gruha-lakshmi-yojane

Gruha Lakshmi Yojane: ಮನೆಯ ಅತ್ತೆ ಸೊಸೆ ಇವರಿಬ್ಬರಲ್ಲಿ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ಯಾರಿಗೆ ಸಿಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ

Free Govt Schemes/ಸರ್ಕಾರಿ ಉಚಿತ ಯೋಜನೆಗಳು

Gruha Lakshmi yojane: ಮನೆಯಲ್ಲಿರುವ ಗ್ರಹಿಣಿಯರು ಎಂದರೆ ಅತ್ತೆ ಸೊಸೆಯರು ಇವರಿಬ್ಬರಲ್ಲಿ ಗೃಹಲಕ್ಷ್ಮಿ (Gruha Lakshmi yojane) ಯೋಜನೆಯ ಎರಡು ಸಾವಿರ ರೂಪಾಯಿಗಳನ್ನು ಪಡೆಯಲಿರುವ ಫಲಾನುಭವಿಗಳು ಯಾರು ಎಂಬ ವಿಚಾರದ ಬಗ್ಗೆ ಕಾಂಗ್ರೆಸ್ ಸರ್ಕಾರದ ಸ್ಪಷ್ಟನೆ ಏನೆಂಬುದನ್ನು ಇಲ್ಲಿ ತಿಳಿಯೋಣ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆಯಾಗುವುದರ ಮೂಲಕ ಕಾಂಗ್ರೆಸ್ ಸರ್ಕಾರವು ಕರ್ನಾಟಕದ ಅಧಿಕಾರವನ್ನ ವಹಿಸಿಕೊಂಡಿದೆ ಇತ್ತೀಚಿಗಷ್ಟೇ ಮುಖ್ಯಮಂತ್ರಿಗಳ ಸ್ಥಾನವನ್ನು ಅಲಂಕರಿಸಿದ ಸಿದ್ದರಾಮಯ್ಯ ಅವರು ಪ್ರಮಾಣವಚನವನ್ನು ಸ್ವೀಕರಿಸಿ ತಾವು ನೀಡಿದ ಐದು ಭರವಸೆಗಳತ್ತ ಗಮನಹರಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯದ ಜನತೆ ಕೂಡ ಈ ಯೋಜನೆಗಳನ್ನ ಅತಿ ಶೀಘ್ರದಲ್ಲಿ ಜಾರಿಗೊಳಿಸುವುದಾಗಿ ಒತ್ತಡ ಹೇರುತ್ತಿದ್ದಾರೆ.

ಚುನಾವಣೆಗೂ ಮುನ್ನ ಮಾತು ಕೊಟ್ಟಂತೆ ಈಗ ಕಾಂಗ್ರೆಸ್ ಪಕ್ಷ ನಡೆದುಕೊಳ್ಳುತ್ತಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನ ಟ್ರೋಲ್ ಮಾಡುವ ಮುಖಾಂತರ ಪದೇ ಪದೇ ಈ ಯೋಜನೆಗಳ ಜಾರಿಗೆ ತರುವ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಇದೀಗ ಗ್ಯಾರಂಟಿ ಕಾರ್ಡ್ ಯೋಜನೆಯ ಅನುಷ್ಠಾನದ ಬಗ್ಗೆ ಹೆಚ್ಚಾಗಿದ್ದು ಮುಖ್ಯಮಂತ್ರಿಗಳು ಸಚಿವರು ಇದಕ್ಕೆ ತಾತ್ವಿಕ ಅನುಮೋದನೆಯನ್ನು ನೀಡಿ ಆದೇಶ ಪತ್ರ ಹೊರಡಿಸಿದ್ದು ಇನ್ನೂ ಸರಿಯಾಗಿ ಯಾವುದನ್ನೂ ಜಾರಿಗೊಳಿಸಿಲ್ಲ. ಇದರಿಂದ ಜನ ಗೊಂದಲಗೊಂಡಿದ್ದು ಕೆಲವರು ಕರೆಂಟ್ ಬಿಲ್ ತುಂಬಲು ಅಥವಾ ಹೆಂಗಸರು ಬಸ್ಸಿನಲ್ಲಿ ಪ್ರಯಾಣಿಸುವಾಗ ಟಿಕೆಟ್ ಪಡೆಯಲು ವಾದಕ್ಕೆ ಇಳಿಯುತ್ತಿದ್ದಾರೆ.

ಇದೇ ರೀತಿ ಗೃಹಲಕ್ಷ್ಮಿ ಯೋಜನೆ ಅಡಿ ಮನೆಯ ಮಹಿಳೆಯರಿಗೆ 2000 ಕೊಡುವುದಾಗಿ ಗ್ಯಾರೆಂಟಿಯನ್ನು ಕಾಂಗ್ರೆಸ್ ಸರ್ಕಾರ ನೀಡಿತ್ತು ಒಂದು ಮನೆಯಲ್ಲಿ ಅತ್ತೆ ಸೊಸೆ ಇದ್ದರೆ ಈ ಯೋಜನೆ ಯಾರಿಗೆ ಸಿಗುತ್ತದೆ ಎಂಬ ಸ್ಪಷ್ಟತೆ, ಇನ್ನೂ ಜನಕ್ಕೆ ಸಿಕ್ಕಿಲ್ಲ ಅದರಿಂದ ವಿರೋಧ ಪಕ್ಷ ಇವರನ್ನ ಪ್ರಶ್ನಿಸಿದಾಗ ಡಿಕೆ ಶಿವಕುಮಾರ್ ಅವರು ಜೂನ್ ಒಂದರಿಂದ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದ್ದು ಅದರಲ್ಲಿ ಈ ಯೋಜನೆಯ ಗೈಡ್ ಲೈನ್ಸ್ ರಿಲೀಸ್ ಆಗುತ್ತದೆ ಅದಾದ ನಂತರ ಇವೆಲ್ಲ ಸಂಶಯಗಳಿಗೆ ಉತ್ತರಿಸುತ್ತದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.