ಭಕ್ತರ ಹರಕೆಯನ್ನು ಹೆಡೇರಿಸುವ ಹರಕೆ ಹನುಮ,ಈ ದೇವಾಲಯ ಎಲ್ಲಿದೆ ಗೊತ್ತೇ?

Today News / ಕನ್ನಡ ಸುದ್ದಿಗಳು

ರಾಮಭಕ್ತ ಹನುಮನ ಮಹಿಮೆ ಅಪಾರ, ಹನುಮ ಸ್ತೋತ್ರವನ್ನು ಪಠಿಸುವುದರಿಂದ ಧೈರ್ಯ ಬರುತ್ತದೆ. ಹಲವು ಕಡೆ ಹನುಮ ದೇವಾಲಯವನ್ನು ಕಾಣುತ್ತೇವೆ ಅದರಂತೆ ಬೆಂಗಳೂರಿನ ಹರಕೆ ಹನುಮ ದೇವಾಲಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಭೂಮಿಯ ಮೇಲೆ ರಾಮನಾಮ ಇರುವವರೆಗೆ ಚಿರಂಜೀವಿ ಆಗಿರುವ ಹನುಮಂತನು ದ್ವಾಪರಾಯುಗ, ತ್ರೇತಾಯುಗ ಹಾಗೂ ಕಲಿಯುಗದಲ್ಲಿ ತಮ್ಮ ಮಹಿಮೆಯನ್ನು ತೋರುತ್ತಿದ್ದಾರೆ. ಕಲಿಯುಗದಲ್ಲಿ ಹಲವಾರು ಹನುಮ ದೇವಸ್ಥಾನಗಳು ನಿರ್ಮಾಣಗೊಂಡಿವೆ ಅವುಗಳಲ್ಲಿ ಬೆಂಗಳೂರಿನ ಬನಶಂಕರಿಯ ಮೂರನೇ ಹಂತದ ಐಟಿಐ ಬಡಾವಣೆಯಲ್ಲಿರುವ ಹರಕೆ ಹನುಮ ದೇವಾಲಯವು ಪ್ರಮುಖವಾಗಿದೆ . ಭಕ್ತಾದಿಗಳು ತಮ್ಮ ಕೋರಿಕೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ದೇವರ ಮುಂದೆ ಮಾಡುವ ಸಂಕಲ್ಪವನ್ನು ಹರಕೆ ಎನ್ನುವರು. ಈ ಹನುಮ ದೇವಾಲಯದಲ್ಲಿ ಹರಕೆಯನ್ನು ಹೊತ್ತು ಸಂಕಲ್ಪಿಸಿಕೊಂಡ ಕಾರ್ಯವನ್ನು ಶ್ರೀ ಆಂಜನೇಯ ಸ್ವಾಮಿ 5-7 ವಾರಗಳಲ್ಲಿ ನೆರವೇರಿಸುತ್ತಾರೆ.

ಭಕ್ತರ ಹರಕೆಯನ್ನು ಈಡೇರಿಸಿರುವುದರಿಂದ ಹರಕೆ ಹನುಮ ದೇವಾಲಯ ಎಂದು ಹೆಸರು ಬಂದಿತು. ಬಾಲ ಹನುಮನೆಂದು ಸ್ಥಾಪನೆಗೊಂಡು ಹರಕೆ ಹನುಮನೆಂದು ಹೆಸರುವಾಸಿಯಾದನು. ಐಟಿಐ ನೌಕರರ ಶ್ರೇಯೋಭಿವೃದ್ಧಿಗಾಗಿ ಬೆಂಗಳೂರಿನ ಕತ್ರಗುಪ್ಪೆಯಲ್ಲಿ ಐಟಿಐ ಬಡಾವಣೆಯನ್ನು ನಿರ್ಮಿಸಲಾಗಿದೆ.

Hanuman Temples in Bangalore That You Must Visit

ಈ ಬಡಾವಣೆಯಲ್ಲಿ ವಾಸವಿದ್ದವರು ಒಂದು ದೇವಾಲಯ ನಿರ್ಮಾಣ ಮಾಡಬೇಕೆಂದು ನಿರ್ಧರಿಸಿದರು ಅದರಂತೆ ಗುಡ್ಡದ ಮೇಲೆ ಬಾಲ ಆಂಜನೇಯ ಸ್ವಾಮಿ ಗುಡಿಯನ್ನು ನಿರ್ಮಿಸಿದರು. ಆಗ ಅಲ್ಲಿಯ ನಿವಾಸಿಗಳು ತಮ್ಮ ಕಷ್ಟವನ್ನು ನಿವಾರಿಸುವಂತೆ ಹರಕೆ ಹೇಳಿಕೊಳ್ಳುತ್ತಿದ್ದರು ಅದರಂತೆ 5-7 ವಾರದಲ್ಲಿ ನಿವಾರಣೆಯಾಗುತ್ತಿತ್ತು.

ನಂತರದ ದಿನಗಳಲ್ಲಿ ದೊಡ್ಡ ಎದುರುಮುಖದ ಹನುಮ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಇಲ್ಲಿ ಹರಕೆಯನ್ನು ತೀರಿಸಿಕೊಳ್ಳಲು ಕಟ್ಟುಪಾಡುಗಳಿಲ್ಲ. ಬಹಳಷ್ಟು ಭಕ್ತರು ದೇವಾಲಯಕ್ಕೆ ಬಂದು ದರ್ಶನ ಪಡೆದು, ಕಷ್ಟಗಳನ್ನು ನಿವಾರಣೆ ಮಾಡಬೇಕೆಂದು ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಭಕ್ತರು ತಮ್ಮ ಇಷ್ಟಾರ್ಥ ನೆರವೇರಿದ ನಂತರ ವೀಳ್ಯದೆಲೆ, ಬೆಣ್ಣೆ ಅಲಂಕಾರ, ಸಿಂಧೂರ ಅಲಂಕಾರ ಮಾಡುವ ಮೂಲಕ ತಮ್ಮ ಹರಕೆಯನ್ನು ಈಡೇರಿಸುತ್ತಾರೆ. ಹೀಗೆ ಈ ದೇವಾಲಯದಲ್ಲಿ ಪ್ರತಿ ದಿನವು ಒಂದಲ್ಲ ಒಂದು ಅಲಂಕಾರ ನಡೆಯುತ್ತದೆ. ಈ ದೇವಾಲಯದ ಹತ್ತಿರ ಒಂದು ಭವನವಿದ್ದು ಅಲ್ಲಿ ನಾಮಕರಣ, ಸೀಮಂತ, ಹುಟ್ಟುಹಬ್ಬ ಮೊದಲಾದ ಆಚರಣೆಯನ್ನು ನಡೆಸುತ್ತಾರೆ. ಒಟ್ಟಿನಲ್ಲಿ ಹರಕೆ ಹನುಮ ನಮ್ಮೆಲ್ಲರಿಗೂ ಆಶೀರ್ವಾದ ಮಾಡಲಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.