Hanuman-alive

ಆಂಜನೇಯಸ್ವಾಮಿ ಈಗಲೂ ಜೀವಂತವಾಗಿದ್ದಾನೆ ಎಂಬುದಕ್ಕೆ ಇಲ್ಲಿವೆ ಹತ್ತು ಸಾಕ್ಷಿಗಳು!

Entertainment/ಮನರಂಜನೆ

ವೈಷ್ಣವರು ವಿಷ್ಣುವನ್ನು ಪೂಜೆ ಮಾಡಿದರೆ ಶೈವರು ಶಿವನನ್ನು ಪೂಜೆ ಮಾಡುತ್ತಾರೆ, ಆದರೆ ಹಿಂದೂಧರ್ಮದಲ್ಲಿ ಎಲ್ಲರೂ ಕೂಡ ಪೂಜಿಸುವಂತಹ ಮಹಾನ್ ಶಕ್ತಿ ಅಂದರೆ ಆಂಜನೇಯಸ್ವಾಮಿ. ಈತನ ಶಕ್ತಿ ಸಾಮರ್ಥ್ಯದ ಬಗ್ಗೆ ನಾವು ಹಲವಾರು ಪುಸ್ತಕಗಳಲ್ಲಿ ಹಾಗೂ ಹಲವಾರು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಕೇಳಿದ್ದೇವೆ. ಇಂದು ನಾವು ಹೇಳುವಂತಹ ಈ ಸಂಗತಿಯನ್ನು ಕೇಳಿದರೆ ನಿಮಗೆ ನಿಜಕ್ಕೂ ಕೂಡ ಆಶ್ಚರ್ಯ ಅಂತ ಅನಿಸಬಹುದು. ಹೌದು ನಿಮಗೆ ಶ್ರೀರಾಮನ ಅಂತ್ಯದ ಬಗ್ಗೆ ತಿಳಿದಿದೆ, ಅಷ್ಟೇ ಅಲ್ಲದೆ ಶ್ರೀಕೃಷ್ಣನ ಅಂತ್ಯದ ಬಗ್ಗೆಯೂ ಕೂಡ ಹಲವಾರು ಪುರಾಣಗಳು ಇರುವುದನ್ನು ನಾವು ನೋಡಬಹುದು.

ಇಷ್ಟೇ ಅಲ್ಲದೆ ನರಸಿಂಹನ ಅವತಾರದ ಬಗ್ಗೆಯೂ ಕೂಡ ನಮಗೆ ಮಾಹಿತಿ ಸಿಕ್ಕಿದೆ, ಆದರೆ ಎಲ್ಲಿಯೂ ಕೂಡ ಹನುಮಂತನ ಅಂತ್ಯ ಆಗಿರುವುದರ ಬಗ್ಗೆ ನಮಗೆ ಮಾಹಿತಿ ತಿಳಿದಿಲ್ಲ. ಹಾಗೊಂದು ವೇಳೆ ನಿಮಗೆ ಮಾರುತಿಯ ಅಂತ್ಯದ ಬಗ್ಗೆ ಏನಾದರೂ ಮಾಹಿತಿ ಸಿಕ್ಕಿತು ಅಂದರೆ ಅದು ನಿಜಕ್ಕೂ ನೂರಕ್ಕೆ ನೂರು ಸುಳ್ಳು ಅಂತಾನೇ ಹೇಳಬಹುದು. ಏಕೆಂದರೆ ಆಂಜನೇಯಸ್ವಾಮಿ ಚಿರಂಜೀವಿ, ಆತ ಅಮರತ್ವವನ್ನು ಹೊಂದಿರುತ್ತಾನೆ.

ಹನುಮಂತ ಸಪ್ತ ಚಿರಂಜೀವಿಗಳಲ್ಲಿ ಒಬ್ಬನು, ಅಷ್ಟೇ ಅಲ್ಲದೆ ಈತ ಬ್ರಹ್ಮಚರ್ಯವನ್ನು ಪಾಲಿಸಿದಂತಹ ವ್ಯಕ್ತಿ. ಅತೀವ ಶಕ್ತಿ ಉಳ್ಳಂತಹ ಮತ್ತು ಜ್ಞಾನವನ್ನು ಉಳ್ಳಂತಹ ಮತ್ತು ವಿದ್ಯೆಯನ್ನು ಉಳ್ಳಂತಹ ದೇವತೆ ಅಂತಾನೆ ಪ್ರಸಿದ್ಧಿ ಪಡೆದಿದ್ದಾನೆ. ಆಂಜನೇಯಸ್ವಾಮಿ ಅಮರತ್ವಕೆ ಹೆಸರು ಪಡೆದಂತಹ ವ್ಯಕ್ತಿ, ಅಷ್ಟೇ ಅಲ್ಲದೆ ಶಿವನಿಂದ ಚಿರಂಜೀವಿ ಎಂಬ ವರವನ್ನು ಕೂಡ ಪಡೆದಂತಹ ವ್ಯಕ್ತಿ. ಈ ಕಾರಣಕ್ಕಾಗಿ ಆಂಜನೇಯಸ್ವಾಮಿ ಈಗಲೂ ಕೂಡ ಈ ಭೂಮಿ ಮೇಲೆ ಇದ್ದಾನೆ ಎಂಬುದು ಭಕ್ತಾದಿಗಳ ನಂಬಿಕೆಯಾಗಿದೆ.

ಇದಕ್ಕೆ ಸಂಬಂಧಪಟ್ಟಂತಹ ಹಲವಾರು ಸಾಕ್ಷಿಗಳು ಮತ್ತು ಪುರಾವೆಗಳು ನಮ್ಮ ಭೂಮಿಯ ಮೇಲೆ ಈಗಲೂ ಕೂಡ ಇರುವುದನ್ನು ನಾವು ನೋಡಬಹುದಾಗಿದೆ. ಕೆಲವೊಮ್ಮೆ ಆಂಜನೇಯಸ್ವಾಮಿ ಪರ್ವತಗಳ ಶಿಖರದಲ್ಲಿ ಕಾಣಿಸಿಕೊಂಡರೆ, ಇನ್ನು ಕೆಲವೊಮ್ಮೆ ಸಮುದ್ರದ ತಪ್ಪಲಿನಲ್ಲಿ ಕಾಣಿಸುವುದನ್ನು ನಾವು ನೋಡಬಹುದಾಗಿದೆ. ರಾಮೇಶ್ವರಂನಲ್ಲಿ ಹನುಮಂತನು ಕಾಣಿಸಿಕೊಂಡಿದ್ದಾನೆ ಎಂಬ ಪುರಾವೆಗಳು ಬಹಳಷ್ಟು ಇದೆ, ಅಷ್ಟೇ ಅಲ್ಲದೆ ಇದನ್ನು ಕಣ್ಣಾರೆ ಕಂಡಂತಹ ಅದೆಷ್ಟೋ ಮಹನಿಯರು ಇದರ ಬಗ್ಗೆ ಬರೆದಿದ್ದಾರೆ.

ಅಂತಹ ಘಟನೆಯನ್ನು ಕಣ್ಣಾರೆ ಕಂಡಂತಹ ವ್ಯಕ್ತಿಗಳು ಯಾರು ಎಂಬುವುದನ್ನು ನೋಡುವುದಾದರೆ. 13ನೇ ಶತಮಾನದಲ್ಲಿ ಮಧ್ವಾಚಾರ್ಯರು ರಾಮೇಶ್ವರಂ ಸಮುದ್ರ ಮಾರ್ಗದಲ್ಲಿ ಹನುಮಂತನ ದರ್ಶನವನ್ನು ಪಡೆಯುತ್ತಾರೆ. ಈ ರೀತಿಯಾಗಿ 16ನೇ ಶತಮಾನದಲ್ಲಿ ತುಳಸೀದಾಸರು ಹನುಮಂತನ ದರ್ಶನವನ್ನು ಪಡೆದಂತಹ ದಿವ್ಯ ಮನುಷ್ಯರು ಅಂತ ಹೇಳಬಹುದು.

ಮಧ್ವಾಚಾರ್ಯರು ಮತ್ತು ತುಳಸೀದಾಸರು ಹನುಮಂತನನ್ನು ದರ್ಶನ ಮಾಡಿದ ನಂತರ ಅವುಗಳನ್ನು ತಮ್ಮ ಗ್ರಂಥಗಳಲ್ಲಿ ಬರೆದಿರುವುದನ್ನು ನಾವು ಈಗಲೂ ಕೂಡ ನೋಡಬಹುದಾಗಿದೆ. ವಿಶೇಷ ಏನೆಂದರೆ ಆಂಜನೇಯ ಸ್ವಾಮಿಯ ದರ್ಶನವನ್ನು ಕೇವಲ ಒಂದೇ ಒಂದು ಮಂತ್ರವನ್ನು ಪಠಿಸುವುದರಿಂದ ನಮಗೆ ಸ್ವಾಮಿ ದಿವ್ಯದರ್ಶನವನ್ನು ನೀಡುತ್ತಾನೆ ಎಂಬ ಉಲ್ಲೇಖವಿದೆ. ಅದೆಷ್ಟೋ ಭಕ್ತರಿಗೆ ಹನುಮಂತ ಸಾಕಷ್ಟು ಬಾರಿ ತನ್ನ ಭಕ್ತರ ಎದರು ಪ್ರತ್ಯಕ್ಷ ಆಗಿರುವಂತಹ ಪುರಾವೆಗಳು ಕೂಡ ಭಾರತದಲ್ಲಿವೆ.

ಕೇವಲ ನೀವು ಮಂತ್ರ ಪಟನೆ ಮಾಡುವುದರಿಂದ ಆಂಜನೇಯಸ್ವಾಮಿಯ ದರ್ಶನವಾಗುವುದಿಲ್ಲ, ಇದರ ಜೊತೆಗೆ ನೀವು ಆಂಜನೇಯಸ್ವಾಮಿಯ ಆತ್ಮದ ಜೊತೆ ಸಂವಾದವನ್ನು ನಡೆಸಬೇಕಾಗುತ್ತದೆ. ಆ ಸಂವಾದ ಯಾವುದು ಯಾವ ರೀತಿಯಾಗಿ ನಾವು ಹನುಮಾನ ದರ್ಶನವನ್ನು ಪಡೆಯಬಹುದು, ಇದಕ್ಕೆ ಪಠಿಸಬೇಕಾದಂತಹ ಮಂತ್ರವಾದರೂ ಯಾವುದು, ಇದರ ಬಗ್ಗೆ ರೋಚಕ ಮಾಹಿತಿ ವಿಡಿಯೊದಲ್ಲಿದೆ.

ಆ ವಿಡಿಯೊ ಕೆಳಗಿದೆ ನೋಡಿ…

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.