ಕನ್ನಡದ‌ ಸ್ಟಾರ್ ನಟರ ಜೊತೆ‌ ಅಭಿನಯಿಸಿ ಏಡ್ಸ್ ರೋಗಕ್ಕೆ ತುತ್ತಾದ ನಟಿ, ಕಣ್ಣೀರಿಟ್ಟ ಅಭಿಮಾನಿಗಳು

ಸಿನಿಮಾ ಅನ್ನೋದು ಒಂದು ಮಾಯಾಲೋಕ. ಇಲ್ಲಿ ಸಾಕಷ್ಟು ಕಲಾವಿದರು ತಮ್ಮ ಜೀವನ ಕಟ್ಟಿಕೊಂಡಿದ್ದಾರೆ ಇನ್ನಷ್ಟು ಕಲಾವಿದರು ತಮ್ಮ ಜೀವನದ ಅಂತ್ಯ ಕಂಡುಕೊಂಡಿದ್ದಾರೆ ಹೌದು ಸಿನಿಮಾ ಅನ್ನೋದು ಎಲ್ಲರಿಗೂ ಒಲಿದು ಬರುವಂತದ್ದು ಅಲ್ಲ ಇದೊಂದು ಕಬ್ಬಿಣದ ಕಡಲೆ ಒಂದು ಕಾಲದಲ್ಲಿ ಟಾಪ್ ನಲ್ಲಿ ಇದ್ದು ಕೊನೆಗೆ ಹೇಳುವ ಹೆಸರಿಲ್ಲದಂತೆ ಮರೆಯಾಗಿದ್ದಾರೆ ಅದೆಷ್ಟೋ ಜನ ಒಂದು ರೂಪಾಯಿ ದುಡ್ಡಿಲ್ಲದೆ ಕಾಯಿಲೆಯಿಂದ ನರಳಿ ಸತ್ತಿದ್ದು ಇದೆ.

ಕೆಲವು ನಟಿಯರು ನಿಗೂಢವಾಗಿ ಸಾವನ್ನಪ್ಪಿದ್ದಾರೆ ಹೀಗೆ ಯಾರಿಗೂ ತಿಳಿಯದ ರೀತಿಯಲ್ಲಿ ಕಣ್ಣುಮುರೆಯಾದ ಈ ಒಬ್ಬ ನಟಿಯ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಅವರೇ ಸೌತ್ ನ ಫೇಮಸ್ ನಟಿಯಾಗಿದ್ದ ನಿಶಾ ನೂರ್. ತಮಿಳು ತೆಲುಗು ಮಲಯಾಳಂ ಮೊದಲದ ಸಿನಿಮಾಗಳಲ್ಲಿ ಎಂಬತ್ತರ ದಶಕದಲ್ಲಿ ಗುರುತಿಸಿಕೊಂಡ ನಟಿ ಇವರು ಆ ಸಮಯದಲ್ಲಿ ಸ್ಟಾರ್ ನಟರಾದ ತೆಲುಗು ಸೂಪರ್ ಸ್ಟಾರ್ ರಜನಿಕಾಂತ್ ಸ್ಟಾರ್ ನಟ ಕಮಲಹಾಸನ್ ಮೊದಲಾದವರ ಜೊತೆ ಅಭಿನಯಿಸಿಕೊಂಡ ನಟಿ ನಿಶಾ.

ಇವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ ಆದರೆ ಇವರು ಒಬ್ಬ ಅದ್ಭುತ ಅಭಿನೇತ್ರಿ ಎನ್ನುವುದು ಮಾತ್ರ ಸುಳ್ಳಲ್ಲ ಸೌತ್ ನಲ್ಲಿ ಇವರ ಬಗ್ಗೆ ಕೇಳಿದರೆ ಕೆಲವೊಂದಿಷ್ಟು ಜನ ಇವರ ಬಗ್ಗೆ ಉತ್ತಮ ಮಾತುಗಳನ್ನ ಆಡುತ್ತಾರೆ ಇನ್ನು ಕೆಲವರು ಅವರ ಜೀವನದ ಬಗ್ಗೆ ಕಟ್ಟು ಕಥೆಗಳನ್ನು ಕೂಡ ಹೇಳುತ್ತಾರೆ ಸರಿಯಾದ ಮಾಹಿತಿ ಇಲ್ಲದೆ ಇದ್ದರೂ ಕೂಡ.
ಇವರು ಕೊನೆಯ ದಿನಗಳನ್ನು ಅದೆಷ್ಟು ಕಷ್ಟಗಳಲ್ಲಿ ಕಳೆದು ಕೊನೆಗೆ ತಮ್ಮ ಜೀವನ ಅಂತ್ಯವಾಗಿಸಿಕೊಂಡರು ಎಂಬುದರ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸುತ್ತೇವೆ. ನಿಶಾ ನೂರ್ ತಮಿಳು ತೆಲುಗು ಮಲಯಾಳಂ ಸಿನಿಮಾಗಳನ್ನು ಮಾತ್ರವಲ್ಲದೆ ಕನ್ನಡದಲ್ಲಿ ಕೂಡ ಅಭಿನಯಿಸಿದ್ದಾರೆ ಎಂದು ಹೇಳಲಾಗುತ್ತೆ ಆದರೆ ಅವರು ಕನ್ನಡದಲ್ಲಿ ಯಾವ ಸಿನಿಮಾದಲ್ಲಿ ಬಣ್ಣ ಹಚ್ಚಿದರು ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ.

ನಿಶಾ ನೂರು ಜನಿಸಿದ್ದು 1962 ರಲ್ಲಿ ತಮಿಳುನಾಡಿನಲ್ಲಿ. ಇವರು 1982 ರಲ್ಲಿ ತಮ್ಮ ಕರಿಯರ್ ಆರಂಭಿಸುತ್ತಾರೆ ಅವರ ಮೊದಲ ತಮಿಳು ಸಿನಿಮಾ ಮಂಗಳನಾಯಕಿ. ಇದಾದ ಬಳಿಕ ಇನ್ನಷ್ಟು ತಮಿಳು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ ನಿಶಾ. ಏನಗಾಗಿ ಕಾತಿರು, ಕಮಲ್ ಹಾಸನ್ ಅಭಿನಯದ ಟಿಕ್ ಟಿಕ್ ಟಿಕ್ ಸಿನಿಮಾಗಳು ನಿಶಾ ಅಭಿನಯದ ಹಿಟ್ ಸಿನಿಮಾಗಳು.
ಸಿನಿಮಾ ರಂಗದಲ್ಲಿ ಟಾಪ್ ನಟಿ ಎನಿಸಿಕೊಂಡಿರುವಾಗಲೇ ನಿಶಾ ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗುತ್ತಾರೆ ನಂತರ ಕೆಲವು ದಿನಗಳ ಬಳಿಕ ತಮಿಳುನಾಡಿನ ದೇವಸ್ಥಾನ ಮುಂದೆ ಬೀದಿಯಲ್ಲಿ ಕುಳಿತಿರುತ್ತಾರೆ. ಅವರನ್ನು ನೋಡಿ ಕೆಲವರು ನಿಶಾ ಎಂಬುದಾಗಿ ಗುರುತಿಸುತ್ತಾರೆ. ಬಟ್ಟೆಯಲ್ಲ ಕೊಳೆಯಾಗಿ ಮೈಕೈಯಲ್ಲಿ ಗಾಯಗಳಾದ ಸ್ಥಿತಿಯಲ್ಲಿ ನೀಶಾ ಇದ್ರು. ಸುಮಾರು 206-07ರಲ್ಲಿ ನಡೆದ ಘಟನೆ ಇದು. ಅಲ್ಲಿವರೆಗೆ ಕಣ್ಮರೆಯಾಗಿದ್ದ ನಿಶಾ ಒಮೇಲೆ ಸುದ್ದಿಗೆ ಬರುತ್ತಾರೆ. ಆಗ ನಿಶಾರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತೆ.

ಆಗಲೇ ಶಾಕಿಂಗ್ ನ್ಯೂಸ್ ಒಂದು ಹೊರಬೀಳುತ್ತೆ. ಹೌದು, ನಿಶಾ ಅಂತಿಂಥ ಖಾಯಿಲೆಯಲ್ಲ, ಏಡ್ಸ್ ನಿಂದ ಬಳಲುತ್ತಿದ್ದರು. ಇವರಿಗೆ ಈ ಖಾಯಿಲೆ ಹೇಗೆ ಬಂತೋ ಗೊತ್ತಿಲ್ಲ, ಅದರಿಂದಲೇ ಕೊನೆಉಸಿರೆಳೆಯುತ್ತಾರೆ. ಚಿತ್ರರಂಗದಲ್ಲಿ ನಿರ್ಮಾಪಕರಿಂದ ದೈಹಿಕ ಮಾನಸಿಕ ಹಿಂಸೆವ್ ಅನುಭವಿಸಿ ಖಿನ್ನತೆಗೆ ಒಳಗಾಗಿದ್ದರು, ದುಡ್ದನ್ನೂ ಕಳೆದುಕೊಂಡಿದ್ದರು. ಕೊನೆಗೆ ಅವರಿವರ ಮಾತು ಕೇಳಿ ವೈಶಾವಾಟಿಕೆಯನ್ನೂ ಕೂಡ ಆರಂಭಿಸಿದರು ಎಂದು ಹೇಳುತ್ತಾರೆ. ಆದರೆ ನಿಶಾ ಬಗ್ಗೆ ಹೆಚ್ಚಿನ ಸತ್ಯಾ ಸತ್ಯತೆಗಳು ಯಾರಿಗೂ ಗೊತ್ತಿಲ್ಲ. ಆದರೆ ಒಂದು ಕಾಲದ ಪೀಕ್ ನಲ್ಲಿದ್ದ ನಟಿ ಇಷ್ಟು ಹೀನಾಯವಾಗಿ ಅಂತ್ಯ ಕಂಡಿದ್ದು ಮಾತ್ರ ದುಃಖದ ಸಂಗತಿಯಾಗಿದೆ.

You might also like

Comments are closed.