ಅನ್ನಭಾಗ್ಯ & ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಇನ್ನೊಂದು ಆದೇಶ ಹೊರಡಿಸಿದ ಸರ್ಕಾರ,ಸಂತಸದಲ್ಲಿ ಮಹಿಳೆಯರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಇನ್ನೊಂದು ಘೋಷಣೆ ಮಾಡಿದ ಕಾಂಗ್ರೆಸ್ ಸರ್ಕಾರ.

Anna Bhagya And Gruha Lakshmi Scheme: ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಯಾದ Anna Bhagya ಮತ್ತು Gruha Lakshmi ಯೋಜನೆಗಳು ಈಗಾಗಲೇ ಅನುಷ್ಠಾನಗೊಂಡರು ಕೂಡ ಯೋಜನೆಯ ಲಾಭ ಸಂಪೂರ್ಣವಾಗಿ ಅರ್ಹರಿಗೆ ತಲುಪುತ್ತಿಲ್ಲ. ಇದಕ್ಕೆ ಕಾರಣ ಯೋಜನೆಗೆ ಅಗತ್ಯ ಇರುವ ಮುಖ್ಯ ದಾಖಲೆಗಳಲ್ಲಿನ ತಪ್ಪು ಎನ್ನಬಹುದು.

ಇನ್ನು ಅರ್ಹ ಫಲಾನುಭವಿಗಳು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಂಡಿದ್ದರು ಕೂಡ ಹಣ ಅರ್ಹರಿಗೆ ತಲುಪುತ್ತಿಲ್ಲ. ಹೀಗಾಗಿ ಉಚಿತ ಯೋಜನೆಗಳಿಂದ ವಂಚಿತರಾದವರು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.

ಇನ್ನು ಕೂಡ ಶೇ. 30 ರಷ್ಟು ಅರ್ಹರಿಗೆ ಅನ್ನ ಭಾಗ್ಯ ಯೋಜನೆಯ ಹಣವಾಗಲಿ, ಗೃಹ ಜ್ಯೋತಿ ಹಣವಾಗಲಿ ಖಾತೆಗೆ ಜಮಾ ಆಗಿಲ್ಲ. ಈ ಬಗೆ ಸರ್ಕಾರ ಅನೇಕ ಅಪ್ಡೇಟ್ ನೀಡುತ್ತಿದ್ದರು ಈ ಕೂಡ ಅರ್ಹರು ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸದ್ಯದ ಚಿಂತೆಯಾಗಿದೆ. ಇದೀಗ ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆ ಹಾಗೂ ಗೃಹ ಲಕ್ಷ್ಮಿ ಯೋಜನೆಯಿಂದ ವಂಚಿತರಾದವರಿಗೆ ಸಿಹಿಸುದ್ದಿ ನೀಡಿದೆ. ಈ ಬಾರಿ ಯೋಜನೆಯ ಹಣ ಕಡ್ಡಾಯವಾಗಿ ಜಮಾ ಆಗಲಿದೆ ಎಂದು ಸರ್ಕಾರ ಹೇಳಿಕೆ ನೀಡಿದೆ.

ನಿಗದಿತ ಸಮಯದೊಳಗೆ ಖಾತೆಗೆ ಜಮಾ ಆಗಲಿದೆ ಯೋಜನೆಯ ಹಣ
ಫಲಾನುಭವಿಗಳಿಗೆ ಪಾವತಿಗಳನ್ನು ವೇಗಗೊಳಿಸಲು ಮತ್ತು DDO, DBT ಸಲ್ ಮತ್ತು ಖಜಾನೆಗಳೊಂದಿಗೆ ಯಾವುದೇ ತಾಂತ್ರಿಕ ಅಥವಾ ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ಹಂತ ಹಂತದ ಪಾವತಿಯನ್ನು ಸುಲಭಗೊಳಿಸಲು, ಗೃಹ ಲಕ್ಷ್ಮಿ, ಅನ್ನ ಭಾಗ್ಯ ಮತ್ತು ಹೆಚ್ಚಿನ ಸಂಖ್ಯೆಯ ಫಲಾನುಭವಿಗಳೊಂದಿಗೆ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ನಿಗದಿತ ಸಮಯದೊಳಗೆ ವೇಳಾಪಟ್ಟಿಯೊಂದಿಗೆ ನಿರ್ಧಿಷ್ಟ ವೇಳೆಯೊಳಗೆ ಹಣವನ್ನ ಜಮಾ ಮಾಡಲು ಆದೇಶವನ್ನ ಹೊರಡಿಸಲಾಗಿದೆ.

Gruha Lakshmi Scheme Latest Update
Image Credit: Livemint

ಇನ್ನು 26 -07 -2021 ರಲ್ಲಿ ಎಲ್ಲ ಇಲಾಖೆಗಳು ಅನುಷ್ಠಾನಗೊಳಿಸುತ್ತಿರುವ ಫಲಾನುಭವಿ ಆಧಾರಿತ ಯೋಜನೆಗಳಿಗೆ ಸಂಬಂಧಿಸಿದಂತೆ ಇ- ಆಡಳಿತ ಇಲಖೆಯೊಂದಿಗೆ ಸರ್ಕಾರದ ಏಕೀಕೃತ ನೇರ ನಗದು ವರ್ಗಾವಣೆ ವೇದಿಕೆ (DBT Platform ) ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

ಎಲ್ಲಾ ಸರ್ಕಾರಿ ಇಲಾಖೆಗಳ ಫಲಾನುಭವಿ ಆಧಾರಿತ ಕಲ್ಯಾಣ ಮತ್ತು ಸಬ್ಸಿಡಿ ಸ್ಟ್ರೀಮ್‌ಗಳ ಪಾವತಿಯ ನೇರ ಲಾಭ ವರ್ಗಾವಣೆ ವ್ಯವಸ್ಥೆಯ ಮೂಲಕ ಯಾವುದೇ ಅಡೆತಡೆಯಿಲ್ಲದೆ ಡಿಬಿಟಿ ಮತ್ತು ಖಜಾನೆ 2 ಮೂಲಕ ಫಲಾನುಭವಿಗಳ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಗಳಿಗೆ ಹಣವನ್ನು ಪಾವತಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

You might also like

Comments are closed.