ಸಿನಿಮಾ ನಟಿಯರು ಮದುವೆ ವಿಚಾರದಲ್ಲಿ ತಡ ಮಾಡುತ್ತಿಲ್ಲ. ಕೆಲವರು ಕೆರಿಯರ್ ಪೀಕ್ ನಲ್ಲಿ ಇದ್ದಾಗಲೇ, ಸಿನಿಮಾ ಅವಕಾಶಗಳು ಇದ್ದರು ಕೂಡ ಮದುವೆ ಆಗುತ್ತಿದ್ದಾರೆ. ಇನ್ನು ಕೆಲವರು ಒಳ್ಳೆಯ ಅವಕಾಶಗಳು ಸಿಗದೆ ಮದುವೆ ಆಗಲು ಒಪ್ಪಿಗೆ ಕೊಡುತ್ತಿದ್ದಾರೆ. ಖ್ಯಾತ ನಟಿ ಹನ್ಸಿಕಾ ಅವರು ಕೂಡ ಇದೇ ರೀತಿ ಇಷ್ಟ ಆಗುವಂತ ಅವಕಾಶಗಳು ಸಿಗದೆ, ಮದುವೆ ಆಗುವ ಮನಸ್ಸು ಮಾಡಿದ್ದಾರೆ. ಹನ್ಸಿಕಾ (Hansika) ಅವರು ಕನ್ನಡ ಚಿತ್ರರಂಗಕ್ಕೆ ಬಿಂದಾಸ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು, ನಂತರ ದೇಶಮುದುರು (Deshamuduru) ಸಿನಿಮಾ ಮೂಲಕ ತೆಲುಗಿಗೆ ಹೋದರು, ಆಗ ಹನ್ಸಿಕಾ ಅವರಿಗೆ ಕೇವಲ 16 ವರ್ಷ. ಪೂರಿ ಜಗನ್ನಾಥ್ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದರು.
ಮೊದಲ ತೆಲುಗು ಸಿನಿಮಾ ಹಿಟ್ ಆದ ನಂತರ ತೆಲುಗಿನಲ್ಲಿ ಹನ್ಸಿಕಾ ಅವರಿಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು, ತೆಲುಗು ಸ್ಟಾರ್ ನಟರೊಡನೆ ತೆರೆಹಂಚಿಕೊಂಡು, ಸಿನಿಮಾಗಳು ಹಿಟ್ ಆದ ನಂತರ ಹನ್ಸಿಕಾ ಅವರಿಗೆ ತಮಿಳು ಚಿತ್ರರಂಗದಲ್ಲಿ ಅವಕಾಶಗಳು ಬರಲು ಶುರುವಾದವು. ತಮಿಳಿನಲ್ಲೂ ಕೂಡ ಬಹುತೇಕ ಎಲ್ಲಾ ಸ್ಟಾರ್ ಕಲಾವಿದರ ಜೊತೆಗೆ ಹನ್ಸಿಕಾ ತೆರೆಹಂಚಿಕೊಂಡರು. ತಮಿಳಿನಲ್ಲಿ ನಾಯಕಿಯರು ಸ್ವಲ್ಪ ಗುಂಡಗೆ ಇದ್ದರೆ ಇಷ್ಟಪಡುತ್ತಿದ್ದರು, ಆದರೆ ಈಗ ಹೀರೋಗಳ ಗತಿ ಏನು ಎಂದು ಅಭಿಮಾನಿಗಳು ಯೋಚನೆ ಮಾಡುತ್ತಾರೆ. ಇದನ್ನು ಓದಿ..

ಅಭಿಮಾನಿಗಳು ಮತ್ತು ಹೀರೋಗಳಿಗೆ ಏನಾಗುತ್ತದೆ ಎಂದು ನೆಟಿಜನ್‌ಗಳು ವಿವಿಧ ಕಾಮೆಂಟ್‌ಗಳನ್ನು ಮಾಡುತ್ತಿರುವುದಕ್ಕೆ ಕಾರಣ ಹನ್ಸಿಕಾ ಮದುವೆಯಾಗುತ್ತಿರುವ ವಿಚಾರ ಆಗಿದೆ. ತಮಿಳಿನಲ್ಲಿ ಹನ್ಸಿಕಾಅವರು ಸಿಂಬು ಮತ್ತು ಸಿದ್ಧಾರ್ಥ್ ಅವರಂತಹ ನಟರಿಗೆ ಜೋಡಿಯಾದರು. ಅಷ್ಟೇ ಅಲ್ಲದೆ ಹನ್ಸಿಕಾ ಅವರಿಗೆ ಬಾಲಿವುಡ್ ನಲ್ಲಿ ಸಹ ಒಳ್ಳೆಯ ಫ್ಯಾನ್ ಬೇಸ್ ಇದೆ. ಈ ನಟಿ ಮದುವೆಯಾದರೆ ಈ ಹೀರೋಗಳ ಗತಿಯೇನು ಎಂದು ಚರ್ಚಿಸುತ್ತಿದ್ದಾರೆ. ತಮ್ಮ ಮೆಚ್ಚಿನ ನಟಿ ಮದುವೆಯಾಗಿ ಸಿನಿಮಾಗಳಿಂದ ದೂರ ಉಳಿದರೆ ಸಹಿಸುವುದು ಕಷ್ಟ ಎನ್ನುತ್ತಾರೆ ಅಭಿಮಾನಿಗಳು. ಶೀಘ್ರದಲ್ಲೇ ಹನ್ಸಿಕಾ ಮದುವೆಯಾಗಲಿದ್ದಾರೆ. ಇದರಿಂದ ತಮ್ಮ ಮೆಚ್ಚಿನ ನಾಯಕಿ ಸಿನಿಮಾದಿಂದ ದೂರ ಉಳಿಯುವ ಆತಂಕ ಅಭಿಮಾನಿಗಳಲ್ಲಿ ಮೂಡಿದೆ.