ನಮ್ಮ ದೇಶದ ಪ್ರತಿಯೊಂದು ಊರಿಗೂ ಗ್ರಾಮ ಪಂಚಾಯತಿಗಳು ಇದೆ ಎಂದು ಹೇಳಬಹುದು. ಹೌದು ಜನರ ಕುಂದು ಕೊರತೆಗಳನ್ನ ನಿವಾರಣೆ ಮಾಡುವ ಸಲುವಾಗಿ ಸರ್ಕಾರ ಪ್ರತಿಯೊಂದು ಊರಿನಲ್ಲಿ ಗ್ರಾಮ ಪಂಚಾಯತಿ ನಿಮ್ಮ ಜಿಲ್ಲಾ ಪಂಚಾಯತಿಯನ್ನ ಮಾಡಿದೆ. ಇನ್ನು ಒಂದು ಗ್ರಾಮ ಪಂಚಾಯತಿ ಅಂದಮೇಲೆ ಆ ಪಂಚಾಯತಿಗೆ ಒಬ್ಬ ಅಧ್ಯಕ್ಷ ಇದ್ದೆ ಇರುತ್ತಾನೆ ಮತ್ತು ಆತ ತನ್ನ ಊರಿಗೆ ಬೇಕಾದ ಸವಲತ್ತುಗಳನ್ನ ಒದಗಿಸುತ್ತಾನೆ ಎಂದು ಹೇಳಬಹುದು. ಇನ್ನು ಸಾಮಾನ್ಯ ಜನರಿಗೆ ಗ್ರಾಮ ಪಂಚಾಯತಿಯಲ್ಲಿ ನಮಗೆ ಯಾವಯಾವ ರೀತಿಯ ಸವಲತ್ತುಗಳು ಸಿಗುತ್ತದೆ ಮತ್ತು ಒಬ್ಬ ಗ್ರಾಮ ಪಂಚಾಯತಿ ಅಧ್ಯಕ್ಷ ಯಾವ ಸೌಲಭ್ಯಗಳನ್ನ ನಮಗೆ ಒದಗಿಸಬಹುದು ಅನ್ನುವುದು ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ ಎಂದು ಹೇಳಬಹುದು.
ಸ್ನೇಹಿತರೆ ಒಬ್ಬ ಗ್ರಾಮ ಪಂಚಾಯತಿ ಅಧ್ಯಕ್ಷ ತನ್ನ ಊರಿಗೆ ಯಾವಯಾವ ಸೌಲಭ್ಯವನ್ನ ಒದಗಿಸಿಕೊಡಬಹುದು ಅನ್ನುವುದಕ್ಕೆ ಈ ವ್ಯಕ್ತಿ ಉತ್ತಮವಾದ ಉದಾಹರಣೆ ಎಂದು ಹೇಳಬಹುದು. ಹಾಗಾದರೆ ಈ ವ್ಯಕ್ತಿ ಯಾರು ಮತ್ತು ಇವರು ತನ್ನ ಗ್ರಾಮಕ್ಕೆ ಒದಗಿಸಿಕೊಟ್ಟಿರುವ ಸೌಲಭ್ಯಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಪೆಟ್ಟು ಮಲ್ಯಮ್ ತಾಲೂಕಿನ ವದಂಟುರೈ ಗ್ರಾಮಕ್ಕೆ ಹೋದರೆ ಯಾವುದೋ ನಗರಕ್ಕೆ ಹೋದಂತೆ ಅನಿಸುತ್ತದೆ.
ಸ್ನೇಹಿತರೆ ಈ ಗ್ರಾಮದಲ್ಲಿ ಇರುವ ಬಹುತೇಕ ಎಲ್ಲಾ ಮನಯೆವರು ತಮ್ಮ ಮನೆಗೆ ಬೇಕಾದ ವಿದ್ಯುತ್ ಅನ್ನುವ ತಾವೇ ಉತ್ಪಾದಿಸಿಕೊಳ್ಳುವುದು ಮಾತ್ರವಲ್ಲದೆ ತಾವು ಉತ್ಪಾದಿಸಿದ ವಿದ್ಯುತ್ ಅನ್ನು ಸರ್ಕಾರಕ್ಕೆ ಮಾರಾಟ ಮಾಡುತ್ತಾರೆ. ಇನ್ನು ಈ ಗ್ರಾಮದಲ್ಲಿ ಇರುವ ಬಹುತೇಕ ಎಲ್ಲಾ ಮನೆಗಳು ಕಾಣುವುದಕ್ಕೆ ಒಂದೇ ತರ ಕಾಣುತ್ತದೆ ಮತ್ತು ಈ ಗ್ರಾಮದ ಜನರಿಗೆ ಕುಡಿಯಲು ಶುದ್ಧ ನೀರಿನ ಘಟಕವನ್ನ ಮಾಡಿಸಿಕೊಡಲಾಗಿದೆ. ಇನ್ನು ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಪೆಟ್ಟು ಮಲ್ಯಮ್ ತಾಲೂಕಿನ ವದಂಟುರೈ ಗ್ರಾಮ ಇಂದು ಭಾರತದಲ್ಲಿರುವ ಗ್ರಾಮಗಳಲ್ಲಿ ಉತ್ತಮವಾದ ಗ್ರಾಮ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಸ್ನೇಹಿತರೆ ಒಂದು ಕಾಲದಲ್ಲಿ ಈ ಗ್ರಾಮದಲ್ಲಿ ಕುಸಿಯಲು ನೀರು, ಓಡಾಡಲು ರಸ್ತೆ, ವಿದ್ಯುತ್ ಮತ್ತು ಉಳಿಯಲು ಅಲ್ಲಿನ ಜನರಿಗೆ ಸರಿಯಾದ ಮನೆಗಳು ಕೂಡ ಇರಲಿಲ್ಲ, ಆದರೆ ಈಗ ಈ ಗ್ರಾಮ ದೇಶದಲ್ಲಿ ಸ್ಮಾರ್ಟ್ ಗ್ರಾಮ ಅನಿಸಿಕೊಂಡಿದೆ. ಸ್ನೇಹಿತರೆ ಈ ಗ್ರಾಮ ಇಷ್ಟು ಪ್ರಸಿದ್ಧಿಯನ್ನ ಪಡೆದುಕೊಳ್ಳಲು ಕಾರಣ ಅಲ್ಲಿನ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಆರ್ ಷಣ್ಮುಗಂ. ಹೌದು ತನ್ನ ಗ್ರಾಮದ ಜನರು ಯಾವುದೇ ಸೌಕರ್ಯ ಇಲ್ಲದೆ ಗ್ರಾಮವನ್ನ ಬಿಟ್ಟು ಬೇರೆಬೇರೆ ಊರುಗಳಿಗೆ ಹೋಗುವುದನ್ನ ನೋಡಿದ ಆರ್ ಷಣ್ಮುಗಂ ಅವರು ತನ್ನ ಗ್ರಾಮವನ್ನ ಸ್ಮಾರ್ಟ್ ಗ್ರಾಮವಾಗಿ ಮಾಡಬೇಕು ಅನ್ನುವ ಉದ್ದೇಶದಿಂದ ಗ್ರಾಮದಲ್ಲಿ ಹಲವು ಯೋಜನೆಗಳನ್ನ ಆರಂಭ ಮಾಡಿದರು.
ಸುಮಾರಿ 25 ವರ್ಷದಿಂದ ಗ್ರಾಮದ ಪಂಚಾಯತಿಯ ಅಧ್ಯಕ್ಷರಾಗಿರುವ ಆರ್ ಷಣ್ಮುಗಂ ಅವರು ಸರಕಾರದಿಂದ ಬರುವ ಹಣವನ್ನ ಸದುಪಯೋಗ ಮಾಡಿಕೊಂಡು ವಿವಿಧ ಯೋಜನೆಯನ್ನ ಜಾರಿಗೆ ಜನರಿಗೆ ಮನೆ ಕಟ್ಟಿಸಿಕೊಡುವ ಕೆಲಸವನ್ನ ಮಾಡಿದರು. 1996 ರಲ್ಲಿ ಅಧ್ಯಕ್ಷರಾದ ಆರ್ ಷಣ್ಮುಗಂ ಅವರು ಕೇಂದ್ರ ಸರ್ಕಾರದ ಯೋಜನೆಯಾದ ರಾಜೀವ್ ಗಾಂಧಿ ನ್ಯಾಷನಲ್ ಡ್ರಿಂಕಿಂಗ್ ವಾಟರ್ ಸ್ಯಾನಿಟೇಶನ್ ಮಿಷನ್ ಯೋಜನೆಯಡಿಯಲ್ಲಿ ಇಡೀ ಗ್ರಾಮಕ್ಕೆ ನೀರನ್ನು ಒದಗಿಸುವ ಯೋಜನೆಯನ್ನು ಮಾಡಿದರು ಇದರಿಂದಾಗಿ ಇಡೀ ಗ್ರಾಮಕ್ಕೆ ದಿನದ 24 ಘಂಟೆ ಶುದ್ಧ ಕುಡಿಯುವ ನೀರು ದೊರಕಿಸಿಕೊಟ್ಟರು ಆರ್ ಷಣ್ಮುಗಂ ಅವರು. ಇನ್ನು ಇದಾದ ನಂತರ ಊರಿನಲ್ಲಿ ಇರುವ ಪ್ರತಿಯೊಂದು ಮನೆಗೆ ಬೆಳಕು ನೀಡುವ ಉದ್ದೇಶದಿಂದ ಮನೆಗಳ ಮೇಲೆ ಸೌರ ಘಟಕವನ್ನು ಸ್ಥಾಪಿಸಿ ಎಲ್ಲರ ಮನೆಗೂ ವಿದ್ಯುತ್ ಸಿಗುವ ಹಾಗೆ ಮಾಡಿದರು.
ಇನ್ನು ಜನರು ತಮ್ಮ ಮನೆಗೆ ವಿದ್ಯುತ್ ಬಳಕೆ ಮಾಡುವುದು ಮಾತ್ರವಲ್ಲದೆ ಸರಕಾರಕ್ಕೆ ಕೂಡ ವಿದ್ಯುತ್ ಪೂರೈಕೆ ಮಾಡಿದರು. ಇನ್ನು ಹಸಿರುಮನೆ ಯೋಜನೆಯ ಅಡಿಯಲ್ಲಿ ಗ್ರಾಮಕ್ಕೆ 850 ಮನೆಗಳನ್ನ ನಿರ್ಮಾಣ ಮಾಡಿಕೊಟ್ಟಿರುವ ಇವರು ಗ್ರಾಮಕ್ಕೆ ಡಾಂಬರ್ ರೋಡ್ ಕೂಡ ಮಾಡಿಸಿದ್ದಾರೆ. ಇನ್ನು ಗ್ರಾಮದಲ್ಲಿ ಹಲವು ಶಾಲೆಗಳನ್ನ ನಿರ್ಮಾಣ ಮಆಡಲಾಗಿದ್ದು ಎಲ್ಲಾ ಮಕ್ಕಳು ವಿದ್ಯಾಭ್ಯಾಸ ಕೂಡ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಸದ್ಯ ಈ ಗ್ರಾಮವನ್ನು ನೋಡುವುದಕ್ಕೆ ಭಾರತದ ಬೇರೆ ಬೇರೆ ಭಾಗಗಳಿಂದ ಜನರು ಬರುವುದು ಮಾತ್ರವಲ್ಲದೆ ವಿಶ್ವ ಬ್ಯಾಂಕಿನ ಸದಸ್ಯರು ಜನರು ಕೂಡ ಭೇಟಿ ನೀಡುತ್ತಿದ್ದಾರೆ. ಇನ್ನು ಈ ಗ್ರಾಮದ ಜನರು ರೈತರಾಗಿದ್ದು ಬಾಳೆಹಣ್ಣು ತೆಂಗಿನಕಾಯಿ ಮತ್ತು ಸಾಸಿವೆ ಕಾಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಸ್ನೇಹಿತರೆ ಷಣ್ಮುಗಂ ಅವರ ರೀತಿಯ ಗ್ರಾಮ ಪಂಚಾಯತಿ ಸದಸ್ಯ ಇನ್ನೊಬ್ಬ ಇರಲು ಸಾಧ್ಯವಿಲ್ಲ ಎಂದು ಹೇಳಬಹುದು. ಸ್ನೇಹಿತರೆ ಈ ಗ್ರಾಮ ಪಂಚಾಯತಿ ಅಧ್ಯಕ್ಷ ಷಣ್ಮುಗಂ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ