Gruha-Lakshmi

ಮಹಿಳೆಯರಿಗೆ 2000 ಬರಲು ರೇಷನ್ ಕಾರ್ಡಿನಲ್ಲಿ ಹೀಗಿರಬೇಕು..ಈಗಲೆ ಚೆಕ್ ಮಾಡಿಕೊಳ್ಳಿ..

Free Govt Schemes/ಸರ್ಕಾರಿ ಉಚಿತ ಯೋಜನೆಗಳು RATION CARD/ರೇಷನ್ ಕಾರ್ಡ್ ಮಾಹಿತಿ ಗೃಹಲಕ್ಷ್ಮಿ ಯೋಜನೆ / Gruhalakshmi Scheme

ರಾಜ್ಯ ಸರ್ಕಾರ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಅಡಿ ರಾಜ್ಯದ ಪ್ರತಿ ಮನೆಯ ಯಜಮಾನಿಗೆ ಮಾಸಿಕ ಎರಡು ಸಾವಿರ ರೂಪಾಯಿ ಯೋಜನೆಗೆ ಇಂದು ಚಾಲನೆ ಸಿಕ್ಕಿದೆ. ಹೌದು ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಜೋತಿ ಅನ್ನ ಭಾಗ್ಯ ಗೃಹಲಕ್ಷ್ಮಿ ಶಕ್ತಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹೀಗೆ ಎಲ್ಲ ಯೋಜನೆಗಳಲ್ಲೂ ನಾಲ್ಕನೆಯ ಯೋಜನೆಯದಂತಹ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕಾಗಿದೆ.ಹೀಗಾಗಿ ಫಲಾನುಭವಿಗಳ ನೋಂದಣಿಗೆ ಇಂದಿನಿಂದ ಕಾರ್ಯ ಆರಂಭವಾಗಲಿದೆ.

ಯಾರೆಲ್ಲಾ ಅರ್ಧಿ ಸಲ್ಲಿಸಬಹುದು ಎಪಿಎಲ್ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ ಎಂದು ನಂದಿಸಿರುವ ಮಹಿಳೆಗೆ ಈ ಒಂದು ಹಣ ಸಿಗಲಿದೆ. ಆದರೆ ಫಲಾನುಭವಿ ಯಜಮಾನಿಯ ಪತಿ ಆದಾಯ ತೆರಿಗೆ ಅಥವಾ ಜಿಎಸ್‌ಟಿ ಪಾವತಿದಾರರಾಗಿ ಇರಬಾರದು.ಜೊತೆಗೆ ರೇಷನ್ ಕಾರ್ಡ್ ನಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಮನೆಯ ಯಜಮಾನಿಯರಿದ್ದರೆ ಈ ಯೋಜನೆಗೆ ಅನ್ವಯವಾಗುವುದಿಲ್ಲ.

ನೋಂದಣಿ ಪ್ರಕ್ರಿಯೆ ಹೇಗೆ ಎಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರು ಗ್ರಾಮದ ಸಮೀಪದಲ್ಲಿರುವ ಗ್ರಾಮ ಒನ್ ಕೇಂದ್ರ ಅಥವಾ ಬಾಪೂಜಿ ಸೇವ ಕೇಂದ್ರ ಇಲ್ಲಿ ನೊಂದಣಿ ಮಾಡಿಸಿಕೊಳ್ಳಬಹುದು.ಹಾಗೆಯೇ ನಗರ ಪ್ರದೇಶಗಳಲ್ಲಿ ಇರುವವರು ಸಮೀಪದಲ್ಲಿ ಇರುವ ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು. ಹಾಗೆಯೇ ಪ್ರಜಾಪ್ರತಿನಿಧಿಗಳು ಮನೆಗೆ ಭೇಟಿ ಮಾಡಿದಾಗ ಅವರಿಂದಲೂ ಕೂಡ ಈ ಯೋಜನೆಗೆ ನೋಂದಣಿಯನ್ನು ಮಾಡಿಸಬಹುದು.ಪ್ರತಿ ಫಲಾನುಭವಿಯ ನೋಂದಣಿಗೆ ನಿಗದಿ ಮಾಡಿರುವ ದಿನಾಂಕ ಸಮಯ ಮತ್ತು ಸ್ಥಳವನ್ನು ಒಂದು ಒಂಬತ್ತು ಸೊನ್ನೆ ಎರಡು ನಂಬರ್ಗೆ ಕರೆ ಮಾಡಿ ಅಥವಾ ಎಂಟು ಒಂದು ನಾಲ್ಕು ಏಳು ಐದು ಸೊನ್ನೆ ಸೊನ್ನೆ ಐದು ಸೊನ್ನೆ ಸೊನ್ನೆ ಈ ಸಂಖ್ಯೆಗೆ ಎಸ್ಎಂಎಸ್ ಅಥವಾ ವಾಟ್ಸಪ್ ಮೂಲಕ ಕಳುಹಿಸಿ ಮಾಹಿತಿ ಪಡೆಯಬಹುದು.

ಒಂದು ವೇಳೆ ನಿಗದಿಪಡಿಸಿ ದ ದಿನಾಂಕ ಮತ್ತು ಸಮಯದ ಒಂದು ಗ್ರಾಮವನ್ನು ಅಥವಾ ಬಾಪೂಜಿ ಕೇಂದ್ರದಲ್ಲಿ ಅಥವಾ ಕರ್ನಾಟಕವಲ್ ಅಥವಾ ಬೆಂಗಳೂರು ಒನ್ ಕೇಂದ್ರದಲ್ಲಿ ಹೋಗಲು ಸಾಧ್ಯವಾಗದಿದ್ದರೆ ಅದೇ ಸೇವ ಕೇಂದ್ರಗಳಿಗೆ ಮುಂದಿನ ಯಾವುದೇ ದಿನಾಂಕಗಳಲ್ಲಿ ಸಂಜೆ 5 ರಿಂದ 7 ಗಂಟೆಯ ಒಳಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳುವ ಪ್ರತಿ ಮಹಿಳೆಗೆ ನೋಂದಾಯಿಸಿಕೊಳ್ಳಲು ಬೇಕಾಗಿರುವ ದಾಖಲೆಗಳೇನು ಪಡಿತರ ಚೀಟಿ ಸಂಖ್ಯೆ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಪಾಸ್ ಬುಕ್ ಹಾಗೂ ಮನೆಯ ಯಜಮಾನಿಯ ಪತಿಯ ಬಗ್ಗೆ ದಾಖಲೆಗಳನ್ನು ಕೂಡ ಪರಿಶೀಲಿಸಲಾಗುತ್ತದೆ ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೋ ನೋಡಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.