HARIPRIYA

ಹಿಂದೆಗಡೆ ಮಸ್ತ್ ಹಾಕಿಸಿಕೊಂಡ ಸ್ಯಾಂಡಲ್ ವುಡ್ ನ ಸುಂದರಿ ನಟಿ ಹರಿಪ್ರಿಯಾ! ಹೇಗಿದೆ ನೋಡಿ ಸೂಪರ್ ಟ್ಯಾಟೂ ವಿಡಿಯೋ!!

CINEMA/ಸಿನಿಮಾ Entertainment/ಮನರಂಜನೆ

ನಮಸ್ತೆ ಪ್ರೀತಿಯ ವೀಕ್ಷಕರೆ ನಟಿ ಹರಿಪ್ರಿಯಾ ಕನ್ನಡ ಸಿನೆಮಾರಂಗದಲ್ಲಿ ಸದ್ಯ ಬಹುಬೇಡಿಕೆ ಇರುವ ನಟಿ. ಇತ್ತೀಚೆಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿ ಹರಿಪ್ರಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ಸಾಫ್ಟ್ ಪಾತ್ರದಿಂದ ಹಿಡಿದು ಬೋಲ್ಡ್ ಪಾತ್ರದ ವರೆಗೆ ಎಲ್ಲಾ ರೀತಿಯ ಪಾತ್ರಗಳನ್ನ ನಿಭಾಯಿಸುವಲ್ಲಿ ನಟಿ ಹರಿಪ್ರಿಯ ಸೈ ಎನಿಸಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಹರಿಪ್ರಿಯ, ಈ ವರ್ಷ ಬಂಪರ್ ಲಾಟರಿ ಹೊಡೆದಿದ್ದಾರೆ.

ಹೌದು ಹರಿಪ್ರಿಯಾ ಅವರಿಗೆ ಹೆಚ್ಚು ಅವಕಾಶಗಳು ಅರಸಿಕೊಂಡು ಬರುತ್ತಿದೆ ಆದರೆ ಮಹಿಳಾ ಪ್ರಧಾನ ಪಾತ್ರದಲ್ಲಿ ಹೆಚ್ಚಾಗಿ ಅಭಿನಯಿಸುವುದಕ್ಕೆ ನಟಿ ಹರಿಪ್ರಿಯ ಇಷ್ಟಪಡುತ್ತಾರೆ. ಇತ್ತೀಚಿಗೆ ಅಭಿನಯಿಸಿದ ಎಲ್ಲಾ ಸಿನಿಮಾಗಳಲ್ಲಿ ಹರಿಪ್ರಿಯಾ ಅವರಿಗೆ ಮುಖ್ಯಪಾತ್ರ ದೊರೆತಿತ್ತು. ಹರಿಪ್ರಿಯಾ ಹಾಗೂ ನಿನಾಸಂ ಸತೀಶ್ ಇವರ ಕಾಂಬಿನೇಷನ್ ನಲ್ಲಿ ತೆರೆಕಂಡ ಪೆಟ್ರೋಮ್ಯಾಕ್ಸ್ ಚಿತ್ರ ಅಷ್ಟೇನು ಹೇಳುವಷ್ಟು ಪ್ರದರ್ಶನ ಕಾಣಲಿಲ್ಲ.

ಇನ್ನು ಡಬಲ್ ಮೀನಿಂಗ್ ಡೈಲಾಗ್ ಗಳೇ ಹೆಚ್ಚಾಗಿ ಇರುವ ಪೆಟ್ರೋಮ್ಯಾಕ್ಸ್ ನಲ್ಲಿ ಹರಿಪ್ರಿಯಾ ಅವರದು ಬಹಳ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಪ್ರತಿಭಾನ್ವಿತ ನಟಿ ಹರಿಪ್ರಿಯಾ ಹುಟ್ಟಿದ್ದು 1991 ಅಕ್ಟೋಬರ್ 29ರಂದು ಚಿಕ್ಕಬಳ್ಳಾಪುರದಲ್ಲಿ. ಇವರ ಮೂಲ ಹೆಸರು ಶೃತಿ ಸಿನಿಮಾಕ್ಕೆ ಬಂದ ನಂತರ ಹರಿಪ್ರಿಯಾ ಎಂದು ಬದಲಾಯಿಸಲಾಗಿದೆ.

2008ರಲ್ಲಿ ತುಳು ಚಿತ್ರದಲ್ಲಿ ಅಭಿನಯಿಸಲು ಅವಕಾಶ ಪಡೆದುಕೊಂಡ ಹರಿಪ್ರಿಯ ಅದೇ ವರ್ಷ ‘ಮನಸ್ಸುಗಳ ಮಾತು ಮಧುರ’ ಎನ್ನುವ ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸಿದರು. ಇನ್ನು ಕನ್ನಡದಲ್ಲಿ “ನೀರ್ ದೋಸೆ” “ಉಗ್ರಂ” “ಬೆಲ್ ಬಾಟಮ್” ಮೊದಲದ ಹಿಟ್ ಸಿನಿಮಾಗಳಲ್ಲಿ ಹರಿಪ್ರಿಯಾ ಅಭಿನಯಿಸಿದ್ದಾರೆ. ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವ ಹರಿಪ್ರಿಯಾ, ಇದೀಗ ಮತ್ತೊಂದು ಹೊಸ ಅಚ್ಚರಿಯ ಸುದ್ಧಿ ನೀಡಿದ್ದಾರೆ? ಅದೇನು ಗೊತ್ತಾ ನೋಡಿ

ಮತ್ಸ್ಯ ಕನ್ಯೆಯಾಗಿ ಹರಿಪ್ರಿಯಾ ಮಿಂಚಲಿದ್ದಾರೆ. ಇದು ಇವರ ಹೊಸ ಸಿನಿಮಾದ ಪಾತ್ರ ಎಂದು ಭಾವಿಸಬೇಡಿ. ಇತ್ತೀಚಿಗೆ ಹರಿಪ್ರಿಯಾ ತಮ್ಮ ಬೆನ್ನಿನ ಮೇಲ್ಭಾಗದಲ್ಲಿ ಮತ್ಸ್ಯ ಕನ್ಯೆಯ ದೊಡ್ಡದಾದ ಟ್ಯಾಟೂ ವನ್ನು ಹಾಕಿಸಿಕೊಂಡಿದ್ದಾರೆ. ಹೌದು, ಹಚ್ಚೆ ಅಥವಾ ಟ್ಯಾಟೂ ಹಾಕಿಸಿಕೊಳ್ಳೋದು ಇತ್ತೀಚಿಗೆ ಟ್ರೆಂಡ್ ಆಗಿದೆ. ಸಾಕಷ್ಟು ಜನ ತಮ್ಮ ನೆಚ್ಚಿನ ನಟ ನಟಿಯರ ಫೊಟೋಗಳನ್ನು ತಮ್ಮ ದೇಹದ ಬೇರೆ ಬೇರೆ ಭಾಗಗಳಿಗೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ.

ಅದರಲ್ಲೂ ಕೆಲವರಂತೂ ದೇಹದ ತುಂಬಾ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಇತ್ತೀಚಿಗೆ ವಿದೇಶಿ ಮಹಿಳೆಯೊಬ್ಬಳು ಬಟ್ಟೆ ಹಾಕಿ ಕೊಳ್ಳುವುದಕ್ಕೆ ಬೇಸರ ಎಂಬ ಕಾರಣಕ್ಕೆ ಮೈತುಂಬಾ ಹೂವಿನ ಹಚ್ಚೆ ಹಾಕಿಸಿಕೊಂಡಿರುವ ಸುದ್ದಿ ಸಿಕ್ಕಾಪಟ್ಟೆ ವೈ’ರಲ್ ಆಗಿತ್ತು. ಇನ್ನು ಈ ವಿಷಯದಲ್ಲಿ ಸೆಲಿಬ್ರೆಟಿಗಳೂ ಕಡಿಮೆ ಇಲ್ಲ. ತಮಗೆ ಇಷ್ಟವಾದ ರೀತಿಯಲ್ಲಿ ಇಷ್ಟವಾದ ಕಡೆ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ.

ಈ ವಿಷಯದಲ್ಲಿ ನಟಿ ಹರಿ ಪ್ರಿಯಾ ಕೂಡ ಹಿಂದೆ ಬಿದ್ದಿಲ್ಲ. ಹರಿಪ್ರಿಯಾ ಅವರು ಮತ್ಸ್ಯ ಕನ್ಯೆಯ ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈ’ರಲ್ ಆಗಿದೆ. ಇನ್ನು ಈ ಟ್ಯಾಟೂ ನೋಡಿದ ಹರಿಪ್ರಿಯಾ ಅವರ ಅಭಿಮಾನಿಗಳು ಸಕ್ಕತ್ತಾಗಿದೆ ಅಂತ ಕಮೆಂಟ್ ಮಾಡುತ್ತಿದ್ದಾರೆ. ನಟಿ ಹರಿಪ್ರಿಯಾ ಅವರ ಟ್ಯಾಟೂ ಹೇಗಿದೆ ಎಂಬುದನ್ನು ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

ಇದನ್ನೂ ಓದಿ >>>  ನನ್ನ ಋಣದಲ್ಲಿ ಇದ್ದಾಳೆ,ರಶ್ಮಿಕ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ರಕ್ಷಿತ್ ಶೆಟ್ಟಿ…ನೋಡಿ ಹೇಳಿದ್ದೇನು.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...