ಕನ್ನಡದಲ್ಲಿ ಗೂಳಿ ಕಾಳಗ ಎಂದು ಕರೆಸಿಕೊಳ್ಳುವ ಈ ಕ್ರೀಡೆ ತಮಿಳುನಾಡಿನ ಬಹುಮುಖ್ಯ ಗ್ರಾಮೀಣ ಕ್ರೀಡೆ ಬರೀ ಕ್ರೀಡೆಯಷ್ಟೇ ಅಲ್ಲದೆ ತಮಿಳುನಾಡಿನ ಸಂಕ್ರಾಂತಿ ಹಬ್ಬದ ಒಂದು ಸಾಂಸ್ಕೃತಿಕ ಆಚರಣೆಯೂ ಕೂಡ. ಚೆನ್ನಾಗಿ ಕೊಬ್ಬಿದ ಹೋರಿಯೊಂದನ್ನು ಮೊದಲೇ ತಯಾರಾಗಿ ನಿಂತ ಜನಗಳ ಗುಂಪಿಗೆ ಹಗ್ಗವಿಲ್ಲದೆ ಬಿಡಲಾಗುತ್ತದೆ. ಗೂಳಿಯನ್ನು ಹಗ್ಗ ಬಿಚ್ಚಿ ಬಿಟ್ಟ ತಕ್ಷಣ ನೆರೆದಿರುವ ಜನರ ಹರ್ಷೋದ್ಗಾರ, ಕೇಕೆ ಮುಗಿಲು ಮುಟ್ಟುತ್ತದೆ.
ಇದನ್ನು ಕಂಡ ಹೋರಿ ನಿಗದಿತ ಬಯಲಿನಲ್ಲಿ ಓಡಾಲಾರಂಭಿಸುತ್ತದೆ. ಅದರ ಮೇಲೆ ಎರಗುವ ಉತ್ಸಸಾಹಿ ತರುಣರು, ಯುವಕರು ಹೋರಿಯ ಭುಜ ಹಿಡಿದುಕೊಂಡು ಹೋರಿಯನ್ನು ಒಂದು ಕಡೆ ನಿಲ್ಲಿಸಬೇಕು. ಹಾಗೆ ನಿಲ್ಲಿಸುವಲ್ಲಿ ಯಾರು ಸಫಲರಾಗುತ್ತಾರೋ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಅವರಿಗೆ ಇನ್ನಿಲ್ಲದ ಮನ್ನಣೆ, ಗೌರವ ಸಿಗುತ್ತದೆ.
ಕ್ರೀಡೆಯಲ್ಲಿ ಯಶಸ್ವಿಯಾಗಿ ಹೋರಿಯನ್ನು ನಿಯಂತ್ರಿಸಿದವರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತದೆ. ಹೋರಿಯ ಭುಜ ಹಿಡಿದ ತಕ್ಷಣ ಹೋರಿ ನಿಲ್ಲುವುದಿಲ್ಲ. ಭುಜವನ್ನು ಬಿಗಿಯಾಗಿ ಹಿಡಿದಾಗ್ಯೂ ಹೋರಿ ಮನುಷ್ಯರನ್ನೇ ಹೊತ್ತುಕೊಂಡು ತಾನು ದಿಕ್ಕಾಪಾಲಾಗಿ ಓಡುತ್ತಿರುತ್ತದೆ. ಬಿಗಿಯಾದ ಹಿಡಿತದಿಂದ ಹೋರಿಯನ್ನು ನಿಯಂತ್ರಣಕ್ಕೆ ತರುವುದು ಸುಲಭ ಸಾಧ್ಯವಲ್ಲ. ಸದ್ಯ ಅದೇ ರೀತಿಯ ವಿಡಿಯೋ ನೋಡಿ.