ನಟಿ ಹರಿಪ್ರಿಯಾ ಹಾಗೂ ಸತೀಶ್ ನೀನಾಸಂ ಜೋಡಿಯ ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಮಾತಿನಿಂದಲೇ ಕಿಕ್ ಕೊಡುತ್ತಿರುವ ಟ್ರೈಲರ್ ನೋಡಿದ ಸಿನಿ ಪ್ರಿಯರು ಚಿತ್ರ ನೋಡಲು ಸಜ್ಜಾಗಿದ್ದಾರೆ. ಚಿತ್ರದಲ್ಲಿ ನೀನಾಸಂ ಸತೀಶ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ವಿಜಯ್ ಪ್ರಸಾದ್ ಅವರು ಸಿನಿಮಾ ನಿರ್ದೇಶಿಸಿದ್ದಾರೆ. ನಟಿ ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿದ್ದು, ಮುಂದಿನ ವಾರ ಅಂದರೆ ಜುಲೈ ೧೫ರಂದು ಚಿತ್ರ ರಿಲೀಸ್ ಆಗಲಿದೆ.
ನೀರ್ ದೋಸೆ ಚಿತ್ರದ ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ಹರಿಪ್ರಿಯಾ ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ಮತ್ತೆ ಒಟ್ಟಿಗೆ ಕೆಲಸ ಮಾಡಿದ್ದಾರೆ. ನೀರ್ ದೊಸೆ ಚಿತ್ರದಲ್ಲಿ ಪಟಾಕಿ ಹೊಡೆದಂತೆಯೇ ಈ ಚಿತ್ರವೂ ಇರಲಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಚಿತ್ರದಲ್ಲಿ ಹರಿಪ್ರಿಯಾ ಹಾಗೂ ನೀನಾಸಂ ಸತೀಶ್ ಜೊತೆಗೆ ನಾಗಭೂಷಣ್, ಅರುಣ್, ಕಾರುಣ್ಯ ರಾಮ್, ವಿಜಯ್‌ಲಕ್ಷ್ಮಿ ಸಿಂಗ್, ಸುಮನ್ ರಂಗನಾಥ್, ಭುವಿ ತೆರೆ ಹಂಚಿಕೊಂಡಿದ್ದಾರೆಈ ಸಿನಿಮಾಗೆ ಸಂಗೀತ ನಿರ್ದೇಶನವನ್ನು ಅನೂಪ್ ಸೀಳಿನ್ ಮಾಡಿದ್ದಾರೆ. ಛಾಯಾಗ್ರಹಣವನ್ನು ನಿರಂಜನ್ ಬಾಬು ನಿರ್ವಹಿಸಿದ್ದು, ಸುರೇಶ್ ಅರಸ್ ಅವರ ಸಂಕಲನ ಈ ಚಿತ್ರಕ್ಕಿದೆ. ಕಳೆದ ವರ್ಷವೇ ಚಿತ್ರ ರಿಲೀಸ್ ಆಗಬೇಕಿತ್ತು.
ಆದರೆ, ಕೊರೊನಾ ಕಾರಣದಿಂದಾಗಿ ಮುಂದೂಡಲಾಗಿತ್ತು. ಇನ್ನು ಪೆಟ್ರೋಮ್ಯಾಕ್ಸ್ ಚಿತ್ರ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಟ್ರೈಲರ್ ನೋಡಿದವರೆಲ್ಲಾ ಚಿತ್ರ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇನ್ನು ವಿಜಯ್ ಪ್ರಸಾದ್ ಪೆಟ್ರೋಮ್ಯಾಕ್ಸ್ ಜೊತೆಗೆ ಜಗ್ಗೇಶ್ ಅಭಿನಯದ ತೋತಾಪುರಿ ಹಾಗೂ ಪರಿಮಳ ಲಾಡ್ಜ್ ಸಿನಿಮಾಗಳ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ವಿಜಯ್ ಪ್ರಸಾದ್ ಅವರ ಸಿನಿಮಾಗಳು ರಿಲೀಸ್ ಆಗಲು ಕಾದು ಕುಳಿತಿವೆ