ಹರಿಯಾಣಿ ಡಾನ್ಸರ್ ಗಳ ವೀಡಿಯೋಗಳು ಎಂದರೆ ಸಾಮಾಜಿಕ ಜಾಲತಾಣಗಳಲ್ಲಿ ಅವು ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಈ ಡಾನ್ಸ್ ಗಳನ್ನು ನೋಡಿ ಆನಂದಿಸುವ ಒಂದು ದೊಡ್ಡ ವರ್ಗವೇ ಇದೆ ಎಂದರೆ ತಪ್ಪಾಗಲಾರದು. ಹರಿಯಾಣಿ ಡಾನ್ಸರ್ ಗಳ ಡಾನ್ಸ್ ಮೂವ್ಮೆಂಟ್ಸ್ ಗೆ ಅಭಿಮಾನಿಗಳು ಫಿದಾ ಆಗುತ್ತಾರೆ. ಹರಿಯಾನ್ವಿ ಡಾನ್ಸರ್ ಗಳಾಗಿ ಹೆಸರು ಪಡೆದಿರುವ ಜನಪ್ರಿಯ ಡಾನ್ಸರ್ ಗಳ ಸಾಲಿನಲ್ಲಿ ಇತ್ತೀಚಿಗೆ ಡಾನ್ಸರ್ ಆರತಿ ಭೋರಿಯಾ ಸಖತ್ ಸದ್ದು ಮಾಡುತ್ತಿದ್ದಾರೆ.
ಆರತಿಯ ಬೋ ಲ್ಡ್ ಸ್ಟೈಲ್ ಹಾಗೂ ಎ ನ ರ್ಜಿ ಯೇ ಆಕೆಯ ಡಾನ್ಸ್ ಗಳ ಪ್ರಮುಖ ಆಕರ್ಷಣೆಯಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಓರಿಜಿನಲ್ ನೃತ್ಯಕ್ಕೂ ಹಾಗೂ ಈಗ ಆಕೆ ಮಾಡಿರುವ ಡಾನ್ಸ್ ಗೂ ಕಡಿಮೆಯೇನಿಲ್ಲ ಎನ್ನುವ ಹಾಗೆ ಮೂಡಿ ಬಂದಿದೆ. ಡಾನ್ಸರ್ ಆರತಿ ಭೋರಿಯಾ ಈ ಬಾರಿ Na Chede Nadan sapere ಹಾಡಿಗೆ ಡಾನ್ಸ್ ಮಾಡಿದ್ದು, ಈ ಡಾನ್ಸ್ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹವಾ ಎಬ್ಬಿಸಿದೆ.
ಇಲ್ಲಿಯವರೆಗೆ 25 ಲಕ್ಷಕ್ಕೂ ಹೆಚ್ಚು ಜನರು ಈ ವೀಡಿಯೋವನ್ನು ನೋಡಿ ಖುಷಿ ಪಟ್ಟಿದ್ದಾರೆ. ಹರಿಯಾಣಿ ಡಾನ್ಸರ್ ಆಗಿ ಈಗಾಗಲೇ ದೊಡ್ಡ ಹೆಸರನ್ನು ಮಾಡಿರುವ ಸಪ್ನಾ ಚೌಧರಿ ಯನ್ನು ಮೀರಿಸಲು ಆರತಿಗೆ ಇನ್ನೂ ಸಾಧ್ಯವಾಗಿಲ್ಲವಾದರೂ, ದಿನೇ ದಿನೇ ಆರತಿಯ ಜನಪ್ರಿಯತೆ ಹೆಚ್ಚುತ್ತಿದೆ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಅವರ ಫಾಲೋವರ್ ಸಂಖ್ಯೆ ಕೂಡಾ ಹೆಚ್ಚುತ್ತಿದೆ.
ಸಪ್ನಾ ಚೌಧರಿ ಕೂಡಾ ಹಿಂದೊಮ್ಮೆ ಆರತಿಯಂತೆಯೇ ಹಳ್ಳಿ, ಹಳ್ಳಿ ಸುತ್ತುತ್ತಾ ವೇದಿಕೆಗಳ ಮೇಲೆ ಡಾನ್ಸ್ ಮಾಡುತ್ತಿದ್ದರು. ಹೀಗೆ ಡಾನ್ಸ್ ಗಳನ್ನು ಮಾಡುತ್ತಲೇ ಸಪ್ನಾ ಎಂತಹ ಹೆಸರನ್ನು ಮಾಡಿದರು ಎಂದರೆ, ಒಬ್ಬ ಸಿನಿಮಾ ಸೆಲೆಬ್ರಿಟಿಯ ಮಟ್ಟದಲ್ಲಿ ಹರಿಯಾಣದಲ್ಲಿ ಹೆಸರನ್ನು ಮಾಡಿದ್ದಾರೆ ಸಪ್ನಾ ಚೌಧರಿ. ಈಗ ಆಕೆ ಯಾವ ಸೆಲೆಬ್ರಿಟಿಗೂ ಕಮ್ಮಿಯೇನಿಲ್ಲ. ಆದರೂ ತನ್ನ ಮೂಲ ನೃತ್ಯ ಮರೆತಿಲ್ಲ.
ಸಪ್ನಾ ಚೌಧರಿ ಜನಪ್ರಿಯತೆ ಯಾವ ಮಟ್ಟಕ್ಕೆ ಇತ್ತು ಎಂದರೆ ಹಿಂದಿ ಬಿಗ್ ಬಾಸ್ ನ ಒಂದು ಸೀಸನ್ ನಲ್ಲಿ ಸ್ಪರ್ಧಿಯಾಗಿ ಮನೆಯನ್ನು ಪ್ರವೇಶಿಸಿ ಇನ್ನಷ್ಟು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡವರು ಸಪ್ನಾ ಚೌಧರಿ. ಇಂದು ಕೋಟಿಗಳ ಸಂಖ್ಯೆಯಲ್ಲಿ ಸಪ್ನಾ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಇವರಿಂದಾಗಿಯೇ ಅವರು ಬಿಗ್ ಬಾಸ್ ವರೆಗೂ ಬರಲು ಸಾಧ್ಯವಾಯಿತು.
ಸಪ್ನಾ ಬಿಗ್ ಬಾಸ್ ನಲ್ಲೂ ಬಹಳ ದಿನಗಳ ಕಾಲ ತಮ್ಮ ಜರ್ನಿಯನ್ನು ನಡೆಸಿದ್ದಾರೆ. ಈಗ ಆರತಿ ಭೋರಿಯಾ ಕೂಡಾ ಸಪ್ನಾ ನಡೆದ ಹಾದಿಯಲ್ಲೇ ನಡೆಯುತ್ತಿದ್ದು ತನ್ನ ಡಾನ್ಸ್ ವೀಡಿಯೋಗಳ ಮೂಲಕವೇ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡು, ಅಸಂಖ್ಯಾತ ಅಭಿಮಾನಿಗಳನ್ನು ಹೊಂದುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಆರತಿ ಕೂಡಾ ದೊಡ್ಡ ಸ್ಟಾರ್ ಆಗುವುದರಲ್ಲಿ ಅಚ್ಚರಿಯೇನಿಲ್ಲ.
ಆರತಿಯವರ ಡ್ಯಾನ್ಸ್ ವಿಡಿಯೊ ಕೆಳಗಿದೆ ನೋಡಿ…