ಹರಿಪ್ರಿಯಾ

ಯುವತಿಯರ ಮೇಲೆ ನಡೆಯುತ್ತಿರುವ ರೇ-ಪ್ ಬಗ್ಗೆ,ಅತ್ಯಾಚಾರ ಆರೋಪ,ಹರಿಪ್ರಿಯಾ ಹೇಳಿದ್ದೇನು..? ವೀಡಿಯೊ ನೋಡಿ…

CINEMA/ಸಿನಿಮಾ

ಖ್ಯಾತ ನಟಿ ಹರಿಪ್ರಿಯಾ ಸೋದರನ ವಿರುದ್ಧ ಅತ್ಯಾಚಾರ ಆರೋಪ ; ನಟಿ ಸೋದರನೆಂದು ಪೋಸು ಕೊಟ್ಟು ಯುವತಿಗೆ ವಂಚನೆ, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ, ದೂರು

ಕನ್ನಡದ ಖ್ಯಾತ ನಟಿ ಹರಿಪ್ರಿಯಾ ಅವರ ಸೋದರ ಕೀರ್ತಿಚಂದ್ರ ಅಲಿಯಾಸ್ ವಿರಾಜ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಸಂತ್ರಸ್ತ ಯುವತಿ ಬಸವನಗುಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

 ಕನ್ನಡದ ಖ್ಯಾತ ನಟಿ ಹರಿಪ್ರಿಯಾ ಅವರ ಸೋದರ ಕೀರ್ತಿಚಂದ್ರ ಅಲಿಯಾಸ್ ವಿರಾಜ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಸಂತ್ರಸ್ತ ಯುವತಿ ಬಸವನಗುಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ತಾನು ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗದಲ್ಲಿರುವುದಾಗಿ ಹೇಳಿ ಯುವತಿಯನ್ನು ಆರೋಪಿ ನಂಬಿಸಿ ವಂಚಿಸಿದ್ದಾನೆ. ಕಂಪನಿ ಒಂದರಲ್ಲಿ ಉದ್ಯೋಗದಲ್ಲಿರುವ ಯುವತಿ ಶಾದಿ ಡಾಟ್ ಕಾಮ್ ನಲ್ಲಿ ತನ್ನ ಸ್ವವಿವರ ಹಾಕಿದ್ದು, ಸೂಕ್ತ ವರನಿಗಾಗಿ ಹುಡುಕಾಟ ನಡೆಸಿದ್ದಳು. ಈ ವೇಳೆ, ವಿರಾಜ್ ತನ್ನ ವಿವರ ಹೇಳಿಕೊಂಡು ಕನೆಕ್ಟ್ ಆಗಿದ್ದಾನೆ. ತನ್ನ ತಂಗಿ ಫೇಮಸ್ ನಟಿಯೆಂದು ಹೇಳಿಕೊಂಡು ಪೋಸು ಕೊಟ್ಟಿದ್ದಲ್ಲದೆ, ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಸ್ನೇಹ ಬೆಳೆಸಿದ್ದಾನೆ.

2021ರ ಮೇ ತಿಂಗಳಲ್ಲಿ ವಿರಾಜ್ ಈ ರೀತಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಸ್ನೇಹ ಬೆಳೆಸಿದ್ದ. ಬಳಿಕ ಚಾಟಿಂಗ್ ಆರಂಭಿಸಿದ್ದಲ್ಲದೆ ಮದುವೆ ಬಗ್ಗೆ ಎರಡೂ ಮನೆಯವರಲ್ಲಿ ಮಾತುಕತೆ ನಡೆದಿತ್ತು. ಈ ನಡುವೆ, ಆರೋಪಿ ವಿರಾಜ್ ಬರ್ತ್ ಡೇಗೆ ಯುವತಿಯೇ ಐಫೋನ್, ಲ್ಯಾಪ್ಟಾಪ್ ಖರೀದಿಸಿ ಗಿಫ್ಟ್ ನೀಡಿದ್ದಳು. ಆನಂತರ ಜನವರಿ 18ರಂದು ಜಯನಗರದ ಖಾಸಗಿ ಹೊಟೇಲ್ ಗೆ ವಿರಾಜ್ ಬರಹೇಳಿದ್ದು, ಅಲ್ಲಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದಾನೆ. ಆಬಳಿಕ ಫೋನ್ ಸಂಪರ್ಕ ಕಡಿತ ಮಾಡಿಕೊಂಡು ಮೋಸ ಮಾಡಿದ್ದಾನೆ. ಕರೆ ಮಾಡಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಬಗ್ಗೆ ಯುವತಿ ಬಸವನಗುಡಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಟಿ ಸೋದರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾಳೆ.

Haripriya Looking Gorgeous In Salwar Suit. | Actress priyanka, Bollywood gossip, Bikini images

ಆರೋಪಿ ವಿರಾಜ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಆತನನ್ನು ಬಂಧಿಸದೆ ವಿಳಂಬ ಧೋರಣೆ ತೋರುತ್ತಿದ್ದಾರೆಂದು ಆರೋಪ ಕೇಳಿಬಂದಿದೆ. ಹೀಗಾಗಿ ಆರೋಪಿ ನಿರೀಕ್ಷಣಾ ಜಾಮೀನು ಪಡೆಯಲು ಯತ್ನಿಸುತ್ತಿದ್ದಾನೆ ಎನ್ನಲಾಗುತ್ತಿದೆನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...