google-vs-infosysv

ಗೂಗಲ್ ಗೆ ಸೆಡ್ಡು ಹೊಡೆಯಲು ಅಖಾಡಕ್ಕಿಳಿಯುತ್ತಿದೆ ಇನ್ಫೋಸಿಸ್..! ಬಂತು ನೋಡಿ ಗೂಗಲ್ ನ ಅಪ್ಪನಂತ ತಂತ್ರಜ್ಞಾನ

Entertainment/ಮನರಂಜನೆ

ಯಾವುದೇ ವ್ಯಾಪಾರದಲ್ಲಿ ಏಕಸ್ವಾಮ್ಯ ಅಥವಾ ಮನೋಪಲಿ ಇರಬಾರದು, ಅದು ಅಹಂಕಾರಕ್ಕೆ ಕಾರಣವಾಗುತ್ತದೆ. ಇಷ್ಟು ದಿನ ಭಾರತದಲ್ಲಿ ಸೆಲ್ ಫೋನ್ ವಿಷಯಗಳಲ್ಲಿ ಗೂಗಲ್ ಮಾಡುತ್ತಿದ್ದುದ್ದು ಅದನ್ನೇ, ಗೂಗಲ್ ತನ್ನ ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸಿಕೊಂಡು ಮೊಬೈಲ್ ಆಪ್ ಗಳ ವಿಷಯದಲ್ಲಿ ಏಕ ಸ್ವಾಮ್ಯವನ್ನು ಸಾಧಿಸುತ್ತಿದೆ. ಕಾಂಪಿಟೇಶನ್ ಗೆ ಅವಕಾಶವಾಗದ ಹಾಗೆ ನೋಡಿಕೊಳ್ಳುತ್ತಿದೆ ಅಂತ ಭಾರತದ CCI ಅಂದರೆ ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾ ಗೂಗಲ್ ಗೆ ಸುಮಾರು 1,337 ಕೋಟಿ ರೂಪಾಯಿಗಳ ದಂಡ ವಿಧಿಸಿ ಆದೇಶವನ್ನು ಕೊಟ್ಟಿತ್ತು.

ಆ ದಂಡವನ್ನು ನಾವು ಕಟ್ಟುವುದಿಲ್ಲ ಅಂತ ಗೂಗಲ್ ನ್ಯಾಷನಲ್ ಕಂಪನಿ ಲಾ ಅಪಿಲೇಟ್ ಟ್ರಿಬುನಲ್ ಗೆ ಮೇಲ್ಮನವಿಯನ್ನು ಸಲ್ಲಿಸಿತು, ಅಲ್ಲಿ ಮೊದಲು ನಿಮಗೆ ವಿಧಿಸಿರುವ ದಂಡವೇನಿದೆ, ಅದರಲ್ಲಿ ಶೇಕಡ 10 ರಷ್ಟನ್ನು ಕಟ್ಟಿ ಆನಂತರ ಬನ್ನಿ ಎಂದು ಅಪಿಲೇಟ್ ಟ್ರಿಬುನಲ್ ಹೇಳಿದ ಮೇಲೆ ಅದನ್ನು ಪ್ರಶ್ನಿಸಿ ಭಾರತದ ಸರ್ವೋಚ್ಚ ನ್ಯಾಯಾಲಯಕ್ಕೆ ಗೂಗಲ್ ಮೇಲ್ಮನವಿಯನ್ನು ಸಲ್ಲಿಸಿತು

ಒಂದು ವೇಳೆ ನೀವೇನಾದರೂ ನಮ್ಮ ಮೇಲೆ ಒತ್ತಡವನ್ನು ಹೇರಿದರೆ ಭಾರತದಲ್ಲಿರುವಂತಹ ಆಂಡ್ರಾಯ್ಡ್ ಫೋನ್ ಗಳು ಮುಂದೆ ತುಂಬಾ ಕಷ್ಟಪಡಬೇಕಾಗುತ್ತದೆ, ನಿಮ್ಮಲ್ಲಿ ಆಂಡ್ರಾಯ್ಡ್ ಫೋನ್ ಗಳ ಬೆಳವಣಿಗೆ ನಿಂತು ಹೋಗುತ್ತದೆ ಎಂದು ಗೂಗಲ್ ಭಾರತಕ್ಕೆ ಧಮಕಿಯನ್ನು ಕೊಟ್ಟಿತು. ಆದರೆ ಈಗ ಅದೇ ಗೂಗಲ್ ದಾರಿಗೆ ಬರುತ್ತಿದೆ, ಹಾಗಾದರೆ ನಮ್ಮನ್ನು ಎದುರು ಹಾಕಿಕೊಂಡವರು ನಿಮ್ಮ ಬೆಳವಣಿಗೆ ನಿಂತು ಹೋಗುತ್ತದೆ ಎನ್ನುವವರು ಈಗ ನಿಮ್ಮ ಭಾರತದ ಕಾನೂನುಗಳನ್ನು ಅನುಸರಿಸುತ್ತೇವೆ ಎನ್ನುತ್ತಿರುವುದು ಯಾಕೆ?




ಅವರಲ್ಲಿ ಈ ರೀತಿಯಾದಂತಹ ಬದಲಾವಣೆ ಯಾಕೆ ಆಗುತ್ತಿದೆ ಎನ್ನುವುದು ನಿಮಗೆ ಅನ್ನಿಸಬಹುದು. ಅದಕ್ಕೆ ಕಾರಣ ಭಾರತದಲ್ಲಿ ತಯಾರಾಗುತ್ತಿರುವ ಶುದ್ಧ ಸ್ವದೇಶಿ ತಂತ್ರಜ್ಞಾನದ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್. ಹಾಗಾದರೆ ಏನಿದು ಮೊಬೈಲ್ ಆಪರೇಷನ್ ಸಿಸ್ಟಮ್ ಇದು ಗೂಗಲ್ ನಂತಹ ಗೂಗಲ್ ಅನ್ನು ಎದುರಿಸುತ್ತಿರುವುದು ಯಾಕೆ?

ಇದು ತಯಾರಾಗಿ ಬಂದರೆ ಏನಾಗುತ್ತದೆ ಎನ್ನುವುದರ ಬಗ್ಗೆ ಒಂದಷ್ಟು ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಕಳೆದ ವರ್ಷ ಗೂಗಲ್ ಸಂಸ್ಥೆಗೆ ಭಾರತದ ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾ ಸುಮಾರು 1339 ಕೋಟಿಯಷ್ಟು ದಂಡವನ್ನು ವಿಧಿಸಿತು, ಅದಕ್ಕೆ ಕಾರಣ ಗೂಗಲ್ ತನ್ನ ಆಂಡ್ರಾಯ್ಡ್ ವೈರಸ್ ಗಳ ಮೂಲಕ ಭಾರತದ ಆಂಡ್ರಾಯ್ಡ್ ಮೊಬೈಲ್ ಫೋನ್ ಆಪ್ ಗಳ ವಿಷಯವಾಗಿ ಏಕ ಸಾಮ್ಯವನ್ನು ಸಾಧಿಸುತ್ತಿದೆ ಮತ್ತು ಹಾಗೆಯೇ ಅಲ್ಲಿ ಯಾವುದೇ ಕಾಂಪಿಟೇಶನ್ ಗೆ ಅವಕಾಶ ಮಾಡದಂತೆ ತಡೆಯುತ್ತಿತ್ತು.

ಸಾಮಾನ್ಯವಾಗಿ ಕಾಂಪಿಟೇಶನ್ ಇರುವ ಕಡೆ ಗ್ರಾಹಕರಿಗೆ ಅನುಕೂಲಗಳು ಹೆಚ್ಚಿರುತ್ತವೆ, ಆಯ್ಕೆಗಳು ಹೆಚ್ಚಿರುತ್ತವೆ ಹಾಗೂ ತಮ್ಮ ಸೇವೆಗಳ ಜೊತೆಗೆ ಕಡಿಮೆ ಬೆಲೆ ಕೂಡ ಇರುತ್ತದೆ. ಆದರೆ ಇದಕ್ಕೆ ಗೂಗಲ್ ಅವಕಾಶ ಕೊಡುತ್ತಿಲ್ಲ ಎನ್ನುವುದು ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾದ ಆರೋಪ ಆಗಿತ್ತು. ಅಷ್ಟಕ್ಕೂ ಆಂಡ್ರಾಯ್ಡ್ ಫೋನ್ ಗಳಿಗೂ ಗೂಗಲ್ ಗೂ ಏನು ಸಂಬಂಧ, ಗೂಗಲ್ ಎನ್ನುವುದು ಸರ್ಚಿಂಗ್ ಗೆ ಇರುವಂತಹ ಆಪ್ ಅಲ್ಲವಾ, ಅದು ಹೇಗೆ ಮೊಬೈಲ್ ಆಪ್ ಗಳ ಕಾಂಪಿಟೇಶನ್ ಅನ್ನು ತಡೆಯುತ್ತದೆ ಎಂದು ನಿಮಗೆ ಅನ್ನಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ…

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...