ಹಿಟ್ಲರ್ ಕಲ್ಯಾಣ ಧಾರಾವಾಹಿಯ AJ ತಮ್ಮ ಮಗಳ ಜೊತೆ ಮಾಡಿದ ಯಂಗ್ ಅಂಡ್ ಎನರ್ಜಿಟಿಕ್ ಡ್ಯಾನ್ಸ್ ನೋಡಿ ಶಾಕ್ ಆಗ್ತೀರಾ!

CINEMA/ಸಿನಿಮಾ

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಹಿಟ್ಲರ್ ಕಲ್ಯಾಣ ಧಾರವಾಹಿ ತುಂಬಾನೇ ಪ್ರಸಿದ್ಧಿ ಪಡೆದಂತಹ ಧಾರಾವಾಹಿ ಈ ಧಾರಾವಾಹಿ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ಉತ್ತಮವಾದ ಪ್ರದರ್ಶನವನ್ನು ನೀಡಿದೆ. ಅಷ್ಟೇ ಅಲ್ಲದೆ ಪ್ರತಿನಿತ್ಯವೂ ಕೂಡ ಹೊಸದೊಂದು ಕಥೆಯನ್ನು ಇಟ್ಟುಕೊಂಡು ನೋಡುಗರ ಗಮನವನ್ನು ಸೆಳೆಯುತ್ತಿದೆ. ಇನ್ನು ಈ ಧಾರಾವಾಹಿಯ ನಾಯಕನಟರಾದಂತಹ ದಿಲೀಪ್ ರಾಜ್ ಧಾರಾವಾಹಿಯ ನಿರ್ಮಾಪಕರು ಹಾಗೂ ನಟ ಎರಡೂ ಕೂಡ ಆಗಿದ್ದಾರೆ‌.

ದಿಲೀಪ್ ರಾಜ್ ಶ್ರೀಮತಿ ಆದಂತಹ ವಿದ್ಯಾಶ್ರೀ ಅವರು ನಿರ್ಮಾಣದ ಕೆಲಸವನ್ನು ನೋಡಿಕೊಂಡರೆ ದಿಲೀಪ್ ರಾಜ್ ಅವರು ನಾಯಕನಟರಾಗಿ ಏನೆಲ್ಲ ಜವಾಬ್ದಾರಿಗಳನ್ನು ಮುಂದುವರಿಸಿಕೊಂಡು ಹೋಗಬೇಕು ಆ ಕಾರ್ಯ ಪ್ರವೃತ್ತಿಯಲ್ಲಿ ನಿರತರಾಗಿದ್ದಾರೆ. ದಿಲೀಪ್ ರಾಜ್ ಅವರು ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿರುವುನ್ನು ಕೂಡ ನೀವು ನೋಡಿರಬಹುದು, ಪುನೀತ್ ರಾಜಕುಮಾರ್ ಹಾಗೂ ಪಾರ್ವತಿ ಮೆನನ್ ಅವರ ಅಭಿನಯದ ಮಿಲನ ಸಿನಿಮಾಗಳಲ್ಲಿ ಕೂಡ ಸೈಡ್ ಆಕ್ಟರ್ ಆಗಿ ಕಾಣಿಸಿಕೊಂಡಿದ್ದರು.

hitler kalyana malika: 'ಸಿನಿಮಾ & ಪರಭಾಷಾ ಧಾರಾವಾಹಿಗಳಿಂದ ಅವಕಾಶಗಳು ಬರುತ್ತಿವೆ'- 'ಹಿಟ್ಲರ್‌ ಕಲ್ಯಾಣ' ನಟಿ ಮಲೈಕಾ - actress malaika vasupal speaks about dileep raj starrer hitler kalyana kannada ...

ಇದೇ ರೀತಿ ಕನ್ನಡದ ಬಹುತೇಕ ಸಿನಿಮಾಗಳಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಹಲವಾರು ಧಾರಾವಾಹಿಗಳಲ್ಲಿ ಕೂಡ ಕೆಲಸ ಮಾಡಿದ್ದಾರೆ. ಧಾರಾವಾಹಿ ಆಗಿರಬಹುದು ಅಥವಾ ಸಿನಿಮಾ ಕ್ಷೇತ್ರ ಆಗಿರಬಹುದು ಎರಡೂ ಕೂಡ ಇವರಿಗೆ ಹೊಸದೇನಲ್ಲ, ಎರಡರಲ್ಲು ಕೂಡ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇನ್ನು ವಿಚಾರಕ್ಕೆ ಬರುವುದಾದರೆ ದಿಲೀಪ್ ರಾಜ್ ಅವರು ವಿದ್ಯಾಶ್ರೀ ಅವರನ್ನು ಪ್ರೀತಿಸಿ ಮದುವೆಯಾದ ಈ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.

ಸಧ್ಯಕ್ಕೆ ದಿಲೀಪ್ ರಾಜ್ ಅವರು ಚಿತ್ರೀಕರಣದಲ್ಲಿ ತುಂಬಾನೇ ಬಿಜಿಯಾಗಿದ್ದಾರೆ, ಆದರೂ ಕೂಡ ತಮ್ಮ ಮಕ್ಕಳಿಗೆ ನೀಡುವಂತಹ ಸಮಯದಲ್ಲಿ ಕಿಂಚಿತ್ತು ಕೂಡ ಕಡಿಮೆ ಮಾಡಿಲ್ಲ. ಹೌದು ಎಜೆ ಅವರು ತಮ್ಮ ಮನೆಯಲ್ಲಿ ತಮ್ಮ ಮುದ್ದಾದ ಮಗಳ ಜೊತೆ ಹೆಜ್ಜೆ ಹಾಕುತ್ತಿರುವುದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನು ನೋಡುತ್ತಿದ್ದರೆ ದಿಲೀಪ್ ಅವರು ಯಾವ ಯಂಗ್ ಸ್ಟಾರ್ ಗಿಂತಲೂ ಕೂಡ ಕಡಿಮೆ ಇಲ್ಲ ಅಂತಾನೆ ಹೇಳಬಹುದು.

ಸದ್ಯಕ್ಕೆ ಎ.ಜೆ ಡಾನ್ಸ್ ಮಾಡುತ್ತಿರುವಂತಹ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ನೋಡಿದಂತಹ ನೆಟ್ಟಿಗರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಕೆಲವು ನೆಟ್ಟಿಗರು ಯಂಗ್ ಸ್ಟಾರ್ ಗಿಂತ ನೀವು ತುಂಬಾ ಚೆನ್ನಾಗಿ ಡಾನ್ಸ್ ಮಾಡುತ್ತೀರಾ ಪ್ರೊಫೆಶ್ನಲ್ ಡ್ಯಾನ್ಸರ್ ತರ ಮಾಡುತ್ತಿದ್ದೀರಾ ಅಂತ ಕಾಮೆಂಟ್ ಹಾಕುತ್ತಿದ್ದಾರೆ.

Kannada TV serial Hitler Kalyana to take off soon - Times of India

ದಿಲೀಪ್ ಮತ್ತು ವಿದ್ಯಾಶ್ರೀ ಅವರು ಕಳೆದ ವಾರವಷ್ಟೇ ನೂತನ ಮನೆಯ ಗೃಹ ಪ್ರವೇಶವನ್ನು ಮಾಡಿದ್ದರು. ಈ ಗೃಹಪ್ರವೇಶಕ್ಕೆ ಹಲವಾರು ಹಿರಿತೆರೆ ಮತ್ತು ಕಿರುತೆರೆ ನಟಿಯರು ಬಂದು ಅವರಿಗೆ ಶುಭಾಶಯವನ್ನು ಕೋರಿದರು. ಇದೀಗ ಅದೇ ಮನೆಯಲ್ಲಿ ತಮ್ಮ ಮಗಳ ಜೊತೆ ಡಾನ್ಸ್ ಮಾಡುತ್ತಿರುವಂತಹ ವಿಡಿಯೋ ವೈರಲ್ ಆಗುತ್ತಿದೆ. ಇನ್ನು ದಿಲೀಪ್ ರಾಜ್ ಅವರು ನಟನೆ ಮಾಡುತ್ತಿರುವಂತಹ ಹಿಟ್ಲರ್ ಕಲ್ಯಾಣ ಧಾರಾವಾಹಿ ಕೂಡ ಬಹಳಷ್ಟು ಚೆನ್ನಾಗಿ ಮೂಡಿ ಬರುತ್ತಿದ್ದು ಟಿ.ಆರ್.ಪಿ ನಲ್ಲಿ ಸತತವಾಗಿ ಮೂರನೇ ಸ್ಥಾನವನ್ನು ಗಳಿಸಿಕೊಂಡಿದೆ.

ಇದನ್ನೂ ಓದಿ >>>  ಇದೇ ದಿನ ನಾನು ‘ಆರಾಮಾಗಿದ್ದೀನಿ ಯಾರು ಚಿಂತಿಸಬೇಡಿ’ ನಿಮ್ಮ ಕಾಳಜಿಗೆ ಧನ್ಯವಾದಗಳು! ವೈರಲ್ ಆಯಿತು ಪುನೀತ್ ರಾಜ್ ಕುಮಾರ್ ಟ್ವಿಟ್

ಅಪ್ಪ ಮಗಳ ಡ್ಯಾನ್ಸ್ ವಿಡಿಯೊ ಕೆಳಗಿದೆ ನೋಡಿ…




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...