ಹುಣಸೇ ಮರದಲ್ಲಿ ದೆವ್ವ ಇರುತ್ತೆ ಅನ್ನೋದು ನಿಜಾನ..? ಇದರ ಹಿಂದಿನ ಕಾರಣವೇನು ತಿಳಿದುಕೊಳ್ಳಿ

Entertainment/ಮನರಂಜನೆ

ದೆವ್ವ, ಪ್ರೇತ, ಮೋಹಿನಿ ಎಂದೆಲ್ಲಾ ಕರೆಯಲ್ಪಡುವ ದುಷ್ಟಶಕ್ತಿಯ ಬಗ್ಗೆ ಪ್ರತಿಯೊಬ್ಬರಿಗೂ ಭಯ ಇದ್ದೇ ಇದೆ. ಪುರಾತನ ಕಾಲದಿಂದಲೂ ದೆವ್ವದ ಬಗ್ಗೆ ಹಲವು ಕಥೆಗಳು ಹರಿದಾಡುತ್ತಲೇ ಇವೆ. ಇದರಲ್ಲಿ ಕೆಲವು ನೈಜ ಘಟನೆಗಳನ್ನು ಆಧರಿಸಿದ್ದೂ ಇದೆ. ದೆವ್ವದ ಕಾಟದಿಂದ ಸತ್ತವರು, ಬಾಯಿ ಬರದಂತೆ ಆದವರು, ನೇಣು ಹಾಕಿಕೊಂಡವರು ಹೀಗೆ ಹಲವು ಭಯಾನಕ ಕಥೆಗಳು ಹುಟ್ಟಿಕೊಂಡಿವೆ. ಆದರೆ ಇದು ಎಷ್ಟರಮಟ್ಟಿಗೆ ನಿಜ ಅನ್ನೋದನ್ನು ತಿಳಿದವರಷ್ಟೇ ಬಲ್ಲರು. ದೇವರು ಅನ್ನೋದು ಇರೋದೆ ನಿಜವಾದರೆ ದೆವ್ವ ಅನ್ನೋದು ಇದೆ ಅನ್ನೋದು ಹಲವರ ವಾದ.

ಇನ್ನು, ಕೆಲವೊಂದು ವಸ್ತುಗಳಿಗೂ ದೆವ್ವಕ್ಕೂ ಬಿಟ್ಟು ಬಿಡಲಾರದ ನಂಟಿದೆ. ತಾಳೆಮರ, ಹುಣಸೇಮರ, ಮರದಲ್ಲಿ ದೆವ್ವ ಇರುತ್ತದೆ ಎಂದು ಹಿಂದಿನ ಕಾಲದವರು ಹೇಳುತ್ತಾರೆ. ಹಾಗಾಗಿಯೇ ಮನೆಯ ಅಕ್ಕಪಕ್ಕದಲ್ಲಿ ಇಂಥಹಾ ಮರಗಳು ಇಲ್ಲದಂತೆ ನೋಡಿಕೊಳ್ಳುತ್ತಾರೆ. ಇಂಥಹಾ ಮರಗಳು ದುಷ್ಟಶಕ್ತಿಗಳ ವಾಸಸ್ಥಳವೆಂದು ಹೇಳಲಾಗುತ್ತದೆ. ಹುಣಸೇ ಮರದಲ್ಲಿ ದೆವ್ವ ಇರುತ್ತದೆ. ಹಾಗಾಗಿ ಹುಣಸೆ ಮರವನ್ನು ಮನೆಗಳ ಮುಂದೆ ನೆಡಲೇಬಾರದುಎಂದು ಹೇಳಲಾಗುತ್ತದೆ. ಹುಣಸೆ ತೋಪಿನಲ್ಲಂತೂ ಒಬ್ಬರೇ ಹೋಗಿ ತಿರುಗಾಡಬಾರದು ಮೋಹಿನಿ ಮೈಗೆ ಸೇರಿಕೊಳ್ಳುತ್ತಾಳೆ ಎಂದು ಹೇಳುತ್ತಾರೆ.

symptoms of ghost, ಮನೆಯಲ್ಲಿ ದೆವ್ವ, ಭೂತಗಳ ಇರುವಿಕೆಯನ್ನು ತಿಳಿಯೋದು ಹೇಗೆ ಗೊತ್ತಾ..? - these are the symptoms of negative energy at home - Vijaya Karnataka

ಹುಣಸೇ ಮರದಲ್ಲಿದೆ ದೆವ್ವ..!

ಹುಣಸೇ ಮರದಲ್ಲಿ ದೆವ್ವಗಳು ಇರುತ್ತವೆ ಅನ್ನೋದು ನಿಜಾನ ಅಥವಾ ಇದು ಬರೀ ಮೂಢನಂಬಿಕೆನಾ ಈ ಬಗ್ಗೆ ಹಲವು ಜನರು ವಾದ ಮಾಡಿದ್ದಾರೆ. ಆದರೆ ಹಿಂದಿನ ತಲೆಮಾರಿನವರು ಹೇಳುವ ಪ್ರಕಾರ, ಹುಣಸೇಮರದಲ್ಲಿ ದುಷ್ಟಶಕ್ತಿಗಳು ಇರುತ್ತವಂತೆ. ಹೀಗಾಗಿಯೇ ಹಿಂದಿನ ಕಾಲದಲ್ಲಿ ಮುಂಜಾನೆ, ನಡುಮಧ್ಯಾಹ್ನ, ಇಳಿಸಂಜೆ ಯಾರನ್ನೂ ಹುಣಸೇಮರದ ಹತ್ತಿರ ಹೋಗಲು ಬಿಡುತ್ತಿರಲ್ಲಿಲ್ಲ. ಕತ್ತಲಾದರೆ ಸಾಕು ಜನರು ಹುಣಸೇಮರದ ಅಕ್ಕ-ಪಕ್ಕ ಸುಳಿಯಲೂ ಭಯಪಡುತ್ತಿದ್ದರು.

ಹಲವು ಊರುಗಳಲ್ಲಿ ಹುಣಸೇಮರದ ಬಳಿ ತೆರಳಿದ ಜನರು ದಿಢೀರ್ ನಾಪತ್ತೆಯಾದ, ಮೃತಪಟ್ಟ ಘಟನೆಗಳು ನಡೆದಿವೆ, ಇನ್ನು ಹಲವು ಪ್ರಕರಣಗಳಲ್ಲಿ ಕೆಲವೊಬ್ಬರು ಹುಣಸೇಮರಕ್ಕೆ ಹೋಗಿ ನೇಣು ಹಾಕಿಕೊಳ್ಳುತ್ತಾರೆ. ಇಂಥಹಾ ಹಲವು ಘಟನೆಗಳಿಂದಲೇ ಹುಣಸೇಮರವೆಂದರೆ ಜನರು ಬೆಚ್ಚಿಬೀಳುವಂತಾಗಿದೆ. ಮನೆಯ ಅಕ್ಕಪಕ್ಕ ಹುಣಸೇ ಮರ ಇದ್ದರೂ ಭಯದಿಂದ ಅದನ್ನು ಕಡಿದುಬಿಡುತ್ತಾರೆ.

ಹುಣಸೇ ಮರದಲ್ಲಿ ದೆವ್ವಗಳು ಅಂದರೆ ಪ್ರೇತಾತ್ಮಗಳು ವಾಸ ಮಾಡುತ್ತವೆ ಎಂದು ಹಲವಾರು ವರ್ಷಗಳಿಂದಲೂ ಜನರು ನಂಬಿಕೊಂಡು ಭಯಭೀತರಾಗಿದ್ದಾರೆ. ಆದ್ದರಿಂದ ಇಂಥಹಾ ಮರಗಳು ಇರುವ ಸ್ಥಳಗಳಲ್ಲಿ ಮನೆ ಮತ್ತು ಕಟ್ಟಡಗಳನ್ನು ನಿರ್ಮಿಸಬಾರದು. ಅವು ವಾಸ ಮಾಡುವುದಕ್ಕೆ ಯೋಗ್ಯವಲ್ಲ. ಹುಣಸೇಮರ ಅತೀ ಹೆಚ್ಚು ನಕಾರಾತ್ಮಕ ಶಕ್ತಿಯನ್ನು ಹೊಂದಿದ್ದು, ಕೆಡುಕನ್ನುಂಟು ಮಾಡುತ್ತದೆ ಎಂದು ಹೇಳುತ್ತಾರೆ.

ದೆವ್ವದ ನಡೆ - Varthabharati

ವೈಜ್ಞಾನಿಕ ವಾದ

ಆದರೆ, ವೈಜ್ಞಾನಿಕವಾಗಿ ವಾದ ಮಾಡುವವರು ಈ ಮಾತಿನಲ್ಲಿ ಯಾವುದೇ ಹುರುಳಿಲ್ಲ ಎಂದೇ ವಾದಿಸುತ್ತಾರೆ. ಹುಣಸೇ ಮರದಲ್ಲಿ ದೆವ್ವ ಇರುತ್ತದೆ ಅನ್ನೋದು ಶುದ್ಧ ಸುಳ್ಳು. ಹುಣಸೇಮರದ ಬಳಿಯೇ ಜನರು ಸಾವನ್ನಪ್ಪಲು ವೈಜ್ಞಾನಿಕವಾದ ಕಾರಣವಿದೆಯೆಂದೇ ಹೇಳುತ್ತಾರೆ. ಹುಣಸೇಮರ ವಾತಾವರಣದಲ್ಲಿರುವ ಎಲ್ಲಾ ಆಕ್ಸಿಜನ್ನ್ನು ತಾನೇ ಹೀರಿಕೊಳ್ಳುತ್ತದೆ. ಮನುಷ್ಯರಿಗೆ ಬದುಕಲು ಮುಖ್ಯವಾಗಿ ಬೇಕಾಗಿರುವ ಆಕ್ಸಿಜನ್ ನ್ನು ಹುಣಸೆ ಮರವೇ ಹೀರಿಬಿಟ್ಟರೆ ಪ್ರಾಣಕ್ಕೆ ಅಪಾಯ ಇರುತ್ತದೆ. ಹೀಗಾಗಿ ಈ ಮರದ ಕೆಳಗೆ ಹೋದಾಗಯಾರೋ ಕತ್ತನ್ನು ಹಿಸುಕುತಿದ್ದಾರೆ, ಉಸಿರಾಡಲು ಆಗುತ್ತಿಲ್ಲ ಅನ್ನೋ ಅನುಭವವಾಗುತ್ತದೆ ಎಂಬುದು ವೈಜ್ಞಾನಿಕ ವಾದ.

ಇದನ್ನೇ ಜನರು ದೆವ್ವದ ಕೆಲಸ ಇದು ಎಂದು ಭಯಭೀತಗೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಹಿಂದಿನ ಕಾಲದಲ್ಲೇ ಇದನ್ನು ತಿಳಿದ ಜನರು, ಹೀಗೆ ಹೇಳಿದರೆ ಯಾರೂ ನಂಬುವುದಿಲ್ಲವೆಂದು ದೆವ್ವ-ಭೂತಗಳ ಕಥೆಕಟ್ಟಿ ಜನರನ್ನು ಹೆದರಿಸಿ ಆ ಸ್ಥಳಕ್ಕೆ ಹೋಗದಂತೆ ತಡೆಯುತ್ತಿದ್ದರು ಎನ್ನಲಾಗುತ್ತದೆ. ಇದರ ಸತ್ಯಾಸತ್ಯತೆ ಎಷ್ಟರಮಟ್ಟಿಗಿದೆ ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ. ಹುಣಸೇ ಮರದಲ್ಲಿ ದೆವ್ವ ಇದೆ ಅನ್ನೋದು ನಿಜಾನ ಇಲ್ಲ ಮರ ಆಕ್ಸಿಜನ್ ಹೀರಿಕೊಳ್ಳುತ್ತೆ ಅನ್ನೋದು ನಿಜಾನ ಅನ್ನೋದು ಇವತ್ತಿಗೂ ತರ್ಕಕ್ಕೆ ನಿಲುಕದ್ದು.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...