ಗಂಡ ಹೆಂಡತಿ ಅನ್ನೋದು ಪವಿತ್ರವಾದ ಬಾಂಧವ್ಯ.. ಪ್ರೀತಿಸಿ ಮದುವೆ ಆಗಿರಲಿ ಅಥವಾ ಮನೆಯವರೇ ನೋಡಿ ಮದುವೆ ಮಾಡಿರಲಿ ಒಮ್ಮೆ ಮದುವೆ ಅನ್ನೋದು ಆದರೆ ಗಂಡನಿಗೆ ಹೆಂಡತಿಯೇ ಸರ್ವಸ್ವವಾಗಿರಬೇಕು. ಹೆಂಡತಿಗೆ ಗಂಡನೇ ಸರ್ವಸ್ವವಾಗಿರಬೇಕು.. ಅದುವೇ ನಿಜವಾದ ಜೀವನ.. ಆದರೆ ಇಲ್ಲೊಬ್ಬ ಮಹಾತಾಯಿ ಪ್ರೀತಿಸಿ ಮದುವೆಯಾದ ಗಂಡನಿಗೆ ಎಂತಹ ಗತಿ ತಂದಿದ್ದಾಳೆ ಎಂಬುದನ್ನು ನೋಡಿದರೆ ನಿಜಕ್ಕೂ ಆಕೆಯ ಬಗ್ಗೆ ಅಸಹ್ಯವನ್ನುಂಟು ಮಾಡುತ್ತದೆ.. ಹೌದು ಈಕೆಯ ಹೆಸರು ರಂಜಿತಾ.. ಆತನ ಹೆಸರು ಕಾರ್ತಿಕ್ ಇಬ್ಬರೂ ಸಹ ಪರಸ್ಪರ ಪ್ರೀತಿಸಿ ಕಳೆದ ಐದು ವರ್ಷದ ಹಿಂದೆ ಮದುವೆಯಾಗಿದ್ದರು.. ಬೆಂಗಳೂರಿನ ಬಂಡಿ ಕಾಳಮ್ಮ ದೇವಸ್ಥಾನದ ಬಳಿ ಈ ಜೋಡಿ ವಾಸವಾಗಿತ್ತು.. ಸುಂದರ ಸಂಸಾರ ಅತಿಯಾಗಿ ಪ್ರೀತಿಸುವ ಗಂಡ.. ಜೀವನ ಸಾಗಿಸಲು ಒಂದೊಳ್ಳೆ ಕೆಲಸ ಹೀಗೆ ಅವರ ಸಂಸಾರ ಆನಂದ ಸಾಗರದಂತಿತ್ತು..

ಆದರೆ ಎಲ್ಲಾ ಸರಿ ಇದ್ದು ಮನೆಯ ಹೆಂಗಸು ಸರಿ ಇಲ್ಲವಾದರೆ ಆ ಸಂಸಾರ ಕೊನೆಗೆ ಸೂತ್ರವಿಲ್ಲದ ಗಾಳಿಪಟವಾಗಿ ಬಿಡುವುದು ಅಕ್ಷರಶಃ ಸತ್ಯ.. ಇಲ್ಲಿಯೂ ಸಹ ಅದೇ ರೀತಿಯಾಗಿದೆ.. ಒಳ್ಳೆ ಗಂಡ ಒಳ್ಳೆ ಜೀವನ ಆಕೆಗೆ ಇನ್ನೇನು ಬೇಕಿತ್ತು ನೆಮ್ಮದಿಯಾಗಿ ಜೀವನ ಸಾಗಿಸಿಕೊಂಡು ಹೋಗಬಹುದಿತ್ತು.. ಆದರೆ ಆಕೆ ಮಾಡಿದ್ದೇ ಬೇರೆ.. ಹೌದು ಕಾರ್ತಿಕ್ ಗೆ ಒಬ್ಬ ಸ್ನೇಹಿತನಿದ್ದ.. ಆತನ ಹೆಸರು ಸಂಜೀವ್ ಆತನಿಗೆ ಬೆಂಗಳೂರಿನಲ್ಲಿ ಉಳಿಯಲು ಜಾಗವಿಲ್ಲದ ಕಾರಣ ಆತನನ್ನು ಮನೆಗೆ ಕರೆದುಕೊಂಡು ಬಂದು ಆಶ್ರಯ ನೀಡಿದ್ದ.. ಆದರೆ ಅತ್ತ ಕಾರ್ತಿಕ್ ನ ಪತ್ನಿ ಗಂಡನ ಸ್ನೇಹಿತನನ್ನೇ ಆಸೆ ಪಟ್ಟಳು.. ಇತ್ತ ಸಂಜೀವ್ ತನಗೆ ಆಶ್ರಯ ಕೊಟ್ಟ ಕಾರ್ತಿಕ್ ನ ಸಂಸಾರವನ್ನೇ ಹಾಳು ಮಾಡಲು ಮುಂದಾದ.. ಕಾರ್ತಿಕ್ ನ ಪತ್ನಿಯನ್ನು ತನ್ನ ಮೋಹದಬಲೆಗೆ ಬೀಳಿಸಿಕೊಂಡ.. ಇಬ್ಬರ ಆಟ ಶುರುವಾಗಿತ್ತು..

ಆದರೆ ಹೆಂಡತಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಕಾರ್ತಿಕ್ ಹೆಂಡತಿಮೇಲಾಗಲಿ ಅಥವಾ ಅತಿಯಾಗಿ ನಂಬಿದ್ದ ಸ್ನೇಹಿತನನ್ನಾಗಲಿ ಎಂದೂ ಅನುಮಾನಪಟ್ಟು ನೋಡಲಿಲ್ಲ.. ಅಷ್ಟು ನಂಬಿಕೆ ಇಟ್ಟಿದ್ದ.. ಆದರೆ ಇವರಿಬ್ಬರೂ ಕಾರ್ತಿಕ್ ನ ಕಣ್ತಪ್ಪಿಸಿ ಮನೆಯಲ್ಲಿಯೇ ಮಾಡಬಾರದ ಕೆಲಸವನ್ನು ಮಾಡುತ್ತಿದ್ದರು. ಇದು ಹೀಗೆ ಮುಂದುವರೆದಿತ್ತು. ಆದರೆ ಕೊನೆಗೆ ರಂಜಿತಾ ಹಾಗೂ ಪ್ರಿಯಕರ ಸಂಜೀವ್ ಬೇರೆಯದ್ದೇ ನಿರ್ಧಾರ ಮಾಡಿಬಿಟ್ಟರು. ಹೌದು ಪ್ರೀತಿಸಿ ಮದುವೆಯಾಗಿ ತನ್ನನ್ನೇ ಜೀವ ಎನ್ನುತ್ತಿದ್ದ ಗಂಡನನ್ನೇ ಇನ್ನಿಲ್ಲವಾಗಿಸುವ ನಿರ್ಧಾರವನ್ನು ರಂಜಿತಾ ಹಾಗೂ ಸಂಜೀವ್ ಮಾಡಿಬಿಟ್ಟರು.. ಹೌದು ಕಾರ್ತಿಕ್ ಇಲ್ಲವಾದರೆ ನಮ್ಮ ದಾರಿ ಸುಗಮವೆಂದುಕೊಂಡು ಏನೂ ತಪ್ಪೇ ಮಾಡದ ಕಾರ್ತಿಕ್ ನನ್ನು ಇನ್ನಿಲ್ಲವಾಗಿಸಿ ಬಿಟ್ಟರು.. ಹೌದು ಒಂದು ದಿನ ಸಂಜೀವ್ ಆಶ್ರಯ ಕೊಟ್ಟಿದ್ದ ತನ್ನ ಸ್ನೇಹಿತ ಕಾರ್ತಿಕ್ ಗೆ ಗಂಟಲು ಪೂರ್ತಿ ಕುಡಿಸಿ ನಂತರ ಇನ್ನೊಬ್ಬ ಸ್ನೇಹಿತ ಸುಬ್ರಮಣಿ ಎಂಬುವವನ ಜೊತೆ ಸೇರಿಕೊಂಡು ಕಾರ್ತಿಕ್ ನನ್ನು ಪಾರ್ಟಿ ಇದೆ ಎಂದು ಹೇಳಿ ಚನ್ನಪಟ್ಟಣಕ್ಕೆ ಕರೆದುಕೊಂಡು ಹೋಗಿ ಅಲ್ಲಿಯೂ ಇನ್ನಷ್ಟು ಕುಡಿಸಿದ್ದಾರೆ..

ನಂತರ ಅಲ್ಲಿಯೇ ಕಾರ್ತಿಕ್ ನನ್ನು ಇಲ್ಲವಾಗಿಸಿ ತಂದು ಕುಂಬಳಗೋಡಿನ ಬಳಿ ವೃಷಭಾವತಿ ಮೋರಿಗೆ ಹಾಕಿ ಹೊರಟು ಹೋಗಿದ್ದಾರೆ.. ಅತ್ತ ಹೆಂಡತಿ ರಂಜಿತಾಳ ನಾಟಕ ಅದಾಗಲೇ ಶುರುವಾಗಿತ್ತು.. ಆಗಸ್ಟ್ ಒಂದರಂದೇ ಪೊಲೀಸ್ ಠಾಣೆಗೆ ಹೋಗಿ ಗಂಡ ಕಾಣುತ್ತಿಲ್ಲ ಎಂದು ದೂರು ನೀಡಿದ್ದಾಳೆ.. ಎಲ್ಲವೂ ತಾವು ಅಂದುಕೊಂಡಂತೆ ಆಗುತ್ತದೆ.. ಕೊನೆಗೆ ಗಂಡನ ಸ್ನೇಹಿತ ಸಂಜೀವನ ಜೊತೆ ತನ್ನ ಆಟ ಮುಂದುವರೆಸಬಹುದು ಎಂದುಕೊಂಡಿದ್ದ ರಂಜಿತಾಗೆ ಶಾಕ್ ಆಗಿದೆ.. ಹೌದು ದೂರು ದಾಖಲಿಸಿಕೊಂಡ ಪೊಲೀಸರಿಗೆ ರಂಜಿತಾ ಮೇಲೆಯೇ ಅನುಮಾನ ಮೂಡಿದ್ದು ಆಕೆಯನ್ನು ಸರಿಯಾಗಿ ವಿಚಾರಣೆ ನಡೆಸಿ ಸತ್ಯ ಬಾಯ್ಬಿಡಿಸಿದ್ದಾರೆ.. ಕೊನೆಗೆ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾಳೆ.. ಅತ್ತ ಸಂಜೀವನು ತಾನು ಮಾಡಿದ ತಪ್ಪು ಒಪ್ಪಿಕೊಂಡಿದ್ದು ಮೂವರೂ ಪೋಲೀಸರಿಗೆ ಅತಿಥಿಗಳಾಗಿದ್ದಾರೆ..

ಅತ್ತ ಸುಂದರವಾದ ಸಂಸಾರವನ್ನು ಹಾಳುಮಾಡಿಕೊಂಡು ರಂಜಿತಾ ಪೊಲೀಸರ ವಶದಲ್ಲಿದ್ದರೆ.. ಇತ್ತ ನಂಬಿ ಆಶ್ರಯ ಕೊಟ್ಟ ಸ್ನೇಹಿತನ ಜೀವನವನ್ನೇ ಸಂಜೀವ್ ಹಾಳುಮಾಡಿಬಿಟ್ಟ.. ಆದರೆ ಇದರಲ್ಲಿ ಬಲಿಯಾದದ್ದು ಮಾತ್ರ ಬಡಪಾಯಿ ಕಾರ್ತಿಕ್.. ಏನೂ ತಪ್ಪು ಮಾಡದ ಕಾರ್ತಿಕ್ ಅತ್ತ ಪ್ರೀತಿಸಿ ಮದುವೆಯಾದ ಹೆಂಡತಿಯ ಮತ್ತೊಬ್ಬ ಗಂಡಿನ ಆಸೆಗೆ ಬಲಿಯಾಗಿ ಹೋದ.. ಹೆಣ್ಣಾಗಲಿ ಗಂಡಾಗಲಿ ಒಮ್ಮೆ ಮದುವೆಯಾದ ಬಳಿಕ ಪರಸ್ಪರ ಒಬ್ಬರಿಗಾಗಿ ಒಬ್ಬರು ಬದುಕಿ. ಆಗಲೇ ಜೀವನಕ್ಕೆ ನಿಜವಾದ ಅರ್ಥ ಸಿಗುವುದು.. ಇಲ್ಲವಾದರೆ ಈ ರೀತಿ ಸೂತ್ರವಿಲ್ಲದ ಜೀವನವಾಗುತ್ತದೆ.. ರಂಜಿತಾ ಹಾಗೂ ಸಂಜೀವನ ಆಸೆಗೆ ಬಲಿಯಾದ ಕಾರ್ತಿಕ್ ಗೆ ಶಾಂತಿ ಸಿಗಲಿ.. ಇನ್ನಾದರೂ ಆ ರೀತಿ ಮನಸ್ಥಿತಿ ಉಳ್ಳವರು ಬದಲಾಗಲಿ..