
ಕಾಂಗ್ರೆಸ್ ಪಕ್ಷದ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಈಗಾಗಲೇ ಬಿಡುಗಡೆ ಆಗಿದ್ದು ಎರಡನೇ ಕಂತಿನ ಹಣ ಸಾಕಷ್ಟು ಜನರಿಗೆ ಬಂದಿಲ್ಲ ಹಾಗೂ ಯಾವಾಗ ಬರುತ್ತದೆ ಎಂದು ಕಾಯುವ ಜನರಿಗೆ ಸರ್ಕಾರದಿಂದ ಸಿಹಿ ಸುದ್ದಿ ಬಂದಿದೆ.ಗೃಹಲಕ್ಷ್ಮಿ ಯೋಜನೆ ಎರಡನೇ ಕಂತಿನ 2,000 ಯಾವ ದಿನಾಂಕದಂದು ಜಮಾ ಆಗುತ್ತದೆ.
ಕೆಲವು ತಾಂತ್ರಿಕ ಸಮಸ್ಯೆಗಳಿಂದ ಹಣ ಇನ್ನು ಜನ ಆಗಿಲ್ಲ ಆದರೆ ಎರಡನೇ ಕಂತಿನ ಹಣ ಯಾವಾಗ ಬರುತ್ತದೆ ಎಂಬುದರ ಸ್ಪಷ್ಟ ಮಾಹಿತಿಯನ್ನು ಸರ್ಕಾರವು ಜನರಿಗೆ ನೀಡುವ ಮೂಲಕ ಗುಡ್ ನ್ಯೂಸ್ ಕೊಟ್ಟಿದೆ ಎಲ್ಲಾ ಮಹಿಳೆಯರು ಆತಂಕ ಪಡುವ ಅಗತ್ಯ ಇಲ್ಲ. ಗೃಹಲಕ್ಷ್ಮಿ ಯೋಜನೆ 2018 ಅಂದರೆ ಫಲಾನುಭವಿಯ ಬ್ಯಾಂಕ್ ಖಾತೆಗೆ ಅಕ್ಟೋಬರ್ 15 ರ ನಂತರ ಜಮಾ ಆಗಲಿದೆ ಎಂದು ಮಾಹಿತಿ ನೀಡಲಾಗಿದೆ ಆಗಸ್ಟ್ 30ರಂದು ಮೊದಲ ಕಂತಿನ ಹಣ ಅನೇಕರ ಖಾತೆಗೆ ಜಮಾ ಆಗಿದ್ದು ಆಗದೇ ಇರುವವರ ಖಾತೆಗೆ ಅಕ್ಟೋಬರ್ ತಿಂಗಳ ಎರಡನೇ ವಾರ ಎರಡನೇ ಕಂತಿನ ಜೊತೆಗೆ 4,000 ಜಮಾ ಆಗುವ ಸಾಧ್ಯತೆ ಇದೆ.
ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣವು ನಿಮ್ಮ ಖಾತೆಗೆ ಜಮಾ ಆಗಬೇಕಾದರೆ ನೀವು ಈಗಲೇ ನಿಮ್ಮ ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸಬೇಕಾಗುತ್ತದೆ ಹಾಗೂ ನಿಮ್ಮ ಬ್ಯಾಂಕ್ ಖಾತೆಯ ಪುಸ್ತಕಕ್ಕೆ ನಿಮ್ಮ ಆಧಾರ್ ಕಾರ್ಡ್ ಅನ್ನು ಹಾಗೂ ನಿಮ್ಮ ರೇಷನ್ ಕಾರ್ಡ್ ಅನ್ನು ಲಿಂಕ್ ಮಾಡಿಸುವುದು ಕಡ್ಡಾಯ ಆಗಿದೆ ಹಾಗೂ ಮೊಬೈಲ್ ನಂಬರ್ ಸಹ ಲಿಂಕ್ ಆಗಿರಬೇಕು ಮೊಬೈಲ್ ನಂಬರ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದರೆ ಆ ಕೂಡಲೇ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಾಗ ನಿಮಗೆ ಲಿಂಕ್ ಆದ ಮೊಬೈಲ್ ನಂಬರ್ ಗೆ ಮೆಸೇಜ್ ರವಾನೆ ಆಗುತ್ತದೆ.
ಗೃಹಲಕ್ಷ್ಮಿ ಯೋಜನೆಯ ಹಣ ಅರ್ಧಕ್ಕೆ ಸ್ಥಗಿತವಾಗಿದೆ ಎಂದು ಅನೇಕ ಜನರು ಮಾತನಾಡಿಕೊಂಡಿದ್ದಾರೆ ಆದರೆ ಈ ಯೋಜನೆ ಸಕ್ರಿಯವಾಗಿ ನೊಂದಾಯಿತರ ಪೈಕಿ 596,000 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರಿ ಜೋಡಣೆ ಆಗಿಲ್ಲ ಇದಕ್ಕೆ ಸರ್ಕಾರ ಹೊಣೆ ಅಲ್ಲ ಅವರು ಅವರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಬೇಕು ಹಾಗೂ ಫಲಾನುಭವಿಗಳ ಆಧಾರ ಲಿಂಕ್ ಮಾಡಿಸಬೇಕು ನಂತರ ಬ್ಯಾಂಕ್ ಖಾತೆ ಸಕ್ರಿಯವಾಗಿ ಇದ್ದಾಗ ಡಿಪಿಟಿ ಮೂಲಕ ಅವರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಈ ಕುರಿತು ಸರ್ಕಾರವು ಸಹ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
Gruhalakshmi yojana Update ಗೃಹಲಕ್ಷ್ಮಿ ಯೋಜನೆ ಕುರಿತು ನಿಮಗೆ ಯಾವುದೇ ರೀತಿಯ ಗೊಂದಲ ಇದ್ದರೆ ನೀವು ಈಗಲೇ ಸೇವಾ ಎಂದು ಅಧಿಕೃತ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಅಥವಾ ಈ ( 8147500500 ಹಾಗು 1902) ನಂಬರ್ಗೆ ಕರೆ ಮಾಡುವ ಮುಖಾಂತರ ನೀವು ಗೃಹಲಕ್ಷ್ಮಿ ಯೋಜನೆಯ ಕುರಿತು ಯಾವುದೇ ಸಂಶಯ ಇದ್ದರೆ ಅದನ್ನು ಪರಿಹರಿಸಿಕೊಳ್ಳಬಹುದಾಗಿದೆ.
Comments are closed.