haripriya

ಹೆಣ್ಣಿಗೆ ಸೀರೆಯಾಕೆ ಚೆಂದ,ಹಾಡಿಗೆ ಮದುವೆಯ ನಂತರ ಕುಣಿದ ಬೆಣ್ಣೆಯಂತೆ ಹೊಳೆಯುವ ನಟಿ ಹರಿಪ್ರಿಯಾ! ಅಬ್ಬಾ ಹೇಗಿತ್ತು ಗೊತ್ತಾ ಡಾನ್ಸ್ ನೋಡಿ!!

Entertainment/ಮನರಂಜನೆ

ಚಂದನವನದ ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಪ್ರೀತಿಯನ್ನು ಗುಟ್ಟಾಗಿ ಕಾಪಾಡಿಕೊಂಡು ಬಂದಿದ್ದರು. ಆದರೆ ಕಳೆದ ವರ್ಷ ಗಾಂಧಿನಗರದ ತುಂಬೆಲ್ಲಾ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾರವರ ಸುದ್ದಿ ಹರಿದಾಡುತ್ತಿದ್ದಂತೆ ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡು ತಮ್ಮಿಬ್ಬರ ಸಂಬಂಧವನ್ನು ಅಧಿಕೃತಗೊಳಿಸಿದ್ದರು.

ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾರವರು ಜನವರಿ 26 ರಂದು ಸಾಂಸ್ಕೃತಿಕ ನಗರಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆಯಾದರು. ಈ ಜೋಡಿಯ ಮದುವೆಗೆ ಹ್ಯಾಟ್ರಿಕ್​​ ಹೀರೋ ಶಿವರಾಜ್ ಕುಮಾರ್​​ ಹಾಗೂ ಡಾಲಿ ಧನಂಜಯ್, ಅಮೃತಾ ಅಯ್ಯಂಗಾರ್ ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ, ಸತೀಶ್ ನೀನಾಸಂ ಸೇರಿದಂತೆ ಅನೇಕ ಕಲಾವಿದರು ಆಗಮಿಸಿದ್ದರು.

ಆದಾದ ಬಳಿಕ ಅಂದರೆ ಜನವರಿ 28 ರಂದು ಈ ಜೋಡಿಯ ರಿಸೆಪ್ಷನ್ ಬೆಂಗಳೂರಿನ ದಾಸನಪುರದ ಬಳಿಯ ಖಾಸಗಿ ರೆಸಾರ್ಟ್​ನಲ್ಲಿ ನಡೆಯಿತು. ಆರತಕ್ಷತೆ ಕಾರ್ಯಕ್ರಮಕ್ಕೆ ಗೋಲ್ಡನ್​ ಸ್ಟಾರ್​​ ಗಣೇಶ್​​​, ಅಮೂಲ್ಯ ದಂಪತಿ, ರಿಯಲ್ ಸ್ಟಾರ್ ಉಪೇಂದ್ರ ದಂಪತಿ, ಗಿರಿಜಾ ಲೋಕೇಶ್, ಮಾಲಾಶ್ರೀ, ಹಿರಿಯ ನಟ ರಮೇಶ್ ಅರವಿಂದ್, ಅವಿನಾಶ್ ಮಾಳವಿಕ‌ ದಂಪತಿ, ಶ್ರೀನಾಥ್ ದಂಪತಿ ಸೇರಿದಂತೆ ಅನೇಕ ಗಣ್ಯರು ಬಂದಿದ್ದರು.

ಸಿಂಹ ಪ್ರಿಯಾ ಜೋಡಿಯ ಮದುವೆ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಇನ್ನು ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಅದರಲ್ಲಿಯೂ ನಟಿ ಹರಿಪ್ರಿಯಾರವರ ಒಂದಲ್ಲ ಒಂದು ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ವಸಿಷ್ಠ ಹರಿಪ್ರಿಯಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ನಟಿ ಹರಿಪ್ರಿಯಾರವರು ಕ್ಯೂಟ್ ಆಗಿ ಡಾನ್ಸ್ ಮಾಡಿದ್ದಾರೆ.
ಕೆಂಪು ಬಣ್ಣದ ಸೀರೆಯುಟ್ಟಿರುವ ಹರಿಪ್ರಿಯಾ ಹೆಣ್ಣಿಗೆ ಸೀರೆ ಯಾಕೆ ಅಂದ ಎನ್ನುವ ಹಾಡಿಗೆ ಕ್ಯೂಟ್ ಆಗಿ ಡಾನ್ಸ್ ಮಾಡಿದ್ದಾರೆ. ನಟಿಯ ಈ ವಿಡಿಯೋಗೆ ಲೈಕ್ಸ್ ಹಾಗೂ ಕಾಮೆಂತಟ್ಸ್ ಗಳು ಹರಿದು ಬಂದಿದೆ. ವೈವಾಹಿಕ ಜೀವನಕ್ಕೆ ಕಾಲಿಟ್ಟು ಒಂದು ವಾರವಾದ ಹಿನ್ನಲೆಯಲ್ಲಿ ಈ ಜೋಡಿಯೂ ಆ ದಿನವನ್ನು ಆಚರಿಸಿಕೊಂಡಿದ್ದರು. ಹರಿಪ್ರಿಯಾಗಾಗಿ ವಸಿಷ್ಠ ವಿಶೇಷ ಅಡುಗೆಯನ್ನೂ ಮಾಡಿ ಉಣಬಡಿಸಿದ್ದರು.

ಮದುವೆಯಾಗಿ ವಾರವಾದ ಸಂತಸದಲ್ಲಿರುವ ಜೋಡಿ ತಮ್ಮದೇ ಆದ ರೀತಿಯಲ್ಲಿ ಈ ದಿನವನ್ನು ಆಚರಿಸಿಕೊಂಡಿದ್ದಾರೆ. ಹರಿಪ್ರಿಯಾಗಾಗಿ ವಸಿಷ್ಠ ವಿಶೇಷ ಅಡುಗೆಯನ್ನೂ ಮಾಡಿ ಉಣಬಡಿಸಿದ್ದಾರೆ. ಪತಿ ವಸಿಷ್ಠ ಅಡುಗೆ ಮಾಡುತ್ತಿರುವ ಫೋಟೋವನ್ನು ಹರಿಪ್ರಿಯಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.

“ಗಂಡನಿಗೆ ಅಡುಗೆ ಮಾಡುವುದು ಗೊತ್ತಿದ್ರೆ ನಿಮ್ಮ ಲೈಫ್‌ ಸೆಟ್‌ ಆದಂಗೇ” ಎಂದು ಬರೆದುಕೊಂಡಿದ್ದರು. ಅಷ್ಟೇ ಅಲ್ಲದೇ, “ನಮ್ಮ ಮದುವೆಯಾಗಿ ಒಂದು ವಾರ ಕಳೆದಿದ್ದನ್ನು ಹೀಗೆ ಆಚರಿಸುತ್ತಿದ್ದೇವೆ” ಎಂದೂ ಬರೆದಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣಗಳ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ನಾನಾ ರೀತಿಯ ಕಾಮೆಂಟ್ ಮಾಡಿದ್ದರು. ಸಿಂಹ ಪ್ರಿಯಾ ಜೋಡಿ ವೈಯುಕ್ತಿಕ ಬದುಕಿನ ಬಗ್ಗೆ ಒಂದಲ್ಲ ಒಂದು ಅಪ್ಡೇಟ್ ನೀಡುತ್ತಿರುತ್ತದೆ.

 

View this post on Instagram

 

A post shared by simhapriya (@vasishta_haripriya7)ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.