ಹೌದು ನಮ್ಮ ಸ್ಯಾಂಡಲ್ವುಡ್ನ, ಮೋಸ್ಟ್ ಬ್ಯೂಟಿಫುಲ್ ನಟಿಯಾದ, ಹರಿಪ್ರಿಯಾ ಅವರು ಯಾರಿಗೆ ಗೊತ್ತಿಲ್ಲ ಹೇಳಿ, ನಟಿ ಹರಿಪ್ರಿಯಾ ಅವರು ಉಗ್ರಂ ಸಿನಿಮಾದಲ್ಲಿ ಶ್ರೀಮುರುಳಿ ಅವರ ಜೊತೆ ಮೊದಲಬಾರಿ ತೆರೆ ಹಂಚಿಕೊಂಡಿದ್ದು, ಅಂದೆ ಎಲ್ಲಾ ಕನ್ನಡಿಗರ ಮನಸಲ್ಲಿ ಉಳಿದುಬಿಟ್ಟರು. ತದನಂತರ ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ಕನ್ನಡಿಗರ ಮನೆಮಾತಾಗಿ ಹೊರಹೊಮ್ಮಿದರು.
ಜೊತೆಗೆ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದರು. ಮತ್ತು ನಟಿ ಹರಿಪ್ರಿಯಾರವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಸಹ ಇರುತ್ತಾರೆ, ಇದರ ಜೊತೆಗೆ ನಟಿ ಹರಿಪ್ರಿಯಾ, ಉಗ್ರಂ ಸಿನಿಮಾದ ತದನಂತರ, ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾ ಬಂದಿದ್ದು, ಸದ್ಯ ಕನ್ನಡ ಸಿನಿಮಾರಂಗದಲ್ಲಿ ಹೆಚ್ಚು ಬೇಡಿಕೆ ಇರುವ ನಟಿಯರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ. ನಟಿ ಹರಿಪ್ರಿಯ ಅವರ ‘ನೀರ್ ದೋಸೆ’ ಸಿನಿಮಾವನ್ನು ಎಲ್ಲರೂ ನೋಡುತ್ತಿರುತ್ತೀರಿಅಂದಹಾಗೆ, ನಟಿ ಹರಿಪ್ರಿಯಾ ಅವರು ಈ ಸಿನಿಮಾದ ಒಂದು ಹಾಡಿನಲ್ಲಿ ಸಕ್ಕತ್ತಾಗಿ ಬೆಲ್ಲಿ ಡ್ಯಾನ್ಸ್ ಮಾಡಿದ್ದರು.

ಹಾಗಾಗಿ ಈ ಡ್ಯಾನ್ಸ್ ಆಗಿನ ಸಮಯದಲ್ಲಿ ಹೆಚ್ಚು ವೈರಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಧೂಳೆಬ್ಬಿಸಿತ್ತು. ಹೌದು ನೀವು ಕೂಡ ನಟಿ ಹರಿಪ್ರಿಯಾ ಅವರ ಈ ಬೆಲ್ಲಿ ಡ್ಯಾನ್ಸ್ ವಿಡಿಯೋವನ್ನು ನೋಡದಿದ್ದಲ್ಲಿ, ಒಂದು ಬಾರಿ ನೋಡಿ. ಬಳಿಕ ವಿಡಿಯೋ ಮತ್ತು ಹರಿಪ್ರಿಯಾ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ. ಜೊತೆಗೆ ಇಲ್ಲಿರುವ ವಿಡಿಯೋ ಇಷ್ಟವಾದರೆ ಶೇರ್ ಮಾಡಿ ಧನ್ಯವಾದಗಳು.
ನೀರ್ ದೋಸೆ ಬೆಡಗಿ ನಟಿ ಹರಿಪ್ರಿಯಾ ತನ್ನ ನೆಚ್ಚಿನ ನಾಯಿಯನ್ನ ಕಳೆದು ಕೊಂಡ ದುಃಖದಲ್ಲಿದ್ದಾರೆ. ಕಳೆದ ಎಂಟೂವರೆ ವರ್ಷದಿಂದ ಹರಿಪ್ರಿಯ ಅವರ ಮನೆ ಕುಟುಂಬದಲ್ಲೊಬ್ಬ ಪ್ರೀತಿಯ ಸದಸ್ಯನಂತೆ ಇದ್ದ ಲಕ್ಕಿ ಹೆಸರಿನ ಶ್ವಾನ ಇಂದು ನಿಧನವಾಗಿದೆ.

ಈ ಬಗ್ಗೆ ಸಂತಾಪ ಸೂಚಕವಾಗಿ, ಲಕ್ಕಿಯೊಂದಿಗೆ ಕಳೆದಿದ್ದ ಹಲವು ಸಂತೋಷದ ಕ್ಷಣಗಳ ಫೋಟೋಗಳನ್ನು ಹರಿಪ್ರಿಯ ಹಂಚಿಕೊಂಡಿದ್ದಾರೆ. “ನನ್ನ ಅದೃಷ್ಟ, ನನ್ನ ಮೊದಲು ಮಗು, ನನ್ನ ಕುಟುಂಬ.. ಅವನು ನಮ್ಮ ಜೀವನದ ಅವಿಭಾಜ್ಯ ಅಂಗ. 8.5 ವರ್ಷಗಳ ಕಾಲ ನಮ್ಮೊಂದಿಗಿದ್ದು ಅದ್ಭುತ ನೆನಪುಗಳನ್ನು ನೀಡಿದ್ದಾನೆ. ನಾನು ಯಾವಾಗಲೂ ಅವನೊಂದಿಗಿದ್ದಾಗ ತುಂಬಾ ಸುರಕ್ಷಿತವಾಗಿದ್ದಂತೆ ಅನಿಸುತ್ತಿತ್ತು. ನಾವಿಬ್ಬರು ಒಟ್ಟಿಗೆ ಆಡಿದ್ದೇವೆ, ಪ್ರಯಾಣಿಸಿದ್ದೇವ, ಪರಸ್ಪರ ಕಿರಿಕಿರಿ ಮಾಡಿಕೊಂಡಿದ್ದೇವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನ್ನ ಜೀವನದಲ್ಲಿ ಅವನಿರಲು ನಾನು ಪುಣ್ಯ ಮಾಡಿದ್ದೆ. ನೀನು ಎಲ್ಲೇ ಹೋದರೂ ಒಳ್ಳೆಯ ಹುಡುಗನೇ.. ಮುಂದಿನ ಜನ್ಮದಲ್ಲಿ ನೀನು ನನ್ನನ್ನು ಗುರುತಿಸಿದರೆ ನನ್ನೊಂದಿಗೆ ಮಾತನಾಡು. ನನಗೆ ಹತ್ತಿರಲ್ಲೇ ನೀನು ಮತ್ತೆ ಹುಟ್ಟುತ್ತೀಯ ಎನ್ನುವ ನಂಬಿಕೆ ನನಗಿದೆ. ನಿನಗೆ ಅಂತಿಮವಾಗಿ ಬೈ ಹೇಳಲು ಸಾಕಷ್ಟು ನೋವಾಗುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ
Lucky, a wonderful soul, my first baby, my family.. He was an integral part of our lives. He spent his amazing 8.5 years with us and gave us only joy and beautiful memories. I always felt secure with him.. we played together, travelled together and annoyed each other… 1/2 pic.twitter.com/mJurOU0SBw
— HariPrriya (@HariPrriya6) June 30, 2021