
ಹಿಂದಿನ ಕಾಲದಲ್ಲಿ ಯಾರಿಗಾದರೂ ಯಾವುದರ ಬಗ್ಗೆಯಾದರೂ ಗೊತ್ತಿಲ್ಲದೆ ಹೋದಾಗ ಹಿರಿಯರನ್ನು ಕೇಳಿ ಉತ್ತರ ಕಂಡು ಕೊಳ್ಳುತ್ತಿದ್ದರು. ಅಥವಾ ತಮ್ಮ ಗುರುಗಳ ಬಳಿ ಕೇಳಿ ಗೊಂದಲ ಬಗೆಹರಿಸಿ ಕೊಳ್ಳುತ್ತಿದ್ದರು. ಆದರೆ ಇದೀಗ ಪ್ರತಿಯೊಬ್ಬ ಆನ್ಡ್ರಾಯ್ಡ್ ಮೊಬೈಲ್ ಬಳಕೆದಾರರ ಆಲ್ ಟೈಂ ಗುರು ಅಂದರೆ ಅದು ಗೂಗಲ್. ಹೌದು, ಗೂಗಲ್‌ನಲ್ಲಿ ಯಾವುದೇ ವಿಷಯದ ಕುರಿತು ಸರ್ಚ್ ಮಾಡಿದರೂ ಅದರ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ.
ಗೂಗಲ್ ನೀಡದ ಮಾಹಿತಿ ಇರಲು ಸಾಧ್ಯವೇ ಇಲ್ಲ. ಯಾರಿಗಾದರೂ ಒಂದು ಕಂಪೆನಿಯ ವಿಳಾಸ ಬೇಕು ಅಂದರೂ ಗೂಗಲ್ ನಲ್ಲಿ ಹುಡುಕಿದರೆ ಸಾಕು, ಸಿನಿಮಾ, ಶಾಪಿಂಗ್, ಆರೋಗ್ಯ, ಊಟ ತಿಂಡಿ, ವೈಜ್ಞಾನಿಕ, ತಾಂತ್ರಿಕ, ಹೀಗೆ ಒಂದಲ್ಲ ಎರಡಲ್ಲ ಅಪಾರವಾದ ಮಾಹಿತಿ ರಾಶಿಕಣಜವನ್ನೇ ಗೂಗಲ್ ಹೊಂದಿದೆ. ಹೀಗೆ ಸಾಮಾನ್ಯರಿಗೆ ಭವಿಷ್ಯವನ್ನು ತೋರಿಸುವ ಈ ಬೃಹತ್ ಕಂಪನಿ ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ವಿಶ್ವದ ಅಸಮಾನ್ಯ ಸಾಮ್ರಾಟ ಆಗಲಿದೆ ಎಂದು ಹೇಳಲಾಗಿದೆ.
ಚಿಕ್ಕ ಮಕ್ಕಳಿಂದ ಹಿಡಿದು, ವಯಸ್ಸಾದವರಿಗೆ ಬೇಕಾದ ಎಲ್ಲಾ ಮಾಹಿತಿಗಳುಸಿಗುವ ಈ ಗೂಗಲ್ ಈ ವರೆಗೆ ಯಾರಿಗೂ ನಿರಾಸೆ ಮಾಡಿಲ್ಲ. ಯಾವುದರ ಬಗ್ಗೆಯಾದರೂ ಗೊಂದಲ ಇದ್ದು ಅದನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದರೆ ತಕ್ಷಣ ಉತ್ತರ ಸಿಗುತ್ತದೆ. ಹೀಗೆ ಇಂತಹ ಮೇಧಾವಿ ಗೂಗಲ್ ನಲ್ಲಿ ಏನೆಲ್ಲಾ ಅತಿಯಾಗಿ ಸರ್ಚ್ ಮಾಡಲಾಗುತ್ತದೆ, ಯಾವ ವರ್ಗ ಯಾವ ವಿಷಯದ ಬಗ್ಗೆ ಚರ್ಚೆ ಮಾಡುತ್ತಾರೆ.
ಅನ್ನುವ ವರದಿಯನ್ನು ಕೂಡ ಒದಗಿಸುತ್ತದೆ. ಅದರ ಪ್ರಕಾರ ಹೆಣ್ಮಕ್ಕಳು ಒಬ್ಬರೇ ಇರುವಾಗ ಮೊಬೈಲ್ ಹಿಡಿದುಕೊಂಡು ಗೂಗಲ್‌ನಲ್ಲಿ ಏನು ಸರ್ಚ್ ಮಾಡುತ್ತಾರೆ ಅನ್ನುವುದರ ಬಗ್ಗೆ ಮಾಹಿತಿ ಸಿಕ್ಕಿದೆ. ಹೌದು, ದೇಶದ ಒಟ್ಟು 150 ಮಿಲಿಯನ್ ಇಂಟರ್ನೆಟ್ ಬಳಕೆದಾರರಲ್ಲಿ, ಭಾರತದಲ್ಲಿ ಸುಮಾರು 60 ಮಿಲಿಯನ್ ಮಹಿಳೆಯರು ಆನ್‌ಲೈನ್‌ನಲ್ಲಿರುತ್ತಾರಂತೆ. ಅವರು ಏನು ಸರ್ಚ್ ಮಾಡುತ್ತಾರೆ ಅನ್ನುವುದರ ಬಗ್ಗೆಯೂ ಗೂಗಲ್ ತಿಳಿಸಿದೆ.
ಹೌದು, ಹೆಣ್ಮಕ್ಕಳು ಯಾವಾಗಲೂ ಮಹತ್ವಾಕಾಂಕ್ಷೆಯವರಾಗಿರುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ಇರುವಾಗಲೇ ಮುಂದೆ ಯಾವ ಕೋರ್ಸ್ ತೆಗೆದುಕೊಂಡರೆ ಒಳ್ಳೆಯದು ಅನ್ನುವುದರ ಕುರಿತಾಗಿ ಹೆಚ್ಚಾಗಿ ಸರ್ಚ್ ಮಾಡುತ್ತಾರೆ. ಮುಂದೆ ಕೋರ್ಸ್ ಆಯ್ಕೆಯಲ್ಲಿ ಗೊಂದಲ ಇರಬಾರದು ಅನ್ನುವ ನಿಟ್ಟಿನಲ್ಲಿ ಈ ಮುಂದಾಲೋಚನೆ ಅವರದ್ದು. ಅದೇ ರೀತಿ ಹೆಣ್ಮಕ್ಕಳು ಹೆಚ್ಚಾಗಿ ಬಗೆ ಬಗೆ ಅಡುಗೆ ಬಗ್ಗೆ ಹುಡುಕಾಡುತ್ತಾರೆ ಎನ್ನಲಾಗಿದೆ.
ಹೆಚ್ಚಿನ ಹೆಣ್ಮಕ್ಕಳು ಅಡುಗೆ ಪ್ರಿಯರು. ಹಾಗಾಗಿ ವೈರೈಟಿ ವೈರೈಟಿಯ ಅಡುಗೆಯ ಕುರಿತು ಸರ್ಚ್ ಮಾಡುತ್ತಾರೆ. ಇನ್ನು ಹೆಣ್ಮಕ್ಕಳು ಫ್ಯಾಷನ್ ಪ್ರಿಯರು. ಇಂಟರ್ ನೆಟ್ ನಲ್ಲಿ ಮಾರುಕಟ್ಟೆಗೆ ಹೊಸ ಶೈಲಿಯ ಬಟ್ಟೆಗಳು ಬಂದಿರುವ ಕುರಿತಾಗಿ ಮಾಹಿತಿ ಪಡೆಯುತ್ತಾರೆ ಅದೇ ರೀತಿ ಹೆಚ್ಚಾಗಿ ಆನ್ಲೈನ್ ಶಾಪಿಂಗ್ ಮಾಡಲು ಗೂಗಲ್ ಬಳಸುತ್ತಾರೆ. ಸೌಂದರ್ಯವರ್ಧಕ ಗಳ ಬಗ್ಗೆ ತಿಳಿದುಕೊಳ್ಳಲು ಹೆಚ್ಚಾಗಿ ಗೂಗಲ್ ನಲ್ಲಿ ಸರ್ಚ್ ಮಾಡುತ್ತಾರೆ.
ಯಾವ ರೀತಿ ಸೀರೆಯನ್ನು ಸ್ಟೈಲಿಷ್ ಆಗಿ ಉಡಬಹುದು, ಡ್ರೆಸ್ ಹಾಗೂ ಬ್ಲೌಸ್ ಡಿಸೈನ್ ಅದೇ ರೀತಿ ಹೇರ್ ಸ್ಟೈಲ್, ಮೆಹಂದಿ ಡಿಸೈನ್ ಗಳ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡುತ್ತಾರಂತೆ. ಹೆಣ್ಮಕ್ಕಳು ಈ. ಆಸಕ್ತಿದಾಯಕ ವಿಷಯಗಳ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.
Comments are closed.