Girl-hits-cricket-shots

VIDEO : ಕುರಿ ಮೇಯಿಸುವ ಹುಡುಗಿ ಬ್ಯಾಟ್ ಹಿಡಿದು ಹೊಡೆದಳು ಫೋರು,ಸಿಕ್ಸು: ವೀಡಿಯೋ ನೋಡಿ ಶಾಕ್ ಆದ್ರು ಸೆಲೆಬ್ರಿಟಿಗಳು

Entertainment/ಮನರಂಜನೆ

ಪ್ರತಿಭೆ ಎನ್ನುವುದು ಎಲ್ಲರಲ್ಲೂ ಇರುತ್ತದೆ. ಆದರೆ ಕೆಲವರ ಪ್ರತಿಭೆಗಳು ಮಾತ್ರ ಜನರ ಮುಂದೆ ಬಂದರೆ ಅನೇಕರ ಪ್ರತಿಭೆ ಎಲ್ಲೋ ಕಳೆದು ಹೋಗುತ್ತದೆ. ಆದರೆ ಸೋಶಿಯಲ್ ಮೀಡಿಯಾಗಳು ಪ್ರಭಾವಶಾಲಿ ಮಾಧ್ಯಮಗಳಾಗಿರುವ ಇಂದಿನ ದಿನಗಳಲ್ಲಿ ತಮ್ಮ ಪ್ರತಿಭೆಯನ್ನು ಎಲ್ಲರ ಮುಂದೆ ಅನಾವರಣಗೊಳಿಸಲು ಪ್ರತಿಭಾವಂತರಿಗೆ ಇಂದು ಹಿಂದಿನಂತೆ ಯಾವುದೇ ಅಡ್ಡಿ ಆತಂಕಗಳು ಇಲ್ಲ ಎನ್ನಬಹುದು. ಕೆಲವು ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಕೆ ಮಾಡಿದರೆ ಇಂದು ಅದು ಬಹಳಷ್ಟು ಬದಲಾಗಿದೆ.‌

ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳು ಅಸಂಖ್ಯಾತ ಪ್ರತಿಭಾವಂತರಿಗೆ ಅದ್ಭುತವಾದ ವೇದಿಕೆಗಳನ್ನು ಒದಗಿಸಿಕೊಟ್ಟಿವೆ. ಅಲ್ಲದೇ ಈಗಾಗಲೇ ಸಾಕಷ್ಟು ಜನ ಪ್ರತಿಭಾವಂತರು ತಮ್ಮ ಪ್ರತಿಭೆಯನ್ನು ವಿಶ್ವದ ಮುಂದೆ ತಂದಿರಿಸಿದ್ದಾರೆ. ಜನಪ್ರಿಯತೆಯನ್ನು ಮತ್ತು ಹೊಸ ಹೊಸ ಅವಕಾಶಗಳನ್ನು ಸಹ ಪಡೆದುಕೊಳ್ಳುತ್ತಿದ್ದಾರೆ.

ಪ್ರತಿದಿನವೂ ಸಾಮಾಜಿಕ ಜಾಲತಾಣಗಳ ಮೂಲಕ ಬಹಳಷ್ಟು ಜನರು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುತ್ತಲೇ ಇದ್ದಾರೆ. ಎಲೆ ಮರೆ ಕಾಯಿಗಳಂತೆ ಇದ್ದವರೆಲ್ಲಾ, ಈಗ ತಾವೇನು ಕಡಿಮೆ ಇಲ್ಲ ಎನ್ನುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಾ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿಗಳಾಗಿ ಮಿಂಚುತ್ತಿದ್ದಾರೆ.

ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ಕೆಲವು ವೀಡಿಯೋಗಳು ಹೊಸ ಹೊಸ ಪ್ರತಿಭೆ ಪ್ರತಿಭೆಗಳ ಪರಿಚಯವನ್ನು ನಮಗೆ ಮಾಡಿಕೊಡುತ್ತಿದೆ. ಪ್ರಸ್ತುತ ದಿನಗಳಲ್ಲಿ ಅಂತಹುದೇ ಒಂದು ಪ್ರತಿಭೆಯನ್ನು ಅನಾವರಣ ಮಾಡುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು,‌ಇದು ಸೂಜಿಗಲ್ಲಿನಂತೆ ಎಲ್ಲರ ಗಮನವನ್ನು ತನ್ನ ಕಡೆಗೆ ತಿಳಿದುಕೊಳ್ಳುತ್ತಿದೆ.

ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಹುಡುಗಿ ಒಬ್ಬಳು ಕ್ರಿಕೆಟ್ ಆಡುತ್ತಿರುವುದನ್ನು ನೋಡಬಹುದಾಗಿದೆ. ವಿಶೇಷ ಏನೆಂದರೆ ಆ ಹುಡುಗಿ ಎಂತಹ ಶಾಟ್ ಗಳನ್ನು ಹೊಡೆಯುತ್ತಿದ್ದಾಳೆ ಎಂದರೆ ಇದನ್ನು ನೋಡಿದ ಜನರು ಅವಳನ್ನು ಲೇಡಿ 360 ಡಿಗ್ರಿ ಎಂದು ಕರೆಯುತ್ತಿದ್ದಾರೆ.. ಈ ವೀಡಿಯೋ ರಾಜಸ್ಥಾನದ ಬಾಡ್ ಮೇರ್ ನದ್ದು ಎನ್ನಲಾಗಿದೆ.

ಇಲ್ಲಿನ ಶಿವ ಶೇರ್ಪುರ ಕಾಲಾಸರ್ ಹಳ್ಳಿಯಲ್ಲಿ ವಾಸಿಸುತ್ತಿರುವ ಮೂಮಲ್ ಮೆಹ್ರಾ ಹೆಸರಿನ ಹುಡುಗಿಯ ವೀಡಿಯೋ ಇದಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಜನರು ಈ ವೀಡಿಯೋವನ್ನು ನೋಡುತ್ತಿದ್ದಾರೆ. ಮೂಮಲ್ ಎಂಟನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯಾಗಿದ್ದು, ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ ಎನ್ನುವ ಕಾರಣಕ್ಕೆ ಕುರಿಗಳನ್ನು ಮೇಯಿಸಲು ಹೋಗುತ್ತಾಳೆ.

ಆದರೆ ಈಗ ವೈರಲ್ ವೀಡಿಯೋದಲ್ಲಿ ಮೂಮಲ್ ಪ್ರತಿಭೆಯನ್ನು ಕಂಡು ಜನರು ಫಿದಾ ಆಗಿದ್ದಾರೆ. ನೆಟ್ಟಿಗರು ಮೂಮಲ್ ನ ವೀಡಿಯೋವನ್ನು ಭರ್ಜರಿಯಾಗಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ವೀಡಿಯೋದಲ್ಲಿ ಮರಳಿನ ಮೈದಾನವೊಂದನ್ನು ನೋಡಬಹುದು. ಅಲ್ಲಿ ಒಂದಷ್ಟು ಜನ ಮಕ್ಕಳು ಕ್ರಿಕೆಟ್ ಆಡುತ್ತಿದ್ದು, ಅದರಲ್ಲಿ ಈ ಹುಡುಗಿ ಹೊಡೆಯುತ್ತಿರುವ ಶಾಟ್ ಗಳನ್ನು ನೋಡಿ ಎಲ್ಲರೂ ಅಚ್ಚರಿ ಪಡುತ್ತಿದ್ದಾರೆ.

ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಸಹಾ ಈ ವೀಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಬಾಡ್ಮೇರ್ ನ ಸಂಸದರಾದ ಕೈಲಾಶ್ ಚೌದರಿ, ದೆಹಲಿಯ ಮಹಿಳಾ ಆಯೋಗದ ಅಧ್ಯಕ್ಷರಾದ ಸ್ವಾತಿ ಮಾಲಿವಾಲ್, ಬಿಜೆಪಿ ಸಂಸದ ಪಿಪಿ ಚೌದರಿ ಇನ್ನು ಮುಂತಾದವರು ಬಾಲಕಿಯ ಪ್ರತಿಭೆಯನ್ನು ತೋರಿಸುವ ಈ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಮಾದ್ಯಮ ಒಂದರ ವರದಿಯ ಪ್ರಕಾರ ಮೂಮಲ್ ಸೂರ್ಯ ಕುಮಾರ್ ಯಾದವ್ ಅವರ ಅಭಿಮಾನಿಯಾಗಿದ್ದಾಳೆ.

ಪ್ರತಿದಿನ ಆಕೆ ಗಂಟೆಗಳ ಕಾಲ ಸೂರ್ಯ ಕುಮಾರ್ ಅವರ ಬ್ಯಾಟಿಂಗ್ ಅನ್ನು ನೋಡುತ್ತಾಳೆ ಎನ್ನಲಾಗಿದೆ. ಈಗ ಮೂಮಲ್ ಳ ಪ್ರತಿಭೆ ನೋಡಿದ ಜನರು, ಟ್ಯಾಲೆಂಟ್ ಅನ್ನು ಯಾರಿಂದಲೂ ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಅಲ್ಲದೇ ಮೂಮಲ್ ಗೆ ಸರಿಯಾದ ಅವಕಾಶ ಮತ್ತು ಪ್ರೀತಿ ದೊರೆತರೆ ಆಕೆ ಖಂಡಿತ ಏನಾದರೂ ಸಾಧನೆ ಮಾಡುತ್ತಾಳೆ ಎನ್ನುವ ಮಾತುಗಳನ್ನು ಸಹಾ ಹೇಳುತ್ತಿದ್ದಾರೆ.

ಆ ವೀಡಿಯೊ ಕೆಳಗಿದೆ ನೋಡಿ…

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.