ಇದು ಆಧುನಿಕ ಮೊಬೈಲ್ ಜಗತ್ತು, ಇಂದು ಪ್ರತಿಯೊಬ್ಬ ವ್ಯಕ್ತಿ ವೇಗವಾಗಿ ಓಡುತ್ತಿರುವ ಈ ಜಗತ್ತಿನಲ್ಲಿ ಹಲವಾರು ವಿಷಯಗಳಿಗೆ ಇಂಟರ್ನೆಟ್ ಮೇಲೆ ಅತೀಯಾಗಿ ಅವಲಂಬಿತರಾಗಿದ್ದಾರೆ. ತಮ್ಮ ದಿನನಿತ್ಯದ ಆಗುಹೋಗುಗಳನ್ನು ಜಗತ್ತಿನ ಜೊತೆ ಮೊಬೈಲ್ ಅಲ್ಲಿ ಹಂಚಿಕೊಳ್ಳುತ್ತಾರೆ ಹಾಗೆ ತಮ್ಮ ಸಮಸ್ಯೆಗಳಿಗೂ ಮೊಬೈಲ್ ಮೂಲಕವೇ ಉತ್ತರ ಕಂಡುಕೊಳ್ಳುತ್ತಾರೆ. ಇದೀಗ ಕೆಳಗಿನ ವಿಷಯವು ನಿಮಗೆ ಅಚ್ಚರಿ ಪಡಿಸಬಹುದು ಹಾಗೂ ಮಹಿಳೆಯರು ಇಂಟರ್ನೆಟ್ ಅಲ್ಲಿ ಏನನ್ನು ಹುಡುಕುತ್ತಾರೆ ಎಂದು ತಿಳಿಯಿರಿ.
ಇಂದಿನ ಕಾಲದಲ್ಲಿ ಜನರು ತಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯಲು ಗೂಗಲ್‌ನ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಮದುವೆಯಾಗಿರುವ ಅಥವಾ ಮದುವೆಯಾಗಲಿರುವ ಮಹಿಳೆಯರು ಖಂಡಿತವಾಗಿಯೂ ಗೂಗಲ್‌ನಲ್ಲಿ ಕೆಲವು ವಿಷಯಗಳನ್ನು ಹುಡುಕುತ್ತಾರೆ. ವಿವಾಹಿತ ಮಹಿಳೆಯರು ತಿಳಿದುಕೊಳ್ಳಲು ಬಯಸುವ ಗೂಗಲ್‌ನ ಹುಡುಕಾಟದ ಕೆಲವು ಪಟ್ಟಿ ಇಲ್ಲಿದೆ ನೋಡಿ ಮಹಿಳೆಯರು ಗಂಡನ ಜೊತೆ ಹೇಗಿದ್ದರೆ ಚಂದ, ಅತ್ತೆಯೊಂದಿಗೆ ಹೇಗೆ ವರ್ತಿಸಬೇಕು, ಮನೆಯನ್ನು ನಿಭಾಯಿಸುವುದು ಹೇಗೆ ಮೊದಲಾದ ವಿಚಾರವನ್ನು ಮಹಿಳೆಯರು ಗೂಗಲ್ ನಲ್ಲಿ ಹುಡುಕುತ್ತಾರಂತೆ.
ವಿವಾಹಿತ ಮಹಿಳೆಯರು ತಮ್ಮ ಪತಿಗೆ ಸಂಬಂಧಿಸಿದ ಮಾಹಿತಿಯನ್ನು ಗೂಗಲ್‌ನಲ್ಲಿ ಹುಡುಕಲು ಬಯಸುತ್ತಾರೆ ಎಂಬುದು ಅಧ್ಯಯನದಲ್ಲಿ ಬಹಿರಂಗವಾಗಿದೆ. ಕೆಲವು ವಿವಾಹಿತ ಮಹಿಳೆಯರು ತಮ್ಮ ಪತಿ, ತನ್ನ ಮಾತನ್ನು ಕೇಳುವ ಹಾಗೆ ಏನು ಮಾಡುವುದು, ಮಹಿಳೆ ಪುರುಷರ ಸ್ವಭಾವ, ಇಷ್ಟಕಷ್ಟಗಳ ಬಗ್ಗೆ ಗೂಗಲ್‌ನಲ್ಲಿ ಹುಡುಕಿ ತಿಳಿದುಕೊಳ್ಳಲು ಯತ್ನಿಸುತ್ತಾಳಂತೆ! ಮಗುವಾಗಲು ಯಾವ ಸಮಯ ಸರಿಯಾಗಬಹುದು, ಮಗು ಯಾವಾಗ ಬೇಕು ಎಂಬ ನಿರ್ಧಾರ ಹುಡುಕುತ್ತಾರಂತೆ ಕೆಲವು ವಿವಾಹಿತ ಮಹಿಳೆಯರು.