ಕನ್ನಡದ ಅತ್ಯಂತ ಸುಂದರ ಹಾಗೂ ಬೋಲ್ಡ್ ನಟಿ ಅಂದ್ರೆ ಅದು ಹರಿಪ್ರಿಯ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಲಕ್ಷಾಂತರ ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ ನಟಿ ಹರಿಪ್ರಿಯ. ಸೀರಿಯಸ್ ಆಗಿರುವ ಪಾತ್ರಗಳಿಂದ ಹಿಡಿದು ಸಖತ್ ಕಾಮಿಡಿ ಮಾಡುವ ಪಾತ್ರಗಳನ್ನು ಕೂಡ ಅಚ್ಚುಕಟ್ಟಾಗಿ ನಿಭಾಯಿಸಬಲ್ಲರು ಹರಿಪ್ರಿಯ.
ಮಹಿಳಾ ಪ್ರಧಾನ ಪಾತ್ರಗಳನ್ನು ಹೆಚ್ಚಾಗಿ ಒಪ್ಪಿಕೊಳ್ಳುವ ಹರಿಪ್ರಿಯಾ ಅವರು ಕನ್ನಡದ ಬಹು ಬೇಡಿಕೆಯ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ ನಟಿ ಹರಿಪ್ರಿಯ. ಅದು ಅವರು ಮಾಡುತ್ತಿರುವ ಸಿನಿಮಾಗಳಿಂದ ಅಲ್ಲ ಬದಲಾಗಿ ಅವರ ವೈಯಕ್ತಿಕ ಜೀವನದಲ್ಲಿ ನಡೆದ ಒಂದು ಸಂಭ್ರಮದ ವಿಚಾರದಿಂದ.
ಹೌದು ಹರಿಪ್ರಿಯಾ ಇದೀಗ ಮೂಗುತಿ ಸುಂದರಿ ಆಗಿದ್ದಾರೆ. ಇದು ಕೆಲವರಿಗೆ ಅಷ್ಟು ದೊಡ್ಡ ಸುದ್ದಿ ಏನಲ್ಲ. ಆದ್ರೆ ಹರಿಪ್ರಿಯಾ ಅವರು ಮೂಗು ಚುಚ್ಚಿಸಿಕೊಂಡಿದ್ದನ್ನ ನೋಡಿ, ಅವರ ಸೌಂದರ್ಯ ದುಪಟ್ಟಾಗಿದ್ದನ್ನು ನೋಡಿ ಅವರ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಮೊದಲೇ ನೋಡುವುದಕ್ಕೆ ಸುಂದರವಾಗಿರುವ ಹರಿಪ್ರಿಯಾ ಇದೀಗ ಮೂಗು ಚುಚ್ಚಿಸಿದ ನಂತರ ಇನ್ನಷ್ಟು ಅಂದವಾಗಿ ಕಾಣಿಸುತ್ತಿದ್ದಾರೆ.
ಅಂದಹಾಗೆ ಹೀಗೆ ಮೂಗು ಚುಚ್ಚಿಸಿಕೊಳ್ಳುವುದಕ್ಕೆ ಕಾರಣ ಏನು ಎನ್ನುವುದು ಅಭಿಮಾನಿಗಳ ಕುತೂಹಲ. ಹೌದು ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದನ್ನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಮೂಗು ಚಚ್ಚುವಾಗ ಸಾಕಷ್ಟು ನೋವನ್ನು ಅನುಭವಿಸಿದ ಹರಿಪ್ರಿಯ ಕಣ್ಣಲ್ಲಿ ನೀರು ತುಂಬಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಆದಾಗ್ಯೂ ಅವರ ಅಂದವನ್ನು ನೋಡಿ ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದಾರೆ. ಇನ್ನು ಇಷ್ಟು ವರ್ಷದ ಬಳಿಕ ಯಾಕೆ ಮೂಗು ಚುಚ್ಚಿಸಿಕೊಂಡಿದ್ದಾರೆ ಹರಿಪ್ರಿಯಾ ಅನ್ನೋದು ಹಲವರ ಕುತೂಹಲ. ಬಹುಶಃ ನಟಿ ಹರಿಪ್ರಿಯ ಮದುವೆ ಆಗ್ತಾ ಇರಬೇಕು ಎಂದು ಗಾಂಧಿನಗರದ ತುಂಬಾ ಸುದ್ದಿಯಾಗುತ್ತಿದೆ. 2007ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿರುವ ಈ ತಾರೆ ಈಗಾಗಲೇ ಸಾಕಷ್ಟು ಎತ್ತರಕ್ಕೆ ಬೆಳೆದಿದ್ದಾರೆ.
ಸ್ಯಾಂಡಲ್ ವುಡ್ ನ ಖ್ಯಾತ ನಟರಾದ ರಿಷಭ್ ಶೆಟ್ಟಿ, ರಕ್ಷಿತ್ ಶೆಟ್ಟಿ ಶ್ರೀ ಮುರಳಿ, ಮೊದಲಾದ ಎಲ್ಲಾ ಸ್ಟಾರ್ ನಟರ ಜೊತೆಗೆ ಅಭಿನಯಿಸಿದ ಖ್ಯಾತಿ ಹರಿಪ್ರಿಯಾ ಅವರದ್ದು. ಕನ್ನಡಿಗರಿಗಂತೂ ಹರಿಪ್ರಿಯಾ ಅವರ ಆಕ್ಟಿಂಗ್ ತುಂಬಾನೇ ಇಷ್ಟ. ತಮ್ಮ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರಲು ಹರಿಪ್ರಿಯಾ ಅವರು ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಆಕ್ಟಿವ್ ಆಗಿರುತ್ತಾರೆ.
ಈಗಾಗಲೇ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ ಹರಿಪ್ರಿಯಾ. ಇತ್ತೀಚಿಗೆ ನೀನಾಸಂ ಸತೀಶ್ ಜೊತೆಗೆ ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ಅಭಿನಯಿಸಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ ನಟಿ ಹರಿಪ್ರಿಯ್. ಡಬಲ್ ಮೀನಿಂಗ್ ಜೋಕ್ ಗಳೇ ಹೆಚ್ಚಾಗಿರುವ ಈ ಸಿನಿಮಾದಲ್ಲಿ ಉತ್ತಮ ಸಂದೇಶವನ್ನೂ ಕೂಡ ನೀಡಲಾಗಿದೆ. ಸದ್ಯಕ್ಕಂತೂ ಮೂಗು ಚುಚ್ಚಿಸಿಕೊಂಡಿರುವ ನೋವು ಹಾಗೂ ಖುಷಿ ಎರಡೂ ಅನುಭವಿಸುತ್ತಿರುವ ಹರಿಪ್ರಿಯ, ಇನ್ಸ್ಟಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈಗ ಯಾಕೆ ಮೂಗು ಚುಚ್ಚಿಸಿಕೊಂಡಿದ್ದಾರೆ ಎನ್ನುವ ಪ್ರಶ್ನೆಗಂತೂ ನಟಿ ಉತ್ತರ ನೀಡಿಲ್ಲ.
View this post on Instagram