ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಬಹುಮುಖ್ಯವಾದ ಹಂತ. ಪ್ರಪಂಚದ ಬಹುತೇಕರು ತಮ್ಮ ಮದುವೆಯ ಬಗ್ಗೆ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಮದುವೆ ಹೀಗಾಗಬೇಕು, ಹಾಗಾಗಬೇಕು, ಅದ್ಧೂರಿಯಾಗಿ ಅಗಬೇಕು, ಬಾಳಸಂಗಾತಿ ಹೇಗಿರಬೇಕು ಎನ್ನುವ ಎಲ್ಲಾ ವಿಚಾರಗಳ ಬಗ್ಗೆ ಹುಡುಗ ಹುಡುಗಿಯರು ಒಮ್ಮೆಯಾದರೂ ಯೋಚನೆ ಮಾಡಿಯೇ ಇರುತ್ತಾರೆ.
ಆದರೆ ಈಗಿನ ಕಾಲದಲ್ಲಿ ನಡೆಯುವ ಎಲ್ಲಾ ಮದುವೆಗಳು ಸುಖಾಂತ್ಯ ಕಾಣುತ್ತಿಲ್ಲ. ಈಗಿನ ಜೆನೆರೇಷನ್ ನಲ್ಲಿ ಮದುವೆ ಮು-ರಿದು ಬೀ-ಳುತ್ತಿರುವುದು ಸಾಮಾನ್ಯ ಎನ್ನುವಂತೆ ಆಗಿದೆ. ಹಲವು ಲವ್ ಮ್ಯಾರೇಜ್, ಅರೇಂಜ್ಡ್ ಮ್ಯಾರೇಜ್ ಗಳು ಡೈವರ್ಸ್ ನಲ್ಲಿ ಕೊನೆಯಾಗುತ್ತಿದೆ. ಮದುವೆ ಮತ್ತು ಅದರ ಕನಸುಗಳ ಬಗ್ಗೆ ಹೇಳುವುದಾದರೆ, ಅದರಲ್ಲೂ ಹೆಣ್ಣುಮಕ್ಕಳು ಮದುವೆ ಬಗ್ಗೆ ಚಿಕ್ಕವರಾಗಿದ್ದಾಗಿನಿಂದಲೂ ಒಂದಲ್ಲ ಒಂದು ಕನಸು ಕಟ್ಟಿಕೊಂಡಿರುತ್ತಾರೆ
ಪ್ರತಿಯೊಬ್ಬ ಹೆಣ್ಣಿಗೂ ತನ್ನ ಗಂಡ ತನ್ನ ಜೊತೆಯಲ್ಲೇ ಇರಬೇಕು, ಗಂಡನ ಪ್ರೀತಿ ತನಗೆ ಮಾತ್ರ ಸಿಗಬೇಕು ಎಂದು ಆಸೆ ಇರುತ್ತದೆ. ಜನ್ಮಪೂರ್ತಿ ಜೀವನ ಪೂರ್ತಿ ಜೊತೆಗಿರುವ ಪ್ರಮಾಣ ಮಾಡಿ ಮದುವೆಯಾಗುವ ಗಂಡನನ್ನು ಮತ್ತೊಬ್ಬರ ಜೊತೆ ಹoಚಿಕೊಳ್ಳಲು ಯಾವ ಹೆಣ್ಣು ಇಷ್ಟಪಡುವುದಿಲ್ಲ. ಆದರೆ ಇಲ್ಲಿ ಇಬ್ಬರು ಬೆಸ್ಟ್ ಫ್ರೆಂಡ್ಸ್ ಗೆ ಮದುವೆ ಮೇಲಿನ ಆಸೆಯೇ ಬೇರೆ ರೀತಿ ಇದೆ.
ಮಲೇಷಿಯಾದಲ್ಲಿ ವಾಸ ಮಾಡುಗ ಈ ಇಬ್ಬರು ಹುಡುಗಿಯರು, ನೋಡಲು ಸುಂದರವಾಗಿದ್ದರೆ. ಇವರಿಬ್ಬರು ನಿಜ ಜೀವನದಲ್ಲಿ ಬೆಸ್ಟ್ ಫ್ರೆಂಡ್ಸ್, ಈ ಇಬ್ಬರು ಹುಡುಗಿಯರು ಈಗ ಮದುವೆ ಆಗಬೇಕು ಎಂದು ತೀರ್ಮಾನ ಮಾಡಿದ್ದಾರೆ. ಮದುವೆಯಾಗಲು ಸೂಕ್ತವಾದ ವರನನ್ನು ಸಹ ಹುಡುಕುತ್ತಿದ್ದಾರೆ. ಆದರೆ ಈ ಹುಡುಗಿಯರ ಬಳಿ ಮದುವೆ ಬಗ್ಗೆ ಒಂದು ವಿಚಿತ್ರವಾದ ಆಸೆ ಇದೆ.
ಅದೇನೆಂದರೆ ತಮ್ಮಿಬ್ಬರನ್ನು ಒಬ್ಬನೇ ಹುಡುಗ ಮದುವೆಯಾಗಬೇಕು ಎಂದು ಇವರಿಬ್ಬರು ಆಸೆ ಪಟ್ಟಿದ್ದಾರೆ. ಈ ಹುಡುಗಿಯರಿಗೆ ಮದುವೆಗಿಂತ ಸ್ನೇಹದ ಮೇಲೆ ಒಲವು ಜಾಸ್ತಿ ಇರುವ ಕಾರಣ, ಒಂದೇ ಹುಡುಗನನ್ನು ಮದುವೆಯಾಗಲು ಬಯಸುತ್ತಿದ್ದಾರೆ. ಇಬ್ಬರು ಹೆಂಡತಿಯರನ್ನು ನೋಡಿಕೊಳ್ಳುವಂಥ ವರ ಇದ್ದರೆ ಮದುವೆಗೆ ಸಿದ್ಧ ಎಂದು ಫೇಸ್ ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.
ವೈರಲ್ ಸೆನ್ಸೆ ಮಲೇಷಿಯಾ ಎನ್ನುವ ಹೆಸರಿನ ಫೇಸ್ ಬುಕ್ ಖಾತೆಯ ಮೂಲಕ ಒಬ್ಬನೇ ಗಂಡ ಬೇಕು ಎನ್ನುವುದನ್ನು ತಿಳಿಸಿದ್ದಾರೆ. ಈ ಹುಡುಗಿಯರ ಹುಚ್ಚಾಟದ ಕ್ರೇಜ್ ನೋಡಿದರೆ, ಈ ರೀತಿಯ ಹುಡುಗಿಯರು ಇರುತ್ತಾರಾ ಎಂದು ಶಾ-ಕ್ ಆಗುವುದು ಖಂಡಿತ. ಇದುವರೆಗೂ ಯಾವ ಹುಡುಗಿಯರಿಗೂ ಬರದಂಥ ವಿಚಿತ್ರ ಆಸೆ ಈ ಹುಡುಗಿಯರಿಗೆ ಬಂದಿದೆ.
ಇವರಿಬ್ಬರನ್ನು ಕಟ್ಟಿಕೊಳ್ಳುವಂತಹ ಆ ಪುಣ್ಯಾತ್ಮ ಯಾರಾಗಬಹುದು ಎನ್ನುವ ಊಹೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿದೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನರು ಇದರ ಬಗ್ಗೆ ಪರ ವಿರೋಧ ಚರ್ಚೆಗಳನ್ನು ಮಾಡುತ್ತಿದ್ದಾರೆ. ಈ ವಿಷಯ ಮಲೇಷಿಯಾದಲ್ಲಿ ಅಲ್ಲದೆ ಭಾರತದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.