gruh-laskhmi-conditions

ಗೃಹ ಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ ಎರಡು ಸಾವಿರ ಹಣ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು ನೋಡಿ

Free Govt Schemes/ಸರ್ಕಾರಿ ಉಚಿತ ಯೋಜನೆಗಳು RATION CARD/ರೇಷನ್ ಕಾರ್ಡ್ ಮಾಹಿತಿ

ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ… ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2,000 ಹಣ ಪಡೆಯಲು ಅರ್ಜಿ ಸಲ್ಲಿಸಬೇಕು ಎಂದು ತುಂಬಾ ಜನ ಮಹಿಳೆಯರು ಕಾಯುತ್ತ ಇದ್ದರು ಎಲ್ಲರಿಗೂ ಒಂದು ಬಹಳ ದೊಡ್ಡ ಅಪ್ಡೇಟ್ ಮತ್ತು ಬದಲಾವಣೆ ಬಂದಿದೆ ಈ ಒಂದು ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸುವಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದ್ದಾರೆ.

ಯಾವ ಬದಲಾವಣೆಗಳಿವೆ ಹಾಗೂ ಗಂಡನ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಬೇಕಾಗಿಲ್ಲ ಇದು ಕೂಡ ಒಂದು ಬದಲಾವಣೆ ಇದೆ ಹಾಗು ಎಲ್ಲ ಮಹಿಳೆಯರಿಗೂ 2000 ಹಣ ಸಿಗುವುದಿಲ್ಲ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿಯೂ ಒಂದು ದೊಡ್ಡ ಬದಲಾವಣೆಯನ್ನು ಮಾಡಿದ್ದಾರೆ ಸಂಪೂರ್ಣವಾದ ಮಾಹಿತಿ ಅರ್ಜಿ ಸಲ್ಲಿಸುವ ಲಿಂಕು ಕೂಡ ಇವತ್ತಿನ ವಿಡಿಯೋದಲ್ಲಿ ನಾನು.

ನಿಮಗೆ ಕೊಡುತ್ತೇನೆ.ನಾನು ಟೈಟಲ್ಲಲ್ಲಿ ಕೊಟ್ಟಿರುವ ಹಾಗೆ ಗೃಹಲಕ್ಷ್ಮಿ ಯೋಜನೆಯ 2000 ಹಣ ಈ ಯೋಜನೆಯ ವಿವರವಾದ ರೂಪುರೇಷ ಹಾಗೂ ಮಾರ್ಗಸೂಚಿಗಳು, ಅರ್ಜಿ ಸಲ್ಲಿಸುವ ಮೊದಲು ತಿಳಿದುಕೊಳ್ಳಿ ಎಂದು ಕೊಟ್ಟಿದ್ದೇನೆ ಗಂಡನ ದಾಖಲೆಗಳು ಬೇಕಾಗಿಲ್ಲ ಎಲ್ಲ ಮಹಿಳೆಯರಿಗೆ ಹಣ ಸಿಗುವುದಿಲ್ಲ ಅರ್ಜಿಯಲ್ಲಿ ದೊಡ್ಡ ಬದಲಾವಣೆ ಸಚಿವರಾಗಿರುವಂತಹ ಲಕ್ಷ್ಮಿ.

ಹೆಬ್ಬಾಳ್ಕರ್ ಅವರಿಂದ ಸ್ಪಷ್ಟವಾಗಿರುವಂತಹ ಮಾಹಿತಿ ಬಂದಿದೆ, ಮೊದಲನೆಯದಾಗಿ ನನ್ನ ವಿಡಿಯೋ ಕೆಳಗಡೆ ಕೊಟ್ಟಿರುವ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಈ ವೆಬ್ ಸೈಟಿನ ಲಿಂಕನ್ನು ಕೊಟ್ಟಿರುತ್ತೇನೆ ಅಲಿಂಕಿನ ಮೇಲೆ ನೀವು ಕ್ಲಿಕ್ ಮಾಡಿದಾಗ ನಿಮಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸವ ನೇರವಾದ ಲಿಂಕ್ ನಿಮಗೆ ಓಪನ್ ಆಗುತ್ತದೆ,ಕರ್ನಾಟಕ ಸರ್ಕಾರ ಖಾತರಿ ಯೋಜನೆಗಳು.

ಎಂದು ಈ ಲಿಂಕ್ ಓಪನ್ ಆದಾಗ ನೀವು ನೇರವಾಗಿ ಗೃಹಲಕ್ಷ್ಮಿಯ ಮೇಲೆ ಕ್ಲಿಕ್ ಮಾಡಲು ಹೋಗಬೇಡಿ ನೀವೇನಾದರೂ ಕ್ಲಿಕ್ ಮಾಡಿದರು ಕೂಡ ಮತ್ತೆ ಅದೇ ವೆಬ್ಸೈಟ್ ಬರುತ್ತದೆ ಹಾಗಾಗಿ ನೀವು ಏನು ಮಾಡಬೇಕೆಂದರೆ ಇಲ್ಲಿ ಖಾತರಿ ಯೋಜನೆಗಳ ಕುರಿತು ಎಂದು ಇರುತ್ತದೆ ಇದರ ಮೇಲೆ ಕ್ಲಿಕ್ ಮಾಡಿಕೊಳ್ಳಿ ಅದಾದ ನಂತರ ಗೃಹಲಕ್ಷ್ಮಿ ಎಂದು ಬರುತ್ತದೆ.

ಅದರ ಮೇಲೆ ಕ್ಲಿಕ್ ಮಾಡಿ ಇದರ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಮುಂದೆ ಗೃಹಲಕ್ಷ್ಮಿ ರೂಪಾಯಿ 2018 ಕೊಟ್ಟಿದ್ದಾರೆ ಕೆಲವೊಂದು ಬದಲಾವಣೆಗಳನ್ನು ಮಾಡಿದ್ದಾರೆ ಇದನ್ನು ಸರಿಯಾಗಿ ನೋಡಿಕೊಳ್ಳಿ ನಂತರ ಇಲ್ಲಿ ಕುಟುಂಬದ ಯಜಮಾನ ಅಥವಾ ಯಜಮಾನಿಯ ಆದಾಯದ ತೆರಿಗೆ ಪ್ರತಿ ಪಾವತಿದಾರರಾಗಿದ್ದಲ್ಲಿ ಅವರಿಗೆ ಹಣ ಸಿಗುವುದಿಲ್ಲ ಕುಟುಂಬದ ಯಜಮಾನಿ ಅಥವಾ.

ಯಜಮಾನಿಯ ಪತಿ ಜಿಎಸ್ಟಿ ರಿಟರ್ನ್ಸ್ ಕಟ್ಟುವವರಾಗಿದ್ದರೆ ಅವರಿಗೆ ಕೂಡ ಎರಡು ಸಾವಿರ ರೂಪಾಯಿ ಹಣ ಸಿಗುವುದಿಲ್ಲ ಹಾಗೂ 2000 ಹಣ ಯಾರಿಗೆ ಸಿಗುತ್ತದೆ ಮತ್ತು ನಗರ ಸರಬರಾಜು ಇಲಾಖೆ ವಿತರಿಸಿರುವ ಅಂತ್ಯೋದಯ ಬಿಪಿಎಲ್ ಎಪಿಎಲ್ ಚೀಟಿ ಒಂದಿರುವ ಕುಟುಂಬದ ಯಜಮಾನಿಗೆ ಇಲ್ಲಿ 2,000 ಹಣ ಸಿಗಲಿದೆ ಹಾಗೆ ಒಂದೇ ಕುಟುಂಬದಲ್ಲಿ ಒಂದಕ್ಕಿಂತ.

ಹೆಚ್ಚು ಮಹಿಳೆಯರು ಇದ್ದಲ್ಲಿ ಒಬ್ಬರಿಗೆ ಮಾತ್ರ 2,000 ಹಣ ಸಿಗುತ್ತದೆ ಹಾಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜೂನ್ 15 ರಿಂದ ಜುಲೈ 15ರ ಒಳಗಾಗಿ ಸಲ್ಲಿಸಬೇಕು ಎಂದು ಕೊಟ್ಟಿದ್ದಾರೆ ಈ ಒಂದು ದಿನಾಂಕ ಇನ್ನು ನಿಗದಿಯಾಗಿಲ್ಲ ಹಾಗೆ ಕೊನೆಯ ದಿನಾಂಕ ಕೂಡ ಇಲ್ಲ ಎಂದು ಹೇಳಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿರುತ್ತದೆ. ಕುಟುಂಬದ ನಿರ್ವಹಣೆಯಲ್ಲಿ ಕುಟುಂಬ ಯಜಮಾನಿಯ ಪಾತ್ರ ಪ್ರಮುಖವಾಗಿದ್ದು, ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬ ನಿರ್ವಹಣೆ ಉತ್ತಮ ಗುಣಮಟ್ಟದಲ್ಲಿರುತ್ತದೆ. ಆದ್ದರಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000/- ಗಳನ್ನು ನೀಡುವ “ಗೃಹಲಕ್ಷ್ಮಿ ಯೋಜನೆ”ಯನ್ನು ಜಾರಿಗೆ ತರಲಾಗಿದೆ.

ರಾಜ್ಯದ ಕುಟುಂಬದಲ್ಲಿನ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000/- ಗಳನ್ನು (ಎರಡು ಸಾವಿರ ರೂಪಾಯಿಗಳು ಮಾತ್ರ) ನೀಡುವ “ಗೃಹ ಲಕ್ಷ್ಮಿ” ಯೋಜನೆಯನ್ನು 2023-24ನೇ ಸಾಲಿನಲ್ಲಿ ಈ ಕೆಳಕಂಡಂತೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಸರ್ಕಾರದ ಆದೇಶ ಸಂಖ್ಯೆ: ಮಮ ಇ 70 ಮಮ ಅ 2023, ಬೆಂಗಳೂರು, ದಿನಾಂಕ: 6ನೇ ಜೂನ್ 2023 ರಂತೆ ಆದೇಶಿಸಿರುತ್ತದೆ.

ಈ ಯೋಜನೆಯ ವಿವರವಾದ ರೂಪುರೇಷ ಹಾಗೂ ಮಾರ್ಗಸೂಚಿಗಳು-

1. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.

2. ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಂದು ಮಹಿಳೆಗೆ ಮಾತ್ರ ಯೋಜನೆ ಅನ್ವಯಿಸಲಾಗುತ್ತದೆ.

3. ಈ ಯೋಜನೆಯ ಫಲಾನುಭವಿಗಳು 2023ರ ಜೂನ್ 15 ರಿಂದ ಜುಲೈ 15ರವರೆಗೆ ಅರ್ಜಿ ಸಲ್ಲಿಸಬೇಕು. ನಂತರ ಜುಲೈ 15 ರಿಂದ ಫಲಾನುಭವಿಗಳ ಆಯ್ಕೆ ಮಾಡಲಾಗುವುದು. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 15 ರಂದು ಅವರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುವುದು.

4. ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ ಮೂಲಕವಾಗಲೀ ಅಥವಾ ಭೌತಿಕವಾಗಿಯಾಗಲೀ ಅರ್ಜಿ ಸಲ್ಲಿಸಲು ಅವಕಾಶವಿದೆ.

5. ಅರ್ಜಿದಾರರು ಸಲ್ಲಿಸುವ ಪೂರ್ಣ ಪ್ರಮಾಣದ ಅರ್ಜಿಯಲ್ಲಿನ ಸ್ವಯಂ ಘೋಷಣೆ ಆಧಾರದ ಮೇಲೆ ಮಂಜೂರಾತಿ ನೀಡಲಾಗುವುದು. ಅರ್ಜಿಯಲ್ಲಿನ  ಅಂಶಗಳ ಬಗ್ಗೆ ತದನಂತರ ಪರಿಶೀಲನೆ ಮಾಡಲಾಗುವುದು. ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕಂಡುಬಂದಲ್ಲಿ, ಈಗಾಗಲೇ ಪಾವತಿಸಲಾಗಿರುವ ಹಣವನ್ನು ಅರ್ಜಿದಾರರಿಂದ ವಸೂಲು ಮಾಡಲಾಗುವುದು ಮತ್ತು ಅಂತಹವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.

6. ಈ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಯ ಬ್ಯಾಂಕ್ ಖಾತೆ ಮತ್ತು ಆಧಾರ ಕಾರ್ಡ್ ಗಳನ್ನು ಜೋಡಣೆ ಮಾಡಬೇಕು.

7. ಈ ಕೆಳಕಂಡ ಮಾನದಂಡಗಳನ್ನು ಹೊಂದಿರುವವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

    • ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ.
    • ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್ ಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ .
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.