ಸ್ತ್ರೀ

ಈ ತಪ್ಪುಗಳನ್ನು ಸ್ತ್ರೀಯರು ಮಾಡಿದರೆ ಗಂಡನು ಬೀದಿಗೆ ಬರುವುದು ಖಚಿತ

Girls Matter/ಹೆಣ್ಣಿನ ವಿಷಯ

ಸ್ತ್ರೀಯರ ಈ ಒಂದು ಗುಣ ತನ್ನ ಗಂಡನನ್ನು ಒಂದೇ ರಾತ್ರಿಯಲ್ಲಿ ಶ್ರೀಮಂತರಾಗಿ ಮಾಡಬಹುದು ಹಾಗೂ ಬೀದಿಗೂ ತರಬಹುದು. ಮನೆಯಲ್ಲಿ ಏನಾದರೂ ಈ ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತಿದ್ದರೆ ಬಡತನ ಎಂಬುದನ್ನು ತಪ್ಪಿಸಲು ಯಾವುದೇ ಕಾರಣಕ್ಕೂ ಸಾಧ್ಯವಾಗುವುದಿಲ್ಲ. ಮನೆಯಲ್ಲಿರುವ ಮಹಿಳೆಯರು ಕೆಲವೊಂದು ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಒಂದುವೇಳೆ ಏನಾದರೂ ಮಾಡಿದರೆ ಲಕ್ಷ್ಮೀದೇವಿಯು ಕೋಪಗೊಂಡು ನಿಮ್ಮ ಮನೆಯನ್ನು ಬಿಟ್ಟು ಹೋಗುತ್ತಾರೆ.

ಪ್ರಾಚೀನಕಾಲದಿಂದಲೂ ಮನೆಯ ಹೆಣ್ಣುಮಕ್ಕಳನ್ನು ಲಕ್ಷ್ಮಿ ಸ್ವರೂಪ ಎಂದು ಕರೆಯಲಾಗುತ್ತದೆ. ಮನೆಯಲ್ಲಿ ಹೆಣ್ಣು ಮಕ್ಕಳು ಮಾಡುವ ಚಿಕ್ಕ ತಪ್ಪಿನಿಂದ ಮನೆಯಲ್ಲಿ ಅಶಾಂತಿ, ದರಿದ್ರತನ, ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ. ಹಾಗಾದರೆ ಹೆಣ್ಣು ಮಕ್ಕಳು ಯಾವ ತಪ್ಪುಗಳನ್ನು ಮಾಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.

ಮನೆಯಲ್ಲಿ ಊಟ ಮಾಡುವಾಗ ಯಾವ ಮಹಿಳೆಯು ಕಾಲನ್ನು ಅಲ್ಲಾಡಿಸಿಕೊಂಡು ಊಟ ಮಾಡುತ್ತಾರೋ ಆ ಮನೆಯು ಯಾವಾಗ ಬೇಕಾದರೂ ನಾಶವಾಗುತ್ತದೆ. ಈ ರೀತಿ ವರ್ತನೆಯಿಂದ ತಾಯಿ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ ಹಾಗೂ ಮನೆಯಿಂದ ಹೊರಟು ಹೋಗುತ್ತಾಳೆ. ಯಾರ ಮನೆಯಲ್ಲಿ ಮಹಿಳೆಯರು ಪೊರಕೆಯನ್ನು ತುಳಿಯುತ್ತಾರೆ ಮತ್ತು ಪೊರಕೆಯಿಂದ ಯಾವುದಾದರೂ ಪ್ರಾಣಿಗಳನ್ನು ಹೊಡೆದರೆ ತಾಯಿ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಯಾವಾಗಲೂ ಆರೋಗ್ಯದ ಸಮಸ್ಯೆಯೂ ಕಾಡುತ್ತಿರುತ್ತದೆ.

ಮದುವೆಯಾದ ಸ್ತ್ರೀಯರು ಎಂದಿಗೂ ಈ ಚಿಕ್ಕ ತಪ್ಪುಗಳನ್ನು ಮಾಡಬಾರದು - Karnataka No 1 Samachara

ಅಡುಗೆ ಕೋಣೆಯಲ್ಲಿ ಎಂಜಲು ತಟ್ಟೆಯನ್ನು ಅಥವಾ ಪಾತ್ರೆಗಳನ್ನು ಒಲೆಯ ಮೇಲೆ ಇಟ್ಟು ಹಾಗೆ ಮಲಗಿಕೊಂಡರೆ ಅಶುಭವಾಗುತ್ತದೆ. ಈ ರೀತಿಯ ವರ್ತನೆಯಿಂದ ಬಡತನ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಬಾಗಿಲನ್ನು ಜೋರಾಗಿ ತೆಗೆಯುವುದು ಅಥವಾ ಜೋರಾಗಿ ಹಚ್ಚುವುದು ಮಾಡುತ್ತಿದ್ದರೆ ಅದನ್ನು ಕೊಡಲೆ ನಿಲ್ಲಿಸುವುದು ಉತ್ತಮ, ಏಕೆಂದರೆ ಈ ರೀತಿಯ ಕೆಲಸವನ್ನು ಮಾಡಿದರೆ ತಾಯಿ ಲಕ್ಷ್ಮೀದೇವಿಯು ಆ ಸ್ಥಳದಲ್ಲಿ ವಾಸವನ್ನು ಮಾಡುವುದಿಲ್ಲ.

ಯಾರ ಮನೆಯಲ್ಲಿ ಹೆಣ್ಣು ಮಕ್ಕಳು ಹೊಸಲಿನ ಮೇಲೆ ಕುಳಿತುಕೊಂಡು ಅಥವಾ ಹಾಸಿಗೆ ಮೇಲೆ ಕುಳಿತುಕೊಂಡು ಊಟ ಮಾಡುತ್ತಾರೋ ಅಂತವರು ಈ ಕೂಡಲೇ ಈ ರೀತಿ ಮಾಡುವುದನ್ನು ನಿಲ್ಲಿಸಬೇಕು ಏಕೆಂದರೆ ಇದು ಅಶುಭವಾಗಿದೆ.

ಯಾರ ಮನೆಯಲ್ಲಿ ಸೂರ್ಯ ಮುಳುಗಿದ ನಂತರ ಕಸವನ್ನು ಗುಡಿಸುವುದು ಹಾಗೂ ಮನೆಯನ್ನು ಒರೆಸುವುದನ್ನು ಮಾಡುತ್ತಾರೋ ಅಲ್ಲಿಗೆ ದರಿದ್ರ ಲಕ್ಷ್ಮಿಯು ಬಹಳ ಬೇಗ ಬರುತ್ತಾಳೆ. ಅದರಲ್ಲೂ ವಿಶೇಷವಾಗಿ ಗುರುವಾರದ ದಿನದಂದು ಮನೆಯನ್ನು ಒರೆಸಬಾರದು.

ಮನೆಯಲ್ಲಿ ಜಗಳ ಮಾಡಬೇಕಾದರೆ ಹೆಣ್ಣುಮಕ್ಕಳು ಕೆಟ್ಟ ಪದವನ್ನು ಉಪಯೋಗಿಸುತ್ತಿದ್ದರೆ ಆ ಸ್ಥಳದಲ್ಲಿ ಲಕ್ಷ್ಮೀದೇವಿ ವಾಸಿಸುವುದಿಲ್ಲ. ಮದುವೆಯಾದ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಮಂಗಳಸೂತ್ರ, ಕಾಲುಂಗುರ ಹಾಗೂ ಬಟ್ಟೆಗಳನ್ನು ಬೇರೆಯವರಿಗೆ ಕೊಡಬಾರದು. ಯಾರ ಮನೆಯಲ್ಲಿ ಹೆಣ್ಣುಮಕ್ಕಳು ಮುಂಜಾನೆ ಬೇಗ ಏಳುವುದಿಲ್ಲ ಹಾಗೂ ಮನೆಯ ಅಂಗಳವನ್ನು ಸ್ವಚ್ಛ ಮಾಡುವುದಿಲ್ಲವೋ ಅಲ್ಲಿ ಲಕ್ಷ್ಮೀದೇವಿ ವಾಸಿಸುವುದಿಲ್ಲ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...