hainugarike-good-success

ಓದಿದ್ದು ಡಿಪ್ಲೋಮ ಹೈನುಗಾರಿಕೆಯಲ್ಲಿ ಸಾಧನೆ,ತಿಂಗಳಿಗೆ ಲಕ್ಷ ಲಕ್ಷ ಆದಾಯ.!

Entertainment/ಮನರಂಜನೆ

ಕೃಷಿ ಮಾಡುವುದೆಂದರೆ ಮಾರು ದೂರ ಹೋಗುವವರು ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತೆ ಬಾಗಲಕೋಟೆ ಜಿಲ್ಲೆಯ ನಿವಾಸಿ ಸುರೇಶ್ ಗೌಡ ಪಾಟೀಲ್ ಅವರು ಹೈನುಗಾರಿಕೆ ಮಾಡಿ ಸಾಧನೆ ಮಾಡಿರುವ ಕಥೆಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಬಾಗಲಕೋಟ ಜಿಲ್ಲೆಯ ಸುರೇಶ ಗೌಡ ಪಾಟೀಲ್ ಅವರು ಓದಿದ್ದು ಡಿಪ್ಲೊಮಾ ಆದರೂ ಸಾಧನೆ ಮಾಡಿರುವುದು ಮಾತ್ರ ಹೈನುಗಾರಿಕೆಯಲ್ಲಿ. ಇವರದು ಮೊದಲಿನಿಂದಲೂ ಕೃಷಿ ಕುಟುಂಬ ಹಾಗಾಗಿ ಇವರಿಗೆ ಕೃಷಿ ಬಗ್ಗೆ ಒಲವಿತ್ತು ಇದರಿಂದ ಹೈನುಗಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹೈನುಗಾರಿಕೆ ಪ್ರಾರಂಭಿಸುವ ಮೊದಲು ಮಹಾರಾಷ್ಟ್ರ, ಬಿಹಾರ ಮುಂತಾದ ಕಡೆ ಹೋಗಿ ಮಾಹಿತಿ ಪಡೆದಿದ್ದಾರೆ. ನಂತರ 2010 ರಲ್ಲಿ ತಮ್ಮ ಬಳಿ 30 ಲಕ್ಷ ರೂಪಾಯಿ ಇತ್ತು ಜೊತೆಗೆ ಬ್ಯಾಂಕಿನಿಂದ ಸಾಲ ಪಡೆದು ಹೈನುಗಾರಿಕೆ ಪ್ರಾರಂಭಿಸುತ್ತಾರೆ.

ಮೊದಲು 20 ಎಮ್ಮೆಯಿಂದ ಹೈನುಗಾರಿಕೆ ಪ್ರಾರಂಭಿಸಿದ್ದರು. ಕೊರೋನ ಹಾವಳಿಯಿಂದ ಉದ್ಯಮಗಳು ನಷ್ಟವನ್ನು ಅನುಭವಿಸಿದರೆ, ಅತಿವೃಷ್ಟಿಯಿಂದ ಕೃಷಿ ನೆಲಕಚ್ಚಿದೆ ಆದರೆ ಇಂತಹ ಸಮಯದಲ್ಲಿ ಸುರೇಶ ಗೌಡ ಪಾಟೀಲ್ ಅವರು ಕ್ಷೀರ ಕ್ರಾಂತಿಯನ್ನೇ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಒಂದು ಗ್ರಾಮದಲ್ಲಿ ಸುರೇಶ ಗೌಡ ಪಾಟೀಲರು ಹೈನುಗಾರಿಕೆಯ ಫಾರ್ಮ್ ಮಾಡಿದ್ದಾರೆ. ಅವರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಪ್ರಾರಂಭಿಸಿದರು, ಈ ಹೈನುಗಾರಿಕೆಯಲ್ಲಿ ಯಶಸ್ಸನ್ನು ಗಳಿಸಿ ತಿಂಗಳಿಗೆ ಲಕ್ಷ ಲಕ್ಷ ದುಡಿಯುತ್ತಿದ್ದಾರೆ.

ಸಂಕಷ್ಟದಲ್ಲೂ ರೈತನ ಕೈ ಹಿಡಿದ ಹೈನುಗಾರಿಕೆ | udayavani

ವಿಶೇಷ ತಳಿಯಾದ 80 ಮುರ್ರಾ ಎಮ್ಮೆ ಮತ್ತು 20 ಕರುಗಳನ್ನು ಸಾಕಿದ್ದಾರೆ. ಪ್ರತಿನಿತ್ಯ ಎಮ್ಮೆಗಳಿಂದ 400ಕ್ಕೂ ಹೆಚ್ಚು ಲೀಟರ್ ಹಾಲು ಉತ್ಪಾದಿಸಿ ನಗರ ಹಾಗೂ ಸುತ್ತಲಿನ ಪ್ರದೇಶಗಳಿಗೆ ಹೋಗಿ ಒಂದು ಲೀಟರ್ ಗೆ 60 ರೂಪಾಯಿ ಅಂತೆ ಮಾರಾಟ ಮಾಡುತ್ತಿದ್ದಾರೆ. ಹಾಲಿನ ದರವನ್ನು ಖರ್ಚು ಹೆಚ್ಚಾದಂತೆ ಹೆಚ್ಚು ಮಾಡುತ್ತಾರೆ.

ಗ್ರಾಹಕರಿಗೆ ಶುದ್ಧ ಹಾಲು ಸಿಗುವುದರಿಂದ ಅವರಿಗೆ ಖುಷಿಯಿದೆ. ಬೇಸಿಗೆಯಲ್ಲಿ ಸ್ವಲ್ಪ ಕಡಿಮೆ ಹಾಲು ಉತ್ಪಾದನೆಯಾಗುತ್ತದೆ ಎಂದು ಸುರೇಶ್ ಅವರು ಹೇಳಿದರು. ಆಟೋ ಮೂಲಕ ನಗರದ ಬೀದಿ ಬೀದಿಗೆ ಹೋಗಿ ನೇರವಾಗಿ ಹಾಲು ಗ್ರಾಹಕರಿಗೆ ತಲುಪುವಂತೆ ವ್ಯವಸ್ಥೆ ಮಾಡಿದ್ದಾರೆ. ಇದರೊಂದಿಗೆ ಇನ್ನೊಂದು ಅಚ್ಚರಿಯೆಂದರೆ ಎಮ್ಮೆಗಳ ಸಗಣಿ ಮಾರಿ ತಿಂಗಳಿಗೆ 5,000 ರೂ ಲಾಭ ಗಳಿಸುತ್ತಾರೆ. ಖರ್ಚು ತೆಗೆದು ತಿಂಗಳಿಗೆ 2,50,000ರೂ, ವರ್ಷಕ್ಕೆ 35 ಲಕ್ಷ ಆದಾಯ ಪಡೆಯುತ್ತಾರೆ. ಹಾಲು ಕರೆಯಲು ಹರ್ಯಾಣ ಮೂಲದ ಕಾರ್ಮಿಕರಿದ್ದಾರೆ, ಕೆಲವರಿಗೆ ಸುರೇಶ್ ಅವರಿಂದ ಕೆಲಸ ಸಿಕ್ಕಿದೆ.

ಹೈನುಗಾರಿಕೆ ಹೈನು ಪಾಲನೆಯಲ್ಲಿ ನೆಮ್ಮದಿ Dairy Farming Tips From A Successful Dairy Farmer - YouTube

ಅವರು ಕೆಲವರಿಗೆ ಕೆಲಸ ಕೊಟ್ಟಿದ್ದಾರೆ ಎಂದು ಸುರೇಶ್ ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಾರೆ ಕೂಲಿ ಕಾರ್ಮಿಕರು, ವಾಹನ ಚಾಲಕರು. ಉತ್ತಮ ಶಿಕ್ಷಣ ಇದ್ದರೂ ತಮ್ಮ ಜಾಗದಲ್ಲಿಯೇ ಎಲ್ಲರೂ ಹುಬ್ಬೇರಿಸುವಂತೆ ಹೈನುಗಾರಿಕೆ ಮಾಡಿ ತೋರಿಸಿದ್ದಾರೆ. ಅಲ್ಲದೆ ಹೈನುಗಾರಿಕೆ ಕಷ್ಟ ಅದರಲ್ಲಿ ಹೆಚ್ಚು ಲಾಭವಿಲ್ಲ ಎಂದು ಹೇಳಿದವರಿಗೆ ಸುರೇಶ್ ಅವರು ಈ ಮೂಲಕ ಉತ್ತರ ಕೊಟ್ಟಿದ್ದಾರೆ ಅವರ ಸಾಧನೆ ಇಂದಿನ ಯುವಕರಿಗೆ ಮಾದರಿಯಾಗಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.