ಉರಿಮೂತ್ರ

ಶರೀರದ ಉಷ್ಣತೆ ಹಾಗೂ ಉರಿಮೂತ್ರ ಕಡಿಮೆ ಮಾಡಿಕೊಳ್ಳಲು ಮನೆಮದ್ದು…

Today News / ಕನ್ನಡ ಸುದ್ದಿಗಳು

ಅನಿರೀಕ್ಷಿತವಾಗಿ ಉಂಟಾಗುವ ದೇಹದ ಉಷ್ಣತೆಯನ್ನು ಕೆಲವು ನೈಸರ್ಗಿಕ ಉತ್ಪನ್ನಗಳಿಂದ ನಿವಾರಿಸಬಹುದು. ಈ ಬೇಸಿಗೆಯಲ್ಲಿ ಉಂಟಾಗುವ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಈ ರೀತಿಯ ಪರಿಹಾರ ಕ್ರಮಗಳನ್ನು ಅನುಸರಿಸಿ.

ಪರಿಸರದ ಉಷ್ಣತೆ ಮತ್ತು ಅನುಚಿತ ಆಹಾರ ಪದ್ಧತಿ ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತವೆ. ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತಿದ್ದಂತೆ ಮಿದುಳು, ಹೃದಯ, ಚಯಾಪಚಯ ಕ್ರಿಯೆ ಹೀಗೆ ವಿವಿಧ ಅಂಗಾಂಗಗಳಲ್ಲಿ ತೊಂದರೆ ಉಂಟಾಗುವುದು. ಅಂತಹ ಸಮಯದಲ್ಲಿ ಆರೋಗ್ಯ ಸಮಸ್ಯೆಗಳೊಂದಿಗೆ ಎಂತಹ ಆಹಾರವನ್ನು ಸೇವಿಸಬೇಕು ಎನ್ನುವ ಗೊಂದಲವೂ ಮಾನಸಿಕ ಒತ್ತಡವನ್ನು ಉಂಟಾಗುವುದು. ಅನಿರೀಕ್ಷಿತವಾಗಿ ಉಂಟಾಗುವ ದೇಹದ ಉಷ್ಣತೆಯನ್ನು ಕೆಲವು ನೈಸರ್ಗಿಕ ಉತ್ಪನ್ನಗಳಿಂದ ನಿವಾರಿಸಬಹುದು.

ಬೇಸಿಗೆಯಲ್ಲಿ ಪ್ರತಿ ದಿನ ಒಂದು ಲೋಟ ಎಳನೀರನ್ನು ಕುಡಿಯುವುದು ಉತ್ತಮ. ಇದರಲ್ಲಿ ಆರೋಗ್ಯಕರ ಜೀವಸತ್ವ, ಖನಿಗಳು ಮತ್ತು ವಿದ್ಯುತ್‍ಚ್ಛೇದನ ಶಕ್ತಿ ಇರುತ್ತದೆ. ಇದು ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇರುವಂತೆ ಮಾಡುವುದು. ಜೊತೆಗೆ ಪುನರ್‍ಚೇತನ ನೀಡುವುದರ ಮೂಲಕ ಚೈತನ್ಯ ಶೀಲರನ್ನಾಗಿ ಮಾಡುವುದು. ಅನಗತ್ಯವಾದ ಆಯಾಸ ಹಾಗೂ ಮಂಕುತನ ಕಾಡದು. ದೇಹದ ಅಂಗಾಂಗಗಳು ಉತ್ತಮ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತವೆ. ಜೊತೆಗೆ ಚರ್ಮ ಹಾಗೂ ಕೇಶರಾಶಿಗಳು ಉತ್ತಮ ಆಕರ್ಷಣೆಯನ್ನು ಪಡೆದುಕೊಳ್ಳುತ್ತವೆ.

ಜೀವಹಿಂಡುವ ಉರಿಮೂತ್ರದ ಸಮಸ್ಯೆಗೆ ಅಂತ್ಯಹಾಡುವ ಮನೆ ಮದ್ದುಗಳು

ಬೇಸಿಗೆಯ ಸಮಯದಲ್ಲಿ ಮತ್ತು ವಾತಾವರಣದಲ್ಲಿ ಹೆಚ್ಚು ಉಷ್ಣತೆ ಇರುವಾಗ ನಾವು ಸೇವಿಸುವ ಆಹರದಲ್ಲಿಯೂ ಬದಲಾವಣೆಯನ್ನು ತಂದುಕೊಳ್ಳಬೇಕು. ವಾತಾವರಣದ ಬಿಸಿ ಹೆಚ್ಚಾಗಿ ಇರುವಾಗ ದೇಹದಲ್ಲಿ ನೀರಿನಂಶದ ಕೊರತೆ ಉಂಟಾಗುವುದು. ಜೊತೆಗೆ ಅತಿಯಾದ ಬೆವರು ಕಾಣಿಸಿಕೊಳ್ಳುವುದು. ಹಾಗಾಗಿ ಆದಷ್ಟು ನೀರಿನಂಶ ಹೆಚ್ಚಾಗಿರುವ ಕಲ್ಲಂಗಡಿ ಹಣ್ಣು,

ಕಿತ್ತಳೆ ಹಣ್ಣು, ಮೂಸಂಬಿ, ಮಾವಿನ ಹಣ್ಣುಗಳನ್ನು ಸೇವಿಸಿ. ನೀವು ತಯಾರಿಸುವ ಆಹಾರ ಪದಾರ್ಥಗಳಲ್ಲಿ ಸೌತೆಕಾಯಿ, ಸೆಲರಿ, ಮಂಗಳೂರು ಸೌತೆ, ಎಲೆಕೋಸು, ಸೋರೆಕಾಯಿ, ಹಸಿ ಸೊಪ್ಪುಗಳನ್ನು ಹೆಚ್ಚಾಗಿ ಬಳಸಿ. ಗ್ಯಾಸ್ಟಿಕ್ ನಿವಾರಣೆಗೆ ಸ್ವಲ್ಪ ಕೊತ್ತಂಬರಿ ಬೀಜ ತೆಗೆದುಕೊಂಡು ಸ್ವಲ್ಪ ಬಿಸಿಮಾಡಿ ಚೆನ್ನಾಗಿ ಕುಟ್ಟಿ 1 ಲೀಟರ್ ನೀರಿಗೆ ಆ ಪುಡಿಯನ್ನು ಹಾಕಿ ಚೆನ್ನಾಗಿ ಬೇಯಿಸಬೇಕು ಆ ನೀರು ಕೊತ್ತಂಬರಿ ಬೀಜ ದೊಂದಿಗೆ ಬೆಂದನಂತರ ಅದನ್ನು ಸೋಸಿ ಆ ನೀರನ್ನು ಸೇವಿಸಿದರೆ ಗ್ಯಾಸ್ಟ್ರಿಕ್ ಹಾಗೂ ದೇಹದ ಉಷ್ಣತೆ ನಿಯಂತ್ರಣಕ್ಕೆ ಬರುತ್ತದೆ

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.