
ಪತಿ ಪತ್ನಿಯ ಸಂಬಂಧ ಏಳೇಳು ಜನ್ಮದ ಬಂಧ ಎಂದು ಹೇಳಲಾಗುತ್ತದೆ, ಒಂದು ಬಾರಿ ಮನಸು ಕೊಟ್ಟು ವಿವಾಹವಾದ ಮೇಲೆ ಕಷ್ಟನೋ ಸುಖವೋ ಆತನೊಟ್ಟಿಗೆ ಬಾಳುವುದು ಭಾರತೀಯ ಸಂಸ್ಕೃತಿ. ಆದರೆ ಇತ್ತೀಚಿನ ದಿನಗಳಲ್ಲಿ ಕಾರಣಾಂತರಗಳಿಂದ ಡೈವೋರ್ಸ್ ಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು ಇದು ಸ್ವಸ್ಥ ಸಮಾಜಕ್ಕೆ ಮಾರಕ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ, ಆದರೂ ಸಹ ವಿಚ್ಛೇದನ ಪ್ರಕರಣಗಳು ಕೋರ್ಟ್ ನಲ್ಲಿ ದಿನದಿಂದ ದಿನಕ್ಕೆ ಏರುತ್ತಲೇ ಇವೆ.
ಇದುವರೆಗೂ ನೀವು ನೋಡಿದ್ದು ಪತಿ ಪತ್ನಿ ಕೇವಲ ಡೈವೋರ್ಸ್ ಮೂಲಕ ದೂರವಾದ ಕಥೆಗಳನ್ನು ಆದರೆ, ಇಲ್ಲೊಬ್ಬ ಮಹಾನ್ ತ್ಯಾಗಿ ಪತಿ ತಾನು ಬೇರೊಬ್ಬನನ್ನು ಪ್ರೀತಿಸುತ್ತಿದ್ದೇನೆ ಆತನೊಟ್ಟಿಗೆ ಬಾಳಲು ನನಗಿಷ್ಟ ಎಂದು ಹೇಳಿದ ತನ್ನ ಪತ್ನಿ ಅದರಲ್ಲಿಯೂ ತನ್ನೊಟ್ಟಿಗೆ ನಾಲ್ಕು ಮಕ್ಕಳನ್ನು ಹೆತ್ತವಳನ್ನು ಆಕೆ ಇಷ್ಟ ಪಟ್ಟವನ ಜೊತೆಗೆ ವಿವಾಹ ಮಾಡಿಸಿದ್ದಾನೆ! ಜೊತೆಗೆ ತನ್ನ ನಾಲ್ಕು ಮಕ್ಕಳ ಜವಾಬ್ದಾರಿಯನ್ನು ತಾನೇ ವಹಿಸಿಕೊಳ್ಳುವುದಾಗಿ ಘೋಷಣೆ ಮಾಡಿದ್ದಾನೆ!
ಹೌದು, ಮೊನ್ನೆಯಷ್ಟೇ ಪತಿ ಪತ್ನಿಯರ ಸಂಬಂಧವನ್ನು ಮತ್ತಷ್ಟು ಬೆಸೆಯುವ ಉತ್ತರ ಭಾರತದ ಪ್ರಸಿದ್ಧ ಹಬ್ಬ ಕರವಾ ಚೌತ್ ಹಬ್ಬ ಇತ್ತು, ಅಂದಿನ ದಿನವೇ ಪತಿ ತನ್ನ ಪತ್ನಿಯನ್ನು ಆಕೆಯ ಪ್ರಿಯತಮನ ಜೊತೆಗೆ ವಿವಾಹ ಮಾಡಿಸಿ ಕಳುಹಿಸಿದ ಘಟನೆ ಬಿಹಾರದ ಭಗಲಾಪುರ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಸ್ವತಃ ಪತ್ನಿ ‘ನಾನು ಓರ್ವ ಯುವಕನನ್ನು ಪ್ರೀತಿಸುತ್ತಿದ್ದೇನೆ ಆತನೊಂದಿಗೆ ನಾನು ಇನ್ನುಳಿದ ಜೀವನವನ್ನು ಜೀವಿಸಲು ಬಯಸುತ್ತೇನೆ ಎಂದು ಕೇಳಿಕೊಂಡಿದ್ದಾಳೆ.
ಪತ್ನಿಯ ಈ ಆಸೆಯ ಕಾರಣದಿಂದ ಪತಿ ಮಹಾಶಯ ತನ್ನ ಸಂಬಂಧಿಗಳು, ಊರಿನ ಪಂಚ ಕಮಿಟಿ ಹಾಗೂ ಮುಖ್ಯಸ್ಥರನ್ನು ಕರೆಸಿ ಅವರ ಸಮ್ಮುಖದಲ್ಲಿಯೇ ಆಕೆಯ ಪ್ರಿಯತಮನೊಂದಿಗೆ ಮದುವೆ ಮಾಡಿಸಿ ‘ನೀನಿನ್ನು ಹೋಗು ಸಂತೋಷವಾಗಿರು ಮಕ್ಕಳ ಪಾಲನೆ ಪೋಷಣೆಯನ್ನು ನಾನು ಮಾಡಿಕೊಳ್ಳುತ್ತೇನೆ’ ಎಂದಿದ್ದಾನೆ! ಆ ಮಕ್ಕಳ ವಯಸ್ಸು 2 ರಿಂದ 8 ವರ್ಷಗಳವರೆಗೆ ಇದ್ದು ಇಷ್ಟು ಪುಟ್ಟ ಮಕ್ಕಳನ್ನು ಬಿಟ್ಟು ಆ ಮಹಿಳೆ ಬೇರೊಬ್ಬನನ್ನು ಮದುವೆಯಾಗಿ ಹೋಗಿದ್ದಾಳೆ!
ಈ ಘಟನೆ ಬಿಹಾರದ ಭಗಲಾಪುರ ಜಿಲ್ಲೆಯ ಸುಲ್ತಾನ್ ಗಂಜ್ ತಾಲ್ಲೂಕಿನ ಗನಗನಿಯ ಎಂಬ ಗ್ರಾಮದಲ್ಲಿ ನಡೆದಿದ್ದು, 26 ವರ್ಷದ ಆ ಮಹಿಳೆ ಕರವಾ ಚೌತ್ ನ ಹಿಂದಿನ ದಿನವಷ್ಟೇ ತಾನು ಓರ್ವ ವ್ಯಕ್ತಿಯನ್ನು ಪ್ರೀತಿಸುತ್ತಿರುವುದಾಗಿ ಸ್ವತಃ ಪತಿಯ ಬಳಿ ಹೇಳಿಕೊಂಡಿದ್ದಾಳೆ, ಈ ವಿಷಯವನ್ನು ಆಕೆಯ ಪತಿ ಸೀರಿಯಸ್ ಆಗಿ ತೆಗೆದುಕೊಳ್ಳದೇ ಆಕೆಯ ಪ್ರಿಯತಮನನ್ನು ಕರೆಸಿ ವಿವಾಹ ಮಾಡಿಸಿದ್ದು ವಿಪರ್ಯಾಸವೇ ಸರಿ.
10 ವರ್ಷದ ಹಿಂದೆ ವಿವಾಹವಾಗಿತ್ತು! : ಬಿಹಾರದ ಬಾಂಕಾ ಜಿಲ್ಲೆಯ ನಿವಾಸಿಯಾಗಿರುವ ಪೂಜಾ ಎಂಬ ಯುವತಿಯ ವಿವಾಹ ಭಗಲಪುರ್ ಜಿಲ್ಲೆಯ ಗನಗನಿಯ ಗ್ರಾಮದ ಯುವಕನೊಂದಿಗೆ 10 ವರ್ಷದ ಕೆಳಗೆ ನಡೆದಿತ್ತು, ಆ ಸಮಯದಲ್ಲಿ 16 ವರ್ಷದವಳಾಗಿದ್ದ ಪೂಜಾ, ಆಗಾಗ ತವರಿಗೆ ಬಂದು ಹೋಗುತ್ತಿದ್ದಳು. ಆಗಲೇ ತನ್ನ ತಾಯಿ ಮನೆಯ ಪಕ್ಕದ ಮನೆಯ ಚೋಟು ಎಂಬ 26 ವರ್ಷದ ಯುವಕನೊಂದಿಗೆ ಪ್ರೇಮಾಂಕುರವಾಗಿತ್ತು.
ಈ ಸಂಬಂಧ ಕಳೆದ 5 ವರ್ಷಗಳಿಂದ ನಡೆಯುತ್ತಲೇ ಇತ್ತು, ಆದರೆ ಇದೀಗ ಅವರಿಬ್ಬರ ನಡುವಿನ ಪ್ರೀತಿಯೋ ಮೋಹವೋ ಅಥವಾ ಇನ್ನೇನೋ ತಿಳಿಯದು, ಆ ಮಹಿಳೆಗೆ ತನ್ನ ನಾಲ್ಕು ಪುಟ್ಟ ಮಕ್ಕಳು ಹಾಗೂ ಪತಿಯನ್ನೇ ಮರೆಸಿತ್ತು, ಹಾಗಾಗಿ ಅವಳು ಅವರೆಲ್ಲರನ್ನೂ ಬಿಟ್ಟು ತನ್ನ ಪ್ರಿಯತಮನನ್ನು ವಿವಾಹವಾಗಿ ಹೋಗಿದ್ದಾಳೆ. ಸಧ್ಯ ಈ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು ಈ ಘಟನೆಯ ನಾಯಕಿ ಪೂಜಾಳ ನಿರ್ಧಾರಕ್ಕೆ ಮಾನವೀಯತೆ ಇರುವ ಎಲ್ಲರೂ ಛೀಮಾರಿ ಹಾಕುತ್ತಿದ್ದಾರೆ.
ಹಾಗೇನೆ ನಾಲ್ಕು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತ ಪತಿಗೆ ಕೆಲವು ಜನರು ಭೇಷ್ ಎಂದರೆ ಇನ್ನು ಕೆಲವರು ಆತನ ನಿರ್ಧಾರವನ್ನು ಖಂಡಿಸುತ್ತಿದ್ದಾರೆ ಹಾಗೂ ಆತನ ಬಗ್ಗೆ ಕನಿಕರ ಭಾವ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಗಂಡ ಹೆಂಡತಿ ಹಾಗೂ ನಾಲ್ಕು ಮಕ್ಕಳಿರುವ ಆ ಸುಂದರ ಕುಟುಂಬದ ಸಂತೋಷಕ್ಕೆ ಕೊಳ್ಳಿ ಇಟ್ಟು ತಾಯಿ ಮಕ್ಕಳನ್ನು ದೂರ ಮಾಡಿದ ಆ ಕಿರಾತಕ ಚೋಟುವಿಗೆ ಎಲ್ಲರೂ ಕ್ಯಾಕರಿಸಿ ಉಗಿಯುತ್ತಿದ್ದಾರೆ, ಈ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಸೆಕ್ಷನ್ ನಲ್ಲಿ ತಿಳಿಸಿ.
Comments are closed.