ಹರೀಶ್ ರೈ

ಕ್ಯಾನ್ಸರ್ ನಿಂದ ಬಳಲುತ್ತಿರುವ ಹರೀಶ್ ರೈ ಗೆ ಸಹಾಯ ಮಾಡಿದ ಸ್ಟಾರ್ ನಟ ಯಾರು ಗೊತ್ತಾ.?

CINEMA/ಸಿನಿಮಾ

ನಟ ಹರೀಶ್ ರೈ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸುಮಾರು ಎರಡು ದಶಕಗಳಿಂದಲೂ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ ಗುರುತಿಸಿಕೊಂಡಿದ್ದಾರೆ. ಖಳನಾಯಕನ ಪಾತ್ರದಲ್ಲಿ ಹೆಚ್ಚು ಫೇಮಸ್ ಆದವರು ಕನ್ನಡ ತಮಿಳು ತೆಲುಗು ಸೇರಿದಂತೆ ದಕ್ಷಿಣ ಭಾರತದ ಸಾಕಷ್ಟು ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇವರಿಗೆ ಪರಭಾಷೆಯಲ್ಲಿ ಎಲ್ಲಿಯೂ ಕೂಡ ಹೆಚ್ಚಿನ ಮನ್ನಣೆ ಮತ್ತು ಅವಕಾಶ ದೊರೆಯಲಿಲ್ಲ. ಆದರೆ ಕನ್ನಡ ಚಿತ್ರರಂಗ ಮಾತ್ರ ಇವರನ್ನು ಎಂದಿಗೂ ಕೈ ಬಿಡಲಿಲ್ಲ ಸುಮಾರು 300ಕ್ಕೂ ಅಧಿಕ ಸಿನಿಮಾದಲ್ಲಿ ಇವರು ಅಭಿನಯಿಸಿದ್ದಾರೆ. ಇತ್ತೀಚಿಗಷ್ಟೇ ತೆರೆಕಂಡ ಕೆಜಿಫ್ ಚಾಪ್ಟರ್ 2 ಸಿನಿಮಾದಲ್ಲಿ ಚಾಚಾ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ ಈ ಒಂದು ಪಾತ್ರ ಇವರಿಗೆ ಎಷ್ಟು ಖ್ಯಾತಿಯನ್ನು ಗಳಿಸಿಕೊಟ್ಟಿದೆ ಅಂದರೆ

ಒಂದು ಕಾಲದಲ್ಲಿ ಇವರಿಗೆ ಯಾರೂ ಕೂಡ ಗೌರವ ಮನ್ನಣೆಯನ್ನು ನೀಡುತ್ತಿರಲಿಲ್ಲ ಆದರೆ ಇದೀಗ ಹರೀಶ್ ರೈ ಅಂದರೆ ಸಾಕು ದಕ್ಷಿಣ ಭಾರತದ ಬಹುತೇಕ ಎಲ್ಲಾ ಸಿನಿಮಾ ರಂಗದವರು ಕೂಡ ನಮ್ಮ ಸಿನಿಮಾದಲ್ಲಿ ನಟನೆ ಮಾಡಿ ಎಂದು ಆಫರ್ ಕೊಡುತ್ತಿದ್ದಾರಂತೆ. ಅಷ್ಟರ ಮಟ್ಟಿಗೆ ಇವರ ಹೆಸರು ಖ್ಯಾತಿ ಬೆಳೆದಿದೆ ಒಂದು ರೀತಿಯಲ್ಲಿ ಹೇಳುವುದಾದರೆ ಜೀವನದಲ್ಲಿ ಯಾವುದೇ ರೀತಿಯಾದಂತಹ ಭರವಸೆ ಯಶಸ್ಸು ಸಿಗದೇ ಇದ್ದಾಗ ಇವರ ಬದುಕನ್ನು ಕಟ್ಟಿಕೊಟ್ಟಿದ್ದು ಕೆಜಿಎಫ್ ಸಿನಿಮಾ. ಈಗ ಕೆಜಿಎಫ್ ಸಿನಿಮಾದಿಂದ ಹಲವಾರು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಅವಕಾಶ ದೊರೆತಿದೆ ಆದರೆ ವಿಧಿ ಆಟ ಎಂಬುದು ಹೇಗಿದೆ ಅಂದರೆ. ಅವಕಾಶ ಸಿಕ್ಕರೂ ಕೂಡ ಇದೀಗ ನಟ ಸುರೇಶ್ ಅವರು ಅಭಿನಯಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಇದಕ್ಕೆ ಮುಖ್ಯ ಕಾರಣ ಅಂದರೆ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.

KGF actor Harish Rai reveals he has cancer, kept beard in film to hide  swelling - Hindustan Times

ಹೌದು ನಟ ಹರೀಶ್ ರೈ ಅವರು ಸುಮಾರು ಮೂರು ವರ್ಷಗಳಿಂದಲೂ ಕೂಡ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರೆ ಆದರೆ ಪ್ರಾರಂಭದ ಹಂತದಲ್ಲಿ ಇವರಿಗೆ ಅಷ್ಟೇನೂ ಈ ರೋಗದ ಲಕ್ಷಣ ಕಾಣಿಸಿಕೊಳ್ಳಲಿಲ್ಲ. ಹಾಗಾಗಿ ಇದನ್ನು ಇವರು ನಿರ್ಲಕ್ಷ ಮಾಡಿದರು ಗಂಟಲು ಆಪರೇಷನ್ ಮಾಡಿಸಿಕೊಳ್ಳಬೇಕಿತ್ತು ಆದರೆ ಹರೀಶ್ ರೈ ಅವರು ಅದರ ಕಡೆ ಹೆಚ್ಚು ಗಮನವನ್ನು ನೀಡಲಿಲ್ಲ ಇದಕ್ಕೆ ಮುಖ್ಯ ಕಾರಣ ಅಂದರೆ ಅವರ ಆರ್ಥಿಕ ಪರಿಸ್ಥಿತಿ ಅಂತಾನೇ ಹೇಳಬಹುದು. ನಾವೆಲ್ಲರೂ ಅಂದುಕೊಳ್ಳುತ್ತೇವೆ ಸೆಲೆಬ್ರೆಟಿಗಳಿಗೆ ನಟ ನಟಿಯರಿಗೆ ಯಾವುದೇ ಕಷ್ಟ ಇರುವುದಿಲ್ಲ ಅವರ ಬಳಿ ಸಾಕಷ್ಟು ಹಣ ಆಸ್ತಿ ಇರುತ್ತದೆ ಅಂತ ಆದರೆ ಇವೆಲ್ಲವೂ ಕೂಡ ಸ್ಟಾರ್ ನಟರಿಗೆ ಮಾತ್ರ ಸೀಮಿತವಾಗಿರುತ್ತದೆ.

ವಿಲ್ಲನ್ ಪಾತ್ರದಲ್ಲಿ ನಟನೆ ಮಾಡುವವರಿಗೆ ಪೋಷಕ ಪಾತ್ರದಲ್ಲಿ ಇರುವವರಿಗೆ ಮತ್ತು ಸೈಡ್ ರೋಲ್ ನಲ್ಲಿ ಅಭಿನಯ ಮಾಡುವಂತಹ ವ್ಯಕ್ತಿಗಳು ಸಾಮಾನ್ಯ ಜನರಂತೆ ಜೀವನ ಸಾಗಿಸುತ್ತಾರೆ. ಇವರಿಗೆ ದಿನದ ಲೆಕ್ಕದಲ್ಲಿ ಸಂಭಾವನೆಯನ್ನು ನೀಡುತ್ತಾರೆ ವರ್ಷಕ್ಕೆ ಒಂದು ಎರಡು ತಿಂಗಳ ಶೂಟಿಂಗ್ ಇರುತ್ತದೆ. ಬಾಕಿ ಉಳಿದ ದಿನ ಕಾಲಿ ಕುಳಿತುಕೊಂಡಿರಬೇಕಾಗುತ್ತದೆ ಹಾಗಾಗಿ ಇವರಿಗೆ ಬರುವಂತಹ ಸಂಭಾವನೆಯಲ್ಲಿ ಜೀವನ ಸಾಗಿಸಬೇಕಾಗುತ್ತದೆ. ಈ ಸಮಯದಲ್ಲಿ ದೊಡ್ಡ ದೊಡ್ಡ ಕಾಯಿಲೆಗಳು ಬಂದಾಗ ಆ ಒಂದು ಆಸ್ಪತ್ರೆ ಖರ್ಚಿಗೆ ಬರಿಸುವಂತಹ ಶಕ್ತಿ ಈ ಸಣ್ಣ ಕಲಾವಿದರಿಗೆ ಇರುವುದಿಲ್ಲ. ಈ ಕಾರಣಕ್ಕಾಗಿಯೇ ಹರೀಶ್ ರೈಯವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಕೂಡ ಅದಕ್ಕೆ ಟ್ರೀಟ್ಮೆಂಟ್ ಕೊಡಿಸಿಕೊಳ್ಳುವುದಿಲ್ಲ.

KGF Chapter 2 Cast » OnlineProsess.Com

ಸದ್ಯಕ್ಕೆ ಹರೀಶ್ ರೈ ಅವರ ಪರಿಸ್ಥಿತಿ ಹೇಗಾಗಿದೆ ಅಂದರೆ ಒಂದು ಕಡೆ ಟ್ರೀಟ್ಮೆಂಟ್ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಅವರ ಪ್ರಾಣಕ್ಕೆ ಕುತ್ತು ಬರುತ್ತದೆ. ಆದರೆ ಇವರ ಬಳಿ ಟ್ರೀಟ್ಮೆಂಟ್ ಗೆ ಬೇಕಾದಷ್ಟು ಹಣ ಇಲ್ಲ ಈ ಕಾರಣಕ್ಕಾಗಿ ನಟ ಹರೀಶ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಆರೋಗ್ಯ ಸರಿ ಇಲ್ಲ ಹೇಗಾದರೂ ಮಾಡಿ ನನಗೆ ಆರ್ಥಿಕ ನೆರವು ನೀಡಿ ಎಂದು ಕೇಳಿಕೊಂಡಿದ್ದಾರೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಕನ್ನಡದ ಸ್ಟಾರ್ ನಟ ಒಬ್ಬರು ಹರೀಶ್ ರೈ ಅವರಿಗೆ ಕರೆ ಮಾಡಿ ನೀವು ಚಿಂತೆ ಮಾಡಬೇಡಿ ನಾವು ನಿಮಗೆ ಎಲ್ಲಾ ರೀತಿಯಾದಂತಹ ಟ್ರೀಟ್ಮೆಂಟ್ ಅನ್ನು ಕೊಡಿಸುತ್ತೇವೆ ನಿಮ್ಮ ಅಕೌಂಟ್ ನಂಬರ್ ನೀಡಿ ಎಂದು ಕೇಳಿಕೊಂಡಿದ್ದಾರೆ.

ಆದರೆ ಈ ವಿಚಾರವನ್ನು ನೀವು ಎಲ್ಲಿಯೂ ಕೂಡ ಹೊರಗೆ ಹೇಳಬಾರದು ಎಂದು ಮಾತನ್ನು ತೆಗೆದುಕೊಂಡಿದ್ದಾರಂತೆ. ಈ ಕಾರಣಕ್ಕಾಗಿ ಹರೀಶ್ ರೈ ಅವರು ತಮಗೆ ಸಹಾಯ ಮಾಡಿದಂತಹ ಆ ಸ್ಟಾರ್ ನಟನ ಹೆಸರನ್ನು ಹೇಳಿಲ್ಲ. ಆದರೆ ಮುಂದೊಂದು ದಿನ ಈ ನಟನ ಹೆಸರು ರಿವಿಲ್ ಹಾಗೆ ಆಗುತ್ತದೆ. ಆ ಸ್ಟಾರ್ ನಟ ಇರಬಹುದು ಯಾರು ಹರೀಶ್ ಅವರಿಗೆ ಸಹಾಯ ಮಾಡಿರಬಹುದು ಎಂಬುದನ್ನು ಊಹೆ ಮಾಡಿ ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ. ಹರೀಶ್ ರೈ ಮಾತನಾಡಿದ ವಿಡಿಯೋ ಈ ಕೆಳಗಿದೆ ನೋಡಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.