡುತ್ತಿದ್ದ.
ಹುಡುಗಿಯರು ಬಟ್ಟೆ ಚೇಂಜ್ ಮಾಡುವುದನ್ನು ನೋಡಿ ಎಂಜಾಯ್ ಮಾಡಿದ್ದಾನೆ. ಒಂದು ದಿನ ಹುಡುಗಿಯರು ಸೈಯದ್ ಇಟ್ಟಿದ್ದ ಆ ಬಾಕ್ಸ್ ನಲ್ಲಿ ಕ್ಯಾಮೆರಾ ಇರುವುದನ್ನು ನೋಡಿ ಶಾಕ್ ಆಗಿದ್ದಾರೆ. ಅದಕ್ಕೆ ಕನೆಕ್ಟ್ ಆಗಿದ್ಫಾ ವೈರ್ ಸೈಯದ್ ಸಲೀಂ ರೂಮ್ ಗೆ ಹೋಗಿರುವುದನ್ನು ಹುಡುಗಿಗರು ಗಮನಿಸಿ ಪೊಲೀಸರ ಬಳಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಮನೆಗೆ ಬಂದು ಎಲ್ಲವನ್ನು ಚೆಕ್ ಮಾಡಿದ್ದಾರೆ
ನಂತರ ಆರೋಪಿ ಸಲೀಂ ನನ್ನು ಬಂಧಿಸಿದ್ದಾರೆ. ಅವನ ಮೊಬೈಲ್ ಫೋನ್, ಕಂಪ್ಯೂಟರ್, ಕ್ಯಾಮೆರಾ, ಡಿಜಿಟಲ್ ವಿಡಿಯೋ ರೆಕಾರ್ಡರ್, ಎಲ್ಲವನ್ನು ವಶಪಡಿಸಿಕೊಂಡಿದ್ದಾರೆ. ಇದೀಗ ಸೈಯದ್ ಅನ್ನು ಬಂಧಿಸಿ, ಕೇಸ್ ನಡೆಯುತ್ತಿದೆ. ಹಾಸ್ಟೆಲ್ ಮತ್ತು ಈ ರೀತಿ ರೂಮ್ ಗಳಲ್ಲಿ ವಾಸ ಮಾಡುವ ಹೆಣ್ಣುಮಕ್ಕಳು ಬಹಳ ಹುಷಾರಾಗಿ ಇರಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ