ನಾವು ತಿಂದಂತಹ ಆಹಾರ ನಮ್ಮ ಉದರದಲ್ಲಿ ಜೀರ್ಣವಾಗುತ್ತದೆ ಈ ಜೀರ್ಣವಾದ ನಂತರ ನಾವು ತಿಂದ ಆಹಾರದಲ್ಲಿರುವಂತಹ ಪೋಷಕಾಂಶ ನಮ್ಮ ರಕ್ತಕ್ಕೆ ಸೇರುತ್ತದೆ. ಈ ರಕ್ತ ಆ ಒಂದು ಶಕ್ತಿಯನ್ನು ಆ ಎಲ್ಲಾ ಪೋಷಕಾಂಶಗಳನ್ನು ನಮ್ಮ ದೇಹದ ವಿವಿಧ ಅಂಗಾಂಗಗಳಿಗೆ ನೀಡುತ್ತಿದೆ. ಇದರಿಂದಾಗಿ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಅಲ್ಲಿಗೆ ಈ ರಕ್ತದ ಕೆಲಸ ಏನಾಯಿತು, ನಾವು ತಿಂದ ಆಹಾರ ಜೀರ್ಣವಾದ ನಂತರ ಅದರಲ್ಲಿರುವಂತಹ ಪೋಷಕಾಂಶವನ್ನು ತನ್ನೊಳಗೆ ಸೇರಿಸಿಕೊಳ್ಳುತ್ತದೆ. ಈ ಪೋಷಕಾಂಶ ರಕ್ತಕ್ಕೆ ಸೇರಿಕೊಂಡರೆ ಒಳ್ಳೆಯದು ಅದೇ ಕೆಟ್ಟ ಕೊಬ್ಬಿನಾಂಶ ಅಥವಾ ಸಕ್ಕರೆ ಅಂಶ ರಕ್ತಕ್ಕೆ ಸೇರಿಕೊಂಡರೆ, ಇದು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಅಷ್ಟೇ ಅಲ್ಲದೆ ನಮ್ಮ ಆರೋಗ್ಯವನ್ನು ಕೆಡಿಸುತ್ತದೆ ರಕ್ತದಲ್ಲಿ ಕೊಬ್ಬಿನ ಅಂಶ ಹೆಚ್ಚಾದರೆ ಇದು ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಉಂಟು ಮಾಡುತ್ತದೆ.
ಹಾಗಾದರೆ ರಕ್ತದಲ್ಲಿ ಇರುವಂತಹ ಕೊಬ್ಬು ಕರಗಬೇಕೆಂದರೆ ಅಥವಾ ರಕ್ತಕ್ಕೆ ಕೊಬ್ಬು ಸೇರಬಾರದು ಎಂದರೆ ಹೃದಯಕೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗಬಾರದು ಅಂದರೆ, ನಾವು ಏನನ್ನು ಮಾಡಬೇಕು ಇದಕ್ಕಾಗಿ ಚಿಕಿತ್ಸೆ ಇದೆಯಾ ಅಥವಾ ಯಾವುದಾದರೂ ಮನೆ ಮದ್ದುಗಳು ಇದೆಯಾ ಅನ್ನೊ ಒಂದು ಮಾಹಿತಿಯನ್ನು ನಿಮಗೆ ಈ ದಿನದ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ
ರಕ್ತಕ್ಕೆ ಕೊಬ್ಬು ಸೇರಿಕೊಳ್ಳಬಾರದು ಅಂದರೆ ಈ ಒಂದು ಡ್ರಿಂಕ್ ಅನ್ನು ನೀವು ಮೂರು ವಾರಗಳವರೆಗೂ ದಿನಬಿಟ್ಟು ದಿನ ಸೇವಿಸುತ್ತಾ ಬನ್ನಿ. ಇದರಿಂದ ನಿಮ್ಮ ರಕ್ತಕ್ಕೆ ಕೊಬ್ಬು ಸೇರುವುದಿಲ್ಲ ಅಷ್ಟೇ ಅಲ್ಲ ರಕ್ತದಲ್ಲಿ ಕೊಬ್ಬಿನ ಅಂಶ ಇದ್ದರೆ. ಅದನ್ನು ಕೂಡ ಕರಗಿಸುವ ಒಂದು ಶಕ್ತಿ ಈ ಡ್ರಿಂಕ್ ನಲ್ಲಿ ಇರುತ್ತದೆ. ಈ ಡ್ರಿಂಕ್ ಮಾಡುವುದಕ್ಕೆ ಬೇಕಾಗಿರುವ ಪದಾರ್ಥಗಳು ಒಂದೂವರೆ ಇಂಚಿನಷ್ಟು ಶುಂಠಿ ಏಳೆಂಟು ಎಸಳು ಬೆಳ್ಳುಳ್ಳಿ ಒಂದು ನಿಂಬೆ ಹಣ್ಣು ಮತ್ತು ಎರಡು ಚಮಚ ದಾಲ್ಚಿನಿ ಚಕ್ಕೆ ಪುಡಿ.
ಮೊದಲಿಗೆ ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ತೆಗೆದುಕೊಳ್ಳಬೇಕು ನಂತರ ಅದಕ್ಕೆ ಒಂದು ಚಿಕ್ಕ ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು ನಂತರ ಒಂದೂವರೆ ಇಂಚು ಶುಂಠಿಯನ್ನು ಸಣ್ಣಗೆ ಕತ್ತರಿಸಿ ನೀರಿಗೆ ಹಾಕಬೇಕು ಶುಂಠಿ ಹಾಕಿದ ನಂತರ ಬೆಳ್ಳುಳ್ಳಿಯನ್ನು ಕೂಡ ಸಿಪ್ಪೆ ತೆಗೆದು ಇದನ್ನು ಸಣ್ಣದಾಗಿ ಕತ್ತರಿಸಿ ನೀರಿಗೆ ಹಾಕಿ ನೀರನ್ನು ಕುದಿಸಬೇಕು. ನೀರು ಕುದಿಯುವಾಗ ಎರಡು ಚಮಚ ಚಕ್ಕೆ ಪುಡಿಯನ್ನು ಹಾಕಿ ನೀರನ್ನು ಚೆನ್ನಾಗಿ ಕುದಿಸಬೇಕು ನಂತರ ಈ ನೀರನ್ನು ನೀವು ಶೋಧಿಸಿ ಇಟ್ಟುಕೊಂಡು ಪ್ರತಿ ದಿನ ಮೂರು ಚಮಚದ ಹಾಗೆ ಈ ಡ್ರಿಂಕ್ ಅನ್ನು ನೀವು ಕುಡಿಯುತ್ತಾ ಬನ್ನಿ ನೀವು ವಾರದವರೆಗೂ ಈ ಡ್ರಿಂಕ್ ಅನ್ನು ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿಟ್ಟುಕೊಳ್ಳಬಹುದು.
ನೀವು ಮೂರು ವಾರ ಕುಡಿದು ರಿಂಗ್ ಅನ್ನು ನಿಲ್ಲಿಸಬಹುದು ಮತ್ತೆ ಆರು ತಿಂಗಳಿಗೊಮ್ಮೆ ಈ ರೀತಿಯ ಡ್ರಿಂಕ್ ಅನ್ನು ಮಾಡಿ ಮೂರು ವಾರಗಳವರೆಗೆ ಸೇವಿಸಿ. ಈ ರೀತಿ ಮಾಡುತ್ತಾ ಬರುವುದರಿಂದ ನಿಮಗೆ ಆಗಲಿ ನಿಮ್ಮ ಮನೆಯ ಸದಸ್ಯರಿಗೆ ಆಗಲಿ ಈ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗುವುದಿಲ್ಲ ಮತ್ತು ರಕ್ತದಲ್ಲಿ ಕೊಬ್ಬು ಇದ್ದರೆ ಅಥವಾ ರಕ್ತಕ್ಕೆ ಕೊಬ್ಬು ಸೇರಿಕೊಳ್ಳಬಾರದು ಅಂದರೆ ಈ ಒಂದು ವಿಧಾನ ಪರಿಣಾಮಕಾರಿಯಾದ ಫಲಿತಾಂಶವನ್ನು ನೀಡುತ್ತದೆ.