grandmother

14 ಜನ ಮಕ್ಕಳಿದ್ದರೂ ತನ್ನ ಆಸ್ತಿಯನ್ನೆಲ್ಲಾ ಮೋದಿ ಹೆಸರಿಗೆ ಬರೆದ ಅಜ್ಜಿ ಕಾರಣವೇನು ಗೊತ್ತಾ.?

Today News / ಕನ್ನಡ ಸುದ್ದಿಗಳು

ಸಾಮಾನ್ಯವಾಗಿ ಮಕ್ಕಳಿರದ ದಂಪತಿಗಳು ತಮ್ಮ ಪಾಲಿನ ಆಸ್ತಿಯನ್ನು ಯಾವುದಾದರು ಧರ್ಮದತ್ತಿಗೆ ಉಯಿಲು ಮಾಡಿ ಹೋಗುತ್ತಾರೆ ಅಥವಾ ತಮ್ಮ ಸಂಬಂಧಿಕರಲ್ಲಿ ಯಾರ ಮೇಲೆ ನಂಬಿಕೆ ಇದೆಯೋ ಅವರ ಹೆಸರಿಗೆ ಬರೆಯುತ್ತಾರೆ. ಇನ್ನು ಕೆಲವರು ವೃದ್ಧಾಶ್ರಮಗಳಿಗೆ ಅಥವಾ ಅನಾಥಾಶ್ರಮಗಳಿಗೆ ಅಥವಾ ಯಾವುದಾದರೂ ಟ್ರಸ್ಟ್ ಗೆ ಬರೆದು ಜನಸೇವೆ ಮಾಡಿದ ತೃಪ್ತಿ ಪಡೆದುಕೊಳ್ಳುತ್ತಾರೆ.

ಆದರೆ ಮಕ್ಕಳಿರುವವರು ಈ ರೀತಿ ಮಾಡುವುದು ತೀರಾ ವಿರಳ. ಮಕ್ಕಳು ಕ್ಷಮಿಸಲು ಅಸಾಧ್ಯವಾದ ದ್ರೋಹ ಮಾಡಿದಾಗ ಅಥವಾ ಅವರು ತೀರ ಕೆಟ್ಟವರಾಗಿದ್ದಾಗ, ಚೆನ್ನಾಗಿ ನೋಡಿಕೊಳ್ಳದೆ ಇದ್ದಾಗ ಅಥವಾ ಹೆತ್ತವರಿಗೆ ವಿರುದ್ಧವಾದಾಗ ಈ ರೀತಿ ಮಾಡಬಹುದು ಅಷ್ಟೇ. ಆದರೆ ಇಲ್ಲೊಬ್ಬರು 100 ವರ್ಷದ ವೃದ್ಧೆ ಅಭಿಮಾನದ ಕಾರಣದಿಂದಾಗಿ ಒಬ್ಬ ಜನನಾಯಕನಿಗೆ ತನ್ನೆಲ್ಲಾ ಆಸ್ತಿಯನ್ನು ಕೊಡುವುದಾಗಿ ಹೇಳಿದ್ದಾರೆ.

ಮಧ್ಯಪ್ರದೇಶದ ರಾಜ್ ಘಡ್ ಜಿಲ್ಲೆಯ ಹರಿಪುರ ಗ್ರಾಮದ 100 ವರ್ಷ ವಯಸ್ಸಿನ ಈ ಅಜ್ಜಿಯ ಹೆಸರು ಮಂಗಿಬಾಯಿ ತನ್ವಾರ್. ಅಜ್ಜಿ ಈ ರೀತಿ ಹೇಳುತ್ತಿರುವುದರಿಂದ ಬಹುಶಃ ಈ ಅಜ್ಜಿಗೆ ವಾರಸುದಾರರು ಯಾರು ಇಲ್ಲ, ಮಕ್ಕಳಿರಲಿಲ್ಲವೇನೋ ಎಂದು ಭಾವಿಸಬೇಡಿ. ಈ ಅಜ್ಜಿಗೆ 14 ಜನ ಮಕ್ಕಳಿದ್ದಾರೆ. ಎಲ್ಲ ಮಕ್ಕಳು ಹಾಗೂ ಮೊಮ್ಮಕ್ಕಳ ಜೊತೆ ಅಜ್ಜಿ ಸಂತೋಷದಿಂದಲೇ ಇದ್ದಾರೆ ಆದರೂ ಕೂಡ ನರೇಂದ್ರ ಮೋದಿ ಅವರನ್ನು 15ನೇ ಮಗ ಎಂದು ಭಾವಿಸಿಕೊಳ್ಳುತ್ತಾರಂತೆ.

ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಡೀ ದೇಶದಲ್ಲಿ ಅತಿ ಹೆಚ್ಚಿನ ಜನರು ಮೆಚ್ಚಿದ ಜನನಾಯಕ. ವಿಶ್ವದಾದ್ಯಂತ ನಮ್ಮ ದೇಶದ ಈ ಪ್ರಧಾನಿಗೆ ಅಭಿಮಾನಿಗಳು ಇದ್ದಾರೆ. ಮೋದಿ ಅವರ ವರ್ಚಸ್ಸು ಎಂತಹದ್ದು ಎಂದು ಎಲ್ಲರೂ ಬಲ್ಲರು ಅವರ ಜನಪರ ನಿಲುವುಗಳು ಭಾರತದ ಅಸ್ಮಿತೆ ಬಗ್ಗೆ ಅವರಿಗಿರುವ ಕನಸು ಅವರು ಕೈಕೊಂಡ ಯೋಜನೆಗಳು ಭಾರತವನ್ನು ಬಲಿಷ್ಠ ದೇಶವಾಗಿ ವಿಶ್ವಗುರುವನ್ನಾಗಿ ಮಾಡಲು ಅವರು ತೊಟ್ಟಿರುವ ಪಣ ಮತ್ತು ಅವರ ರಾಜಕೀಯ ಜೀವನದಲ್ಲಿ ಅವರಿರುವ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಕಾರಣದಿಂದ ಯಾವ ಸೆಲೆಬ್ರಿಟಿಗೂ ಕೂಡ ಕಡಿಮೆ ಇರದ ಅಭಿಮಾನಿಗಳನ್ನು ಹೊಂದಿದ್ದಾರೆ.

ಅವರ ಮನ್ ಕಿ ಬಾತ್ ಮುಂತಾದ ಕಾರ್ಯಕ್ರಮಗಳು ಅವರನ್ನು ಜನಸಾಮಾನ್ಯರವರೆಗೆ ತಲುಪಿಸಿ ಇನ್ನಷ್ಟು ಹತ್ತಿರಗೊಳಿಸಿವೆ. ಇದರ ಪರಿಣಾಮವಾಗಿ ಇಂದು ಭಾರತದಲ್ಲಿರುವ ಈಗ ಪುಟ್ಟ ಮಕ್ಕಳಿಂದ ವಯಸ್ಸಾದ ಅಜ್ಜ ಅಜ್ಜಿವರೆಗೆ ಎಲ್ಲರೂ ಕೂಡ ಮೋದಿ ಅವರ ನಾಮ ಜಪ ಮಾಡುತ್ತಾರೆ. ದಿನದಲ್ಲಿ ಹಲವು ಬಾರಿ ಹಲವು ಉದಾಹರಣೆಗೆ ನರೇಂದ್ರ ಮೋದಿ ಅವರ ಹೆಸರನ್ನು ಬಳಸಿ ಅವರ ಮೇಲೆ ಪ್ರೀತಿ ತೋರುವುದನ್ನು ನಾವೆಲ್ಲ ಕಂಡಿದ್ದೇವೆ.

ಆದರೆ ಈಗ ಮಧ್ಯಪ್ರದೇಶದ ಈ ಅಜ್ಜಿ ಮಂಗೀ ಬಾಯ್ ತನ್ವಾರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಪಾಲಿನ ಆಸ್ತಿಯನ್ನೆಲ್ಲಾ ನರೇಂದ್ರ ಮೋದಿ ಅವರ ಹೆಸರಿಗೆ ಬರೆಯಲು ಮುಂದಾಗಿದ್ದಾರೆ. ನರೇಂದ್ರ ಮೋದಿ ಅವರು ದೇಶದ ಜನತೆಗೆ ಒಳಿತು ಮಾಡಲಿದ್ದಾರೆ ಎನ್ನುವ ವಿಶ್ವಾಸ ಆಕೆಗಿರುವುದರಿಂದ ಇದು ದೇಶ ಸೇವೆ ಆಗುತ್ತದೆ ಎಂದು ಆಕೆ ಭಾವಿಸಿರಬಹುದು. ಈ ಅಜ್ಜಿ ಹೇಳಿರುವ ಅಪರೂಪದ ಮಾತುಗಳು ಈಗ ದೇಶದ ಎಲ್ಲ ಜನರ ಗಮನ ಸೆಳೆದಿದೆ. ಇಂತಹ ವಿಶೇಷ ನಿದರ್ಶನದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.