gruha-lakshmi-scheme

Gruha Lakshmi : ಗೃಹ ಲಕ್ಷ್ಮಿ ಅರ್ಜಿ ಸ್ವೀಕರಿಸಲು ದಿನಾಂಕ ನಿಗದಿ,ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಕುರಿತು ಮಾಹಿತಿ ನೀಡಿದ ಸಚಿವೆ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!!

Free Govt Schemes/ಸರ್ಕಾರಿ ಉಚಿತ ಯೋಜನೆಗಳು RATION CARD/ರೇಷನ್ ಕಾರ್ಡ್ ಮಾಹಿತಿ ಗೃಹಲಕ್ಷ್ಮಿ ಯೋಜನೆ / Gruhalakshmi Scheme

Gruha Lakshmi : ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದು ಈ ಗೃಹಲಕ್ಷ್ಮಿ ಯೋಜನೆ (Gruhalakshmi Scheme). ಕರ್ನಾಟಕ ಸರ್ಕಾರದ ಮಹತ್ವದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕರಿಸಲು ದಿನಾಂಕ ನಿಗದಿ ಮಾಡಲಾಗಿದೆ. ಇದೇ ಜುಲೈ 17 (July 17) ಅಥವಾ ಜುಲೈ 19 (July 19) ರಿಂದ ಅರ್ಜಿ ಸ್ವೀಕರಿಸಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar), ಮಹತ್ವದ ಯೋಜನೆಗೆ ಜುಲೈ 17ರಂದು ಕೇಂದ್ರದ ಕಾಂಗ್ರೆಸ್ ನಾಯಕರು ಚಾಲನೆ ನೀಡಬೇಕು ಎಂದು ಕೇಳಲಾಗಿದೆ. ಸಮಯ ಹೊಂದಾಣಿಕೆ ಆದರೆ ಕೇಂದ್ರದ ಕಾಂಗ್ರೆಸ್ ನಾಯಕರು ಸೋಮವಾರ (ಜುಲೈ 17) ಸಂಜೆ 5ಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ. ಅವರು ಬರದೇ ಇದ್ದಲ್ಲಿ ಬುಧವಾರ (ಜುಲೈ 19) ಸಂಜೆ 5ಕ್ಕೆ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದಿದ್ದಾರೆ.

Gruha Lakshmi Scheme Information

Gruha Lakshmi Scheme
Gruha Lakshmi Scheme

ಕರ್ನಾಟಕ ರಾಜ್ಯಾದ್ಯಂತ ಕರ್ನಾಟಕ ಒನ್ (Karnataka One), ಗ್ರಾಮ ಒನ್ (Grama One), ಬೆಂಗಳೂರು ಒನ್ (Bengalore One), ಬಾಪೂಜಿ ಸೇವಾ ಕೇಂದ್ರ (Bapuji Seva Kendra) ಗಳಲ್ಲಿ ಅರ್ಜಿ ಸಲ್ಲಿಸಬಹುದು. ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ ಎಂದು ನೋಂದಾಯಿಸಿಕೊಂಡವರು, ಎಪಿಎಲ್, ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರು, ಟ್ಯಾಕ್ಸ್ ಮತ್ತು ಜಿಎಸ್‌ಟಿ ಕಟ್ಟದೇ ಇರುವವರು ಈ ಯೋಜನೆಯ ಫಲಾನುಭವಿಗಳಾಗಬಹುದು ಎಂದು ಮಾಹಿತಿ ನೀಡಿದ್ದಾರೆ ಸಚಿವೆ.

ಅರ್ಜಿ ಸಲ್ಲಿಕೆಯ ವೇಳೆಯಲ್ಲಿ ಪಡಿತರ ಚೀಟಿ (Ration Card), ಆಧಾರ್ ನಂಬರ್ (Aadhar Number) ಇರುವುದು ಕಡ್ಡಾಯವಾಗಿರುತ್ತದೆ. ಆಧಾರ್ ಲಿಂಕ್ ಆಗಿರದ ಖಾತೆಗೆ ಹಣ ಬರಬೇಕು ಎಂದರೆ ಬೇರೆ ಪಾಸ್ ಬುಕ್ ಅನ್ನು ಕೂಡ ನೀಡಬಹುದು. ಆ ಪಾಸ್‌ಬುಕ್‌ಅನ್ನು ಸಾಫ್ಟ್‌ವೇರ್ ನಲ್ಲಿ ಅಪ್‌ಲೋಡ್ ಮಾಡುತ್ತೇವೆ, ಆ ಮಾಹಿತಿ ನಮ್ಮ ಸಿಡಿಪಿಒ ಲಾಗಿನ್‌ಗೆ ಹೋಗಲಿದೆ, ಅದರ ಜೊತೆಯಲ್ಲಿ ತಹಶೀಲ್ದಾರ್ ತಾಲೂಕ್ ಪಂಚಾಯಿತ್ ಇಒ ಲಾಗಿನ್‌ಗೂ ಹೋಗಲಿದೆ.

ಈ ಪಾಸ್‌ಬುಕ್ ಪಡಿತರ ಚೀಟಿಯಲ್ಲಿರುವ ಮನೆಯ ಮುಖ್ಯಸ್ಥೆಯ ಜೊತೆ ಹೊಂದಾಣಿಕೆಯಾದರೆ ಅಲ್ಲಿ ಆರ್ಡರ್ ಕಾಪಿ ಕೊಡಲಾಗುವುದು. ಸಿಡಿಪಿಒ ಅಥವಾ ಅಂಗನವಾಡಿ ಕಾರ್ಯಕರ್ತೆಯರ ಮುಖಾಂತರ ತಲುಪಿಸಲಾಗುವುದು. ಆಧಾರ್ ಲಿಂಕ್ ಇರುವ ಅಕೌಂಟ್‌ಗೆ ಹಣ ಬರಲಿ ಎಂದಾಗ ಅವರು ಅರ್ಜಿ ಸಲ್ಲಿಕೆ ವೇಳೆ ಪಾಸ್‌ಬುಕ್ ತರುವ ಅಗತ್ಯವಿರುವುದಿಲ್ಲ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ತಂದರೆ ಸಾಕು, ಅದರ ಜೊತೆ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ತೆಗೆದುಕೊಂಡು ಹೋಗಬೇಕು.

ಆಧಾರ್ ಕಾರ್ಡ್, ಪಡಿತರ ಚೀಟಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗಳಿಗೆ ಅರ್ಜಿ ಸಲ್ಲಿಸುವ ಸಮಯ, ದಿನಾಂಕ, ಸ್ಥಳದ ಮಾಹಿತಿಯನ್ನು ಎಸ್‌ಎಂಎಸ್‌ ಮೂಲಕ ನೀಡಲಾಗುವುದು. ಆ ಸಮಯದಲ್ಲಿ ಅವರು ತಮಗೆ ಸಮೀಪದ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಿದರೆ ಜನಸಂದಣಿಯಿಂದ ಮುಕ್ತರಾಗಬಹುದು ಎಂದು ತಿಳಿಸಿದ್ದಾರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.